Digital Rupee : 130 ಕೋಟಿ ರೂ. ಮೌಲ್ಯದ ಡಿಜಿಟಲ್‌ ರೂಪಾಯಿ ಚಲಾವಣೆಯಲ್ಲಿ: ನಿರ್ಮಲಾ ಸೀತಾರಾಮನ್ - Vistara News

ಪ್ರಮುಖ ಸುದ್ದಿ

Digital Rupee : 130 ಕೋಟಿ ರೂ. ಮೌಲ್ಯದ ಡಿಜಿಟಲ್‌ ರೂಪಾಯಿ ಚಲಾವಣೆಯಲ್ಲಿ: ನಿರ್ಮಲಾ ಸೀತಾರಾಮನ್

ದೇಶದಲ್ಲಿ ಫೆಬ್ರವರಿ 28ರ ವೇಳೆಗೆ 130 ಕೋಟಿ ರೂ. ಮೌಲ್ಯದ ಡಿಜಿಟಲ್‌ ರೂಪಾಯಿ ( Digital Rupee) ಚಲಾವಣೆಯಾಗಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ತಿಳಿಸಿದ್ದಾರೆ.

VISTARANEWS.COM


on

e rupee
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವ ದೆಹಲಿ: ದೇಶದಲ್ಲಿ 2023ರ ಫೆಬ್ರವರಿ 28ರ ವೇಳೆಗೆ, 130 ಕೋಟಿ ರೂ. ಮೌಲ್ಯದ ಡಿಜಿಟಲ್‌ ಅಥವಾ ಇ-ರುಪಾಯಿ (digital rupee) ಚಲಾವಣೆಯಲ್ಲಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ತಿಳಿಸಿದ್ದಾರೆ. ಆರ್‌ಬಿಐ 2022ರ ನವೆಂಬರ್‌ 1ರಂದು ಸಗಟು ವಲಯದಲ್ಲಿ ಹಾಗೂ ಡಿಸೆಂಬರ್‌ 1ರಂದು ರಿಟೇಲ್‌ ವಲಯದಲ್ಲಿ ಪ್ರಾಯೋಗಿಕವಾಗಿ ಇ-ರುಪಾಯಿಯನ್ನು ಬಿಡುಗಡೆಗೊಳಿಸಿತ್ತು.

ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ, ಬ್ಯಾಂಕ್‌ ಆಫ್‌ ಬರೋಡಾ, ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾ, ಎಚ್‌ಡಿಎಫ್‌ಸಿ ಬ್ಯಾಂಕ್‌, ಐಸಿಐಸಿಐ ಬ್ಯಾಂಕ್‌, ಕೋಟಕ್‌ ಮಹೀಂದ್ರಾ ಬ್ಯಾಂಕ್‌, ಯಸ್‌ ಬ್ಯಾಂಕ್‌, ಐಡಿಎಫ್‌ಸಿ ಫಸ್ಟ್‌ ಬ್ಯಾಂಕ್‌, ಎಚ್‌ಎಸ್‌ಬಿಸಿ ಈ ಪ್ರಾಯೋಗಿಕ ಯೋಜನೆಯಲ್ಲಿ ಭಾಗವಹಿಸಿವೆ.

ಇ-ರೂಪಾಯಿಯು ಡಿಜಿಟಲ್‌ ಟೋಕನ್‌ ರೂಪದಲ್ಲಿದ್ದು, ಕಾನೂನು ಮಾನ್ಯತೆಯನ್ನು ಹೊಂದಿದೆ. ಕಾಗದದ ಕರೆನ್ಸಿ ನೋಟುಗಳ ಮುಖಬೆಲೆಯಲ್ಲೇ ಇವುಗಳು ದೊರೆಯುತ್ತವೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Arvind Kejriwal: ಅಬಕಾರಿ ಕೇಸ್‌: ಕೇಜ್ರಿವಾಲ್‌ಗೆ ಬಿಗ್ ಶಾಕ್; ಇ.ಡಿ ಚಾರ್ಜ್‌ಶೀಟ್‌ನಲ್ಲಿ ಇವರೇ ಆರೋಪಿ!

Arvind Kejriwal: ಮದ್ಯ ಮಾರಾಟಗಾರರರಿಗೆ ಅನುಕೂಲವಾಗಲಿ ಎಂಬ ದಿಸೆಯಲ್ಲಿ ಅರವಿಂದ್‌ ಕೇಜ್ರಿವಾಲ್‌, ಮನೀಶ್‌ ಸಿಸೋಡಿಯಾ ಸೇರಿ ಹಲವು ನಾಯಕರು ನೀತಿ ರೂಪಿಸಿದ್ದಾರೆ. ದಕ್ಷಿಣ ಭಾರತದ ಹಲವು ವ್ಯಕ್ತಿಗಳು ಇದರ ಲಾಭ ಪಡೆದಿದ್ದಾರೆ. ಲಾಭದ ಸ್ವಲ್ಪ ಮೊತ್ತವನ್ನು ಆಪ್‌ಗೆ ನೀಡಲಾಗಿದೆ. ಆ ಮೊತ್ತವನ್ನು ಗೋವಾ ಚುನಾವಣೆಗೆ ಬಳಸಲಾಗಿದೆ ಎಂದು ಕೋರ್ಟ್‌ಗೆ ಸಲ್ಲಿಸಿದ 8ನೇ ಚಾರ್ಜ್‌ಶೀಟ್‌ನಲ್ಲಿ ಇ.ಡಿ ಅಧಿಕಾರಿಗಳು ಪ್ರಸ್ತಾಪ ಮಾಡಿದ್ದಾರೆ.

VISTARANEWS.COM


on

Arvind Kejriwal
Koo

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಅಬಕಾರಿ ನೀತಿ ಜಾರಿ ವೇಳೆ ಹಗರಣ ನಡೆದಿದೆ ಎನ್ನಲಾದ ಪ್ರಕರಣದಲ್ಲಿ (Delhi Excise Policy Case) ಜೈಲು ಪಾಲಾಗಿ, ಮಧ್ಯಂತರ ಜಾಮೀನು ಪಡೆದು ಹೊರಬಂದಿರುವ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ (Arvind Kejriwal)‌ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಜಾರಿ ನಿರ್ದೇಶನಾಲಯವು ರೋಸ್‌ ಅವೆನ್ಯೂ ಕೋರ್ಟ್‌ಗೆ ಪೂರಕ ಚಾರ್ಜ್‌ಶೀಟ್‌ ಸಲ್ಲಿಸಿದ್ದು, ಅಬಕಾರಿ ನೀತಿ ಕೇಸ್‌ನಲ್ಲಿ ಅರವಿಂದ್‌ ಕೇಜ್ರಿವಾಲ್‌ ಹಾಗೂ ಆಮ್‌ ಆದ್ಮಿ ಪಕ್ಷವನ್ನು ಆರೋಪಿಗಳು ಎಂದು ಪ್ರಸ್ತಾಪಿಸಿದೆ.

ಅರವಿಂದ್‌ ಕೇಜ್ರಿವಾಲ್‌ ಹಾಗೂ ಆಪ್‌ಅನ್ನು ಆರೋಪಿಗಳನ್ನಾಗಿ ಚಾರ್ಜ್‌ಶೀಟ್‌ನಲ್ಲಿ ಪ್ರಸ್ತಾಪಿಸಿದ ಕಾರಣ ಮುಂದಿನ ದಿನಗಳಲ್ಲಿ ಕೇಜ್ರಿವಾಲ್‌ ಅವರಿಗೆ ಇನ್ನಷ್ಟು ಸಂಕಷ್ಟ ಎದುರಾಗಲಿದೆ ಎಂದು ಹೇಳಲಾಗುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ 8ನೇ ಚಾರ್ಜ್‌ಶೀಟ್‌ ಸಲ್ಲಿಸಿರುವ ಇ.ಡಿ, “ಮದ್ಯ ಮಾರಾಟಗಾರರರಿಗೆ ಅನುಕೂಲವಾಗಲಿ ಎಂಬ ದಿಸೆಯಲ್ಲಿ ಅರವಿಂದ್‌ ಕೇಜ್ರಿವಾಲ್‌, ಮನೀಶ್‌ ಸಿಸೋಡಿಯಾ ಸೇರಿ ಹಲವು ನಾಯಕರು ನೀತಿ ರೂಪಿಸಿದ್ದಾರೆ. ದಕ್ಷಿಣ ಭಾರತದ ಹಲವು ವ್ಯಕ್ತಿಗಳು ಇದರ ಲಾಭ ಪಡೆದಿದ್ದಾರೆ. ಲಾಭದ ಸ್ವಲ್ಪ ಮೊತ್ತವನ್ನು ಆಪ್‌ಗೆ ನೀಡಲಾಗಿದೆ. ಆ ಮೊತ್ತವನ್ನು ಗೋವಾ ಚುನಾವಣೆಗೆ ಬಳಸಲಾಗಿದೆ” ಎಂದು ಇ.ಡಿ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಿದೆ. ‌ಮತ್ತೊಂದೆಡೆ, ಇ.ಡಿ ಬಂಧನ ಪ್ರಶ್ನಿಸಿ ಅರವಿಂದ್‌ ಕೇಜ್ರಿವಾಲ್‌ ಅವರು ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌, ತೀರ್ಪನ್ನು ಕಾಯ್ದಿರಿಸಿದೆ.

ಅಬಕಾರಿ ನೀತಿ ಪ್ರಕರಣವೇನು?

ಈ ಪ್ರಕರಣವು 2021-22ರ ದೆಹಲಿ ಸರ್ಕಾರದ ಅಬಕಾರಿ ನೀತಿಯನ್ನು ರೂಪಿಸುವಲ್ಲಿ ಮತ್ತು ಕಾರ್ಯಗತಗೊಳಿಸುವಲ್ಲಿ ಭ್ರಷ್ಟಾಚಾರ ಮತ್ತು ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದೆ. ದೆಹಲಿ ಸರ್ಕಾರವು ನಗರದ ಪ್ರಮುಖ ಮದ್ಯದ ವ್ಯಾಪಾರವನ್ನು ಪರಿಷ್ಕರಿಸುವ ನೀತಿಯನ್ನು ರೂಪಿಸಿದ್ದು, ವ್ಯಾಪಾರಿಗಳಿಗೆ ಪರವಾನಗಿ ಶುಲ್ಕದ ಬದಲಾವಣೆ ಸೇರಿದಂತೆ ಹಲವು ಬದಲಾವಣೆ ಮಾಡಿತ್ತು. ಆದರೆ ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅವರು ಇದರಲ್ಲಿ ಅಕ್ರಮಗಳನ್ನು ಆರೋಪಿಸಿ ನೀತಿಯ ಬಗ್ಗೆ ಸಿಬಿಐ ತನಿಖೆಗೆ ಕೋರಿದ್ದರು. ನಂತರ ನೀತಿಯನ್ನು ರದ್ದುಗೊಳಿಸಲಾಯಿತು.

