Wheat price | ಗೋಧಿಯ ದರದಲ್ಲಿ 4% ಏರಿಕೆ, ಹಬ್ಬದ ಸಂದರ್ಭ ಮತ್ತಷ್ಟು ಹೆಚ್ಚಳ ಸಂಭವ - Vistara News

ಪ್ರಮುಖ ಸುದ್ದಿ

Wheat price | ಗೋಧಿಯ ದರದಲ್ಲಿ 4% ಏರಿಕೆ, ಹಬ್ಬದ ಸಂದರ್ಭ ಮತ್ತಷ್ಟು ಹೆಚ್ಚಳ ಸಂಭವ

ಗೋಧಿಯ ದರದಲ್ಲಿ ಕಳೆದ ವಾರ 4% ಏರಿಕೆಯಾಗಿದೆ. (Wheat price) ಸಮೃದ್ಧ ದಾಸ್ತಾನು ಇದೆ ಎಂದು ಸರ್ಕಾರ ತಿಳಿಸಿದ್ದರೂ, ಬೇಡಿಕೆಯ ಏರುಗತಿಯ ಪರಿಣಾಮ ದರದಲ್ಲಿ ಮತ್ತಷ್ಟು ಹೆಚ್ಚಳವಾಗುವ ನಿರೀಕ್ಷೆ ಇದೆ.

VISTARANEWS.COM


on

wheat
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವ ದೆಹಲಿ: ಗೋಧಿಯ ದರದಲ್ಲಿ ಕಳೆದ ಒಂದೇ ವಾರದ ಅವಧಿಯಲ್ಲಿ ೪% ಏರಿಕೆಯಾಗಿದೆ. (Wheat price) ಹಬ್ಬದ ವೇಳೆಗೆ ದರ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಸೆಪ್ಟೆಂಬರ್‌ ಮಧ್ಯಭಾಗದಿಂದ ಗೋಧಿಗೆ ಬೇಡಿಕೆ ಏರುಗತಿಗೆ ತಿರುಗುವ ನಿರೀಕ್ಷೆ ಇದೆ. ಸರ್ಕಾರ ಗೋಧಿಯ ದಾಸ್ತಾನು ಸಾಕಷ್ಟಿದೆ ಎಂದು ಹೇಳಿದ್ದರೂ, ದರದಲ್ಲಿ ಏರಿಕೆ ಉಂಟಾಗಿದೆ.

ಗೋಧಿಯ ಆಮದು ಸಾಧ್ಯತೆ ಕುರಿತ ವರದಿಗಳನ್ನು ಸರ್ಕಾರ ನಿರಾಕರಿಸಿದೆ. ಉತ್ತರ ಭಾರತದಲ್ಲಿ ಕಳೆದ ವಾರ ಮಿಲ್‌ ದರ್ಜೆಯ ಗೋಧಿಯ ದರದಲ್ಲಿ ಪ್ರತಿ ಕೆ.ಜಿಗೆ ೧ ರೂ. ಏರಿಕೆಯಾಗಿದೆ. ಅಂದರೆ ಪ್ರತಿ ಕೆ.ಜಿಗೆ ೨೫.೫೦ ರೂ.ಗಳಾಗಿದೆ. 2021-22ರಲ್ಲಿ ಭಾರತ ೧೦.೬೮ ಕೋಟಿ ಟನ್‌ ಗೋಧಿಯನ್ನು ಉತ್ಪಾದಿಸಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Vinesh Phogat : ವಿನೇಶ್​ ಫೋಗಟ್ ಎಫೆಕ್ಟ್​​; ತೂಕದ ನಿಯಮಗಳ ಬದಲಾವಣೆಗೆ ವಿಶ್ವ ಕುಸ್ತಿ ಒಕ್ಕೂಟ ನಿರ್ಧಾರ?

Vinesh Phogat : ಪ್ಯಾರಿಸ್ ಒಲಿಂಪಿಕ್ಸ್​​ನಲ್ಲಿ ಮಹಿಳೆಯರ 50 ಕೆ.ಜಿ ಚಿನ್ನದ ಪದಕದಿಂದ ವಿನೇಶ್ ಫೋಗಟ್ ಅವರನ್ನು ಅನರ್ಹಗೊಳಿಸಿದ್ದನ್ನು ಪ್ರಶ್ನಿಸಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಫೈನಲ್ ಪಂದ್ಯದ ದಿನ ಬೆಳಗ್ಗೆ ಎರಡನೇ ತೂಕದ ಸಮಯದಲ್ಲಿ ವಿನೇಶ್ 100 ಗ್ರಾಂ ಅಧಿಕ ತೂಕ ಹೊಂದಿರುವುದು ಕಂಡುಬಂದಿತ್ತು. ಕೋರ್ಟ್ ಆಫ್ ಆರ್ಬಿಟ್ರೇಶನ್ ಫಾರ್ ಸ್ಪೋರ್ಟ್ (ಸಿಎಎಸ್) ತಾತ್ಕಾಲಿಕ ವಿಭಾಗವು ಮೇಲ್ಮನವಿ ದಾಖಲಿಸಿದೆ.

