ವಿಶ್ವದಲ್ಲಿ ಭಾರತೀಯ ಗೋವುಗಳನ್ನು ಬಾಸ್ ಇಂಡಿಕಸ್ ಗುಂಪಿಗೆ ಸೇರಿಸಿದರೆ, ವಿದೇಶಿ ಹಸುಗಳನ್ನು ʻಬಾಸ್ ಟಾರಸ್ʼ ಗುಂಪಿಗೆ ಸೇರಿಸಲಾಗಿದೆ. ಹಾಗೆಯೇ ಎಮ್ಮೆಗಳನ್ನು ʻಬಾಸ್ ಬುಬಲಿಸ್ʼ ಎಂಬ ಗುಂಪಿಗೆ ಸೇರಿಸಲಾಗಿದೆ. ಈ ಎಲ್ಲಾ ಗುಂಪುಗಳಲ್ಲಿ ಬಾಸ್ ಇಂಡಿಕಸ್ ಅಂದರೆ ಭಾರತೀಯ ಗೋವುಗಳ ಹಾಲಿನಿಂದ ತಯಾರಾದ ತುಪ್ಪವನ್ನು ಮಾತ್ರ ಅತಿ ಶ್ರೇಷ್ಠ ಎಂಬುದಾಗಿ ಹೇಳಲಾಗಿದೆ. ಬೆಣ್ಣೆಯನ್ನು ಸಂಸ್ಕರಿಸಿದಾಗ ತುಪ್ಪವು ಸಿಗುತ್ತದೆ. ಇದರಲ್ಲಿಯೂ ಬೆಣ್ಣೆಯಂತೆ ಬಹುಪಾಲು ಕೊಬ್ಬು ಹಾಗೂ ಸ್ವಲ್ಪ ಭಾಗ ಪ್ರೋಟೀನ್ ಮತ್ತು ಕ್ಯಾಲ್ಸಿಯಂ ಇರುತ್ತದೆ.
ತುಪ್ಪ ಇತರ ಎಣ್ಣೆಗಳಂತೆ ಅಲ್ಲ, ಇದರಲ್ಲಿ ಅನಾವಶ್ಯಕ `ಕೊಲೆಸ್ಟ್ರಾಲ್’ ಇರುವುದಿಲ್ಲ. ಇಂತಹ ತುಪ್ಪದಲ್ಲಿರುವ ಕೊಬ್ಬು ಶರೀರಕ್ಕೆ ಅತೀ ಶ್ರೇಷ್ಠ ಮಟ್ಟದ್ದು ಹಾಗೂ ರೋಗ ನಿರೋಧಕ ಶಕ್ತಿ ವೃದ್ಧಿಸುವಂತದ್ದೂ ಆಗಿದೆ. ಹೀಗಾಗಿ ದೇಶೀ ಗೋವಿನ ತುಪ್ಪವನ್ನು ಅಮೃತ ಎಂದು ಬಣ್ಣಿಸಲಾಗುತ್ತದೆ.
