Site icon Vistara News

ಸಗಟು ಹಣದುಬ್ಬರ ಜೂನ್‌ನಲ್ಲಿ 15.18%ಕ್ಕೆ ಅಲ್ಪ ಇಳಿಕೆ

Retail inflation

ನವ ದೆಹಲಿ: ಕಳೆದ ಜೂನ್‌ನಲ್ಲಿ ಸಗಟು ಹಣದುಬ್ಬುರ (WPI Inflation) ೧೫.೧೮ಕ್ಕೆ ಇಳಿಕೆಯಾಗಿದೆ. ಮೇನಲ್ಲಿ ೧೫.೮೮% ಹಣದುಬ್ಬರವಿತ್ತು. ಇದಕ್ಕೆ ಹೋಲಿಸಿದರೆ ಅಲ್ಪ ಪ್ರಮಾಣದಲ್ಲಿ ತಗ್ಗಿದೆ. ಆದರೆ ಇನ್ನೂ ಅಪಾಯಕಾರಿ ಮಟ್ಟದಲ್ಲಿಯೇ ಮುಂದುವರಿದಿದ್ದು, ಕಳವಳ ಸೃಷ್ಟಿಸಿದೆ.

ವಾಣಿಜ್ಯ ಮತ್ತು ಕೈಗಾರಿಕೆ ಸಚಿವಾಲಯ ಬಿಡುಗಡೆಗೊಳಿಸಿರುವ ಅಂಕಿ ಅಂಶಗಳ ಪ್ರಕಾರ, ಜೂನ್‌ನಲ್ಲಿ ಆಹಾರ ವಸ್ತುಗಳು, ತರಕಾರಿ, ಹಣ್ಣು, ಮೂಲ ಲೋಹಗಳು, ರಾಸಾಯನಿಕ, ರಾಸಾಯನಿಕ ಉತ್ಪನ್ನಗಳ ದರಗಳು ಏರುಗತಿಯಲ್ಲಿ ಇತ್ತು.

ಸಗಟು ಹಣದುಬ್ಬರ ಟ್ರೆಂಡ್‌

ತರಕಾರಿ, ಹಣ್ಣುಗಳ ದರ ಏರಿಕೆ

ತರಕಾರಿ ದರಗಳು ಜೂನ್‌ನಲ್ಲಿ ೫೬.೭% ಏರಿಕೆಯಾಗಿವೆ. ಮೇನಲ್ಲಿ ಇದು ೫೬.೩೬% ಏರಿಕೆಯಾಗಿತ್ತು. ಆಲೂಗಡ್ಡೆ ದರ ೩೯.೩೮ ಹೆಚ್ಚಳವಾಗಿತ್ತು. ಈರುಳ್ಳಿ ದರ ಮೈನಸ್‌ ೩೧.೫೪% ಇಳಿದಿತ್ತು. ಹಣ್ಣುಗಳ ದರದಲ್ಲಿ ೨೦.೩೩% ಹೆಚ್ಚಳವಾಗಿತ್ತು. ಹಾಲಿನ ದರದಲ್ಲಿ ೬.೩೫%, ಮೊಟ್ಟೆ, ಮಾಂಸ ಮತ್ತು ಮೀನಿನ ದರದಲ್ಲಿ ೭.೨೪% ದರ ಏರಿಕೆಯಾಗಿದೆ. ಮೇಗೆ ಹೋಲಿಸಿದರೆ ಜೂನ್‌ನಲ್ಲಿ ತೈಲ ಮತ್ತು ವಿದ್ಯುತ್‌ ದರದಲ್ಲಿ ಹಣದುಬ್ಬರ ೪೦.೬೨%ರಿಂದ ೪೦.೩೮ಕ್ಕೆ ಇಳಿಕೆಯಾಗಿದೆ. ಉತ್ಪಾದಿತ ವಸ್ತುಗಳು ದರ ೧೦.೧೧%ರಿಂದ ೯.೧೯%ಕ್ಕೆ ಇಳಿಕೆಯಾಗಿದೆ.

ಕಳೆದ ಜೂನ್‌ನಲ್ಲಿ ರಿಟೇಲ್‌ ಹಣದುಬ್ಬರ ೭.೦೧%ಕ್ಕೆ ಅಲ್ಪ ಇಳಿಕೆಯಾಗಿದೆ.

ಇದನ್ನೂ ಓದಿ:ಚಿಲ್ಲರೆ ಹಣದುಬ್ಬರ ಜೂನ್‌ನಲ್ಲಿ 7.1%ಕ್ಕೆ ಅಲ್ಪ ಇಳಿಕೆ, ಈಗಲೂ ಅಪಾಯಕಾರಿ ಮಟ್ಟ

Exit mobile version