ಸಿಬಿಐ ಮತ್ತು ಇಡಿ ಪ್ರಕಾರ, ಎಎಪಿ ನಾಯಕರು ಅಬಕಾರಿ ನೀತಿಯ ಅಡಿಯಲ್ಲಿ ಪರವಾನಗಿ ನೀಡಲು ರಾಜಕಾರಣಿಗಳು ಮತ್ತು ಮದ್ಯದ ಉದ್ಯಮಿಗಳ ಗುಂಪಿನಿಂದ ₹ 100 ಕೋಟಿ ಕಿಕ್‌ಬ್ಯಾಕ್‌ಗಳನ್ನು ಸ್ವೀಕರಿಸಿದ್ದಾರೆ. ಆರೋಪಪಟ್ಟಿಯಲ್ಲಿ ಅರವಿಂದ್ ಕೇಜ್ರಿವಾಲ್ ಅವರ ಹೆಸರನ್ನೂ ಉಲ್ಲೇಖಿಸಲಾಗಿದ್ದು, ಅಬಕಾರಿ ನೀತಿ ಪ್ರಕರಣದ ಎಲ್ಲಾ ಆರೋಪಿಗಳು ಅಬಕಾರಿ ನೀತಿಯನ್ನು ರೂಪಿಸಲು ದೆಹಲಿ ಸಿಎಂ ಜೊತೆ ಸಂಪರ್ಕದಲ್ಲಿದ್ದಾರೆ ಎಂದು ಹೇಳಲಾಗಿತ್ತು. ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಅರವಿಂದ್ ಕೇಜ್ರಿವಾಲ್ ಜೊತೆಗೆ ಭಾರತ್ ರಾಷ್ಟ್ರ ಸಮಿತಿ (BRS) ನಾಯಕಿ ಕೆ. ಕವಿತಾ ಮತ್ತು ಆಮ್ ಆದ್ಮಿ ಪಕ್ಷದ ಗೋವಾ ಚುನಾವಣೆ ನಿಧಿ ವ್ಯವಸ್ಥಾಪಕ ಚನ್‌ಪ್ರೀತ್ ಸಿಂಗ್ ಅವರನ್ನು ಬಂಧಿಸಲಾಗಿದೆ.

ಇದನ್ನೂ ಓದಿ: Amit Shah: ಪ್ರಚಾರದ ವೇಳೆ ಕೇಜ್ರಿವಾಲ್‌ ನೀಡಿದ ಹೇಳಿಕೆಯಿಂದ ನ್ಯಾಯಾಂಗ ನಿಂದನೆ; ಅಮಿತ್‌ ಶಾ ವಾಗ್ದಾಳಿ

Continue Reading

ಹಾಸನ

HD Revanna Case: ಹೊಳೆನರಸೀಪುರದ ಲೈಂಗಿಕ ದೌರ್ಜನ್ಯ ಕೇಸ್‌ ವಿಚಾರಣೆ ಸೋಮವಾರಕ್ಕೆ ಮುಂದೂಡಿಕೆ; ರೇವಣ್ಣಗೆ ಜೈಲಾ? ಬೇಲಾ?

HD Revanna Case: ಹೊಳೆನರಸೀಪುರದ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾಜಿ ಸಚಿವ ಎಚ್.ಡಿ. ರೇವಣ್ಣ ಅವರಿಗೆ ಶುಕ್ರವಾರ ನಡೆದ ವಿಚಾರಣೆಯಲ್ಲಿ ಮಧ್ಯಂತರ ರಿಲೀಫ್‌ ಸಿಕ್ಕಂತೆ ಆಗಿದೆ. ವಾದ – ಪ್ರತಿವಾದವನ್ನು ಆಲಿಸಿದ 42ನೇ ಎಸಿಎಂಎಂ ಕೋರ್ಟ್‌ ಸೋಮವಾರಕ್ಕೆ ವಿಚಾರಣೆಯನ್ನು ಮುಂದೂಡಿದ್ದು, ಅಂದು ಆದೇಶವನ್ನು ನೀಡಲಿದೆ. ಹೀಗಾಗಿ ರೇವಣ್ಣ ಅವರಿಗೆ ಜೈಲಾಗುತ್ತದೆಯೋ? ಇಲ್ಲವೇ ಬೇಲಾಗುತ್ತದೆಯೋ ಎಂಬ ವಿಚಾರವು ಸೋಮವಾರ ಗೊತ್ತಾಗಲಿದೆ.

VISTARANEWS.COM


on

HD Revanna case Hearing in Holenarasipura sexual assault case adjourned to Monday
Koo

ಬೆಂಗಳೂರು: ಹೊಳೆನರಸೀಪುರದ ಲೈಂಗಿಕ ದೌರ್ಜನ್ಯ (Physical Abuse) ಪ್ರಕರಣದಲ್ಲಿ ಮಾಜಿ ಸಚಿವ ಎಚ್‌.ಡಿ ರೇವಣ್ಣ (HD Revanna Case) ಅವರಿಗೆ ಜಾಮೀನು (Bail) ನೀಡಲಾಗಿದೆ. ಗುರುವಾರ ಮಧ್ಯಂತರ ಜಾಮೀನು ನೀಡಿ ಶುಕ್ರವಾರಕ್ಕೆ (ಮೇ 17) ವಿಚಾರಣೆಯನ್ನು ಮುಂದೂಡಲಾಗಿತ್ತು. ಶುಕ್ರವಾರ ವಾದ – ಪ್ರತಿವಾದವನ್ನು ಆಲಿಸಿದ ನ್ಯಾಯಾಧೀಶರು ಸೋಮವಾರಕ್ಕೆ (ಮೇ 20) ವಿಚಾರಣೆಯನ್ನು ಮುಂದೂಡಿದ್ದಾರೆ. ಈ ಹಿನ್ನೆಲೆಯಲ್ಲಿ ಎಚ್.ಡಿ. ರೇವಣ್ಣ ಅವರಿಗೆ ಮಧ್ಯಂತರ ರಿಲೀಫ್‌ ಸಿಕ್ಕಿದೆಯಾದರೂ ಜೈಲಾ? ಬೇಲಾ? ಎಂಬುದು ಸೋಮವಾರ ಪ್ರಕಟವಾಗುವ ತೀರ್ಪಿನ ಮೇಲೆ ನಿಂತಿದೆ.

42ನೇ ಎಸಿಎಂಎಂ ಕೋರ್ಟ್‌ನಲ್ಲಿ ಶುಕ್ರವಾರ ವಿಚಾರಣೆ ಆರಂಭವಾಯಿತು. ಈ ವೇಳೆ ಮಾಜಿ‌ ಸಚಿವ ಎಚ್.ಡಿ. ರೇವಣ್ಣ ಅವರು ಬರಿಗಾಲಿನಲ್ಲಿಯೇ ಕೋರ್ಟ್‌ಗೆ ಹಾಜರಾದರು. ಎಸ್‌ಪಿಪಿ ಜಯ್ನಾ ಕೊಠಾರಿ ವಾದ ಮಂಡನೆಗೆ ಮುಂಚೆ ಇನ್ ಕ್ಯಾಮೆರಾ ವಿಚಾರಣೆ ನಡೆಸುವಂತೆ ಮನವಿ ಮಾಡಿದರು. ಅದಕ್ಕೆ ನ್ಯಾಯಾಧೀಶರು, ಮೊದಲು ಅರ್ಜಿ ವಿಚಾರಣೆಯ ಅರ್ಹತೆ ಬಗ್ಗೆ ವಾದ ಮಂಡಿಸಿ. ನಂತರ ಇನ್ ಕ್ಯಾಮೆರಾ ವಿಚಾರಣೆ ನಡೆಸೋಣ ಎಂದು ಹೇಳಿದರು.

ವಾದ ಶುರು ಮಾಡಿದ ಎಸ್ಐಟಿ ಪರ ಎಸ್ ಪಿಪಿ ಜಯ್ನಾ ಕೊಠಾರಿ, ಹೊಳೆನರಸೀಪುರ ಪ್ರಕರಣದಲ್ಲಿ ಐಪಿಸಿ 376 ಸೆಕ್ಷನ್ ಹಾಕಲಾಗಿದ್ದು, ಇದು ಅತ್ಯಾಚಾರ ಆರೋಪವಾಗಿದೆ. ಸಂತ್ರಸ್ತೆಯ ವಿಚಾರಣೆ ಬಳಿಕ ಅತ್ಯಾಚಾರ ಆರೋಪ ದಾಖಲಾಗಿದೆ. ಸಂತ್ರಸ್ತೆ ಹೇಳಿಕೆಯನ್ನು ಅವರು ಕೋರ್ಟ್‌ನಲ್ಲಿ ಓದಿ ಹೇಳಿದರು. ಮೊದಲಿಗೆ ಈ ಕೇಸಿನಲ್ಲಿ ಸೆಕ್ಷನ್ 354 ಮಾತ್ರ ಇತ್ತು. ವಿಚಾರಣೆ ಬಳಿಕ 376 ಸೇರ್ಪಡೆಯಾಗಿದೆ ಎಂದು ಸಂತ್ರಸ್ತೆ ದೂರಿನಲ್ಲಿ ಆರೋಪಿಸಿರುವ ಅಂಶಗಳನ್ನು ಉಲ್ಲೇಖಿಸಿ ಕೋರ್ಟ್‌ ಗಮನಕ್ಕೆ ತಂದರು.

