Site icon Vistara News

ಸೈಬರ್‌ ಸೇಫ್ಟಿ ಅಂಕಣ: ಸೈಬರ್ ಸುರಕ್ಷತೆ ಜಾಗೃತಿ ತಿಂಗಳ ಶುಭಾಶಯಗಳು!

cyber awareness

ಅಕ್ಟೋಬರ್‌ ತಿಂಗಳು, ಅಂತಾರಾಷ್ಟ್ರೀಯ ಸೈಬರ್ ಸುರಕ್ಷತೆ ಜಾಗೃತಿ (cybersecurity awareness month) ಮಾಸ. ನಮ್ಮ ಬಹುತೇಕ ವ್ಯವಹಾರಗಳು, ವೈಯಕ್ತಿಕ ವಿಚಾರಗಳು, ಮನೋರಂಜನೆ, ಮತ್ತು ಜ್ಞಾನಾರ್ಜನೆ ಸೈಬರ್ ಸಂಪರ್ಕದ ಮೇಲೆ ಅವಲಂಬಿತವಾಗಿದೆ. ನಮ್ಮ ತಾಂತ್ರಿಕ ಸಾಮರ್ಥ್ಯ ಏನೇ ಇದ್ದರೂ ಸೈಬರ್ ಭದ್ರತೆಗೆ ಸಂಬಂಧಿಸಿದಂತೆ ಕೆಲವು ಕನಿಷ್ಠ ವಿಷಯಗಳನ್ನು ತಿಳಿದು ಪಾಲಿಸಲೇ ಬೇಕು. ನಮ್ಮ ಸೈಬರ್ ತಿಳುವಳಿಕೆ ಎಷ್ಟಿರಬೇಕು ಎನ್ನುವುದು ಆನ್‌ಲೈನ್ ಜಗತ್ತಿನಲ್ಲಿ ನಾವು ವಹಿಸುವ ಪಾತ್ರವನ್ನು ಅವಲಂಬಿಸಿ ಬದಲಾಗುತ್ತದೆ. ಯಾಕೆ ಅಂದರೆ ಆನ್‌ಲೈನ್‌ನಲ್ಲಿ ನಾವೆಲ್ಲರೂ ಸೈಬರ್ ಸೆಕ್ಯುರಿಟಿ (cyber security) ದಾಳಿಯ (cyber attack) ಸಂಭಾವ್ಯ ಬಲಿಪಶುಗಳು. ಹೀಗಿರುವಾಗ ಬರೀ ಒಂದು ತಿಂಗಳು ಜಾಗೃತಿಯ ಬಗ್ಗೆ ಜಾಗೃತರಾದರೆ ಸಾಕಾ?

2004ರಿಂದ, ಅಮೇರಿಕಾದ ಅಧ್ಯಕ್ಷರು ಅಕ್ಟೋಬರ್ ತಿಂಗಳನ್ನು ಸೈಬರ್ ಸೆಕ್ಯುರಿಟಿ ಜಾಗೃತಿ ತಿಂಗಳು ಎಂದು ಘೋಷಿಸಿದ್ದಾರೆ. ಸೈಬರ್ ಸುರಕ್ಷತೆಯ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು ಸಾರ್ವಜನಿಕ ಮತ್ತು ಖಾಸಗಿ ವಲಯಗಳು ಒಟ್ಟಾಗಿ ಕೆಲಸ ಮಾಡಲು ಮೀಸಲಾದ ತಿಂಗಳು ಅಕ್ಟೋಬರ್. ಇದು 20ನೇ ಸೈಬರ್ ಸುರಕ್ಷತೆ ಜಾಗೃತಿ ತಿಂಗಳು ಮತ್ತು ಇದು ಸೈಬರ್ ಸುರಕ್ಷತೆಯ ಜಾಗೃತಿಯನ್ನು ಹೆಚ್ಚಿಸಲು ಸರ್ಕಾರ ಮತ್ತು ಉದ್ಯಮದ ನಡುವಿನ ಸಹಯೋಗದ ಪ್ರಯತ್ನವಾಗಿ ಬೆಳೆದಿದೆ. ಆನ್‌ಲೈನ್ ಅಪಾಯವನ್ನು ಕಡಿಮೆ ಮಾಡಲು ಸಾರ್ವಜನಿಕರಿಂದ ಕ್ರಮಗಳನ್ನು ಉತ್ತೇಜಿಸಲು ಮತ್ತು ರಾಷ್ಟ್ರೀಯ ಮತ್ತು ಜಾಗತಿಕ ಮಟ್ಟದಲ್ಲಿ ಸೈಬರ್ ಬೆದರಿಕೆಗಳ ಕುರಿತು ಚರ್ಚೆಗಳು ಈ ತಿಂಗಳು ಹೆಚ್ಚಾಗಿ ನಡೆಯುತ್ತದೆ. ಸೆಕ್ಯೂರ್ ಅವರ್ ವರ್ಲ್ಡ್ ಎಂಬುದು ಈ ವರ್ಷದ ಸೈಬರ್ ಸೆಕ್ಯುರಿಟಿ ಜಾಗೃತಿ ತಿಂಗಳ ವಿಷಯವಾಗಿದೆ ಮತ್ತು ಭವಿಷ್ಯದ ಜಾಗೃತಿ ತಿಂಗಳ ಅಭಿಯಾನಗಳಿಗೆ ನಿರಂತರ ಥೀಮ್ ಆಗಿ ಇರುತ್ತದೆ.