VISTARANEWS.COM


on

Vinesh Phogat
Koo

ಪ್ಯಾರಿಸ್: ವಿಶ್ವ ಕುಸ್ತಿ ಆಡಳಿತ ಮಂಡಳಿ ಯುನೈಟೆಡ್ ವರ್ಲ್ಡ್ ರೆಸ್ಲಿಂಗ್ (UWW) 2024ರ ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ (Paris Olympics 2024) ಆಗಿರುವ ವಿವಾದದ ಬಳಿಕ ತಮ್ಮ ನಿಯಮದಲ್ಲಿ ಬದಲಾವಣೆ ಮಾಡಲು ಮುಂದಾಗಿದೆ. ವಿನೇಶ್ ಫೋಗಟ್ (Vinesh Phogat) ಅವರನ್ನು 100 ಗ್ರಾಮ್​ ತೂಕ ಹೆಚ್ಚಳದ ಹಿನ್ನೆಲೆಯಲ್ಲಿ ಅನರ್ಹ ಮಾಡಿರುವ ಕಾರಣ ನಿಯಮದ ಬದಲಾವಣೆ ಮಾಡುವುದಾಗಿ ಹೇಳಿದೆ ಎಂಬುದಾಗಿ ವರದಿ ಹೇಳಿದೆ. ತೂಕದ ನಿಯಮಗಳು ಸಂಪೂರ್ಣವಾಗಿ ಬದಲಾಗುವ ಸಾಧ್ಯತೆಯಿಲ್ಲವಾದರೂ, ಕ್ರೀಡಾಪಟುಗಳ ಸುರಕ್ಷತೆ ಮತ್ತು ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಕೆಲವು ಸಣ್ಣ ಮಾರ್ಪಾಡುಗಳನ್ನು ಮಾಡಲಾಗುವುದು ಎಂದು ಬದಲಾವಣೆಗಳು ಶೀಘ್ರದಲ್ಲೇ ಜಾರಿಗೆ ಬರಬಹುದು.

ಪ್ಯಾರಿಸ್ ಒಲಿಂಪಿಕ್ಸ್​​ನಲ್ಲಿ ಮಹಿಳೆಯರ 50 ಕೆ.ಜಿ ಚಿನ್ನದ ಪದಕದಿಂದ ವಿನೇಶ್ ಫೋಗಟ್ ಅವರನ್ನು ಅನರ್ಹಗೊಳಿಸಿದ್ದನ್ನು ಪ್ರಶ್ನಿಸಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಫೈನಲ್ ಪಂದ್ಯದ ದಿನ ಬೆಳಗ್ಗೆ ಎರಡನೇ ತೂಕದ ಸಮಯದಲ್ಲಿ ವಿನೇಶ್ 100 ಗ್ರಾಂ ಅಧಿಕ ತೂಕ ಹೊಂದಿರುವುದು ಕಂಡುಬಂದಿತ್ತು. ಕೋರ್ಟ್ ಆಫ್ ಆರ್ಬಿಟ್ರೇಶನ್ ಫಾರ್ ಸ್ಪೋರ್ಟ್ (ಸಿಎಎಸ್) ತಾತ್ಕಾಲಿಕ ವಿಭಾಗವು ಮೇಲ್ಮನವಿ ದಾಖಲಿಸಿದೆ. ಅರ್ಜಿದಾರ ವಿನೇಶ್ ಫೋಗಟ್, ಪ್ರತಿವಾದಿಗಳಾದ ಯುನೈಟೆಡ್ ವರ್ಲ್ಡ್ ರೆಸ್ಲಿಂಗ್ ಮತ್ತು ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ ಮತ್ತು ಐಒಎ ಆಸಕ್ತಿಯ ಪಕ್ಷವಾಗಿ ವಾದಗಳನ್ನು ಆಲಿಸಿದ್ದು