ಆಶ್ರಯ ಮನೆಯೂ ವಾಪಸ್‌

ಎಚ್.ಡಿ. ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣ ನಡೆಸಿದ್ದಾರೆನ್ನಲಾದ ಲೈಂಗಿಕ ದೌರ್ಜನ್ಯದ ಬಗ್ಗೆ ಅಂಶಗಳ ಕೋರ್ಟ್‌ ಮುಂದೆ ಓದಿದ ಎಸ್‌ಪಿಪಿ ಜಯ್ನಾ ಕೊಠಾರಿ, ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣ ಅವರ ಕಿರುಕುಳ ತಾಳಲಾರದೆ ಮನೆ ಬಿಟ್ಟು ಬಂದಿರುವುದಾಗಿ ಸಂತ್ರಸ್ತೆ ಹೇಳಿಕೆ ನೀಡಿದ್ದಾರೆ. ಕೆಲಸ ಬಿಟ್ಟು ಬಂದಿದಕ್ಕೆ ಮೊದಲು‌ ನೀಡಿದ್ದ ಆಶ್ರಯ ಮನೆಯನ್ನು ಬಲವಂತವಾಗಿ ವಾಪಸ್‌ ಪಡೆದಿದ್ದಾರೆ. ಆ ಬಗ್ಗೆ ಜಿಲ್ಲಾಧಿಕಾರಿಗೆ ದೂರು ನೀಡಿದರೂ ನ್ಯಾಯ ಸಿಕ್ಕಿಲ್ಲ. ಸಂತ್ರಸ್ತೆಯ ಆರೋಪಗಳನ್ನು ಕೋರ್ಟ್‌ ಮುಂದೆ ಹೇಳಿದರು.

ಹೀಗಾಗಿ ಸಂತ್ರಸ್ತೆ ಹೇಳಿಕೆ ಮೇಲೆ ಸೆಕ್ಷನ್ 376 ಅನ್ನು ಸೇರಿಸಲಾಗಿದೆ ಎಂದು ವಾದಿಸಿದ ಜಯ್ನಾ ಕೊಠಾರಿ, ನಾನ್ ಬೇಲಬಲ್ ಸೆಕ್ಷನ್ ಸೇರಿಸಿರುವುದರಿಂದ ಸೆಷನ್ಸ್ ಕೋರ್ಟ್‌ನಲ್ಲಿ ವಿಚಾರಣೆ ನಡೆಯಬೇಕು. ಇದರಿಂದ ಯಾವುದೇ ಕಾರಣಕ್ಕೂ ಜಾಮೀನು ನೀಡಬಾರದು. ತನಿಖಾಧಿಕಾರಿಯ ಮನವಿ ನಂತರ ಸೆಕ್ಷನ್‌ 376 ಸೇರ್ಪಡೆಗೊಂಡಿದೆ. ಈ ಮೊದಲಿಗೆ ಈ ಕೇಸಿನಲ್ಲಿ ಸೆಕ್ಷನ್‌ 354 A, D ಮಾತ್ರವಿತ್ತು. ಪ್ರಜ್ಬಲ್ ರೇವಣ್ಣ ಹಾಗೂ ರೇವಣ್ಣ ವಿರುದ್ಧ ಇರುವ ಪ್ರಕರಣವನ್ನು ವಿಭಜಿಸಬಾರದು. ಇಬ್ಬರಿಂದಲೂ ಲೈಂಗಿಕ ದೌರ್ಜನ್ಯ ನಡೆದಿದೆ. ಇದರಿಂದ ಯಾವುದೇ ಕಾರಣಕ್ಕೂ ಜಾಮೀನು ನೀಡಬಾರದು ಎಂದು ಇಂತಹ ಪ್ರಕರಣಗಳಲ್ಲಿ ಜಾಮೀನು ನಿರಾಕರಿಸಿರುವ ಸುಪ್ರೀಂ ಕೋರ್ಟ್‌ನ ತೀರ್ಪುಗಳನ್ನು ಉಲ್ಲೇಖಿಸಿ ವಾದಿಸಿದರು.

ದೂರುದಾರೆಗೆ ಇಬ್ಬರಿಂದಲೂ ಕಿರುಕುಳ

ಎಸ್ಐಟಿ ತಂಡದಿಂದ ತನಿಖೆ ಪ್ರಗತಿಯಲ್ಲಿದೆ. ಈ‌ ಸಂದರ್ಭದಲ್ಲಿ ಆರೋಪಿಗೆ ಜಾಮೀನು ನೀಡುವುದರಿಂದ ಸಾಕ್ಷಿಗಳ ಮೇಲೆ ಪ್ರಭಾವ ಬೀರುತ್ತದೆ. ಬೇಲಬಲ್ ಸೆಕ್ಷನ್ ಇದ್ದಾಗ ಮಾತ್ರ ಸೆಕ್ಷನ್‌ 436 ಪ್ರಕಾರ ಜಾಮೀನು ನೀಡಬಹುದು. ಆದರೆ, ಈ ಪ್ರಕರಣದಲ್ಲಿ ನಾನ್ ಬೇಲಬಲ್ ಸೆಕ್ಷನ್ 436 ಅಡಿಯಲ್ಲಿ ಜಾಮೀನು ನೀಡುವಂತಿಲ್ಲ. ಅಲ್ಲದೆ, ನಾನ್ ಬೇಲಬಲ್ ಸೆಕ್ಷನ್ ಇರುವುದಿರಿಂದ ಇದರ ವಿಚಾರಣೆಯು ಸೆಷನ್ಸ್‌ ಕೋರ್ಟ್‌ನಲ್ಲಿರುವುದರಿಂದ ಅಲ್ಲಿ ವಿಚಾರಣೆ ನಡೆಯಬೇಕು. ದೂರುದಾರರಿಗೆ ಮನೆಯಲ್ಲಿ ಇಬ್ಬರಿಂದಲೂ (ರೇವಣ್ಣ, ಪ್ರಜ್ವಲ್) ಕಿರುಕುಳ ನಡೆದಿದೆ. ಇದನ್ನೆಲ್ಲ ಮುಕ್ತ ನ್ಯಾಯಾಲಯದಲ್ಲಿ ವಿವರಿಸಲು ಆಗದು. ಇದು ಇನ್ ಕ್ಯಾಮೆರಾ ವಿಚಾರಣೆ ನಡೆಯಬೇಕು ಎಂದು ಜಯ್ನಾ ಕೊಠಾರಿ ವಾದ ಮಂಡಿಸಿದರು.

ಜಾಮೀನು ಅರ್ಜಿ ವಿಚಾರಣೆ ವ್ಯಾಪ್ತಿ ಈ ಕೋರ್ಟ್‌ಗಿಲ್ಲ: ಜಯ್ನಾ ಕೊಠಾರಿ

ಇಲ್ಲಿ ತಂದೆ – ಮಗ ಇಬ್ಬರಿಂದಲೂ ಲೈಂಗಿಕ ದೌರ್ಜನ್ಯ ನಡೆದಿದೆ. ರೇವಣ್ಣ ಅವರಿಂದ ಇಷ್ಟೇ ಪ್ರಮಾಣದಲ್ಲಿ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಹೇಳಲು ಸಾಧ್ಯವಿಲ್ಲ. ಅದೆಲ್ಲವೂ ತನಿಖೆಯ ನಂತರವಷ್ಟೇ ಗೊತ್ತಾಗಬೇಕಿದೆ. ಈಗಲೇ ಶಾಸಕ ರೇವಣ್ಣ ಮೇಲೆ ಅತ್ಯಾಚಾರ ಆರೋಪ ಇಲ್ಲವೆಂದು ಹೇಳಲು ಸಾಧ್ಯವಾಗುವುದಿಲ್ಲ. ಒಮ್ಮೆ ಅತ್ಯಾಚಾರ ಆರೋಪ ದಾಖಲಾದರೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ವ್ಯಾಪ್ತಿಗೆ ಬರುವುದಿಲ್ಲ. ಹೀಗಾಗಿ ಜಾಮೀನು ಅರ್ಜಿ ವಿಚಾರಣೆ ನಡೆಸಲು ಈ ಕೋರ್ಟ್‌ಗೆ ವ್ಯಾಪ್ತಿ ಇಲ್ಲ. ಸೆಕ್ಷನ್‌ 376 ಅಪರಾಧಕ್ಕೆ ಜೀವಾವಧಿ ಶಿಕ್ಷೆ ಇದೆ. ಇದು ಜಾಮೀನುರಹಿತ ಅಪರಾಧವಾಗಿದೆ. ಹೀಗಿದ್ದಾಗ ಜಾಮೀನು ಅರ್ಜಿ ಊರ್ಜಿತವಲ್ಲ. ಇಬ್ಬರ ವಿರುದ್ಧ ತನಿಖೆ ಇನ್ನೂ ನಡೆಯುತ್ತಿದೆ. ಆರೋಪ ಪಟ್ಟಿ ದಾಖಲಾದ ನಂತರವಷ್ಟೇ ಯಾರ ಮೇಲೆ ಏನು ಆರೋಪ‌ ಎಂದು ತಿಳಿಯಲಿದೆ. ಸೆಕ್ಷನ್‌ 41ಎ ಅಡಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದರೂ ಬಂದಿಲ್ಲ. ಇದನ್ನು ಜಾಮೀನು ಅರ್ಜಿಯ ವಿಚಾರಣೆ ವೇಳೆ ಹೇಳುತ್ತೇನೆ. ಈಗ ಜಾಮೀನು ಅರ್ಜಿಯನ್ನು ವಿಚಾರಣೆಗೆ ಸ್ವೀಕರಿಸಬಾರದೆಂಬ ವಿಚಾರಕ್ಕಷ್ಟೇ ವಾದಿಸುತ್ತಿದ್ದೇನೆ ಎಂದು ಎಸ್‌ಪಿಪಿ ಜಯ್ನಾ ಕೊಠಾರಿ ವಾದ ಮಂಡಿಸಿದರು.

ಬಳಿಕ ಮತ್ತೊಬ್ಬ ಎಸ್‌ಪಿಪಿ ಅಶೋಕ್ ನಾಯಕ್ ವಾದ ಮಂಡಿಸಿ, ಜನಪ್ರತಿನಿಧಿಗಳಿಗೆ ಸಂಬಂಧಿಸಿದಂತೆ ಪ್ರಕರಣಗಳು ಇಲ್ಲಿಗೆ ಬರುತ್ತವೆ. ಜಾಮೀನು ಅಂದರೆ ಸೆಷನ್ ನ್ಯಾಯಾಲಯದ ಕೋರ್ಟ್ 82ಕ್ಕೆ ಬರುತ್ತದೆ ಎಂದು ಹೇಳುತ್ತಿದ್ದಂತೆ ಮಧ್ಯಪ್ರವೇಶಿಸಿದ ನ್ಯಾಯಾಧೀಶರು, ಇದು ಪೋಕ್ಸೋ ಕೇಸ್‌ ಆಗಿದ್ದರೆ ನೀವು ಸೆಷನ್ ಕೋರ್ಟ್‌ಗೆ ಹೋಗಿ. ಇದು ಇಲ್ಲಿ ನಿರ್ವಹಿಸಲಾಗದಿದ್ದರೆ ಅಲ್ಲಿಗೆ ಕಳಿಸಲಾಗುತ್ತದೆ ಎಂದು ಹೇಳಿದರು.