ಕೃತಕ ಮಳೆಗೋಸ್ಕರ ಮಾಡುವ ಮೋಡ ಬಿತ್ತನೆಗೆ ವೈಜ್ಞಾನಿಕರು ಮುಖ್ಯ ರೂಪವಾದ ʻಪ್ರೊಪಿಲಿನ್ ಆಕ್ಸೆöÊಡ್ʼ ಎಂಬ ಅನಿಲವನ್ನು ಉಪಯೋಗಿಸುತ್ತಾರೆ. ಇದೇ ʻಪ್ರೊಪಿಲಿನ್ ಆಕ್ಸೈಡ್’ ಗೋವಿನ ತುಪ್ಪವನ್ನು ಹವನಕ್ಕೆ ಉಪಯೋಗಿಸುವುದರಿಂದ ಸಿಗುತ್ತದೆ. ಗೋವಿನ ತುಪ್ಪ ಮತ್ತು ತುಂಡಾಗದ ಅಕ್ಕಿ ಅಂದರೆ ಅಕ್ಷತೆ ಕಾಳನ್ನು ಮಿಶ್ರಣ ಮಾಡಿ ಉರಿಸುವುದರಿಂದ ಅತ್ಯಂತ ಮಹತ್ವ ಪೂರ್ಣ ಅನಿಲವಾದ ʻಇಥಿಲಿನ್ ಆಕ್ಸೈಡ್ʼ, ʻಪ್ರೊಪಲಿನ್ ಆಕ್ಸೈಡ್ʼ, ʻಫಾರ್ಮುಲಾ ಡಿ ಹೈಡ್ʼ ತಯಾರಾಗುತ್ತವೆ. ʻಇಥಿಲಿನ್ ಆಕ್ಸೈಡ್ʼ ವರ್ತಮಾನ ಸಮಯದಲ್ಲಿ ಎಲ್ಲಕ್ಕಿಂತ ಅಧಿಕ ಉಪಯುಕ್ತ ಜೀವಾಣುನಿರೋಧಕ ಅನಿಲವಾಗಿದೆ. ಮೆಡಿಕಲ್ ಸೈನ್ಸ್‌ನಲ್ಲಿ ಈ ಅನಿಲವನ್ನು ಆಪರೇಷನ್ ಥಿಯೇಟರ್‌ನಿಂದ ಹಿಡಿದು ಜೀವ ರಕ್ಷಕ ಔಷಧಿಗಳನ್ನು ತಯಾರಿಸಲು ಉಪಯೋಗಿಸಲಾಗುತ್ತದೆ.
ತುಪ್ಪದಿಂದ ಯಜ್ಞ; ಆಮ್ಲಜನಕ ಉತ್ಪತ್ತಿ!
ಭಾರತೀಯ ತಳಿಯ ತುಪ್ಪದಿಂದ ಮಾಡುವ ಹೋಮದಿಂದ ಹೊರ ಹೊಮ್ಮುವ ಹೊಗೆಯ ಪ್ರಭಾವ ಎಲ್ಲಿಯವರೆಗೆ ಹರಡಿರುತ್ತದೆಯೋ ಅಲ್ಲಿಯವರೆಗಿನ ಆ ಎಲ್ಲಾ ಕ್ಷೇತ್ರಗಳು ಕೀಟಾಣು ಮತ್ತು ಬ್ಯಾಕ್ಟೀರಿಯಾ ಪ್ರಭಾವದಿಂದ ಮುಕ್ತವಾಗಿರುತ್ತವೆ. ಒಂದು ತೊಲ ಭಾರತೀಯ ಗೋತಳಿಯ ತುಪ್ಪದಿಂದ ಯಜ್ಞವನ್ನು ಮಾಡಿದಲ್ಲಿ ಸುಮಾರು ಒಂದು ಟನ್ ಆಮ್ಲಜನಕ ಉತ್ಪತ್ತಿಯಾಗುತ್ತದೆ ಎಂಬೆಲ್ಲಾ ಸತ್ಯಗಳನ್ನು ಇತ್ತೀಚೆಗೆ ವೈಜ್ಞಾನಿಕರು ಧೃಡಪಡಿಸಿದ್ದಾರೆ.
