ನವ ದೆಹಲಿ: ಮುಂದಿನ ಫೆಬ್ರವರಿಯಿಂದ ಟ್ವಿಟರ್‌ನಲ್ಲಿ ಹಲವಾರು ಹೊಸ ಬದಲಾವಣೆಗಳು ನಡೆಯಲಿವೆ. ಮುಖ್ಯವಾಗಿ ಸುದೀರ್ಘವಾದ ಟ್ವೀಟ್ ಬರಹಗಳಿಗೂ ಅವಕಾಶ ಸಿಗಲಿದೆ ಎಂದು ಸಿಇಒ ಎಲಾನ್ ಮಸ್ಕ್ (Tweaks In Twitter) ತಿಳಿಸಿದ್ದಾರೆ.
ಟ್ವಿಟರ್‌ನಲ್ಲಿ ಈಗ ಟ್ವೀಟ್ ಮಾಡುವಾಗ 280 ಪದಗಳ ಮಿತಿ ಇದೆ. ಆದರೆ ಫೆಬ್ರವರಿಯಿಂದ ಈ ಮಿತಿ ರದ್ದಾಗಲಿದ್ದು, ದೊಡ್ಡ ಬರಹಗಳನ್ನೂ ಪ್ರಕಟಿಸಬಹುದು ಎಂದು ಟ್ವೀಟ್ ಮೂಲಕ ಎಲಾನ್ ಮಸ್ಕ್ ಘೋಷಿಸಿದ್ದಾರೆ. ದೀರ್ಘ ಬರವಣಿಗೆಯ ಪೋಸ್ಟ್‌ಗಳಿಗೆ ಶೀಘ್ರ ಅವಕಾಶ ಕೊಡಲಾಗುವುದು ಎಂದು ಅವರು ಕಳೆದ ನವೆಂಬರ್‌ನಲ್ಲಿ ತಿಳಿಸಿದ್ದರು. ಬಹುಶಃ ಪದಗಳ ಮಿತಿ 4,000 ಕ್ಕೆ ಏರಿಕೆಯಾಗುವ ಸಾಧ್ಯತೆ ಇದೆ ಎಂದೂ ವರದಿಯಾಗಿದೆ.