ಆಸ್ಟ್ರೇಲಿಯಾದ ಏಕೈಕ ಮಧ್ಯಸ್ಥಿಕೆದಾರರಾದ ಡಾ.ಅನ್ನಾಬೆಲ್ಲೆ ಬೆನೆಟ್ ಶನಿವಾರ ಮೂರು ಗಂಟೆಗಳ ಕಾಲ ವಾದಗಳನ್ನು ಆಲಿಸಿದ್ದಾರೆ. ಕ್ರೀಡಾ ನ್ಯಾಯಾಲಯದ ಸಿಎಎಸ್​​ನ ತಾತ್ಕಾಲಿಕ ವಿಭಾಗವು ಶನಿವಾರ ತೀರ್ಪನ್ನು ಪ್ರಕಟಿಸಲು ನಿರ್ಧರಿಸಿದ್ದರೂ, ಸಂಬಂಧಿತ ಪಕ್ಷಗಳಿಗೆ ಹೆಚ್ಚಿನ ಪುರಾವೆಗಳನ್ನು ಒದಗಿಸಲು ಹೆಚ್ಚುವರಿ 24 ಗಂಟೆಗಳನ್ನು ಮತ್ತು ತೀರ್ಪು ನೀಡಲು ಏಕೈಕ ಮಧ್ಯಸ್ಥಗಾರನಿಗೆ 72 ಗಂಟೆಗಳ ಸಮಯವನ್ನು ನೀಡಿತು. ವಿನೇಶ್ ಫೋಗಟ್ ಅವರ ಮೇಲ್ಮನವಿಯ ತೀರ್ಪು ಈಗ ಆಗಸ್ಟ್ 13 ರ ಮಂಗಳವಾರ ಹೊರಬೀಳುವ ನಿರೀಕ್ಷೆಯಿದೆ.

ವಿನೇಶ್ ಆರಂಭದಲ್ಲಿ ಚಿನ್ನದ ಪದಕದ ಹೋರಾಟದಲ್ಲಿ ಹೋರಾಡಲು ಅನುಮತಿ ನೀಡುವಂತೆ ವಿನಂತಿಸಿದರು. ಆದಾಗ್ಯೂ, ಒಲಿಂಪಿಕ್ ಸಂಸ್ಥೆ ಅವರನ್ನು ಅನರ್ಹಗೊಳಿಸಿತು ಮತ್ತು ಸೆಮಿಫೈನಲ್ನಲ್ಲಿ ವಿನೇಶ್ ವಿರುದ್ಧ ಸೋತ ಕ್ಯೂಬಾದ ಯುಸ್ನೆಲಿಸ್ ಗುಜ್ಮನ್ ಅವರಿಗೆ ಬುಧವಾರ ಚಿನ್ನದ ಪದಕದ ಹೋರಾಟದಲ್ಲಿ ಹೋರಾಡಲು ಅವಕಾಶ ನೀಡಿತು. ನಂತರ ವಿನೇಶ್ ಅವರಿಗೆ ಜಂಟಿ ಬೆಳ್ಳಿ ಪದಕವನ್ನು ನೀಡಬೇಕು ಎಂದು ಮನವಿ ಮಾಡಿದರು.

ಇದನ್ನೂ ಓದಿ : Paris Olympics 2024 : ಕಂಚಿನ ಪದಕ ಗೆದ್ದ ಭಾರತ ಪುರುಷರ ಹಾಕಿ ತಂಡಕ್ಕೆ ಎಫ್ಐಎಚ್ ರ್ಯಾಂಕಿಂಗ್​ನಲ್ಲಿ 2 ಸ್ಥಾನ ಏರಿಕೆ

ಹಿರಿಯ ವಕೀಲರಾದ ಹರೀಶ್ ಸಾಳ್ವೆ ಮತ್ತು ವಿದುಶ್ಪತ್ ಸಿಂಘಾನಿಯಾ ಸೇರಿದಂತೆ ವಿನೇಶ್ ಅವರ ವಕೀಲರು ವಿನೇಶ್​ ಪರ ವಾದ ಮಾಡಿದ್ದಾರೆ. ತೂಕ ಹೆಚ್ಚಳವು ದೇಹದ ನೈಸರ್ಗಿಕ ಚೇತರಿಕೆ ಪ್ರಕ್ರಿಯೆಯಿಂದಾಗಿ ಮತ್ತು ದೇಹ ನೋಡಿಕೊಳ್ಳುವುದು ಕ್ರೀಡಾಪಟುವಿನ ಮೂಲಭೂತ ಹಕ್ಕು ಎಂದು ವಾದಿಸಿದ್ದಾರೆ. ಸ್ಪರ್ಧೆಯ 1ನೇ ದಿನದಂದು ಆಕೆಯ ದೇಹದ ತೂಕವು ನಿಗದಿತ ಮಿತಿಗಿಂತ ಕಡಿಮೆಯಾಗಿತ್ತು. ಬಳಿಕ ಏಕಾಏಕಿ ಏರಿಕೆಯಾಗಿದೆ. ಅದು ವಂಚನೆಯಲ್ಲ ಎಂದು ಅವರು ವಾದಿಸಿದ್ದಾರೆ.