ಅಂದರೆ ಸಾವಿರಾರು ವರ್ಷಗಳ ಹಿಂದಿನಿಂದಲೇ ನಮ್ಮ ಪೂರ್ವಜರು ದೇವಸ್ಥಾನ ಮತ್ತು ಮನೆಗಳಲ್ಲಿ ತುಪ್ಪದ ದೀಪಗಳನ್ನು ಬೆಳಗುತ್ತಿದ್ದು, ಅವರಿಗೆ ಆಗಲೇ ಇದರ ಮಹತ್ವ ತಿಳಿದಿತ್ತು ಎಂಬುದು ರುಜುವಾತಾಗುತ್ತದೆ. ಇನ್ನು ಓಝೋನ್ ಪದರವನ್ನು ಗೋವಿನ ತುಪ್ಪದಿಂದ ಹೋಮ ಮಾಡಿದಾಗ ಉತ್ಪತ್ತಿಯಾಗುವ ಹೊಗೆ ಗಟ್ಟಿಗೊಳಿಸಬಲ್ಲದು ಎಂಬುದು ವೈಜ್ಞಾನಿಕವಾಗಿ ಸಾಬೀತಾಗಿದೆ. ಇದರೊಂದಿಗೆ ಗೋವಿನ ಹೂಂಕಾರದಿಂದ ಹೊರಡುವ ನಾದ, ಗೋವಿನ ಉಸಿರಾಟ, ಗೋವಿನ ಉತ್ಪನ್ನಗಳಾದ ಗೋಮೂತ್ರ, ಗೋಮಯ, ತುಪ್ಪ ಇತ್ಯಾದಿಗಳು ಓಝೋನ್ ಪದರದ ರಂಧ್ರಗಳನ್ನು ಮುಚ್ಚಲು ಸಹಕಾರಿಯಾಗಿದೆ ಎಂದು ಹೇಳಲಾಗುತ್ತದೆ. ಹಾಗೆಯೇ ಇತ್ತೀಚಿನ ವಾತಾವರಣದಲ್ಲಿ ಓಝೋನ್ ಪದರ ಛಿದ್ರವಾಗುತ್ತಿರುವುದಕ್ಕೆ ಗೋ ಸಂತತಿ ಕ್ಷೀಣಿಸುತ್ತಿರುವುದೇ ಕಾರಣ ಎಂಬುದಾಗಿ ಹೇಳಲಾಗುತ್ತಿದೆ.
ಆಹುತಿಯ ನಂತರ ಗೋವಿನ ತುಪ್ಪದ ಜ್ವಲನದಲ್ಲಿ ʻಎಸಿಟಿಲಿನ್’ ನಿರ್ಮಾಣವಾಗುತ್ತದೆ. ಈ ಎಸಿಟಿಲಿನ್ ಒಂದು ಪ್ರಖರವಾದ ಉಷ್ಣ ಶಕ್ತಿಯಾಗಿದ್ದು, ದೂಷಿತ ವಾಯುವನ್ನು ಶುದ್ಧಗೊಳಿಸುತ್ತದೆ. ಹಾಗೆಯೇ ತುಪ್ಪದಿಂದ ನಿರ್ಮಾಣಗೊಳ್ಳುವ ವಾಯುಗಳಲ್ಲಿ ಎಷ್ಟೋ ರೋಗಗಳನ್ನು ಮತ್ತು ಮನಸ್ಸಿನ ಅಸ್ವಸ್ಥತೆಯನ್ನು ದೂರಗೊಳಿಸುವ ಕ್ಷಮತೆ ಇದೆ. ಪ್ರತಿನಿತ್ಯದ ಅಗ್ನಿಹೋತ್ರದ ಆಚರಣೆಯಲ್ಲಿನ ತುಪ್ಪದ ಜ್ವಲನ ಕ್ರಿಯೆಯಿಂದ ಹಾನಿಯನ್ನುಂಟು ಮಾಡುವ ರೋಗಾಣುಗಳು ನಾಶ ಹೊಂದುವುದು ವೈಜ್ಞಾನಿಕವಾಗಿ ಸಾಬೀತಾಗಿದೆ.
ಶಿವಮೊಗ್ಗದ ಕಾಲೇಜಿನಲ್ಲಿ ಅಗ್ನಿಹೋತ್ರದ ಮೇಲೆ ನಡೆಸಿದ ಸಂಶೋಧನೆಯಲ್ಲಿ ಒಂದು ಚಮಚ ಅಥವಾ ಒಂದು ತೊಲ ತುಪ್ಪವನ್ನು ಹವನಕ್ಕೆ ಹಾಕಿದಾಗ ನಡೆಯುವ ರಾಸಾಯನಿಕ ಪ್ರಕ್ರಿಯೆಗಳಿಂದಾಗಿ ಒಂದು ಟನ್‌ಗೂ ಅಧಿಕ ಆಮ್ಲಜನಕ ಉತ್ಪತ್ತಿಯಾಗುವುದು ದೃಢಪಟ್ಟಿದೆ.
