ಪ್ರಶ್ನೆ೧: ಪ್ರತಿಯೊಬ್ಬ ಹುಡುಗನು ತನ್ನ ಪ್ರೀತಿಯ ಹುಡುಗಿಗೆ ಮಂಡಿಯೂರಿ ಯಾಕೆ ಪ್ರೊಪೋಸ್ ಮಾಡುತ್ತಾನೆ?
ಉತ್ತರ: ಅವನು ತನ್ನ ಇಗೋ ಎಲ್ಲವನ್ನೂ ಆಕೆಯ ಪಾದದ ಕೆಳಗೆ ಇಟ್ಟರೆ ಮಾತ್ರ ನಿಜವಾದ ಪ್ರೀತಿ ಮಾಡಲು ಸಾಧ್ಯ!
ಪ್ರಶ್ನೆ ೨: ಹುಡುಗನು ಮುತ್ತು ಕೊಡುವಾಗ ಹುಡುಗಿಯು ಯಾಕೆ ಕಣ್ಣು ಮುಚ್ಚಿಕೊಳ್ಳುತ್ತಾಳೆ?
ಉತ್ತರ: ಅದು ಆಕೆಯ ಉತ್ಕಟವಾದ ಭಾವ ಸ್ಪರ್ಶ. ಆ ಹೊತ್ತಲ್ಲಿ ಆಕೆ ತನ್ನ ಕಣ್ಣು ಮುಚ್ಚಿ ಎಲ್ಲ ಭಾವನೆಗಳನ್ನು ಫ್ರೀಜ್ ಮಾಡಿಕೊಳ್ಳುತ್ತಾಳೆ!
ಪ್ರಶ್ನೆ ೩: ಪ್ರೀತಿ ಮಾಡಿದ ಹುಡುಗ ಯಾಕೆ ತನ್ನ ಹುಡುಗಿಯ ಮಡಿಲಲ್ಲಿ ಮಲಗಲು ಆಸೆ ಪಡುತ್ತಾನೆ?
ಉತ್ತರ: ಯಾಕೆಂದರೆ ಅವನು ತನ್ನ ಹುಡುಗಿಯಲ್ಲಿ ತನ್ನ ಎರಡನೇ ತಾಯಿಯನ್ನು ಹುಡುಕುತ್ತಾನೆ!
ಪ್ರಶ್ನೆ ೪: ಪ್ರೀತಿ ಮಾಡಿದ ಹುಡುಗ, ಹುಡುಗಿ ಯಾಕೆ ಕ್ಯಾಂಡಲ್ ಲೈಟ್ ಡಿನ್ನರ್ ಇಷ್ಟ ಪಡುತ್ತಾರೆ?
ಉತ್ತರ: ಕ್ಯಾಂಡಲ್ ಲೈಟಿನ ಬೆಳಕು ಕಡಿಮೆ ಬ್ರೈಟ್ ಆಗಿರುವುದರಿಂದ ಕಣ್ಣುಗಳು ಅಗಲ ಆಗುತ್ತವೆ. ಆಗ ಪರಸ್ಪರ ಇಬ್ಬರೂ ಚಂದ ಕಾಣುತ್ತಾರೆ!
ಪ್ರಶ್ನೆ ೫: ಹುಡುಗಿಯು ತಾನು ಪ್ರೀತಿ ಮಾಡಿದ ಹುಡುಗನ ಹೆಗಲ ಮೇಲೆ ತಲೆಯಿಟ್ಟು ಯಾಕೆ ಮಲಗಲು ಆಸೆ ಪಡುತ್ತಾಳೆ?
ಉತ್ತರ: ಅವಳು ತನ್ನ ಹುಡುಗನಲ್ಲಿ ತನ್ನ ಎರಡನೇ ಅಪ್ಪನನ್ನು ಹುಡುಕುತ್ತಾಳೆ!
ಪ್ರಶ್ನೆ ೬: ಹುಡುಗಿ ತಾನು ಪ್ರೀತಿ ಮಾಡಿದ ಹುಡುಗನ ತಲೆ ಸವರುವುದು ಯಾಕೆ?
ಉತ್ತರ: ಮುಂದೆ ಮದುವೆ ಆದ ನಂತರ ಜುಟ್ಟು ಹಿಡಿದು ಆಡಿಸಬೇಕಲ್ವಾ? ಅವಳು ಜುಟ್ಟು ಹುಡುಕುತ್ತಾಳೆ!
ಪ್ರಶ್ನೆ ೭: ಪ್ರೀತಿ ಮಾಡಿದ ಹುಡುಗಿಯು ಪದೇ ಪದೇ ಹೇಳುವ ಮಾತು – ಎಲ್ಲವೂ ಮದುವೆ ಆದ ನಂತರ! ಯಾಕೆ?
ಉತ್ತರ: ಅವಳು ಯಾರನ್ನೂ ಹೆಚ್ಚು ನಂಬುವುದಿಲ್ಲ!
