ನವ ದೆಹಲಿ: ಗೋಧಿಯ ದರದಲ್ಲಿ ಕಳೆದ ಒಂದೇ ವಾರದ ಅವಧಿಯಲ್ಲಿ ೪% ಏರಿಕೆಯಾಗಿದೆ. (Wheat price) ಹಬ್ಬದ ವೇಳೆಗೆ ದರ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಸೆಪ್ಟೆಂಬರ್ ಮಧ್ಯಭಾಗದಿಂದ ಗೋಧಿಗೆ ಬೇಡಿಕೆ ಏರುಗತಿಗೆ ತಿರುಗುವ ನಿರೀಕ್ಷೆ ಇದೆ. ಸರ್ಕಾರ ಗೋಧಿಯ ದಾಸ್ತಾನು ಸಾಕಷ್ಟಿದೆ ಎಂದು ಹೇಳಿದ್ದರೂ, ದರದಲ್ಲಿ ಏರಿಕೆ ಉಂಟಾಗಿದೆ.
ಗೋಧಿಯ ಆಮದು ಸಾಧ್ಯತೆ ಕುರಿತ ವರದಿಗಳನ್ನು ಸರ್ಕಾರ ನಿರಾಕರಿಸಿದೆ. ಉತ್ತರ ಭಾರತದಲ್ಲಿ ಕಳೆದ ವಾರ ಮಿಲ್ ದರ್ಜೆಯ ಗೋಧಿಯ ದರದಲ್ಲಿ ಪ್ರತಿ ಕೆ.ಜಿಗೆ ೧ ರೂ. ಏರಿಕೆಯಾಗಿದೆ. ಅಂದರೆ ಪ್ರತಿ ಕೆ.ಜಿಗೆ ೨೫.೫೦ ರೂ.ಗಳಾಗಿದೆ. 2021-22ರಲ್ಲಿ ಭಾರತ ೧೦.೬೮ ಕೋಟಿ ಟನ್ ಗೋಧಿಯನ್ನು ಉತ್ಪಾದಿಸಿದೆ.