ಮತ್ತೆ ವಾದ ಮುಂದುವರಿಸಿದ ಅಶೋಕ್‌ ನಾಯಕ್‌, ಸಂತ್ರಸ್ತೆ ಮೇಲೆ ತಂದೆ ಮತ್ತು ಪುತ್ರ ಇಬ್ಬರೂ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಒಬ್ಬಳ ಮೇಲೆ ಪದೇ ಪದೆ ದೌರ್ಜನ್ಯವೆಸಗಿದ್ದಾರೆ. ಕೊಲೆ ಪ್ರಕರಣದಲ್ಲಿ 302 ಸೆಕ್ಷನ್ ಜತೆಗೆ ಇತರೆ ಬೇಲಬಲ್ ಸೆಕ್ಷನ್‌ಗಳನ್ನ ಹಾಕಿರುತ್ತಾರೆ. ಹಾಗಂತ ಆರೋಪಿಗಳನ್ನು ಹಾಗೂ ಕೇಸ್‌ ಅನ್ನು ವಿಭಜನೆ ಮಾಡಲು ಆಗುತ್ತದೆಯೇ? ಅದೇ ರೀತಿ ಈ ಪ್ರಕರಣದಲ್ಲಿ ತಂದೆ, ಮಗ ಇಬ್ಬರೂ ಒಂದೇ ಅಪರಾಧ ಎಸಗಿದ್ದಾರೆ. ಒಂದೇ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ. ಎರಡನೇ ಆರೋಪಿಯನ್ನು ಮೊದಲನೇ ಆರೋಪಿಯೇ ರಕ್ಷಣೆ ಮಾಡುತ್ತಿದ್ದಾರೆ. ದೇಶ ಬಿಟ್ಟು ಹೋಗಲು ಮೊದಲ ಆರೋಪಿಯೇ ಸಹಾಯ ಮಾಡಿದ್ದಾರೆ ಎಂದು ಹೇಳಿದರು.

ಪ್ರತಿ ವಾದ ಮಂಡಿಸಿದ ಸಿ.ವಿ. ನಾಗೇಶ್‌

ಈ ವೇಳೆ ರೇವಣ್ಣ ಪರ ವಕೀಲ‌ ಸಿ.ವಿ. ನಾಗೇಶ್ ಪ್ರತಿವಾದ ಆರಂಭಿಸಿ, ನಮ್ಮ ಕಕ್ಷಿದಾರರ ವಿರುದ್ಧ ದಾಖಲಾಗಿರುವ ಪ್ರಕರಣವು ಬೇಲಬಲ್ ಸೆಕ್ಷನ್‌ಗಳಾಗಿವೆ. ಹೊಳೆನರಸೀಪುರ ಠಾಣೆಯಲ್ಲಿ ದಾಖಲಾಗಿರುವ ಕೇಸ್‌ನಲ್ಲಿ ಜಾಮೀನು ನೀಡಬೇಕಾದ ಸೆಕ್ಷನ್‌ಗಳನ್ನು ಹಾಕಲಾಗಿದೆ. ಎಫ್ಐಆರ್ ದಾಖಲಾದ ದಿನಾಂಕ, ಅದರಲ್ಲಿರುವ ಸೆಕ್ಷನ್‌ಗಳು ಏನು ಎಂಬುದನ್ನು ಇದೇ ವೇಳೆ ಕೋರ್ಟ್‌ ಗಮನಕ್ಕೆ ತಂದರು. ಯಾವುದೇ ವ್ಯಕ್ತಿಯ ವಿರುದ್ಧ ದೂರು ದಾಖಲಾದರೆ, ಆತ ಬಂಧನಕ್ಕೊಳಗಾಗುವ ಮುನ್ನ ಶರಣಾದರೆ ಜಾಮೀನು ನೀಡಬಹುದು. ಇದರ ಗ್ರಾವಿಟಿಯೇ 436 ಸಿಆರ್‌ಪಿಸಿ ಆಗಿದೆ. ಇಲ್ಲಿ ಸಿಆರ್‌ಪಿಸಿ 439 ಅಲ್ಲ. ರೇವಣ್ಣ ವಿರುದ್ಧ ಈಗ ಆರೋಪ ಕೇಳಿಬಂದಿದೆ. ಆದರೆ, ಈ ಆರೋಪವು ದೂರು ದಾಖಲಾದ ದಿನ ಅಥವಾ ವಾರದ ಹಿಂದೆ ಇಲ್ಲವೇ ವರ್ಷದ ಹಿಂದೆ ನಡೆದಿಲ್ಲ. ಕೃತ್ಯ ನಡೆದು ಹಲವು ವರ್ಷಗಳೇ ಕಳೆದು ಹೋಗಿವೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ ಎಂದು ಮಾಹಿತಿ ನೀಡಿದರು.

ಗರ್ಭಗುಡಿಯಲ್ಲಿ ದೇವರು ಕುಳಿತಂತೆ ಕುಳಿತಿದ್ದೆ!

ಈ ವೇಳೆ ಮಧ್ಯ ಪ್ರವೇಶ ಮಾಡಿದ ಎಸ್‌ಪಿಪಿ ಜಯ್ನಾ ಕೊಠಾರಿ ಆಕ್ಷೇಪ ವ್ಯಕ್ತಪಡಿಸಲು ಮುಂದಾದರು. ಅದಕ್ಕೆ ಸಿಟ್ಟಾದ ಸಿ.ವಿ. ನಾಗೇಶ್, “ನೀವು ವಾದ ಮಾಡಬೇಕಾದರೆ ನಾನು ಗರ್ಭಗುಡಿಯಲ್ಲಿ‌ ದೇವರು ಕುಳಿತ ಹಾಗೆ ಕುಳಿತುಕೊಂಡಿದ್ದೆ. ಏನಾದರೂ ತೊಂದರೆ ಮಾಡಿದ್ದೇನಾ? ಎಂದು ಪ್ರಶ್ನಿಸಿ ತಮ್ಮ ವಾದವನ್ನು ಮುಂದುವರಿಸಿದರು. ದೂರುದಾರರು ಹೊಳೆನರಸೀಪುರ ಪೊಲೀಸ್ ಠಾಣೆಗೆ ದೂರು ನೀಡಿಲ್ಲ. ಹೊಳೆನರಸೀಪುರ ಪೊಲೀಸ್ ಠಾಣೆ ಸಬ್ ಇನ್ಸ್‌ಪೆಕ್ಟರ್ ಒಬ್ಬರು ಬೆಂಗಳೂರಿಗೆ ಬಂದು ದೂರುದಾರರಿಂದ ತಮಗೆ ನೀಡಿದಂತೆ ದೂರು ಬರೆಸಿಕೊಂಡು ಹೋಗಿ ಕೇಸ್ ದಾಖಲಿಸಿದ್ದಾರೆ ಎಂದು ಪೊಲೀಸರು ದಾಖಲು ಮಾಡಿಕೊಂಡಿರುವ ಹೇಳಿಕೆಯನ್ನು ಕೋರ್ಟ್‌ ಮುಂದೆ ಓದಿದರು.

ಇದು ಸಂತ್ರಸ್ತೆ ನೀಡಿದ ದೂರೇ ಅಲ್ಲ

ಪ್ರಜ್ವಲ್ ರೇವಣ್ಣ ಮೇಲೆ‌ ಲೈಂಗಿಕ ದೌರ್ಜನ್ಯವೆಸಗಿರುವ ಬಗ್ಗೆ ಏಪ್ರಿಲ್ 24ರ ರಾತ್ರಿ‌ 11 ಗಂಟೆಗೆ ಬೆಂಗಳೂರಿನಲ್ಲಿರುವ ಸಂತ್ರಸ್ತೆಯೊಬ್ಬರು ದೂರು ನೀಡಲು‌ ಬಂದಿದ್ದರು. ಅವರು ಮಾನಸಿಕವಾಗಿ ಕುಗ್ಗಿ ಹೋಗಿದ್ದರು. ಆ ಬಗ್ಗೆ ಹಿರಿಯ ಅಧಿಕಾರಿಗಳಿಗೆ ವಿಷಯ ತಿಳಿಸಿ, ಮಹಿಳಾ ಸಿಬ್ಬಂದಿಯೊಂದಿಗೆ ಸಂತ್ರಸ್ತೆ ಇರುವ ಸ್ಥಳಕ್ಕೆ ಹೋಗಿ ದೂರು ಪಡೆದು‌ ಕೇಸ್ ದಾಖಲಿಸಿದ್ದಾಗಿ ಸ್ಟೇಷನ್ ಬುಕ್‌ನಲ್ಲಿ‌ ಉಲ್ಲೇಖಿಸಿದ್ದಾರೆ. ಇಲ್ಲಿ ಸ್ಪಷ್ಟವಾಗಿ ಗೊತ್ತಾಗುವುದೇನೆಂದರೆ ಈ ದೂರು ರಿಜಿಸ್ಟರ್ ಆಗಿರುವುದಲ್ಲ‌. ದೂರನ್ನು ತಿದ್ದುಪಡಿ ಮಾಡಿ ತಮಗೆ ಬೇಕಾದ ಹಾಗೆ ಮಾಡಿಕೊಂಡಿದ್ದಾರೆ. ರೇವಣ್ಣ ವಿರುದ್ಧ ದೂರುದಾರೆ ನೀಡಿದ ದೂರನ್ನು ಮಹಿಳಾ ಅಧಿಕಾರಿ ದಾಖಲಿಸಿಕೊಳ್ಳಲ್ಲಿಲ್ಲ. ಆಕೆಯ ಹೇಳಿಕೆಯನ್ನು ಲಿಖಿತ ರೂಪದಲ್ಲಿ ದಾಖಲಿಸಿಕೊಂಡಿಲ್ಲ. ಇದು ಸಂತ್ರಸ್ತೆ ನೀಡಿದ ದೂರೇ ಅಲ್ಲ. ಬೇಕಂತಲೇ ಸೃಷ್ಟಿಯಾಗಿರುವ ಕೇಸ್ ಆಗಿದೆ. ಆಕೆಗೆ ಲೈಂಗಿಕ ದೌರ್ಜನ್ಯ ಅಂದರೇನು ಅಂತ ಗೊತ್ತೇ ಇರುವುದಿಲ್ಲ ಎಂದು ಸಿ.ವಿ. ನಾಗೇಶ್ ವಾದಿಸಿದರು.

ಸಂತ್ರಸ್ತೆ ಹೇಳಿಕೆಯಲ್ಲಿ ಭಾರಿ ಗೊಂದಲ!