ತುಪ್ಪ ಎಂಬ ಮಹಾ ಔಷಧಿ
ಇತ್ತೀಚಿನ ವರ್ಷಗಳಲ್ಲಿ ನಡೆದ ಸಂಶೋಧನೆಗಳಿಂದ ತುಪ್ಪದ ಬಗ್ಗೆ ಒಂದಷ್ಟು ಅಂಶಗಳು ಬೆಳಕಿಗೆ ಬಂದಿವೆ. ಬೇಸಿಗೆಯಲ್ಲಿ ದೇಶಿ ಗೋವಿನ ತುಪ್ಪದ ಸೇವನೆ ತುಂಬಾ ಒಳ್ಳೆಯದು ಎನ್ನಲಾಗಿದೆ. ಮಕ್ಕಳು ಯುವಕರು ಮತ್ತು ಆರೋಗ್ಯವಂತರಿಗೆ ತುಪ್ಪದ ಸೇವನೆಯಿಂದ ಹೆಚ್ಚು ಲಾಭವಿರುವುದು ಸಾಬೀತಾಗಿದೆ. ಕಣ್ಣು, ಮೂಗು, ಕಿವಿ ರೋಗ, ಕಫ, ಮೂರ್ಚೆ ರೋಗ, ಜ್ವರ, ಕ್ರಿಮಿ ಮತ್ತು ವಾತ, ಪಿತ್ತ ಕಫಜನ್ಯ ವಿಷದ ಉಪದ್ರವಗಳಿಗೆ ಗೋವಿನ ತುಪ್ಪವು ಮಹಾ ಔಷಧಿಯಾಗಿ ಕೆಲಸ ಮಾಡುವುದು ಕಂಡುಬಂದಿದೆ. ತುಪ್ಪದಲ್ಲಿ ಓಮೇಗಾ 3 ಫ್ಯಾಟಿ ಆಸಿಡ್‌ಗಳಾದ ಡಿ.ಹೆಚ್.ಎ., ಓಮೇಗಾ 6 ಫ್ಯಾಟಿ ಆಸಿಡ್‌ಗಳಾದ ಸಿ.ಎಲ್.ಎ., ಕೊಬ್ಬಿನಲ್ಲಿ ಕರಗುವ ವಿಟಮಿನ್‌ಗಳಾದ ವಿಟಮಿನ್ ಎ, ಡಿ, ಕೆ, ಇ, ಸಿ, ಕೆ2ಗಳು, ಕ್ಯಾಲ್ಸಿಯಂ ಆ್ಯಂಟಿಯಾಕ್ಸಿಡಂಟ್ಸ್ ಹಾಗೂ ಬುಟಿರಿಕ್ ಆಸಿಡ್‌ಗಳು ಹೆಚ್ಚಿವೆ. ಬುಟಿರಿಕ್ ಆಸಿಡ್ ಕ್ಯಾನ್ಸರ್ ನಿವಾರಕವಾಗಿದ್ದು, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಮೆದುಳಿನ ಕೋಶಗಳ ರಚನೆಯಲ್ಲಿ, ನೆನಪಿನ ಶಕ್ತಿಯಲ್ಲಿ, ಸಂಧಿಗಳ ರಚನೆಯಲ್ಲಿ, ಜೀರ್ಣ ಶಕ್ತಿ ಹೆಚ್ಚಿಸುವಲ್ಲಿ, ಅಲರ್ಜಿಯನ್ನು ತಡೆಯುವಲ್ಲಿ ಒಮೇಗಾ ಫ್ಯಾಟಿ ಆಸಿಡ್ ಅತ್ಯಂತ ಸಹಾಯಕವಾದುದಾಗಿದೆ. ಹಾಗೆಯೇ ಆ್ಯಂಟಿಯಾಕ್ಸಿಡಂಟ್ಸ್‌ಗಳು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದರೊಂದಿಗೆ, ಟಾಕ್ಸಿನ್ ನಿವಾರಕವಾದುದಾಗಿವೆ. ಚರ್ಮದ ಕಾಂತಿ, ವಿಟಮಿನ್‌ಗಳ ವಿತರಣೆ, ರಕ್ತ ಹೆಪ್ಪ್ಪುಗಟ್ಟುವಿಕೆ, ಮಾಂಸದ ರಚನೆಗೆ ತುಪ್ಪದ ಸೇವನೆ ಸಹಾಯಕವಾದುದಾಗಿದೆ.
