ನವದೆಹಲಿ: ಉದ್ಯೋಗ ಹುಡುಕಲು ನೆರವು ನೀಡುವ ಜಾಲತಾಣ ಇನ್‌ಡೀಡ್ (Indeed Survey) ನಡೆಸಿದ ಉದ್ಯೋಗಿಗಳು ಯೋಗಕ್ಷೇಮ ಸಮೀಕ್ಷೆಯಲ್ಲಿ ಭಾರತೀಯ ಮೂಲದ ಮೂರು ಕಂಪನಿಗಳು ಸ್ಥಾನ ಪಡೆದುಕೊಂಡಿವೆ(Indian Company). ಅಮೆರಿಕದ ಉದ್ಯೋಗಿಗಳ ಯೋಗಕ್ಷೇಮ ಕೈಗೊಳ್ಳುವ ಕಂಪನಿಗಳ ಪಟ್ಟಿಯಲ್ಲಿ ಲವ್ಸ್ ಟ್ರಾವೆಲ್ ಸ್ಟಾಪ್ಸ್ ಆ್ಯಂಡ್ ಸ್ಟೋರ್ಸ್(Love’s Travel Stops & County Stores) ಮೊದಲ ಸ್ಥಾನದಲ್ಲಿದೆ. ಅತ್ಯಂತ ಸಂತೋಷದಾಯಕ ಉದ್ಯೋಗಿಗಳನ್ನು ಹೊಂದಿರುವ ಈ ಪಟ್ಟಿಯಲ್ಲಿ ಟೆಕ್ ದೈತ್ಯ ಕಂಪನಿಗಳಾದ ಟಿಸಿಎಸ್(TCS), ಇನ್ಫೋಸಿಸ್ (Infosys) ಮತ್ತು ವಿಪ್ರೋ (Wipro) ಕ್ರಮವಾಗಿ, 4, 8 ಮತ್ತು 9 ಸ್ಥಾನವನ್ನು ಪಡೆದುಕೊಂಡಿವೆ.
ಪ್ರಥಮ ಸ್ಥಾನದಲ್ಲಿರುವ ಲವ್ಸ್ ಟ್ರಾವೆಲ್ ಸ್ಟಾಪ್ಸ್ ಆ್ಯಂಡ್ ಕಂಟ್ರಿ ಸ್ಟೋರ್, 100 ಅಂಕಗಳ ಪೈಕಿ 83 ಅಂಕವನ್ನು ಸಂಪಾದಿಸಿದೆ. ಸಾವಿರಾರು ಅನಾಮಧೇಯ ಉದ್ಯೋಗಿಗಳ ವಿಮರ್ಶೆ, ಸಂತೋಷ, ಒತ್ತಡದ ಹಂತಗಳು, ಉದ್ಯೋಗ ಸಂತೃಪ್ತಿ ಮತ್ತು ಉದ್ದೇಶ ಸೇರಿ ಅನೇಕ ಸಂಗತಿಗಳ ಆಧಾರದ ಮೇಲೆ ಜಪಾನ್ ಮೂಲದ ಇನ್‌ಡೀಡ್ ಜಾಬ್ ಸೈಟ್ ಸಮೀಕ್ಷೆಯನ್ನು ಪೂರ್ತಿಗೊಳಿಸಿದೆ.
ಸಾವಿರಕ್ಕಿಂತಲೂ ಹೆಚ್ಚು ಉದ್ಯೋಗಿಗಳು ಇರುವ ಕಂಪನಿಗಳನ್ನು ಸಮೀಕ್ಷೆಗೆ ಪರಿಗಣಿಸಲಾಗಿದೆ. ಏರ್‌ಲೈನ್ಸ್‌ನಿಂದ ಕನ್ಸಲ್ಟನ್ಸೀಸ್, ಫಾಸ್ಟ್ ಫುಡ್ ಚೈನ್ ಕಂಪನಿಗಳವರೆಗೆ ಹಲವು ವಿಧದ ಕಂಪನಿಗಳನ್ನು ಸಮೀಕ್ಷೆಗೆ ಪರಿಗಣಿಸಲಾಗಿದೆ.
ಈ ಸುದ್ದಿಯನ್ನೂ ಓದಿ: Best Company of 2023: ‘ಟೈಮ್’ 100 ಬೆಸ್ಟ್ ಕಂಪನಿಗಳ ಲಿಸ್ಟ್‌ನಲ್ಲಿ ಭಾರತದ ಏಕೈಕ ಬೆಂಗಳೂರಿನ ಕಂಪನಿ!
ಆ 20 ಕಂಪನಿಗಳು ಯಾವವು?
ಲವ್ಸ್ ಟ್ರಾವೆಲ್ ಸ್ಟಾಪ್ಸ್ ಆ್ಯಂಡ್ ಕಂಟ್ರಿ ಸ್ಟೋರ್ಸ್, ಎಚ್ ಆ್ಯಂಡ್ ಆರ್ ಬ್ಲಾಕ್, ಡೆಲ್ಟಾ ಏರ್ ಲೈನ್ಸ್, ಟಾಟಾ ಕನ್ಸಲ್ಟನ್ಸಿ ಸರ್ವೀಸಸ್, ಅಕ್ಸೆಂಚರ್, ಐಬಿಎಂ, ಎಲ್3ಹ್ಯಾರಿಸ್, ವಿಪ್ರೋ, ಇನ್ಫೋಸಿಸ್, ನೈಕ್, ವ್ಯಾನ್ಸ್, ಇನ್-ಎನ್-ಔಟ್ ಬರ್ಗರ್, ಕಾಗ್ನಿಜಂಟ್ ಟೆಕ್ನಾಲಜಿ ಸಲೂಷನ್ಸ್, ಹಾಲ್ಮಾರ್ಕ್, ಮೈಕ್ರೋಸಾಫ್ಟ್, ನಾರ್ತ್‌ರಾಪ್ ಗ್ರುಮ್ಮನ್, ಫೆಡ್‌ಎಕ್ಸ್ ಫ್ರೈಟ್, ಡಚ್ ಬ್ರದರ್ಸ್ ಕಾಫಿ, ಆ್ಯಪಲ್.