ತೂಕದ ನಿಯಮಗಳ ಬಗ್ಗೆ ಚರ್ಚೆ

ಯುಡಬ್ಲ್ಯೂಡಬ್ಲ್ಯೂ ವಿಶ್ವಕಪ್ ಸೇರಿದಂತೆ ಇತರ ಕೆಲವು ಪ್ರಮುಖ ಸ್ಪರ್ಧೆಗಳಲ್ಲಿ 2 ಕೆ.ಜಿ ತನಕ ತೂಕ ಏರಿಕೆಯನ್ನು ಸಹಿಸುತ್ತದೆ. ಆದರೆ ಒಲಿಂಪಿಕ್ ಕ್ರೀಡಾಕೂಟದಲ್ಲಿ ಕಠಿಣ ನೀತಿ ಹೊಂದಿದೆ. ವಿನೇಶ್​ಗೆ ಬೆಂಬಲ ವ್ಯಕ್ತಪಡಿಸಿದ ಅನೇಕರಲ್ಲಿ ಅಮೆರಿಕದ ಕುಸ್ತಿ ದಿಗ್ಗಜ ಜೋರ್ಡಾನ್ ಬರ್ರೋಸ್ ಕೂಡ ಒಬ್ಬರು. ತೂಕದ ಎರಡನೇ ದಿನಕ್ಕೆ 1 ಕೆಜಿ ತನಕ ಒಪ್ಪಿಕೊಳ್ಳಬಹುದು ಬರ್ರೋಸ್ ಸಲಹೆ ನೀಡಿದರು.

Continue Reading

ಕರ್ನಾಟಕ

DK Shivakumar: ಡಿಕೆಶಿ ವಿರುದ್ಧದ ಸಿಬಿಐ ತನಿಖೆ ಹಿಂಪಡೆದ ಪ್ರಕರಣ; ತೀರ್ಪು ಕಾಯ್ದಿರಿಸಿದ ಹೈಕೋರ್ಟ್‌

DK Shivakumar: ಸಿಬಿಐ ಎಫ್ಐಆರ್‌ನ ಲೋಕಾಯುಕ್ತಕ್ಕೆ ವರ್ಗಾವಣೆ ಮಾಡಲು ಸಾಧ್ಯವಿಲ್ಲ. ಹೀಗಾಗಿ ಈ ಪ್ರಕರಣದಲ್ಲಿ ಸಿಬಿಐ ತನಿಖೆ ಮುಂದುವರಿಸಲು ಅವಕಾಶ ನೀಡಬೇಕು, ರಾಜ್ಯ ಸರ್ಕಾರ ತೆಗೆದುಕೊಂಡಿರುವ ನಿರ್ಧಾರದ ಆದೇಶ ರದ್ದು‌ಮಾಡಬೇಕು ಎಂದು ಶಾಸಕ ಯತ್ನಾಳ್ ಪರ ವಕೀಲ ವೆಂಕಟೇಶ ದಳವಾಯಿ‌ ವಾದ ಮಂಡಿಸಿದ್ದಾರೆ. ಇದಕ್ಕೆ ಡಿಕೆಶಿ ಪರ ವಕೀಲ ಕಪಿಲ್‌ ಸಿಬಲ್‌ ಆಕ್ಷೇಪ ವ್ಯಕ್ತಪಡಿಸಿದ್ದು, ರಾಜಕೀಯ ದುರುದ್ದೇಶದಿಂದ ಪ್ರಕರಣದ ವಿಚಾರಣೆಯನ್ನು ಸಿಬಿಐಗೆ ನೀಡಲಾಗಿದೆ. ಇದನ್ನು ಸ್ಥಳೀಯ ಪೊಲೀಸರು ಮತ್ತು ಲೋಕಾಯುಕ್ತರು ಏಕೆ ತನಿಖೆ ನಡೆಸಬಾರದು ಎಂದು ಪ್ರಶ್ನಿಸಿದ್ದಾರೆ.

VISTARANEWS.COM


on

DK Shivakumar
Koo

ಬೆಂಗಳೂರು: ಡಿ.ಕೆ.ಶಿವಕುಮಾರ್ ವಿರುದ್ಧದ ಅಕ್ರಮ ಆಸ್ತಿ ಗಳಿಕೆ ಪ್ರಕರಣದ (DK Shivakumar) ಸಿಬಿಐ ತನಿಖೆಗೆ ಸರ್ಕಾರ ನೀಡಿದ್ದ ಅನುಮತಿ ಹಿಂಪಡೆದಿರುವುದನ್ನು ಪ್ರಶ್ನಿಸಿ ಸಿಬಿಐ ಮತ್ತು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ಹೈಕೋರ್ಟ್‌ನಲ್ಲಿ ಸೋಮವಾರ ನಡೆದಿದೆ. ನ್ಯಾ.ಕೆ ಸೋಮಶೇಖರ್‌ ಮತ್ತು ನ್ಯಾ. ಉಮೇಶ್‌ ಎಂ. ಅಡಿಗ ಅವರಿದ್ದ ವಿಭಾಗೀಯ ಪೀಠ ಪ್ರಕರಣದ ವಿಚಾರಣೆ ನಡೆಸಿ, ತೀರ್ಪು ಕಾಯ್ದಿರಿಸಿದೆ.