ಇದು ಬೆಳೆಯುವ ಮಕ್ಕಳಿಗೆ ವಿಶೇಷ ಶಕ್ತಿಯನ್ನು ನೀಡುವುದರೊಂದಿಗೆ ಬೆಳವಣಿಗೆಗೆ ಸಹಾಯಕವಾಗುವ ಹಾರ್ಮೋನುಗಳನ್ನು ಉತ್ಪಾದಿಸುತ್ತದೆ. ತುಪ್ಪದ ಸೇವನೆಯಿಂದ ಬುದ್ಧಿಶಕ್ತಿ ಹೆಚ್ಚುವುದರೊಂದಿಗೆ ಶರೀರದ ಕಾಂತಿಯು ಹೆಚ್ಚಿ ಬಲ ವರ್ಧಿಸುತ್ತದೆ. ವಾತ, ಪಿತ್ತ ಮತ್ತು ಸುಸ್ತು ಕಡಿಮೆ ಮಾಡುತ್ತದೆ. ಸ್ವರ, ಸ್ಥೈರ್ಯವನ್ನು ಹೆಚ್ಚಿಸುವುದರೊಂದಿಗೆ ವೀರ್ಯವರ್ಧಕವಾದುದಾಗಿದೆ. ಹಸಿವನ್ನು ಹೆಚ್ಚಿಸುವುದರೊಂದಿಗೆ ದೇಹದ ಎಲ್ಲಾ ಧಾತುಗಳನ್ನು ಉತ್ತಮಪಡಿಸುತ್ತದೆ.
ಪ್ಲೇಗಿನ ಪ್ರತಿಬಂಧಕ ಚುಚ್ಚು ಮದ್ದನ್ನು ಆವಿಷ್ಕರಿಸಿದ ಡಾ. ಹೋಪ್‌ಕಿನ್ಸ್ ಎಂಬ ಫ್ರೆಂಚ್ ವೈದ್ಯನ ಪ್ರಕಾರ, ಪ್ಲೇಗ್ ವ್ಯಾಧಿಯು ಹಬ್ಬಿರುವ ದಿನಗಳಲ್ಲಿ ಪ್ರತಿಯೊಬ್ಬ ವ್ಯಕ್ತಿಯೂ ಪ್ರಾತಃಕಾಲ ದನದ ತುಪ್ಪವನ್ನು ಉಪಯೋಗಿಸಿದ್ದಲ್ಲಿ ಪ್ಲೇಗಿನ ಕೀಟಾಣುಗಳು ಕೂಡಲೇ ನಾಶವಾಗುತ್ತವೆ ಮತ್ತು ಪ್ಲೇಗ್ ರೋಗದ ಭೀತಿ ಇರುವುದಿಲ್ಲ ಎಂಬುದಾಗಿದೆ. ಹಾಗೆಯೇ ಕೆಲ ಪಾಶ್ಚಾತ್ಯ ವಿಜ್ಞಾನಿಗಳು ತುಪ್ಪದ ಮೇಲೆ ದೀರ್ಘಕಾಲ ಸಂಶೋಧನೆ ನಡೆಸಿ 2006ರಲ್ಲಿ ಪ್ರಕಟಿಸಿದ ವರದಿಯಲ್ಲಿ, ತುಪ್ಪವು ಹೊಟ್ಟೆಯಲ್ಲಿನ ಕಿಣ್ವಗಳನ್ನು ಹೆಚ್ಚಿಸಿ, ಜೀರ್ಣಶಕ್ತಿಯನ್ನು ವೃದ್ಧಿಸುತ್ತದೆ. ಇತರೆ ಜಿಡ್ಡಿನ ಪದಾರ್ಥಗಳಂತೆ ಉದರ ಭಾರ ಹೆಚ್ಚಿಸುವುದಿಲ್ಲ. ಸುಟ್ಟಗಾಯ, ಹೊಟ್ಟೆ ಹುಣ್ಣು, ಮಲಬದ್ಧತೆ ನಿವಾರಿಸುತ್ತದೆ.
