ವಾಷಿಂಗ್ಟನ್: ಸಾಮಾಜಿಕ ಜಾಲತಾಣ ದಿಗ್ಗಜ ಫೇಸ್‌ಬುಕ್‌ನ ಮಾತೃಸಂಸ್ಥೆ ಮೆಟಾಗೆ ( Meta) ಸುಮಾರು 25 ದಶಲಕ್ಷ ಡಾಲರ್ (202 ಕೋಟಿ ರೂ.) ದಂಡ ವಿಧಿಸಲಾಗಿದೆ. ರಾಜಕೀಯ ಪಕ್ಷಗಳ ಪ್ರಚಾರಗಳಿಗೆ ನೀಡಿದ ದೇಣಿಗೆಗೆ ಸಂಬಂಧಿಸಿದಂತೆ ಹಣಕಾಸು ವಿವರಗಳನ್ನು ಸಮರ್ಪಕವಾಗಿ ಒದಗಿಸದಿದ್ದುದಕ್ಕೆ ಮೆಟಾಗೆ ದಂಡ ವಿಧಿಸಲಾಗಿದೆ.
ಅಮೆರಿಕದಲ್ಲಿ ಕ್ಯಾಂಪೇನ್ ಹಣಕಾಸು ಇತಿಹಾಸದಲ್ಲಿಯೇ ಕಂಪನಿಯೊಂದಕ್ಕೆ ವಿಧಿಸಿದ ಅತಿ ದೊಡ್ಡ ಮೊತ್ತದ ದಂಡ ಇದಾಗಿದೆ.
ಈ ಹಿಂದೆಯೂ ಫೇಸ್‌ಬುಕ್‌ಗೆ 2018ರಲ್ಲಿ ಇದೇ ಆರೋಪದ ಅಡಿಯಲ್ಲಿ ತನಿಖೆ ನಡೆಸಿ ದಂಡ ವಿಧಿಸಲಾಗಿತ್ತು. ಮೆಟಾ ಈ ಬಗ್ಗೆ ತಕ್ಷಣ ಪ್ರತಿಕ್ರಿಯಿಸಿಲ್ಲ. ಪ್ರಸಕ್ತ ಸಾಲಿನ ಎರಡನೇ ತ್ರೈಮಾಸಿಕದಲ್ಲಿ ಮೆಟಾದ ಲಾಭಾಂಶದಲ್ಲಿ 50% ಇಳಿಕೆಯಾಗಿತ್ತು. ಜಾಹೀರಾತುಗಳಿಗೆ ಬೇಡಿಕೆ ತಗ್ಗಿರುವುದು ಇದಕ್ಕೆ ಕಾರಣ.