ಸಿಬಿಐ ಪರ ಎಸ್‌ಪಿಪಿ ಪ್ರಸನ್ನ ಕುಮಾರ್ ವಾದ ಮಂಡನೆ ಮಾಡಿ, ನಿರ್ದಿಷ್ಟ ಒಪ್ಪಿಗೆ ಮತ್ತು ಸಾಮಾನ್ಯ ಒಪ್ಪಿಗೆಯ ಬಗ್ಗೆ ಸಂವಿಧಾನದ 131ನೇ ವಿಧಿಗೆ ಸಂಬಂಧಿಸಿದ ಮಾಹಿತಿ ದಾಖಲೆ ಸಲ್ಲಿಸಲಾಗಿದೆ. ಡಿಕೆಶಿ ಎಫ್‌ಐಆರ್‌ ರದ್ದು ಕೋರಿ ಸುಪ್ರೀಂ ಕೋರ್ಟ್‌ಗೆ ಹೋಗಿದ್ದರು. ಈ ಪ್ರಕರಣಕ್ಕೆ ಸಂವಿಧಾನದ 131ನೇ ವಿಧಿ ಅನ್ವಯಿಸುವುದಿಲ್ಲ. ಸರ್ಕಾರ ಒಪ್ಪಿಗೆ ನೀಡಿದ ಬಳಿಕ ಸಿಬಿಐ ಎಫ್‌ಐಆರ್‌ ದಾಖಲಿಸಿದೆ. ಈಗ ಸರ್ಕಾರ ಒಪ್ಪಿಗೆ ಹಿಂಪಡೆದಿದೆ. ಇನ್ನು ಎಫ್‌ಐಆರ್‌ ಏನಾಗಲಿದೆ ಎಂಬ ಪ್ರಶ್ನೆ ಹೈಕೋರ್ಟ್‌ ಮುಂದಿದೆ. ಅಗತ್ಯವಾದ ಎಲ್ಲರೂ ನ್ಯಾಯಾಲಯದ ಮುಂದೆ ಇದ್ದಾರೆ. ಇಲ್ಲಿ ಔಪಚಾರಿಕ ಪಕ್ಷಕಾರರು ಸಹ ಇಲ್ಲ. ಹೀಗಾಗಿ ಸಂವಿಧಾನದ 131ನೇ ವಿಧಿ ಅನ್ವಯಿಸಲ್ಲ ಎಂದು ತಿಳಿಸಿದರು.

ಯತ್ನಾಳ್ ಪರ ವಕೀಲ ವೆಂಕಟೇಶ ದಳವಾಯಿ‌ ವಾದ ಮಂಡಿಸಿ, ಆರ್ಟಿಕಲ್ 131 ರಾಜ್ಯಕ್ಕೆ ಅನ್ವಯ ಆಗುತ್ತದೆ, ಒಬ್ಬ ವ್ಯಕ್ತಿಗೆ ಅಲ್ಲ. ಇಲ್ಲಿ ರಾಜ್ಯ ಸರ್ಕಾರ ಪ್ರಕರಣ ವಾಪಸ್‌ ಪಡೆದಿರುವುದು ಕಾನೂನು ಬಾಹಿರ. ಸರ್ಕಾರ ಇದನ್ನು ಲೋಕಾಯುಕ್ತಕ್ಕೆ ನೀಡಿದೆ. ಮತ್ತೊಂದೆಡೆ ಸಿಬಿಐ ಎಫ್ಐಆರ್ ಸಹ ಇನ್ನೂ ಹಾಗೇ ಇದೆ. ಒಮ್ಮೆ ಸಿಬಿಐ ಎಫ್ಐಆರ್ ರಿಜಿಸ್ಟರ್ ಮಾಡಿದರೆ ಕೇಂದ್ರ ಸರ್ಕಾರಕ್ಕೂ ವಾಪಸ್‌ ಪಡೆಯಲು‌ ಅಧಿಕಾರ ಇಲ್ಲ. ಕೇವಲ ನ್ಯಾಯಾಲಯಕ್ಕೆ ಮಾತ್ರ ಅಂತಹ ಅಧಿಕಾರ ಇರುತ್ತದೆ. ಒಮ್ಮೆ ಸಿಬಿಐ ತನಿಖೆ ಆರಂಭವಾದ ಮೇಲೆ ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರದ ಯಾವುದೇ ಪಾತ್ರ ಇರುವುದಿಲ್ಲ. ಸಿಬಿಐ ಎಫ್ಐಆರ್‌ನ ಲೋಕಾಯುಕ್ತಕ್ಕೆ ವರ್ಗಾವಣೆ ಮಾಡಲು ಸಾಧ್ಯವಿಲ್ಲ. ಭ್ರಷ್ಟಾಚಾರ ನಿಷೇಧ ಕಾಯ್ದೆಯಡಿಯ ಕ್ರೈಂ‌ ತನಿಖೆಯ ವೇಳೆ ಸಿಬಿಐ ಸ್ವತಂತ್ರವಾಗಿರುತ್ತದೆ ಎಂದು ತಿಳಿಸಿದರು.

