Site icon Vistara News

ರಾಜಮಾರ್ಗ ಅಂಕಣ: ನಾವು ನಾಶ ಆಗೋದು ಯಾವಾಗ?

change ರಾಜಮಾರ್ಗ ಅಂಕಣ

ಬನ್ನಿ ಬದಲಾಗೋಣ. ಆಗದಿದ್ದರೆ ಅದಕ್ಕೆ ನಾವೇ ಹೊಣೆ!

:: ರಾಜೇಂದ್ರ ಭಟ್ ಕೆ.

ರಾಜಮಾರ್ಗ ಅಂಕಣ: 1) ನಾನು ಏನು ಬರೆದರೂ ಜನರು ಓದುತ್ತಾರೆ ಎಂದು ನಂಬಲು ತೊಡಗಿದ ಕ್ಷಣಕ್ಕೆ ಒಬ್ಬ ಬರಹಗಾರ ಸಾಯುತ್ತಾನೆ.

2) ತಾನು ಏನು ಮಾಡಿದರೂ ಜನರು ಓಟು ಹಾಕ್ತಾರೆ ಎಂದು ನಂಬಿದ ಕ್ಷಣಕ್ಕೆ ಓರ್ವ ರಾಜಕಾರಣಿ ನಾಶವಾಗುತ್ತಾನೆ.

3) ತಾನು ಎಲ್ಲವೂ ಕಲಿತಾಗಿದೆ, ಹೊಸದಾಗಿ ಕಲಿಯುವುದು ಏನಿಲ್ಲ ಎಂದು ನಂಬಿದ ಕ್ಷಣಕ್ಕೆ ಒಬ್ಬ ಗುರುವು ಸಾವನ್ನು ಕಾಣುತ್ತಾನೆ.

4) ತಾನು ಉಪದೇಶ ಮಾಡುವುದರಿಂದ ಜಗತ್ತು ಬದಲಾಗುತ್ತದೆ ಎಂದು ನಂಬಿದ ಕ್ಷಣಕ್ಕೆ ಓರ್ವ ಧರ್ಮಗುರುವು ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತಾನೆ.

5) ಬೇರೆಯವರ ಖಾಸಗಿ ಜೀವನದಲ್ಲಿ ಇಣುಕಿ ನೋಡುವುದೇ ಸುದ್ದಿ ಎಂದು ನಿರ್ಧಾರ ಮಾಡಿದ ಕ್ಷಣಕ್ಕೆ ಓರ್ವ ಪತ್ರಕರ್ತನು ನಾಶವಾಗುತ್ತಾನೆ.

6) ನಾನು ಪ್ರಯತ್ನ ಮಾಡದೆ ಎಲ್ಲರನ್ನೂ ದೇವರೇ ಗುಣಪಡಿಸುತ್ತಾನೆ ಎಂದು ನಂಬಿ ಕೂತ ಕ್ಷಣಕ್ಕೆ ಓರ್ವ ವೈದ್ಯನು ತನ್ನ ಮೌಲ್ಯ ಕಳೆದುಕೊಳ್ಳುತ್ತಾನೆ.

7) ಪರಿಶ್ರಮವಿಲ್ಲದೆ ಕೀರ್ತಿ ಬರಲಿ ಎಂದು ಹಾರೈಸಿದ ಕ್ಷಣಕ್ಕೆ ಒಂದು ಪ್ರತಿಭೆಯು ಸಾಯುತ್ತದೆ.

8) ತಾನಿರುವುದೇ ಆದೇಶ ನೀಡಲು, ಉಳಿದವರೆಲ್ಲರೂ ನನ್ನನ್ನು ಫಾಲೋ ಮಾಡಬೇಕು ಎಂದು ನಂಬಿದ ಕ್ಷಣಕ್ಕೆ ಒಬ್ಬ ಲೀಡರ್ ಸಾಯುತ್ತಾನೆ.

9) ತಾನು ಕಂಫರ್ಟ್ ವಲಯದಲ್ಲಿ ಇರ್ತೇನೆ, ರಿಸ್ಕ್ ಯಾರಿಗೆ ಬೇಕು? ಎಂದು ನಂಬಿ ಕೂತ ಕ್ಷಣಕ್ಕೆ ಓರ್ವ ಉದ್ಯಮಿಯು ನಾಶವಾಗುತ್ತಾನೆ.

10) ಸೃಜನಶೀಲವಾಗಿ ಯೋಚನೆ ಮಾಡುವುದನ್ನು ಬಿಟ್ಟ ಕ್ಷಣದಲ್ಲಿ ಓರ್ವ ಕಲಾವಿದನು ಸಾಯುತ್ತಾನೆ.

11) ತನ್ನ ಸಾಮರ್ಥ್ಯವನ್ನು ನಂಬದೆ ಬೇರೆಯವರನ್ನು ಅನುಕರಣೆ ಮಾಡುತ್ತಾ ಹೋದಾಗ ಓರ್ವ ಸಾಧಕನು ನಿಧಾನವಾಗಿ ನಾಶವಾಗುತ್ತಾನೆ.

12) ತನ್ನ ಉತ್ಪನ್ನಗಳಲ್ಲಿ ನಂಬಿಕೆ ಇಡದೆ ಜಾಹೀರಾತುಗಳನ್ನು ನಂಬಿ ಕೂತಾಗ ಓರ್ವ ವ್ಯಾಪಾರಿಯು ಖಾಲಿ ಆಗುತ್ತಾನೆ.