ಒಂದೇ ಸೈಬರ್ ದಾಳಿಯು ವ್ಯವಹಾರವನ್ನು ಹಾನಿಗೊಳಿಸಬಹುದು ಮತ್ತು ಅದರ ಖ್ಯಾತಿಯನ್ನು ಹಾನಿಗೊಳಿಸಬಹುದು. ಈ ತಿಂಗಳು ತಮ್ಮ ಪ್ರಸ್ತುತ ಸೈಬರ್‌ ಸೆಕ್ಯುರಿಟಿ ಪ್ರಕ್ರಿಯೆಗಳನ್ನು ಪರಿಶೀಲಿಸಲು ಮತ್ತು ಅವುಗಳು ನವೀಕೃತವಾಗಿವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ವಿವಿಧ ಕಂಪೆನಿಗಳಿಗೆ ಸಹಾಯ ಮಾಡುತ್ತದೆ.

ಭಾರತೀಯ ಕಂಪ್ಯೂಟರ್ ತುರ್ತು ಪ್ರತಿಕ್ರಿಯೆ ತಂಡ (CERT-In) ಎಲೆಕ್ಟ್ರಾನಿಕ್ಸ್ ಸಚಿವಾಲಯದ ಅಡಿಯಲ್ಲಿ ಸರ್ಕಾರಿ ಸಂಸ್ಥೆ ಮತ್ತು ಮಾಹಿತಿ ತಂತ್ರಜ್ಞಾನ (MeitY), ಭಾರತ ಸರ್ಕಾರ ಭಾರತೀಯ ಸೈಬರ್ ಲೋಕವನ್ನು ಸುರಕ್ಷಿತಗೊಳಿಸುವ ಉದ್ದೇಶದಿಂದ ಸ್ಥಾಪಿಸಲಾಗಿದೆ. CERT-In, ಘಟನೆ ತಡೆಗಟ್ಟುವಿಕೆ ಮತ್ತು ಪ್ರತಿಕ್ರಿಯೆ (Incident Prevention and Response services) ಸೇವೆಗಳನ್ನು ಮತ್ತು ಭದ್ರತಾ ಗುಣಮಟ್ಟ ನಿರ್ವಹಣಾ ಸೇವೆಗಳನ್ನು ಒದಗಿಸುತ್ತದೆ

ಈ ಸಂದರ್ಭದಲ್ಲಿ, ಭಾರತೀಯ ಕಂಪ್ಯೂಟರ್ ತುರ್ತು ಪ್ರತಿಕ್ರಿಯೆ ತಂಡದಿಂದ ಡಿಜಿಟಲ್ ನಾಗರೀಕರಿಗೆ ಮತ್ತು ಡಿಜಿಟಲ್ ಎಂಟರ್‌ಪ್ರೈಸಸ್‌ಗಳಿಗಾಗಿ ಜಾಗೃತಿ ಪುಸ್ತಕವನ್ನು ಬಿಡುಗಡೆ ಮಾಡಲಾಗಿದೆ. ಸೈಬರ್ ಲೋಕದಲ್ಲಿ ಅಗತ್ಯವಿರುವ ಉತ್ತಮ ಅಭ್ಯಾಸಗಳು ಮತ್ತು ಸೈಬರ್ ವಂಚನೆಗಳಿಂದ ಮತ್ತು ದಾಳಿಗಳಿಂದ ರಕ್ಷಣೆಗೆ ಅನುಸರಿಸಬೇಕಾದ ಕ್ರಮಗಳನ್ನು ಇದರಲ್ಲಿ ವಿವರಿಸಿದ್ದಾರೆ. ಅದನ್ನು ಡೌನ್‌ಲೋಡ್ ಮಾಡಲು https://www.cert-in.org.in/ ಬಳಸಿ. ಅಥವಾ CERT-In NCSAM book ಎಂದು ಗೂಗಲ್ ಮಾಡಿ. ಈ PDF ಫೈಲನ್ನು ಉಚಿತವಾಗಿ ಡೌನ್‌ಲೋಡ್ ಮಾಡಿಕೊಂಡು ಓದಿ.