ಈ ವೇಳೆ ಲೋಕಾಯುಕ್ತರು ದಾಖಲಿಸುವ ಎಫ್‌ಐಆರ್‌ ಏನಾಗಲಿದೆ ಎಂದು ಯತ್ನಾಳ್ ಪರ ವಕೀಲರಿಗೆ ಹೈಕೋರ್ಟ್ ಪ್ರಶ್ನೆ ಮಾಡಿತು. ಇದಕ್ಕೆ ವಕೀಲ‌ ದಳವಾಯಿ ಉತ್ತರಿಸಿ, ಲೋಕಾಯುಕ್ತ ಎಫ್‌ಐಆರ್‌ ಸ್ವತಂತ್ರವಾಗಿ ನಿಲ್ಲುವುದಿಲ್ಲ. ಸರ್ಕಾರ ಸಿಬಿಐಗೆ ನೀಡಿದ ಅನುಮತಿಯನ್ನು ಅಕ್ರಮವಾಗಿ ಹಿಂಪಡೆದಿದೆ. ಇದರಿಂದ ಸಿಬಿಐ ಎಫ್‌ಐಆರ್‌ ರದ್ದು ಮಾಡಲಾಗಿಲ್ಲ. ಹೀಗಾಗಿ ಈ ಪ್ರಕರಣದಲ್ಲಿ ಸಿಬಿಐ ತನಿಖೆ ಮುಂದುವರಿಸಲು ಅವಕಾಶ ನೀಡಬೇಕು, ರಾಜ್ಯ ಸರ್ಕಾರ ತೆಗೆದುಕೊಂಡಿರುವ ನಿರ್ಧಾರದ ಆದೇಶ ರದ್ದು‌ಮಾಡಬೇಕು ಎಂದು ಕೋರಿದರು.

ಡಿಕೆಶಿ ಪರ ಖ್ಯಾತ ವಕೀಲ ಕಪಿಲ್‌ ಸಿಬಲ್‌ ವಾದ ಮಂಡಿಸಿ, ನಾವು ರಾಜ್ಯ ಸರ್ಕಾರ ಕೇವಲ ಅನುಮತಿಗೆ ಮಾತ್ರ ಸೀಮಿತ. ನಮಗೂ ಎಫ್‌ಐಆರ್‌ ರದ್ದು ಕೋರಿದ್ದಕ್ಕೂ ಸಂಬಂಧವಿಲ್ಲ. ಇಲ್ಲಿ ವೈಯುಕ್ತಿಕ ಪ್ರಕರಣಕ್ಕೂ ರಾಜ್ಯ ಸರ್ಕಾರಕ್ಕೆ ಏನು ಸಂಬಂಧವಿಲ್ಲ. ಇಲ್ಲಿ ಸಿಬಿಐ ಹೇಗೆ ಅನುಮತಿ ಪಡೆದಿದೆ? ಅದನ್ನ ಎಲ್ಲಿಯೂ ಬಹಿರಂಗಪಡಿಸಿಲ್ಲ. ಇದನ್ನು ಕೋರ್ಟ್‌ಗೆ ತಿಳಿಸದೇ ವಂಚಿಸಲಾಗಿದೆ. ಈ ಹಿಂದೆ ಸಿಎಂ ಬಿ.ಎಸ್‌. ಯಡಿಯೂರಪ್ಪರ ಮೌಖಿಕ ಆದೇಶ ಆಧರಿಸಿ ಸಿಬಿಐ ಎಫ್‌ಐಆರ್‌ ದಾಖಲಿಸಿದೆ. ಇಡಿ ದಾಖಲೆಗಳನ್ನು ಸ್ಥಳೀಯ ಪೊಲೀಸರಿಗೆ ಕಳುಹಿಸಬೇಕಿತ್ತು. ಆದರೆ ಅವರು ಸಿಬಿಐಗೆ ಕಳುಹಿಸಿದ್ದಾರೆ. ಇದಕ್ಕೆ ಕಾನೂನಿನಲ್ಲಿ ಅವಕಾಶವಿರಲಿಲ್ಲ ಎಂದು ಹೇಳಿದರು.