ಚರ್ಮ ಮತ್ತು ಕಣ್ಣುಗಳಿಗೆ ಹಿತಕರವಾಗಿದ್ದು, ಅಧಿಕ ಆ್ಯಂಟಿ ಆಕ್ಸಿಡೆಂಟ್ ತತ್ವಗಳನ್ನು ಹೊಂದಿರುವ ಕಾರಣ ಮುಪ್ಪನ್ನು ಮುಂದೂಡುವಲ್ಲಿ ಸಹಕಾರಿಯಾದುದಾಗಿದೆ. ಆಹಾರದಲ್ಲಿರುವ ವಿಟಮಿನ್ ಮತ್ತು ಮಿನರಲ್‌ಗಳನ್ನು ಹೆಚ್ಚು ಹೀರಿಕೊಳ್ಳಲು ದೇಹಕ್ಕೆ ಸಹಕಾರಿಯಾಗಿದ್ದು, ದೇಹದ ವಿವಿಧ ಅಂಗಾಂಶಗಳ ಪದರಗಳಿಗೆ ಶಕ್ತಿಯನ್ನು ತುಂಬುತ್ತದೆ. ರೋಗನಿರೋಧಕ ಶಕ್ತಿ ಹಾಗೂ ಜ್ಞಾಪಕ ಶಕ್ತಿಯನ್ನು ವೃದ್ಧಿಸುತ್ತದೆ, ಬ್ಯುಟಿರಿಕ್ ಆಸಿಡ್ ಇರುವ ಕಾರಣ ವೈರಸ್‌ಗಳ ವಿರುದ್ಧ ಹೆಚ್ಚು ಹೋರಾಡುತ್ತದೆ. ಕ್ಯಾನ್ಸರ್ ಗಡ್ಡೆಗಳ ಬೆಳವಣಿಗೆಯನ್ನು ಕುಂಠಿತಗೊಳಿಸುವಲ್ಲಿ ಪರಿಣಾಮಕಾರಿ ಯಾಗಿದ್ದು, ದೇಹದ ನರಮಂಡಲಕ್ಕೆ ಶಕ್ತಿ ಒದಗಿಸುವುದರಿಂದ ಅನೇಕ ನರಸಂಬಂಧಿ ರೋಗಗಳನ್ನು ಶಮನ ಮಾಡುವಲ್ಲಿ ತುಪ್ಪದ ಸೇವನೆ ಅತ್ಯವಶ್ಯಕ ಎಂಬುದಾಗಿ ಹೇಳಲಾಗಿದೆ.
ಗಾಯಕ್ಕೆ ಮದ್ದು ಹಳೆಯ ತುಪ್ಪ
ಹತ್ತು ವರ್ಷ ಹಳೆಯ ತುಪ್ಪವನ್ನು ಗಾಯಗಳಿಗೆ ಹಚ್ಚುವುದರಿಂದ ಗಾಯ ಬೇಗನೇ ವಾಸಿಯಾಗುತ್ತದೆ. ಹಾಗೆಯೇ ಸುಟ್ಟ ಗಾಯಕ್ಕೂ ತುಪ್ಪವನ್ನು ಹಚ್ಚುವುದರಿಂದ ಬೇಗನೇ ಗುಣವಾಗುತ್ತದೆ. ಚೇಳು ಕಡಿದಾಗ ತುಪ್ಪ ಮತ್ತು ಹಾಲನ್ನು ಒಟ್ಟಿಗೆ ಸೇರಿಸಿ ಸೇವಿಸುವುದರಿಂದ ವಿಷದ ಪ್ರಭಾವ ಕಡಿಮೆಯಾಗುತ್ತದೆ. ನಾಭಿಯೊಳಗೆ ಒಂದು ಹನಿ ತುಪ್ಪ ಹಾಕಿ, ರಿಂಗ್ ಫಿಂಗರ್‌ನಿAದ ಪ್ರದಕ್ಷಿಣೆ ಮತ್ತು ಅಪ್ರದಕ್ಷಿಣೆಯಾಗಿ ಸುತ್ತು ಸುತ್ತಿದ್ದರೆ ಶರೀರದ ಶಕ್ತಿ ಹೆಚ್ಚುತ್ತದೆ.