ಪ್ರಶ್ನೆ ೮: ಪ್ರತೀ ಹುಡುಗಿಯು ಸ್ಮಾರ್ಟ್ ಹುಡುಗನಿಗಿಂತ ಸೆಕ್ಯೂರ್ ಆದ ಹುಡುಗನನ್ನು ಹೆಚ್ಚು ಇಷ್ಟ ಪಡುತ್ತಾಳೆ. ಯಾಕೆ?
ಉತ್ತರ: ಅವಳು ಬುದ್ಧಿವಂತೆ. ಅವಳು ಆ ಹುಡುಗನಲ್ಲಿ ತನ್ನ ಬದುಕಿನ ಸೆಕ್ಯೂರಿಟಿಯನ್ನು ಹುಡುಕುತ್ತಾಳೆ!
ಪ್ರಶ್ನೆ ೯: ಪ್ರತೀ ಹುಡುಗನು ಬುದ್ದಿವಂತ ಹುಡುಗಿಗಿಂತ ಸ್ಮಾರ್ಟ್ ಹುಡುಗಿಯನ್ನು ಹುಡುಕುತ್ತಾನೆ. ಯಾಕೆ?
ಉತ್ತರ: ಅವನಿಗೆ ತಾನು ಖುಷಿ ಆಗಿರುವುದಕ್ಕಿಂತ ಬೇರೆಯವರ ಹೊಟ್ಟೆ ಉರಿಸುವುದು ಮುಖ್ಯ!
ಪ್ರಶ್ನೆ ೧೦: ಹುಡುಗಿಯು ತನ್ನ ಹುಡುಗನ ಜೊತೆ ಮಾತಾಡುವಾಗ ಯಾಕೆ ನೆಲ ನೋಡಿ ಮಾತಾಡುತ್ತಾಳೆ?
ಉತ್ತರ: ಅವಳಿಗೆ ತಾನೆಲ್ಲಿ ಅವನ ಪ್ರೀತಿಗೆ ವಶೀಕರಣ ಆಗ್ತೆನೋ ಎಂಬ ಭಯ ಇರುತ್ತದೆ!
ಪ್ರಶ್ನೆ ೧೧: ಪ್ರತೀ ಹುಡುಗನು ತನ್ನ ಹುಡುಗಿಯ ಕಣ್ಣಲ್ಲಿ ಆಳವಾಗಿ ನೋಡುವುದು ಯಾಕೆ?
ಉತ್ತರ: ಅವನು ಆಕೆಯಲ್ಲಿ ಮುಗ್ಧತೆಯನ್ನು ಹುಡುಕುತ್ತಾನೆ!.
ಪ್ರಶ್ನೆ ೧೨: ಹುಡುಗ ಮತ್ತು ಹುಡುಗಿಯರ ಪ್ರೀತಿಯಲ್ಲಿ ಏನು ವ್ಯತ್ಯಾಸ ಇದೆ?
ಉತ್ತರ: ಹುಡುಗನ ಪ್ರೀತಿ ನೆಲದ ಹಾಗೆ. ಬಿಸಿ ಆಗುವುದು ಬೇಗ. ತಣಿಯುವುದು ಇನ್ನೂ ಬೇಗ!
ಹುಡುಗಿಯ ಪ್ರೀತಿ ನೀರಿನ ಹಾಗೆ. ಬಿಸಿ ಆಗುವುದು ನಿಧಾನ. ತಣಿಯುವುದು ತುಂಬಾ ನಿಧಾನ!
ಪ್ರಶ್ನೆ ೧೩: ಹುಡುಗಿಯು ತನ್ನ ಹುಡುಗನನ್ನು ಗಾಢವಾಗಿ ಅಪ್ಪಿಕೊಳ್ಳುವುದು ಯಾಕೆ?
ಉತ್ತರ: ಅವಳು ಅವನಲ್ಲಿ ಕಂಫರ್ಟ್ ಝೋನನ್ನು ಹುಡುಕುತ್ತಾಳೆ!
ಪ್ರಶ್ನೆ ೧೪: ಹುಡುಗ ತನ್ನ ಹುಡುಗಿಯಲ್ಲಿ ಮನಸ್ಸು ಬಿಚ್ಚಿ ಎಲ್ಲವನ್ನೂ ಹೇಳಲು ಆಸೆ ಪಡುತ್ತಾನೆ. ಯಾಕೆ?
ಉತ್ತರ: ಅವನಿಗೆ ಅವಳು ಕ್ಷಮಯಾ ಧರಿತ್ರಿ ಎಂದು ಗೊತ್ತಿದೆ!
ಪ್ರಶ್ನೆ ೧೫: ಹುಡುಗಿ ಹುಡುಗನ ಹತ್ತಿರ ತಪ್ಪಿಯೂ ಬೇರೆ ಹುಡುಗನ ಬಗ್ಗೆ ಮಾತಾಡುವುದಿಲ್ಲ. ಯಾಕೆ?
ಉತ್ತರ: ಹುಡುಗರು ಹೆಚ್ಚು ಪೊಸೆಸಿವ್ ಆಗಿರುತ್ತಾರೆ ಎಂದು ಅವಳಿಗೆ ಗೊತ್ತಿದೆ!