ಇದನ್ನೂ ಓದಿ | Bangladesh Unrest: ಬಾಂಗ್ಲಾದಲ್ಲಿ 1971ರ ಪಾಕ್‌ ಸೇನೆ ಶರಣಾಗತಿ ಬಿಂಬಿಸುವ ಪ್ರತಿಮೆ ಧ್ವಂಸ; ಬೇಸರ ವ್ಯಕ್ತಪಡಿಸಿದ ಕಾಂಗ್ರೆಸ್‌ ಮುಖಂಡ

ಆದಾಯ ತೆರಿಗೆ ಇಲಾಖೆಯ ಎಫ್‌ಐಆರ್‌ನ ಕೋರ್ಟ್ ರದ್ದು ಮಾಡಿದೆ. ಆದ್ದರಿಂದ ಇದು ಸಿಬಿಐಗೆ ಅನುಮತಿ ವಿಚಾರವೇ ಅಲ್ಲ. ಆದರೂ ಕಾನೂನಾತ್ಮಕ ವಿಚಾರವಾಗಿದೆ. ಇದನ್ನು ಸ್ಥಳೀಯ ಪೊಲೀಸರು ಮತ್ತು ಲೋಕಾಯುಕ್ತರು ಏಕೆ ತನಿಖೆ ನಡೆಸಬಾರದು? ಸಿಬಿಐ ಏಕೆ ತನಿಖೆ ನಡೆಸಬೇಕು? ಇದರಲ್ಲಿ ಸಂಪೂರ್ಣ ರಾಜಕೀಯ ದುರುದ್ದೇಶ ಅಡಗಿದೆ ಎಂದು ವಾದಿಸಿದರು. ವಾದಿ-ಪ್ರತಿವಾದ ಆಲಿಸಿದ ವಿಭಾಗೀಯ ಪೀಠ, ವಿಚಾರಣೆ ಮುಕ್ತಾಯ ಮಾಡಿತೀರ್ಪು ಕಾಯ್ದಿರಿಸಿದೆ.

Continue Reading

Latest

Varamahalakshmi Festival 2024 : ವರಮಹಾಲಕ್ಷ್ಮಿ ಹಬ್ಬದ ದಿನ ಸುಲಭವಾಗಿ ಮಾಡಬಹುದಾದ ರುಚಿಕರ ಖಾದ್ಯಗಳಿವು; ವಿಡಿಯೊಗಳಿವೆ

Varamahalakshmi Festival 2024: ವರಮಹಾಲಕ್ಷ್ಮಿ ಹಬ್ಬದಂದು ಲಕ್ಷ್ಮಿಯನ್ನು ಭಕ್ತಿಯಿಂದ ಪೂಜಿಸಿದರೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಇದೆ. ಈ ವರ್ಷ ವರಮಹಾಲಕ್ಷ್ಮಿ ಹಬ್ಬ ಆಗಸ್ಟ್ 16ರ ಶುಕ್ರವಾರ ಬಂದಿದೆ. ದಕ್ಷಿಣ ಭಾರತದ ವಿವಾಹಿತ ಮಹಿಳೆಯರು ಸಮೃದ್ಧಿಗಾಗಿ ಮತ್ತು ತಮ್ಮ ಕುಟುಂಬಗಳ ಯೋಗಕ್ಷೇಮಕ್ಕಾಗಿ ಈ ಪೂಜೆಯನ್ನು ವಿಶೇಷವಾಗಿ ಮಾಡುತ್ತಾರೆ. ಈ ದಿನ ವಿಶೇಷ ಭಕ್ಷ್ಯಗಳನ್ನು ತಯಾರಿಸಿ ದೇವಿಗೆ ನೈವೇದ್ಯ ಇಡುತ್ತಾರೆ. ಈ ಹಬ್ಬದಂದು ತಯಾರಿಸಬಹುದಾದ ಸುಲಭ ಹಾಗೂ ವಿಶೇಷ ಪಾಕವಿಧಾನಗಳ ವಿವರ ಇಲ್ಲಿದೆ.