ಕೊಲೆಸ್ಟ್ರಾಲ್‌ನಲ್ಲಿ ದೇಹಕ್ಕೆ ಪೂರಕವಾದ ಹೆಚ್.ಡಿ.ಎಲ್. ಹಾಗೂ ದೇಹಕ್ಕೆ ಹಾನಿಕಾರಕ ಪರಿಣಾಮವನ್ನು ಉಂಟು ಮಾಡಬಲ್ಲ ಎಲ್.ಡಿ.ಎಲ್ ಎಂಬ ಎರಡು ಪ್ರಮುಖ ವಿಧಾನಗಳಿವೆ. ಆದರೆ ತುಪ್ಪದಲ್ಲಿ ಈ ಎರಡು ಕೊಲೆಸ್ಟ್ರಾಲ್‌ಗಳ ಅನುಪಾತವು ದೇಹಕ್ಕೆ ಅತ್ಯಂತ ಪೂರಕವಾಗಿದೆ. ಹಾಗೆಯೇ ತುಪ್ಪವು ಹೃದಯದ ರಕ್ತ ನಾಳಗಳಲ್ಲಿ ಗಟ್ಟಿ ಕಟ್ಟುವುದಿಲ್ಲ, ಬದಲಾಗಿ ರಕ್ತದ ಓಡಾಟವನ್ನು ಸರಾಗಗೊಳಿಸಿ ದೇಹದ ವಿವಿಧ ಭಾಗಗಳನ್ನು ಶುದ್ಧಿಗೊಳಿಸುತ್ತದೆ. ಹೀಗಾಗಿ ಹೃದಯಾಘಾತದಂತಹ ರೋಗಗಳು ಕಡಿಮೆಯಾಗುತ್ತವೆ.
ಧಾರ್ಮಿಕ ಮತ್ತು ಆಧ್ಯಾತ್ಮಿಕ ಲೇಖನ, ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ (Click Here) ಮಾಡಿ.
ತುಪ್ಪದ ಸೇವನೆಯಿಂದ ಮನುಷ್ಯನಿಗೆ ಬೇಕಾದ ನಿದ್ರೆಯು ಉತ್ತಮವಾಗಿ ಬರುತ್ತದೆ. ಹವಾಮಾನಕ್ಕೆ ಒಗ್ಗದ ರೋಗಗಳು ಬರುವುದಿಲ್ಲ. ಒಟ್ಟಿನಲ್ಲಿ ತುಪ್ಪ ತಿಂದರೆ ದಪ್ಪ ಆಗುತ್ತಾರೆ ಎಂಬ ತಪ್ಪು ಕಲ್ಪನೆಯನ್ನು ತೊಡೆದು ಹಾಕಬೇಕಾಗಿದೆ. ದಿನಕ್ಕೆ ಕನಿಷ್ಠ ದೇಶಿ ಗೋವಿನ ಒಂದು ಚಮಚ ತುಪ್ಪವನ್ನಾದರೂ ಸೇವಿಸುವ ಮೂಲಕ ದೇಹ ಮತ್ತು ಮನಸ್ಸನ್ನು ಸ್ವಸ್ಥವಾಗಿಟ್ಟುಕೊಳ್ಳಬಹುದಾಗಿದೆ.
ಇದನ್ನೂ ಓದಿ: ಗೋ ಸಂಪತ್ತು: ತುಪ್ಪ ಆರೋಗ್ಯಕ್ಕೆ ಹಾನಿಕಾರಕವೇ? ಸತ್ಯವೇನು?