ನವ ದೆಹಲಿ: ಕಂದಾಯ ವಿಚಕ್ಷಣ ನಿರ್ದೇಶನಾಲಯವು (DRI) ಸ್ಯಾಮ್‌ಸಂಗ್ ಇಂಡಿಯಾ ಎಲೆಕ್ಟ್ರಾನಿಕ್ಸ್ ಕಂಪನಿಗೆ 1,728 ಕೋಟಿ ರೂ. ಸುಂಕವನ್ನು ಬಡ್ಡಿ ಸಮೇತ ಪಾವತಿಸುವಂತೆ (Samsung India) ನೋಟಿಸ್ ಜಾರಿಗೊಳಿಸಿದೆ.
ದಕ್ಷಿಣ ಕೊರಿಯಾದ ಸ್ಯಾಮ್ ಸಂಗ್ ಎಲೆಕ್ಟ್ರಾನಿಕ್ಸ್‌ನ ಅಧೀನ ಕಂಪನಿಯಾಗಿರುವ ಸ್ಯಾಮ್‌ಸಂಗ್ ಇಂಡಿಯಾ ವಿರುದ್ಧ ಡಿಆರ್‌ಐ ಕಸ್ಟಮ್ಸ್ ಸುಂಕ ವಿವಾದ ಕುರಿತ ಪ್ರಕರಣ ದಾಖಲಿಸಿದೆ.
ತೆರಿಗೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿ ಪ್ರೈಸ್‌ವಾಟರ್ ಹೌಸ್ ಕೂಪರ್ಸ್ ಕಂಪನಿಗೂ ನೋಟಿಸ್ ಜಾರಿಗೊಳಿಸಲಾಗಿದೆ. ಸ್ಯಾಮ್‌ಸಂಗ್ ಇಂಡಿಯಾ ಆಮದು ಮಾಡಿಕೊಂಡಿರುವ 6,72,821 ಕೋಟಿ ರೂ. ಮೌಲ್ಯದ ಸರಕುಗಳಿಗೆ ಒಟ್ಟು 1,728 ಕೋಟಿ ರೂ. ಕಸ್ಟಮ್ಸ್ ಸುಂಕವನ್ನು ನೀಡಬೇಕಾಗಿದೆ ಎಂದು ಡಿಆರ್‌ಐ ತಿಳಿಸಿದೆ.