ಇದರಲ್ಲಿ ಫಿಶಿಂಗ್, ವಿಶಿಂಗ್, ಅಪಾಯಕಾರಿ ಮೊಬೈಲ್ ಆ್ಯಪ್‌ಗಳು, ಮಾಲ್‌ವೇರ್, ಸಾಮಾಜಿಕ ಜಾಲತಾಣಗಳಲ್ಲಿ ಆಗುವ ವಂಚನೆಗಳು, ಹಿರಿಯ ನಾಗರೀಕರನ್ನು ಗುರಿ ಮಾಡಿದ ದಾಳಿಗಳು, ಹಣಕಾಸಿನ ವಂಚನೆಗಳು, ಮಕ್ಕಳ ಮೇಲೆ ಆಗುವ ದಾಳಿಗಳು, ಹೆಣ್ಣು ಮಕ್ಕಳ ಮೇಲೆ ಆಗುವ ದಾಳಿಗಳು ಮುಂತಾದವುಗಳ ಬಗ್ಗೆ ಮತ್ತು ಅವುಗಳಿಂದ ಸುರಕ್ಷಿತರಾಗಿರುವ ಬಗ್ಗೆ ಸರಳವಾಗಿ ಮತ್ತು ಸಂಕ್ಷಿಪ್ತವಾಗಿ ತಿಳಿಸಿದ್ದಾರೆ.

ಈ ವಾರ, ದೇಶದಾದ್ಯಂತ AEPS (Aadhaar Enabled Payment System) ಬಳಸಿ ಬ್ಯಾಂಕ್ ಖಾತೆಗಳಿಗೆ ಕನ್ನ ಹಾಕುತ್ತಿರುವ ಪ್ರಕರಣಗಳ ಬಗ್ಗೆ ವಿಸ್ತಾರ ಮನಿ ಪ್ಲಸ್‌ನಲ್ಲಿ ಮಾತಾಡಿದ್ದೆ. ಇದು ತಂತ್ರಜ್ಞಾನದ ದುರ್ಬಳಕೆ ಮಾಡಿಕೊಂಡು ಅಮಾಯಕರಿಗೆ ಮೋಸ ಮಾಡುವ ಜಾಲ. ಹೆಚ್ಚಿನ ಮಾಹಿತಿಗೆ ಯೂಟ್ಯೂಬಿನಲ್ಲಿರುವ ಈ ವೀಡಿಯೊ ನೋಡಿ. ನಿಮ್ಮ ಆಧಾರ್ ಸಂಖ್ಯೆಯಲ್ಲಿನ ಬಯೋಮೆಟ್ರಿಕ್ಸ್ ಬ್ಲಾಕ್ ಮಾಡಿಕೊಳ್ಳಿ.

ಸೈಬರ್‌ ಸೆಕ್ಯುರಿಟಿ ಮ್ಯಾನೇಜ್‌ಮೆಂಟ್‌ನಲ್ಲಿನ ಹೆಚ್ಚಿನ ಬೆಳವಣಿಗೆಗಳು (Advances in Cybersecurity Management) ಎಂಬ ಸಂಪಾದಿತ ಪುಸ್ತಕದಲ್ಲಿ ಅಂತರಾಷ್ಟ್ರೀಯ ಸೈಬರ್ ಭದ್ರತಾ ಉಪಕ್ರಮಗಳು, ಅನುಭವಗಳು ಮತ್ತು ವಿವಿಧ ಹಿನ್ನೆಲೆಗಳಿಂದ ಸೈಬರ್ ಭದ್ರತೆಗೆ ಸಂಬಂಧಿಸಿದಂತೆ ದೃಷ್ಟಿಕೋನಗಳು ಪ್ರಸ್ತುತವಾಗಿದೆ. ಸೈಬರ್ ಸೆಕ್ಯೂರಿಟಿ ಕ್ಷೇತ್ರದಲ್ಲಿರುವವರೆಲ್ಲರೂ ಓದಲೇ ಬೇಕಾದ ಈ ಪುಸ್ತಕವನ್ನು ಮೂರು ಭಾಗಗಳಾಗಿ ಆಯೋಜಿಸಲಾಗಿದೆ: ಮೊದಲ ಭಾಗವು ನೆಟ್ವರ್ಕ್ ಮತ್ತು ಸಿಸ್ಟಮ್ಸ್ ಸೆಕ್ಯುರಿಟಿ ಮ್ಯಾನೇಜ್ಮೆಂಟ್, ಎರಡನೆಯದು ದುರ್ಬಲತೆ ನಿರ್ವಹಣೆಗೆ ಸಂಬಂಧಿಸಿದೆ, ಮತ್ತು ಮೂರನೆಯದು ಐಡೆಂಟಿಟಿ ಮ್ಯಾನೇಜ್‌ಮೆಂಟ್ ಮತ್ತು ಸೆಕ್ಯುರಿಟಿ ಆಪರೇಷನ್‌ಗಳನ್ನು ಒಳಗೊಂಡಿದೆ.

