ಬೆಂಗಳೂರು: ಬಂಗಾರದ ದರದಲ್ಲಿ ಮಂಗಳವಾರ 680 ರೂ. ಇಳಿಕೆಯಾಗಿದೆ. (Gold price) ಕಳೆದ ನಾಲ್ಕು ದಿನಗಳಲ್ಲಿ ಒಟ್ಟು 1,200 ರೂ. ತಗ್ಗಿದೆ.
24 ಕ್ಯಾರಟ್ ಚಿನ್ನದ ದರದಲ್ಲಿ 10 ಗ್ರಾಮ್‌ಗೆ 50,230 ರೂ.ಗೆ ತಗ್ಗಿದೆ. ಅಕ್ಟೋಬರ್ 31ರಂದು 140 ರೂ, ಹಾಗೂ ಅಕ್ಟೋಬರ್ 29ರಂದು 380 ರೂ. ಇಳಿಕೆಯಾಗಿತ್ತು. ಆಭರಣ ಚಿನ್ನ ಅಥವಾ 22 ಕ್ಯಾರಟ್ ಚಿನ್ನದ ದರದಲ್ಲಿ ಸೋಮವಾರ 600 ರೂ. ತಗ್ಗಿದ್ದು, 46,050 ರೂ.ಗೆ ಇಳಿಕೆಯಾಗಿದೆ.
ಬೆಳ್ಳಿಯ ದರದಲ್ಲಿ ಮಂಗಳವಾರ ಪ್ರತಿ ಕೆ.ಜಿಹೆ 800 ರೂ. ಏರಿಕೆಯಾಗಿದ್ದು, 58,300 ರೂ.ಗೆ ಹೆಚ್ಚಳವಾಗಿದೆ. ಪ್ಲಾಟಿನಮ್ ದರದಲ್ಲಿ ಪ್ರತಿ 10 ಗ್ರಾಮ್‌ಗೆ 50 ರೂ. ತಗ್ಗಿದ್ದು, 24,860 ರೂ.ಗೆ ಇಳಿಮುಖವಾಗಿದೆ.
ಅಂತಾರಾಷ್ಟ್ರೀಯ ದರ ಹಾಗೂ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್ ಎದುರು ರೂಪಾಯಿಯ ಮೌಲ್ಯವನ್ನು ಆಧರಿಸಿ ಸ್ಥಳೀಯವಾಗಿ ಬಂಗಾರದ ದರ ನಿರ್ಣಯವಾಗುತ್ತದೆ.