ಬೆಂಗಳೂರು: ವೆಲ್ಸ್ಪನ್ ಒನ್ ಲಾಜಿಸ್ಟಿಕ್ಸ್ ಪಾರ್ಕ್ಸ್, ಕರ್ನಾಟಕದಲ್ಲಿ ಗೋದಾಮುಗಳ ನಿರ್ಮಾಣ ವಲಯದಲ್ಲಿ 2,000 ಕೋಟಿ ರೂ. ಬಂಡವಾಳ ಹೂಡಲು ನಿರ್ಧರಿಸಿದೆ. ಈ ಸಂಬಂಧ ಬೆಂಗಳೂರಿನಲ್ಲಿ ನಡೆಯುತ್ತಿರುವ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ (Invest Karnataka 2022) ಎಂಒಯುಗೆ ಸಹಿ ಹಾಕಿದೆ.
ಗೋದಾಮುಗಳ ಅಭಿವೃದ್ಧಿ, ಲಾಜಿಸ್ಟಿಕ್ಸ್ ಪಾರ್ಕ್ಗಳ ನಿರ್ಮಾಣಕ್ಕೆ ಕಂಪನಿ ಬಂಡವಾಳ ಹೂಡಲಿದ್ದು, ಇದರಿಂದ 6,000 ಉದ್ಯೋಗಗಳು ಸೃಷ್ಟಿಯಾಗುವ ನಿರೀಕ್ಷೆ ಇದೆ.
ರಾಜ್ಯ ಆರ್ಥಿಕತೆಯ ಬೆಳವಣಿಗೆ ದೃಷ್ಟಿಯಿಂದಲೂ ಇದು ನೆರವಾಗಲಿದೆ ಎಂದು ವೆಲ್ಸ್ಪನ್ ಗ್ರೂಪ್ನ ಅಧ್ಯಕ್ಷ ಬಾಲಕೃಷ್ಣನ್ ಗೋಯೆಂಕಾ ತಿಳಿಸಿದ್ದಾರೆ. ರಾಜ್ಯದಲ್ಲಿ ಸರ್ಕಾರಿ ಮತ್ತು ಖಾಸಗಿ ಜಮೀನುಗಳ ಸಮರಕ ಬಳಕೆಯ ಮೂಲಕ ವಹಿವಾಟು ವೃದ್ಧಿಸಲು ಕಂಪನಿ ಉದ್ದೇಶಿಸಿದೆ.