ಇದನ್ನೂ ಓದಿ: ಸೈಬರ್‌ ಸೇಫ್ಟಿ ಅಂಕಣ: ಮೊಬೈಲ್ ಕಳೆದು ಹೋದರೆ ಏನು ಮಾಡಬೇಕು?

ಇಂದು ನಮ್ಮ ನೆಟ್‌ವರ್ಕ್‌ಗಳಲ್ಲಿನ ದಾಳಿಯ ಸ್ವರೂಪಕ್ಕೆ ಸಂಬಂಧಿಸಿದೆ, ಒಂದು ಶ್ರೇಣಿಯ ಅವಲೋಕನ SQL ಇಂಜೆಕ್ಷನ್ ದಾಳಿಗಳು, ನಿರ್ದಿಷ್ಟ ಗಮನವನ್ನು ತಗ್ಗಿಸುವಿಕೆಯ ಮೇಲೆ ಕೇಂದ್ರೀಕರಿಸಲಾಗಿದೆ. ಗುರುತಿನ ನಿರ್ವಹಣೆಯ ಬಗ್ಗೆ ಮತ್ತೊಂದು ಅಧ್ಯಾಯದಲ್ಲಿ ವಿವರಿಸಲಾಗಿದೆ. ಸೈಬರ್‌ ದಾಳಿಗಳಿಗೆ ಸಂಸ್ಥೆಗಳು ಹೇಗೆ ಒಳಗಾಗುತ್ತದೆ ಮತ್ತು ಭದ್ರತೆಯ ಅರಿವು ಸಂಸ್ಥೆಯಾದ್ಯಂತ ಪ್ರಚಲಿತದಲ್ಲಿರಬೇಕು ಎಂಬ ಪ್ರಮುಖ ಸಂದೇಶವನ್ನು ತಿಳಿಸುತ್ತದೆ. ಜೊತೆಗೆ ಸಂಸ್ಥೆಗಳಲ್ಲಿ ಸೈಬರ್‌ ಸುರಕ್ಷತೆ ಸವಾಲುಗಳ ನಿರ್ವಹಣೆ ಮತ್ತು ಉದ್ಯಮದ ದೃಷ್ಟಿಕೋನದ ಬಗ್ಗೆಯೂ ಲೇಖನಗಳಿವೆ. ಸಾಮಾಜಿಕ ವಿಜ್ಞಾನಿಗಳು ಬಹಳ ಹಿಂದಿನಿಂದಲೂ ಮನುಷ್ಯರ ವೈಯಕ್ತಿಕ ಆಯ್ಕೆ ಮತ್ತು ನಿರ್ಧಾರಗಳು ಬಹಳಷ್ಟು ಸಮಯಗಳಲ್ಲಿ ತರ್ಕಬದ್ಧವಾಗಿ ವರ್ತಿಸುವುದಿಲ್ಲ ಎಂದು ಗುರುತಿಸಿದ್ದಾರೆ. ಇಂತಹ ಸನ್ನಿವೇಶಗಳಲ್ಲಿ ಸೈಬರ್‌ ಸುರಕ್ಷತೆ, ಮತ್ತು ಅದರ ಪರಿಣಾಮವಾಗಿ ಸೈಬರ್ ಟ್ರಸ್ಟ್ ಮತ್ತು ಸೈಬರ್ ಅರ್ಥಶಾಸ್ತ್ರವನ್ನು ಒಳಗೊಂಡಿವೆ.

ಈ ಅಂಕಣದ ಎಲ್ಲಾ ಓದುಗರಿಗೂ ನವರಾತ್ರಿ ಮತ್ತು ದಸರಾ ಹಬ್ಬದ ಶುಭಾಶಯಗಳು. ಸೈಬರ್ ಲೋಕದಲ್ಲಿ ಸುರಕ್ಷಿತವಾಗಿ ಸಂವಹನ ನಡೆಸಿ. ಜಾಣರಾಗಿರಿ, ಜಾಗರೂಕರಾಗಿರಿ.

ಇದನ್ನೂ ಓದಿ: ಸೈಬರ್‌ ಸೇಫ್ಟಿ ಅಂಕಣ: ಮೋಸ ಹೋಗುವವರು ಇರುವವರೆಗೂ ಮೋಸ ಮಾಡುವವರು ಇರುತ್ತಾರೆ

Exit mobile version