Site icon Vistara News

Digital Rupee : 130 ಕೋಟಿ ರೂ. ಮೌಲ್ಯದ ಡಿಜಿಟಲ್‌ ರೂಪಾಯಿ ಚಲಾವಣೆಯಲ್ಲಿ: ನಿರ್ಮಲಾ ಸೀತಾರಾಮನ್

e rupee

e rupee

ನವ ದೆಹಲಿ: ದೇಶದಲ್ಲಿ 2023ರ ಫೆಬ್ರವರಿ 28ರ ವೇಳೆಗೆ, 130 ಕೋಟಿ ರೂ. ಮೌಲ್ಯದ ಡಿಜಿಟಲ್‌ ಅಥವಾ ಇ-ರುಪಾಯಿ (digital rupee) ಚಲಾವಣೆಯಲ್ಲಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ತಿಳಿಸಿದ್ದಾರೆ. ಆರ್‌ಬಿಐ 2022ರ ನವೆಂಬರ್‌ 1ರಂದು ಸಗಟು ವಲಯದಲ್ಲಿ ಹಾಗೂ ಡಿಸೆಂಬರ್‌ 1ರಂದು ರಿಟೇಲ್‌ ವಲಯದಲ್ಲಿ ಪ್ರಾಯೋಗಿಕವಾಗಿ ಇ-ರುಪಾಯಿಯನ್ನು ಬಿಡುಗಡೆಗೊಳಿಸಿತ್ತು.

ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ, ಬ್ಯಾಂಕ್‌ ಆಫ್‌ ಬರೋಡಾ, ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾ, ಎಚ್‌ಡಿಎಫ್‌ಸಿ ಬ್ಯಾಂಕ್‌, ಐಸಿಐಸಿಐ ಬ್ಯಾಂಕ್‌, ಕೋಟಕ್‌ ಮಹೀಂದ್ರಾ ಬ್ಯಾಂಕ್‌, ಯಸ್‌ ಬ್ಯಾಂಕ್‌, ಐಡಿಎಫ್‌ಸಿ ಫಸ್ಟ್‌ ಬ್ಯಾಂಕ್‌, ಎಚ್‌ಎಸ್‌ಬಿಸಿ ಈ ಪ್ರಾಯೋಗಿಕ ಯೋಜನೆಯಲ್ಲಿ ಭಾಗವಹಿಸಿವೆ.

ಇ-ರೂಪಾಯಿಯು ಡಿಜಿಟಲ್‌ ಟೋಕನ್‌ ರೂಪದಲ್ಲಿದ್ದು, ಕಾನೂನು ಮಾನ್ಯತೆಯನ್ನು ಹೊಂದಿದೆ. ಕಾಗದದ ಕರೆನ್ಸಿ ನೋಟುಗಳ ಮುಖಬೆಲೆಯಲ್ಲೇ ಇವುಗಳು ದೊರೆಯುತ್ತವೆ.

Exit mobile version