ಲೈಂಗಿಕ ದೌರ್ಜನ್ಯವೇ ಬೇರೆ, ಅತ್ಯಾಚಾರವೇ ಬೇರೆ. ಸಂತ್ರಸ್ತೆ ನೀಡಿದ ದೂರಿನ ಅಂಶಗಳನ್ನು ಓದಿ ಹೇಳಿದ ಸಿ.ವಿ. ನಾಗೇಶ್‌, ಸಂತ್ರಸ್ತೆಯ ಪತಿ ಆಕೆಯ ಮೇಲೆ ಪಟ್ಟ ಅನುಮಾನವನ್ನು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಆಕೆ ನನ್ನ ಮೇಲೆ ಆ ರೀತಿ ಕೃತ್ಯ ನಡೆದಿಲ್ಲ ಎಂದು ಹೇಳಿದ್ದಾಳೆ. ನಾಲ್ಕೈದು ವರ್ಷಗಳ ಹಿಂದೆ ನಡೆದಿರುವ ಕೃತ್ಯದ ಬಗ್ಗೆ ಆರೋಪಿಸಿದ್ದಾರೆ. ಒಂದು ಕಡೆ ರೇವಣ್ಣ ಹಾಗೂ ಪ್ರಜ್ವಲ್‌ ರೇವಣ್ಣ ನೀಡಿದ್ದ ಲೈಂಗಿಕ ದೌರ್ಜನ್ಯದ ಬಗ್ಗೆ ಹೇಳುತ್ತಾರೆ. ಮತ್ತೊಂದೆಡೆ ಸಂತ್ರಸ್ತೆ ಗಂಡ ಬೇರೆ ಹೆಣ್ಣು‌ ಮಕ್ಕಳ ವಿಡಿಯೊ ಬಗ್ಗೆ ಕೇಳಿದಾಗ ನನ್ನ ಮೇಲೆ ಆ ರೀತಿ ಆಗಿಲ್ಲ‌ ಅಂತ ಹೇಳಿದ್ದಾಳೆ. ಮತ್ತೊಂದೆಡೆ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣ ಅವರ ಲೈಂಗಿಕ ಕಿರುಕುಳ ತಾಳಲಾರದೆ ಮನೆ ಕೆಲಸ ಬಿಟ್ಟು ಬಂದೆ ಎಂದು ಹೇಳುತ್ತಾಳೆ. ತನಿಖಾಧಿಕಾರಿಗಳು ಸಂತ್ರಸ್ತೆ ಹೇಳಿಕೆ ಆಧಾರದ ಮೇಲೆ 376 ದಾಖಲಿಸಲು ಅನುಮತಿ ಕೇಳಿದ್ದಾರೆ. ಯಾರ ಮೇಲೆ ಸೆಕ್ಷನ್‌ 376 ದಾಖಲಿಸುತ್ತಾರೆ ಎಂದು ಸಿ.ವಿ. ನಾಗೇಶ್ ಪ್ರಶ್ನೆ ಮಾಡಿದರು.

ದೂರುದಾರರು ಲೈಂಗಿಕ ದೌರ್ಜನ್ಯ ತಾಳಲಾರದೆ 4 ವರ್ಷದ ಹಿಂದೆ ಮನೆ ಕೆಲಸ ಬಿಟ್ಟೆ ಎಂದು ಹೇಳುತ್ತಾರೆ. ಮನೆ ಬಿಟ್ಟು ಬಂದಿದ್ದಕ್ಕೆ ಪೊಲೀಸರನ್ನು ಕಳುಹಿಸಿ ಆಶ್ರಯ ಮನೆ ಖಾಲಿ ಮಾಡಿಸಿದರು ಎಂದು ಆರೋಪಿಸುತ್ತಾರೆ. ತಮ್ಮ ಒಡವೆ, ಬಟ್ಟೆ ಎಲ್ಲವನ್ನೂ ಕಿತ್ತುಕೊಂಡರು ಎಂದು ಹೇಳುತ್ತಾರೆ. ಹಾಗಾದರೆ ನಾಲ್ಕೂವರೆ ವರ್ಷದ ಹಿಂದೆ ಅವರ ಮನೆಯಲ್ಲಿದ್ದಾಗ ನಡೆದ ಅತ್ಯಾಚಾರ, ಲೈಂಗಿಕ ದೌರ್ಜನ್ಯವು ಅವರಿಗೆ ಗೊತ್ತಾಗಲಿಲ್ಲವೇ? ಮನೆ ಖಾಲಿ ಮಾಡಿಸಿದ ಮೇಲೆ ಯಾಕೆ ಲೈಂಗಿಕ ದೌರ್ಜನ್ಯ, ಅತ್ಯಾಚಾರ ನಡೆದಿದೆ ಅಂತ ಗೊತ್ತಾಯ್ತಾ ಎಂದು ಸಿ.ವಿ. ನಾಗೇಶ್ ಪ್ರಶ್ನೆ ಮಾಡಿದರು.

ಇದು ಅತ್ಯಾಚಾರ ಪ್ರಕರಣ ಅಲ್ಲ

ಸೆಷನ್ಸ್ ಕೋರ್ಟ್‌ನಲ್ಲಿ ನಡೆದ ವಿಚಾರಣೆಯಲ್ಲಿ 376 ಸೆಕ್ಷನ್ ಇರಲಿಲ್ಲ. ಮ್ಯಾಜಿಸ್ಟ್ರೇಟ್ ಕೋರ್ಟ್‌ಗೆ ಬಂದಾಗ ಈ ಸೆಕ್ಷನ್‌ ಸೇರ್ಪಡೆಯಾಗಿದೆ. ಅವತ್ತು ನಿರೀಕ್ಷಣಾ ಜಾಮೀನಿಗೆ ಆಕ್ಷೇಪಣೆ ಸಲ್ಲಿಸಿದ್ದರು. ಇವರು ಮೊದಲೇ 376 ಇದೆ ಎಂದು ಹೇಳಿದ್ದರೆ, ನಾವು ನಿರೀಕ್ಷಣಾ ಜಾಮೀನು ಅರ್ಜಿಯನ್ನೇ ವಾಪಸ್‌ ಪಡೆಯುತ್ತಿರಲಿಲ್ಲ. ರೇವಣ್ಣ ವಿರುದ್ಧ 376 ಇದೆ ಅಂತ ಹೇಳಲಿ. ಆಗ ನಾವು ಕಾನೂನು ಹೋರಾಟಕ್ಕೆ ಸಿದ್ಧರಿದ್ದೇವೆ. ನಮ್ನ ಕಕ್ಷಿದಾರದರ ವಿರುದ್ಧ ದಾಖಲಾಗಿರೋದು ಕೇವಲ ಲೈಂಗಿಕ ದೌರ್ಜನ್ಯ ಪ್ರಕರಣವಾಗಿದೆ. ಅತ್ಯಾಚಾರ ಪ್ರಕರಣ ಅಲ್ಲ. ಇದೊಂದು‌ ಸುಳ್ಳು ಕೇಸ್ ಆಗಿದೆ ಎಂದು ಸಿ.ವಿ. ನಾಗೇಶ್ ವಾದಿಸಿದರು.

ಇದುವರೆಗೂ ರೇವಣ್ಣ ಅವರಿಗೆ ನೀಡಿದ ಯಾವ ನೋಟಿಸ್‌ನಲ್ಲೂ ಸೆಕ್ಷನ್‌ 376 ಇದೆ ಅಂತ ಉಲ್ಲೇಖಿಸಿಲ್ಲ. ಈಗ 376 ಇದೆ ಎಂದು ಹೇಳುತ್ತಿದ್ದಾರೆ. ಇದರಿಂದ ನಮ್ಮ ಕಕ್ಷಿದಾರರಿಗೆ ಜಾಮೀನು ನೀಡಬಹುದು. ರೇವಣ್ಣ ವಿರುದ್ಧ ದಾಖಲಾಗಿರುವ ಕೇಸ್‌ನಲ್ಲಿ ಎಲ್ಲವೂ ಬೇಲಬಲ್ ಸೆಕ್ಷನ್‌ಗಳಿವೆ. ಹೀಗಾಗಿ ಜಾಮೀನು‌ ನೀಡಬೇಕೆಂದು ಮನವಿ ಮಾಡಿದ ಸಿ.ವಿ. ನಾಗೇಶ್ ತಮ್ಮ ವಾದವನ್ನು ಮುಕ್ತಾಯ ಮಾಡಿದರು.

ಇದನ್ನೂ ಓದಿ: Prajwal Revanna Case: ವಕೀಲ ದೇವರಾಜೇಗೌಡರಿಗೆ ನ್ಯಾಯಾಂಗ ಬಂಧನ; ಪೊಲೀಸ್‌ ಕಸ್ಟಡಿ ಅಂತ್ಯ

ಎಫ್‌ಐಆರ್‌ ಬಳಿಕವೂ ಸೆಕ್ಷನ್‌ ಸೇರಿಸಬಹುದು

ಬಳಿಕ ಎಸ್‌ಪಿಪಿ ಜಯ್ನಾ ಕೊಠಾರಿ ವಾದ ಮಂಡಿಸಿ, ರೇವಣ್ಣ ಪರ ವಕೀಲರು ಕೇವಲ ಬೇಲಬಲ್ ಸೆಕ್ಷನ್‌ಗಳ ಬಗ್ಗೆ ಮಾತ್ರ ಹೇಳಿದ್ದಾರೆ. ಪ್ರಾರಂಭದಲ್ಲೇ ಜಾಮೀನು ರಹಿತ ಸೆಕ್ಷನ್‌ಗಳನ್ನು ದಾಖಲಿಸದೆ ಇರಬಹುದು. ತನಿಖೆ ನಡೆದಾಗ ಯಾವಾಗ ಬೇಕಿದ್ದರೂ ಅಪರಾಧ ನಡೆದಿರುವ ಸೆಕ್ಷನ್‌ಗಳನ್ನು ಎಫ್‌ಐಆರ್‌ನಲ್ಲಿ ಸೇರಿಸಬಹುದು. ಈ ಬಗ್ಗೆ ಅವಕಾಶವೂ ಇದೆ. ನಂತರವು ಜಾಮೀನು ರಹಿತದ ಸೆಕ್ಷನ್‌ಗಳನ್ನು ಕೂಡಾ ಸೇರಿಸುವ ಅವಕಾಶ ಇದೆ. ಅದಕ್ಕೆ‌ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಹೇಳಿದೆ ಎಂದು ಹೇಳಿದರು.