13) ಕ್ಷಣ ಕ್ಷಣಕ್ಕೆ ಅಪ್ಡೇಟ್ ಆಗದೇ ಅದೇ ಸವಕಲು ಮಾದರಿಗಳನ್ನು ನಂಬಿ ಕೂತಿರುವ ಸಂಶೋಧಕನು ಔಟ್ ಡೇಟ್ ಆಗುವುದು ಖಂಡಿತ.

14) ತನಗೆ ಬಂದ ಸೋಲುಗಳಿಗೆ ಆತ್ಮಾವಲೋಕನ ಮಾಡಿಕೊಳ್ಳದೆ ಬೇರೆಯವರನ್ನು ದೂರುತ್ತಾ ಕೂತಾಗ ಒಬ್ಬ ಮ್ಯಾನೇಜರ್ ಸಾಯುತ್ತಾನೆ.

15) ಗುರುಗಳ ಮೇಲೆ ನಂಬಿಕೆ ಇಲ್ಲದೆ ಎಲ್ಲವನ್ನೂ ನಾನೇ ಕಲಿಯುತ್ತೇನೆ ಎಂದು ಹೊರಡುವ ಶಿಷ್ಯ ಸೋಲುವುದು ಖಂಡಿತ.

16) ಗೆಲುವಿನ ದಾರಿಯನ್ನು ಹೇಳಿಕೊಡದೆ ಕೇವಲ ಮೋಟಿವೇಶನ್ ಮಾತ್ರ ಮಾಡುತ್ತಾ ಹೋಗುವ ತರಬೇತುದಾರನು ನಿಧಾನಕ್ಕೆ ಖಾಲಿ ಆಗುತ್ತಾನೆ.

17) ತನಗೆ ದೊರೆತ ಪ್ರತೀಯೊಂದು ಅವಕಾಶವನ್ನು ವ್ಯರ್ಥ ಮಾಡುತ್ತಾ ಇನ್ನೊಂದು ಅವಕಾಶ ಬೇಕಿತ್ತು ಎಂದು ಕಾಯುತ್ತಾ ಕುಳಿತ ಕ್ರೀಡಾಪಟುವು ನಿಧಾನವಾಗಿ ಮೌಲ್ಯ ಕಳೆದುಕೊಳ್ಳುತ್ತಾನೆ.

Morning sun light and get up early

18) ತನ್ನ ಮತದಾನದ ಹಕ್ಕನ್ನು ಸರಿಯಾಗಿ ಚಲಾವಣೆ ಮಾಡದೆ ಸರಕಾರ ಸರಿಯಿಲ್ಲ ಎಂದು ಟೀಕೆ ಮಾಡುವ ಮತದಾರನು ತಾನು ನಾಶವಾಗುವುದು ಮಾತ್ರವಲ್ಲ, ಪ್ರಜಾಪ್ರಭುತ್ವದ ನಾಶಕ್ಕೆ ಕೂಡ ಕಾರಣ ಆಗುತ್ತಾನೆ.

19) ಬೇರೆಯವರ ಮಾತುಗಳನ್ನು ಆಲಿಸದೇ ಎಲ್ಲವನ್ನೂ ತನ್ನ ಮೂಗಿನ ನೇರಕ್ಕೆ ನಿರ್ಧಾರ ಮಾಡುವ ಅರಸನು ನಿಧಾನವಾಗಿ ನಾಶವಾಗುತ್ತಾನೆ.

20) ತನ್ನ ಸಾಮರ್ಥ್ಯಗಳ ಮೇಲೆ ನಂಬಿಕೆ ಇಡದೆ ಯಾರ್ಯಾರನ್ನೋ ಅವಲಂಬನೆ ಮಾಡುವ ಬಾಸ್ ನಿಧಾನವಾಗಿ ನಾಶವಾಗಿ ಬಿಡುತ್ತಾನೆ.

21) ಬೇರೆ ಯಾರನ್ನೂ ಬೆಳೆಸದೆ ತಾನು ಮಾತ್ರ ಬೆಳೆದರೆ ಸಾಕು ಎಂದು ಯೋಚಿಸುವ ವ್ಯಕ್ತಿಯು ನಿಧಾನವಾಗಿ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತಾನೆ.

22) ತಾನು ಆಡುವ ಮಾತುಗಳು ಬೇರೆಯವರಿಗೆ, ತನ್ನ ಅನುಷ್ಠಾನಕ್ಕೆ ಅಲ್ಲ ಎಂದು ನಂಬುತ್ತ ಕೂತರೆ ಒಬ್ಬ ಭಾಷಣಕಾರ ನಾಶವಾಗಲು ಹೆಚ್ಚು ಸಮಯ ಬೇಕಾಗಿಲ್ಲ.

23) ರಾಷ್ಟ್ರಕ್ಕೆ ತನ್ನ ನಿಷ್ಠೆಯನ್ನು ಮರೆತು, ರಾಷ್ಟ್ರ ಮೊದಲು ಎಂದು ನಂಬಿಕೆ ಇಲ್ಲದ ಸೈನಿಕನು ಯುದ್ಧವನ್ನು ಮಾಡದೆ ಸಾಯುತ್ತಾನೆ.

ಯೋಚಿಸಿ ಮತ್ತು ಬದಲಾಗಿ.

ಇದನ್ನೂ ಓದಿ: ರಾಜಮಾರ್ಗ ಅಂಕಣ: ಕೃತಜ್ಞತೆ ಎಂಬ ಮಹಾನ್ ಪ್ರವಾಹ

Exit mobile version