ಪ್ರಶ್ನೆ ೧೬: ಹುಡುಗಿಯು ಹುಡುಗನಿಗೆ ಪ್ರೊಪೋಸ್ ಮಾಡುವ ಮೊದಲು ಕೇಳುವ ಖಚಿತ ಪ್ರಶ್ನೆ ಯಾವುದು? ಯಾಕೆ?
ಉತ್ತರ: ನಿಮ್ಮ ಮನೆಯಲ್ಲಿ ಬೇರೆ ಯಾರ್ಯಾರು ಇದ್ದಾರೆ? ಯಾಕೆಂದರೆ ಅವಳು ತುಂಬ ಬುದ್ಧಿವಂತೆ!
ಪ್ರಶ್ನೆ ೧೭: ಪ್ರತಿಯೊಬ್ಬ ಹುಡುಗನು ತನ್ನ ಹುಡುಗಿಯನ್ನು ಯಾಕೆ ಪೂರ್ತಿ ಹೆಸರಿನಿಂದ ಕರೆಯುವುದಿಲ್ಲ?
ಉತ್ತರ: ತುಂಬಾ ಹುಡುಗಿಯರ ಹೆಸರುಗಳನ್ನು ನೆನಪು ಇಟ್ಟುಕೊಳ್ಳುವುದು ಕಷ್ಟ!
ಪ್ರಶ್ನೆ ೧೮: ಪ್ರತಿಯೊಬ್ಬ ಹುಡುಗನು ಮದುವೆಗಿಂತ ಮೊದಲು ಯಾಕೆ ಹೆಚ್ಚು ಮಾತಾಡುತ್ತಾನೆ?
ಉತ್ತರ: ಮತ್ತೆ ಮಾತಾಡಲು ಅವಕಾಶ ಸಿಗುವ ಗ್ಯಾರಂಟೀ ಇಲ್ಲ!
ಪ್ರಶ್ನೆ ೧೯: ಹುಡುಗನು ಯಾಕೆ ತನ್ನ ಹುಡುಗಿಗೆ ಹೆಚ್ಚು ಪ್ರಾಮಿಸ್ ಕೊಡುತ್ತಾನೆ?
ಉತ್ತರ: ಈ ವಿಷಯದಲ್ಲಿ ಹುಡುಗಿಯ ಮೆಮೊರಿಯು ಸ್ವಲ್ಪ ವೀಕೂ!
ಪ್ರಶ್ನೆ ೨೦: ಹುಡುಗಿಯು ಮದುವೆಗೆ ಮೊದಲು ಎಲ್ಲವೂ ನಿಮ್ಮಿಷ್ಟ ಎಂದು ಹುಡುಗನಿಗೆ ಹೇಳುವುದು ಯಾಕೆ?
ಉತ್ತರ: ಮದುವೆ ನಂತರ ಯಾವುದೂ ಅವನ ಇಷ್ಟದಂತೆ ನಡೆಯುವುದಿಲ್ಲ!
ಪ್ರಶ್ನೆ ೨೧: ಸ್ಮಾರ್ಟ್ ಹುಡುಗಿಯು ಯಾವಾಗಲೂ ಯಾಕೆ ಪೊರ್ಕಿಯಂಥ ಹುಡುಗನನ್ನು ಪ್ರೀತಿ ಮಾಡುತ್ತಾಳೆ?
ಉತ್ತರ: ಪ್ರತಿಯೊಬ್ಬ ಹುಡುಗಿಯಲ್ಲಿ ಅದ್ಭುತವಾದ ತಾಯಿ ಇರುತ್ತಾಳೆ!
ಪ್ರಶ್ನೆ ೨೨: ಹುಡುಗ ಯಾಕೆ ತನ್ನ ಹುಡುಗಿಯಲ್ಲಿ ತಾನು ಮಾಡದ ತಪ್ಪನ್ನು ಕೂಡ ಒಪ್ಪಿಕೊಳ್ಳುತ್ತಾನೆ?
ಉತ್ತರ: ಏಕೆಂದರೆ ಪ್ರತೀ ಹುಡುಗಿಯಲ್ಲಿ ಒಬ್ಬ ಅದ್ಭುತ ಟೀಚರ್ ಇರುತ್ತಾಳೆ!
ಪ್ರಶ್ನೆ ೨೩: ಹುಡುಗ ಯಾಕೆ ತನ್ನ ಹುಡುಗಿಯನ್ನು ಹೆಚ್ಚು ಹೊಗಳುತ್ತಾನೆ?
ಉತ್ತರ: ಹೊಗಳಿದಷ್ಟೂ ಖರ್ಚು ಕಡಿಮೆ!
ಇದನ್ನೂ ಓದಿ : ರಾಜ ಮಾರ್ಗ ಅಂಕಣ : ಮುಳುಗಿದ ಹಡಗಿನಲ್ಲಿ ಅರಳಿದ ಪ್ರೇಮಕಥೆ! ಬಿಟ್ಟು ಹೋದ ಸಂದೇಶ ಏನು?