ಭಯದಿಂದ ಗಂಡನ ಬಳಿ ಸತ್ಯ ಮುಚ್ಚಿಟ್ಟಿರುವ ಸಂತ್ರಸ್ತೆ

ರೇವಣ್ಣ ಪರ ವಕೀಲರು‌ ಹೇಳುವಂತೆ ಮಹಿಳಾ ಪೊಲೀಸ್ ಇಲ್ಲದೆ ನಮ್ಮ ಪೊಲೀಸರು ಹೋಗಿಲ್ಲ. ಮಹಿಳಾ ಸಿಬ್ಬಂದಿಯ ಜತೆಯಲ್ಲೆ ಹೋಗಿ ದೂರು ದಾಖಲಿಸಿಕೊಂಡಿದ್ದಾರೆ. ಅದರಲ್ಲಿ ಯಾವುದೇ ಅನುಮಾನ ಬೇಡ. ಸಂತ್ರಸ್ತೆ ತನ್ನ ಗಂಡನ ಬಳಿ ಕೆಲವೊಂದನ್ನು ಮುಚ್ಚಿಟ್ಟಿದ್ದಾಳೆ. ಸತ್ಯ ಹೇಳಿದರೆ ಮನೆಯಿಂದ ಹೊರ ಹಾಕುತ್ತಾರೆ ಎಂಬ ಭಯದಲ್ಲಿ ಆಕೆ ಗಂಡನಿಗೆ ಆ ರೀತಿಯಾಗಿ ಹೇಳಿದ್ದಾಳೆ. ಆಕೆಯ ಸುರಕ್ಷತೆಗೆ ಸಂಬಂಧಿಸಿದ ವಿಚಾರವಾಗಿದ್ದರಿಂದ ರಹಸ್ಯ ಸ್ಥಳದಲ್ಲಿ ದೂರು ಪಡೆಯಲಾಗಿದೆ. ಇದು ಸಂಪೂರ್ಣವಾಗಿ ಮಹಿಳೆಯ ರಕ್ಷಣೆಗೆ ಸಂಬಂಧಿಸಿದ ವಿಚಾರವಾಗಿದೆ. ನಾವು ಮೆಮೋ ಹಾಕಿದ್ದೆವು, ರಿಮಾಂಡ್ ಅಪ್ಲಿಕೇಶನ್‌ನಲ್ಲೂ ಲೈಂಗಿಕ ದೌರ್ಜನ್ಯ ಅಂತ ಹೇಳಿದ್ದೆವು. ಆದರೆ, ಈಗ ಸೆಕ್ಷನ್‌ 376 ಹಾಕಿರುವುದಕ್ಕೆ ದಾಖಲೆ ಇದೆ ಎಂದು ಎಸ್‌ಪಿಪಿ ಜಯ್ನಾ ಕೊಠಾರಿ ತಮ್ಮ ವಾದವನ್ನು ಮುಕ್ತಾಯಗೊಳಿಸಿದರು.

Continue Reading

ದೇಶ

ಪಾಕ್‌ ಬಳಿ ಅಣು ಬಾಂಬ್‌ ಇದೆ, ಆದ್ರೆ, ಮೆಂಟೇನ್ ಮಾಡೋಕೂ ಅವರ ಬಳಿ ದುಡ್ಡಿಲ್ಲ ಎಂದ ಮೋದಿ; ಕಾಂಗ್ರೆಸ್‌ಗೆ ಚಾಟಿ

ಪಾಕಿಸ್ತಾನದ ಬಳಿ ಅಣುಬಾಂಬ್‌ ಇವೆ ಎಂದು ಎಚ್ಚರಿಸಿದ್ದ ಕಾಂಗ್ರೆಸ್‌ ನಾಯಕ ಮಣಿಶಂಕರ್‌ ಅಯ್ಯರ್‌ ಅವರಿಗೆ ಯೋಗಿ ಆದಿತ್ಯನಾಥ್‌ ತಿರುಗೇಟು ನೀಡಿದ್ದರು. “ನಾವೇನೂ ಅಣುಬಾಂಬ್‌ಗಳನ್ನು ಫ್ರಿಡ್ಜ್‌ನಲ್ಲಿ ಇರಿಸಲು ತಯಾರಿಸಿಲ್ಲ. ಇದು ಹೊಸ ಭಾರತ. ನಮ್ಮ ತಂಟೆಗೆ ಬಂದರೆ ಯಾರನ್ನೂ ನಾವು ಬಿಡುವುದಿಲ್ಲ. ಮನೆಗೆ ನುಗ್ಗಿ ಹೊಡೆಯುವ ಸಾಮರ್ಥ್ಯವನ್ನು ಭಾರತ ಕಳೆದ 10 ವರ್ಷಗಳಲ್ಲಿ ಕಂಡುಕೊಂಡಿದೆ” ಎಂದು ಹೇಳಿದ್ದರು. ಈಗ ಮೋದಿ ಕೂಡ ಕಾಂಗ್ರೆಸ್‌ಗೆ ಟಾಂಗ್‌ ಕೊಟ್ಟಿದ್ದಾರೆ.

VISTARANEWS.COM


on

Narendra Modi
Koo

ನವದೆಹಲಿ: “ಪಾಕಿಸ್ತಾನ ಬಳೆ ತೊಟ್ಟುಕೊಂಡಿಲ್ಲ. ಅದರ ಬಳಿ ಅಣು ಬಾಂಬ್‌ಗಳು ಇವೆ. ಹಾಗಾಗಿ, ಪಾಕಿಸ್ತಾನಕ್ಕೆ ಭಾರತ ಗೌರವ ನೀಡಬೇಕು” ಎಂಬುದಾಗಿ ಕಾಂಗ್ರೆಸ್‌ ನಾಯಕ ಮಣಿಶಂಕರ್‌ ಅಯ್ಯರ್‌ (Mani Shankar Aiyar) ನೀಡಿದ ಹೇಳಿಕೆಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ತಿರುಗೇಟು ನೀಡಿದ್ದಾರೆ. “ಪಾಕಿಸ್ತಾನದ ಬಳಿ ಅಣು ಬಾಂಬ್‌ ಇವೆ ಎಂಬುದಾಗಿ ಕಾಂಗ್ರೆಸ್‌ (Congress) ಹೇಳುತ್ತದೆ. ಆದರೆ, ಅವುಗಳನ್ನು ನಿರ್ವಹಣೆ ಮಾಡುವಷ್ಟು ಹಣವೇ ಪಾಕಿಸ್ತಾನದ ಬಳಿ ಇಲ್ಲ” ಎಂದು ಮೋದಿ ವಾಗ್ದಾಳಿ ನಡೆಸಿದ್ದಾರೆ.

ಉತ್ತರ ಪ್ರದೇಶದ ಹಮೀರ್‌ಪುರದಲ್ಲಿ ನಡೆದ ಚುನಾವಣೆ ಸಮಾವೇಶದಲ್ಲಿ ನರೇಂದ್ರ ಮೋದಿ ಮಾತನಾಡಿದರು. “ಪಾಕಿಸ್ತಾನದ ಕುರಿತು ಕಾಂಗ್ರೆಸ್‌ ನಾಯಕರು ಹೆಚ್ಚು ಚಿಂತಿತರಾಗಿದ್ದಾರೆ. ನೆರೆಯ ರಾಷ್ಟ್ರದ ಬಳಿ ಅಣು ಬಾಂಬ್‌ಗಳಿವೆ ಎಂಬುದಾಗಿ ಅವರು ಹೆದರಿಸುತ್ತಾರೆ. ಆದರೆ, ಪಾಕಿಸ್ತಾನದ ಬಳಿ ಪರಮಾಣು ಬಾಂಬ್‌ಗಳಿವೆ ಹಾಗೂ ಅವುಗಳನ್ನು ನಿರ್ವಹಣೆ ಮಾಡಲು ಆಗದಂತಹ, ಅದಕ್ಕೆ ಹಣವೇ ಇಲ್ಲದಂತಹ ಪರಿಸ್ಥಿತಿ ಪಾಕಿಸ್ತಾನಕ್ಕೆ ಎದುರಾಗಿದೆ ಎಂಬುದನ್ನು ಕಾಂಗ್ರೆಸ್‌ ಅರ್ಥ ಮಾಡಿಕೊಳ್ಳುತ್ತಿಲ್ಲ” ಎಂದು ವಾಗ್ದಾಳಿ ನಡೆಸಿದರು.

“ಕಾಂಗ್ರೆಸ್‌ ಹಾಗೂ ಸಮಾಜವಾದಿ ಪಕ್ಷದ ನಾಯಕರನ್ನು ಜನ ಯಾವುದೇ ಕಾರಣಕ್ಕೂ ನಂಬಬಾರದು. ಅವರು ವೋಟ್‌ ಜಿಹಾದ್‌ಗೆ ಕರೆ ನೀಡುತ್ತಾರೆ. ಸಮಾಜವನ್ನು ಒಡೆಯುವುದು ಅವರ ಉದ್ದೇಶವಾಗಿದೆ. ಮಾಫಿಯಾವನ್ನು ಸಮಾಜವಾದಿ ಪಕ್ಷವು ಈಗಲೂ ಬೆಂಬಲಿಸುತ್ತದೆ. ಇನ್ನು, ಪಾಕಿಸ್ತಾನವು ಭಾರತದ ಮೇಲೆ ದಾಳಿ ಮಾಡುತ್ತಲೇ ಬಂದಿತು. ಆದರೆ, ಕಾಂಗ್ರೆಸ್‌ ದಾಳಿ ಮಾಡಿದವರಿಗೇ ಕ್ಲೀನ್‌ಚಿಟ್‌ ನೀಡುವ ಮೂಲಕ ತನ್ನ ನಿಲುವು ಯಾರ ಪರ ಎಂಬುದನ್ನು ಸಾಬೀತುಪಡಿಸಿತು” ಎಂದು ಮೋದಿ ಹೇಳಿದರು.

ಮಣಿಶಂಕರ್‌ ಅಯ್ಯರ್‌ ಹೇಳಿದ್ದೇನು?

“ಪಾಕಿಸ್ತಾನದ ಬಳಿ ಅಣುಬಾಂಬ್‌ಗಳಿವೆ. ಭಾರತ ಕೇವಲ ವಿಶ್ವಗುರು ಎಂದು ಹೇಳುತ್ತಾ ಇದ್ದರೆ ಸಾಲದು ನೆರೆಯ ರಾಷ್ಟ್ರ ಪಾಕಿಸ್ತಾನದ ಜತೆ ಮೊದಲು ಶಾಂತಿಯುತ ಮಾತುಕತೆ ನಡೆಸಬೇಕು. ಯಾವಾಗಲೂ ಕೈಯಲ್ಲಿ ಬಂದೂಕು ಹಿಡಿದು ಸುತ್ತಾಡಿದರೆ ಯಾವ ಕೆಲಸವೂ ಆಗಲ್ಲ, ಯಾವ ಪರಿಹಾರವೂ ಸಿಗಲ್ಲ. ಅದು ಕೇವಲ ಸಮಸ್ಯೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ ಅಷ್ಟೇ. ಪಾಕಿಸ್ತಾನ ಕೂಡ ಸಾರ್ವಭೌಮ ರಾಷ್ಟ್ರ ಮತ್ತು ಅದಕ್ಕೆ ಅದರದ್ದೇ ಆದ ಗೌರವ ಇದೆ. ಒಂದು ವೇಳೆ ಅಲ್ಲಿ ತಲೆಕೆಟ್ಟ ಮನುಷ್ಯ ಅಧಿಕಾರಕ್ಕೆ ಬಂದರೆ, ಲಾಹೋರ್‌ನಲ್ಲಿ ಅಣುಬಾಂಬ್‌ ಸ್ಫೋಟಿಸಿದರೆ ಅದರ ಪರಿಣಾಮ ನಮ್ಮ ದೇಶದ ಭಾಗವಾಗಿರುವ ಅಮೃತಸರದ ಮೇಲೂ ಆಗುತ್ತದೆ. ಹೀಗಾಗಿ ನಾನು ಅವರನ್ನು ಗೌರವಿಸಲು ಪ್ರಾರಂಭಿಸಿದರೆ ಅವರು ಬಾಂಬ್‌ ಬಗ್ಗೆ ಯೋಚನೆ ಮಾಡುವುದೇ ಇಲ್ಲ” ಎಂದು ಅಯ್ಯರ್‌ ಹೇಳಿದ್ದರು.

ಇದನ್ನೂ ಓದಿ: PM Narendra Modi: ಬುಲ್ಡೋಜರ್‌ ಹೇಗೆ ಬಳಸಬೇಕೆಂಬುದನ್ನು ಯೋಗಿಯಿಂದ ಕಲಿಯಬೇಕು: ಪ್ರಧಾನಿ ಮೋದಿ

Continue Reading

ಪ್ರಮುಖ ಸುದ್ದಿ

IPL 2024 : ಆರ್​ಸಿಬಿ ವಿರುದ್ಧ ವೇಗದ ಬೌಲರ್​ ಕಣಕ್ಕೆ; ಚೆನ್ನೈ ತಂಡದಲ್ಲಿ ಸಂಭ್ರಮ

IPL 2024: ದೀಪಕ್ ಚಾಹರ್ ಸದಾ ಗಾಯದಿಂದ ಬಳಲುತ್ತಿರುವ ಬೌಲರ್ ಎನಿಸಿಕೊಂಡಿದ್ದಾರೆ. ತಮ್ಮ ಕ್ರಿಕೆಟ್ ವೃತ್ತಿಜೀವನದಲ್ಲಿ ಇಲ್ಲಿಯವರೆಗೆ ಹಲವಾರು ಗಾಯಗಳನ್ನು ಅನುಭವಿಸಿದ್ದಾರೆ. ಗಾಯದಿಂದ ಚೇತರಿಸಿಕೊಂಡ ನಂತರ ಅವರು ಐಪಿಎಲ್ 2024 ಗೆ ಬಂದಿದ್ದರು ಆದರೆ ಸಿಎಸ್​ಕೆ ಪರ 8 ಪಂದ್ಯಗಳನ್ನು ಆಡಿದ ನಂತರ ಅವರು ಹೊಸ ಹೊಡೆತವನ್ನು ತಿಂದರು. ಅವರ ಅನುಪಸ್ಥಿತಿಯು ತಂಡದಲ್ಲಿ ದೊಡ್ಡ ಸಮಸ್ಯೆ ಉಂಟುಮಾಡಿತ್ತು.

VISTARANEWS.COM


on

IPL 2024
Koo

ಬೆಂಗಳೂರು: ಚೆನ್ನೈ ಸೂಪರ್ ಕಿಂಗ್ಸ್ ತಂಡದ ವೇಗದ ಬೌಲರ್ ದೀಪಕ್ ಚಾಹರ್ ಗಾಯದ ಸಮಸ್ಯೆಯಿಂದ ಹೊರಬಂದಿದ್ದು, ಆರ್​ಸಿಬಿ ವಿರುದ್ಧದ ಪಂದ್ಯದಲ್ಲಿ ಆಡುವ ನಿರೀಕ್ಷೆಯಿದೆ. ಐಪಿಎಲ್ 2024 ರ (IPL 2024) ಕೊನೆಯ ಲೀಗ್ ಪಂದ್ಯದಲ್ಲಿ ಸಿಎಸ್​ಕೆ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗಲಿವೆ. ಚೆನ್ನೈನಲ್ಲಿ ನಡೆದ ಋತುವಿನ ಆರಂಭಿಕ ಪಂದ್ಯದಲ್ಲಿ ಕೊನೆಯ ಬಾರಿಗೆ ಭೇಟಿಯಾದ ಎರಡು ದಕ್ಷಿಣ ಭಾರತದ ಫ್ರಾಂಚೈಸಿಗಳ ನಡುವಿನ ರಿವರ್ಸ್ ಪಂದ್ಯ ಇದಾಗಿದೆ. ಹಿಂದಿನ ಪಂದ್ಯದಲ್ಲಿ ದೀಪಕ್ ಚಾಹರ್ 37 ರನ್ ನೀಡಿ ಗ್ಲೆನ್ ಮ್ಯಾಕ್ಸ್​ವೆಲ್​ ವಿಕೆಟ್ ಪಡೆದಿದ್ದರು.

ದೀಪಕ್ ಚಾಹರ್ ಸದಾ ಗಾಯದಿಂದ ಬಳಲುತ್ತಿರುವ ಬೌಲರ್ ಎನಿಸಿಕೊಂಡಿದ್ದಾರೆ. ತಮ್ಮ ಕ್ರಿಕೆಟ್ ವೃತ್ತಿಜೀವನದಲ್ಲಿ ಇಲ್ಲಿಯವರೆಗೆ ಹಲವಾರು ಗಾಯಗಳನ್ನು ಅನುಭವಿಸಿದ್ದಾರೆ. ಗಾಯದಿಂದ ಚೇತರಿಸಿಕೊಂಡ ನಂತರ ಅವರು ಐಪಿಎಲ್ 2024 ಗೆ ಬಂದಿದ್ದರು ಆದರೆ ಸಿಎಸ್​ಕೆ ಪರ 8 ಪಂದ್ಯಗಳನ್ನು ಆಡಿದ ನಂತರ ಅವರು ಹೊಸ ಹೊಡೆತವನ್ನು ತಿಂದರು. ಅವರ ಅನುಪಸ್ಥಿತಿಯು ತಂಡದಲ್ಲಿ ದೊಡ್ಡ ಸಮಸ್ಯೆ ಉಂಟುಮಾಡಿತ್ತು.

ಮೇ 1 ರಂದು ಐಪಿಎಲ್ 2024 ರ 49 ನೇ ಪಂದ್ಯಕ್ಕಾಗಿ ಚೆಪಾಕ್​ನಲ್ಲಿ ಪಂಜಾಬ್ ಕಿಂಗ್ಸ್ ತಂಡಕ್ಕೆ ಸೂಪರ್ ಕಿಂಗ್ಸ್ ತಂಡ ಆತಿಥ್ಯ ನೀಡಿದಾಗ ದೀಪಕ್ ಚಾಹರ್​​ ಪೂರ್ತಿ ಸ್ಪೆಲ್​ ಎಸೆಯಲು ವಿಫಲಗೊಂಡಿದ್ದರು. ಅವರು ಗಾಯದಿಂದಾಗಿ ಪೆವಿಲಿಯನ್​ಗೆ ಮರಳಿದ್ದರು.

163 ರನ್​ಗಳ ಗುರಿ ಬೆನ್ನಟ್ಟಿ ಚೆನ್ನೈ ತಂಡಕ್ಕೆ ಸ್ಯಾಮ್ ಕರ್ರನ್ ಪಡೆ 162 ರನ್ಗಳ ಗುರಿ ನೀಡಿತ್ತು. ಗುರಿ ಕಡಿಮೆ ಇತ್ತು. ಹೀಗಾಗಿ ಬೌಲರ್​ಗಳ ನೆರವು ಅಗತ್ಯವಾಗಿತ್ತು. ಆದಾಗ್ಯೂ, ಪಂದ್ಯದ ಮೊದಲ ಓವರ್​ನಲ್ಲಿ ದೀಪಕ್ ಚಹರ್ ಕೇವಲ 2 ಎಸೆತಗಳನ್ನು ಎಸೆದ ನಂತರ ನೋವಿನಿಂದ ಮೈದಾನದಿಂದ ಹೊರನಡೆದಾಗ ಆತಿಥೇಯರಿಗೆ ದೊಡ್ಡ ಹೊಡೆತ ಸಿಕ್ಕಂತಾಯಿತು.

ಇದನ್ನೂ ಓದಿ: IPL 2024 : ಆರ್​ಸಿಬಿ ಮತ್ತು ಸಿಎಸ್​ಕೆ ನಡುವಿನ ಪಂದ್ಯದ ವಿಜೇತರು ಯಾರು ಎಂದು ತಿಳಿಸಿದ ಬ್ರಿಯಾನ್ ಲಾರಾ

ದೀಪಕ್ ಚಹರ್ ಮೈದಾನದಿಂದ ನಿರ್ಗಮಿಸಿದ ನಂತರ, ಪಂಜಾಬ್ ಕಿಂಗ್ಸ್ ಅಗ್ರ ಕ್ರಮಾಂಕವು 113 ರನ್ ಗಳಿಸಿದ ನಂತರ ಕ್ರೀಸ್ ನಿಂದ ನಿರ್ಗಮಿಸಿತು. 4 ಮತ್ತು 5ನೇ ಕ್ರಮಾಂಕದ ಬ್ಯಾಟರ್​ಗಳಾದ ಶಶಾಂಕ್ ಸಿಂಗ್ ಮತ್ತು ಸ್ಯಾಮ್ ಕರ್ರನ್ ತಮ್ಮ ಜೊತೆಯಾಟದ ಮೂಲಕ ಪಂಜಾಬ್ ತಂಡವನ್ನು ಗೆಲುವು ಕಂಡಿತು.

ಗಾಯದ ಆತಂಕ

ಪಂದ್ಯದ ನಂತರ, ಸಿಎಸ್ಕೆ ಮುಖ್ಯ ಕೋಚ್ ಸ್ಟೀಫನ್ ಫ್ಲೆಮಿಂಗ್ ಚಾಹರ್ ಅವರ ಗಾಯದ ಬಗ್ಗೆ ಹೀಗೆ ಹೇಳಿದ್ದರು, ದೀಪಕ್ ಚಹರ್ ಉತ್ತಮವಾಗಿ ಕಾಣುತ್ತಿಲ್ಲ. ಆದ್ದರಿಂದ, ಫಿಸಿಯೋ ಮತ್ತು ವೈದ್ಯರು ನೋಡಿದಾಗ ಹೆಚ್ಚು ಸಕಾರಾತ್ಮಕ ವರದಿಯನ್ನು ನಾನು ಆಶಿಸುತ್ತೇನೆ ಎಂದು ಹೇಳಿದ್ದರು.

ಬೆಂಗಳೂರಿನಲ್ಲಿ ಸಿಎಸ್​ಕೆ ತಂಡದ ಅಭ್ಯಾಸದ ಸಮಯದಲ್ಲಿ, ದೀಪಕ್ ಚಹರ್ ಪೂರ್ಣ ತೀವ್ರತೆಯಲ್ಲಿ ಬೌಲಿಂಗ್ ಮಾಡುತ್ತಿರುವುದು ಕಂಡುಬಂದಿದೆ. ಇದು ವೇಗಿ ಆರ್​ಸಿಬಿ ವಿರುದ್ಧ ಆಡಲು ಫಿಟ್ ಆಗಿದ್ದಾರೆ ಎಂದು ಸೂಚಿಸುತ್ತದೆ. ಅವರು ನೇರವಾಗಿ ಪ್ಲೇಯಿಂಗ್ ಇಲೆವೆನ್​ಗೆ ಬರುತ್ತಾರೆಯೇ ಅಥವಾ ಇಂಪ್ಯಾಕ್ಟ್​ ಪ್ಲೇಯರ್​ ಆಗಿರುತ್ತಾರೆಯೇ ನೋಡಬೇಕಾಗಿದೆ.

Continue Reading
Advertisement
Konkani Book Release
ಕಲೆ/ಸಾಹಿತ್ಯ2 mins ago

Konkani Book Release: ಇಟಾಲಿಯನ್-ಬ್ರಿಟಿಷ್ ಲೇಖಕ ರಚಿಸಿರುವ ಜಿಎಸ್‌ಬಿ ಕೊಂಕಣಿ ಮಾರ್ಗದರ್ಶಿ ಕೃತಿ ಬಿಡುಗಡೆ

MLC Meeting
ರಾಜಕೀಯ10 mins ago

MLC Election: ಬೆಂಗಳೂರು ಪದವೀಧರ ಕ್ಷೇತ್ರದ ಚುನಾವಣಾ ಪೂರ್ವಸಿದ್ಧತೆ ಸಭೆ; ಬಿಜೆಪಿ ಅಭ್ಯರ್ಥಿ ಅ. ದೇವೇಗೌಡ ಗೆಲುವಿಗೆ ರಣತಂತ್ರ

Arvind Kejriwal
ದೇಶ15 mins ago

Arvind Kejriwal: ಅಬಕಾರಿ ಕೇಸ್‌: ಕೇಜ್ರಿವಾಲ್‌ಗೆ ಬಿಗ್ ಶಾಕ್; ಇ.ಡಿ ಚಾರ್ಜ್‌ಶೀಟ್‌ನಲ್ಲಿ ಇವರೇ ಆರೋಪಿ!

HD Revanna case Hearing in Holenarasipura sexual assault case adjourned to Monday
ಹಾಸನ51 mins ago

HD Revanna Case: ಹೊಳೆನರಸೀಪುರದ ಲೈಂಗಿಕ ದೌರ್ಜನ್ಯ ಕೇಸ್‌ ವಿಚಾರಣೆ ಸೋಮವಾರಕ್ಕೆ ಮುಂದೂಡಿಕೆ; ರೇವಣ್ಣಗೆ ಜೈಲಾ? ಬೇಲಾ?

Kanguva Film Suriya-Bobby Deol's war scene with 10,000 people
ಕಾಲಿವುಡ್54 mins ago

Kanguva Film: 10,000 ಜನರನ್ನು ಒಳಗೊಂಡಿತ್ತು ʻಕಂಗುವʼ ಚಿತ್ರದ ಸೂರ್ಯ-ಬಾಬಿ ಡಿಯೋಲ್‌ರ ಈ ದೃಶ್ಯ!

karnataka weather Forecast
ಮಳೆ56 mins ago

Karnataka Weather : ತುಮಕೂರಲ್ಲಿ ಸಿಡಿಲಿಗೆ ಜಾನುವಾರು ಬಲಿ; ಚಿಕ್ಕಮಗಳೂರಲ್ಲಿ ಮಳೆ ಅವಾಂತರಕ್ಕೆ ಜನ ತತ್ತರ

Narendra Modi
ದೇಶ57 mins ago

ಪಾಕ್‌ ಬಳಿ ಅಣು ಬಾಂಬ್‌ ಇದೆ, ಆದ್ರೆ, ಮೆಂಟೇನ್ ಮಾಡೋಕೂ ಅವರ ಬಳಿ ದುಡ್ಡಿಲ್ಲ ಎಂದ ಮೋದಿ; ಕಾಂಗ್ರೆಸ್‌ಗೆ ಚಾಟಿ

IPL 2024
ಪ್ರಮುಖ ಸುದ್ದಿ59 mins ago

IPL 2024 : ಆರ್​ಸಿಬಿ ವಿರುದ್ಧ ವೇಗದ ಬೌಲರ್​ ಕಣಕ್ಕೆ; ಚೆನ್ನೈ ತಂಡದಲ್ಲಿ ಸಂಭ್ರಮ

SubAir facility
ಕ್ರೀಡೆ1 hour ago

SubAir facility: ಸಬ್‌ ಏರ್‌ ಸಿಸ್ಟಮ್‌ ಹೇಗೆ ಕಾರ್ಯನಿರ್ವಹಿಸುತ್ತದೆ?; ಮಳೆ ನಿಂತು ಎಷ್ಟು ಗಂಟೆಯಲ್ಲಿ ಪಂದ್ಯ ಆರಂಭ?

Lokayukta Raid
ಕರ್ನಾಟಕ1 hour ago

Lokayukta Raid: ಲೋಕಾಯುಕ್ತ ದಾಳಿ; 30 ಸಾವಿರ ರೂ. ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಎಫ್‌ಡಿಎ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka weather Forecast
ಮಳೆ12 hours ago

Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

Dina Bhavishya
ಭವಿಷ್ಯ13 hours ago

Dina Bhavishya : ಈ ರಾಶಿಯ ಪ್ರೇಮಿಗಳಿಗೆ ಮನೆಯಿಂದ ಸಿಗುತ್ತೆ ಗ್ರೀನ್‌ ಸಿಗ್ನಲ್‌

Karnataka Weather Forecast
ಮಳೆ1 day ago

Karnataka Weather : ಭಾರಿ ಮಳೆಗೆ ಕೊಟ್ಟೂರು ಬಸ್ ಸ್ಟ್ಯಾಂಡ್‌ ಜಲಾವೃತ; ‌ ತಾಯಿ-ಮಗ ಗ್ರೇಟ್‌ ಎಸ್ಕೇಪ್‌

Drowned in water
ಹಾಸನ1 day ago

Drowned in water : ಕೆರೆಯಲ್ಲಿ ಈಜಲು ಹೋದ ನಾಲ್ವರು ನೀರುಪಾಲು; ಓರ್ವ ಬಾಲಕ ಪಾರು

Suspicious Case
ಬೆಂಗಳೂರು1 day ago

Suspicious Case : ಬಾತ್‌ ರೂಂನಲ್ಲಿತ್ತು ಕಾಲೇಜು ಹುಡುಗಿ ಡೆಡ್‌ ಬಾಡಿ; ಕುತ್ತಿಗೆ ಕೊಯ್ದು ಸಾಯಿಸಿದವರು ಯಾರು?

Prajwal Revanna Case
ಕರ್ನಾಟಕ2 days ago

Prajwal Revanna Case: ಪ್ರಜ್ವಲ್‌ ರೇವಣ್ಣ ಇಂದೇ ಜರ್ಮನಿಯಿಂದ ಭಾರತಕ್ಕೆ? ಎಸ್‌ಐಟಿ ಅಲರ್ಟ್‌

Dina Bhavishya
ಭವಿಷ್ಯ3 days ago

Dina Bhavishya : ಭೂ ವ್ಯವಹಾರಕ್ಕೆ ಇದು ಸೂಕ್ತ ಸಮಯ; ವ್ಯಾಪಾರದಲ್ಲಿ ಡಬಲ್‌ ಲಾಭ

HD Revanna Released first reaction after release will be acquitted of all charges
ರಾಜಕೀಯ3 days ago

HD Revanna Released: ರಿಲೀಸ್‌ ಬಳಿಕ ರೇವಣ್ಣ ಫಸ್ಟ್‌ ರಿಯಾಕ್ಷನ್;‌ ನ್ಯಾಯಾಂಗದ ಮೇಲೆ ನಂಬಿಕೆ ಇದೆ; ಆರೋಪ ಮುಕ್ತನಾಗುವೆ

CM Siddaramaiah says Our government is stable for 5 years BJP will disintegrate
Lok Sabha Election 20243 days ago

CM Siddaramaiah: ನಮ್ಮ ಸರ್ಕಾರ 5 ವರ್ಷ ಸುಭದ್ರ; ಚುನಾವಣೆ ಬಳಿಕ ಬಿಜೆಪಿ ಛಿದ್ರ ಎಂದ ಸಿಎಂ ಸಿದ್ದರಾಮಯ್ಯ!

I dont want to go to other states for Lok Sabha Election 2024 campaign for Congress says CM Siddaramaiah
Lok Sabha Election 20243 days ago

CM Siddaramaiah: ಕಾಂಗ್ರೆಸ್‌ ಪರ ಬೇರೆ ರಾಜ್ಯಗಳಿಗೆ ಪ್ರಚಾರಕ್ಕೆ ಹೋಗಲು ನನಗೆ ಇಷ್ಟವಿಲ್ಲ: ಸಿಎಂ ಸಿದ್ದರಾಮಯ್ಯ!

ಟ್ರೆಂಡಿಂಗ್‌