VISTARANEWS.COM


on

Varamahalakshmi Festival 2024
Koo


ವರಮಹಾಲಕ್ಷ್ಮಿ ಹಬ್ಬ ಶ್ರಾವಣ ಮಾಸದ 2ನೇ ಶುಕ್ರವಾದಂದು ಆಚರಿಸಲು ಸಿದ್ಧತೆಗಳು ನಡೆಯುತ್ತಿವೆ. ಇದು ಮಹಿಳೆಯರಿಗೆ ಅತ್ಯಂತ ಪ್ರಿಯವಾದ ಹಬ್ಬವಾಗಿದೆ. ವರಮಹಾಲಕ್ಷ್ಮಿ ಎಂದರೆ ನೀವು ಈ ದಿನ ಲಕ್ಷ್ಮಿಯನ್ನು ಭಕ್ತಿಯಿಂದ ಪೂಜಿಸಿದರೆ ಆಕೆ ನಿಮಗೆ ವರಗಳನ್ನು ಕರುಣಿಸುತ್ತಾಳೆ ಎಂಬ ನಂಬಿಕೆ ಇದೆ. ಈ ವರ್ಷ ಈ ವರಮಹಾಲಕ್ಷ್ಮಿ ಹಬ್ಬ (Varamahalakshmi Festival 2024 )ಆಗಸ್ಟ್ 16ರ ಶುಕ್ರವಾರದಂದು ಬಂದಿದೆ. ದಕ್ಷಿಣ ಭಾರತದ ಹೆಚ್ಚಿನ ವಿವಾಹಿತ ಮಹಿಳೆಯರು ಸಮೃದ್ಧಿಗಾಗಿ ಮತ್ತು ತಮ್ಮ ಕುಟುಂಬಗಳ ಯೋಗಕ್ಷೇಮಕ್ಕಾಗಿ ಈ ಪೂಜೆಯನ್ನು ಶ್ರದ್ಧೆ ಭಕ್ತೆಯಿಂದ ಮಾಡುತ್ತಾರೆ. ಈ ದಿನ ವಿಶೇಷ ಭಕ್ಷ್ಯಗಳನ್ನು ತಯಾರಿಸಿ ದೇವಿಗೆ ನೈವೇದ್ಯ ಇಡುತ್ತಾರೆ. ಹಾಗಾಗಿ ಆ ದಿನ ತಯಾರಿಸಬಹುದಾದ ಸುಲಭ ಹಾಗೂ ವಿಶೇಷ ಪಾಕವಿಧಾನಗಳ ವಿವರ ಇಲ್ಲಿದೆ.

Varamahalakshmi Festival 2024
Varamahalakshmi Festival 2024

ಒಬ್ಬಟ್ಟು

ಒಬ್ಬಟ್ಟು ಒಂದು ಪ್ರಸಿದ್ಧ ಸಿಹಿತಿಂಡಿ. ಒಬ್ಬಟ್ಟು ಬೆಲ್ಲದಿಂದ ತಯಾರಿಸುವ ಸಿಹಿತಿಂಡಿಯಾಗಿದೆ. ಇದು ಲಕ್ಷ್ಮಿ ದೇವಿಗೆ ಪ್ರಿಯವಾದ ನೈವೇದ್ಯವಾಗಿದೆ ಮತ್ತು ಈ ಹಬ್ಬವನ್ನು ಆಚರಿಸುವ ಎಲ್ಲಾ ಮನೆಗಳಲ್ಲಿ ಇದನ್ನು ಸಾಮಾನ್ಯವಾಗಿ ತಯಾರಿಸುತ್ತಾರೆ.

Varamahalakshmi Festival 2024
Varamahalakshmi Festival 2024

ರವಾ ಉಂಡೆ

ವರ ಮಹಾಲಕ್ಷ್ಮಿ ಹಬ್ಬಕ್ಕೆ ತಯಾರಿಸಲಾಗುವ ಅತ್ಯಂತ ರುಚಿಕರವಾದ ಪಾಕವಿಧಾನವೆಂದರೆ ಅದು ರವಾ ಉಂಡೆ. ಇದನ್ನು ತಯಾರಿಸುವುದು ಬಹಳ ಸುಲಭ ಮತ್ತು ಇದನ್ನು ಹೆಚ್ಚಿನವರು ದೇವಿಯ ನೈವೇದ್ಯಕ್ಕೆ ಇಡುತ್ತಾರೆ.

Varamahalakshmi Festival 2024
Varamahalakshmi Festival 2024

ಶಾವಿಗೆ ಪಾಯಸ

ಪಾಯಸವು ದಕ್ಷಿಣ ಭಾರತದ ಸಾಂಪ್ರದಾಯಿಕ ಸಿಹಿ ತಿಂಡಿಯಾಗಿದೆ. ಇದನ್ನು ಹಾಲಿನಿಂದ ತಯಾರಿಸಲಾಗುತ್ತದೆ. ವರಮಹಾಲಕ್ಷ್ಮಿಗೆ ಪಾಯಸ ಬಹಳ ಇಷ್ಟವಾದ ಸಿಹಿಯಾಗಿದೆ. ಶಾವಿಗೆ ಪಾಯಸವನ್ನು ಬಹಳ ಸುಲಭವಾಗಿ ಕೇವಲ 20 ನಿಮಿಷಗಳಲ್ಲಿ ತಯಾರಿಸಬಹುದು.

Varamahalakshmi Festival 2024
Varamahalakshmi Festival 2024

ತಂಬಿಟ್ಟು

ನೈವೇದ್ಯಕ್ಕಾಗಿ ಲಕ್ಷ್ಮಿ ದೇವಿಗೆ ಬಡಿಸಲಾಗುವ ಮತ್ತೊಂದು ಸಿಹಿತಿಂಡಿ ತಂಬಿಟ್ಟು. ಇದನ್ನು ಸಾಮಾನ್ಯವಾಗಿ ಅಕ್ಕಿ ಹಿಟ್ಟು ಮತ್ತು ತುಪ್ಪವನ್ನು ಬಳಸಿ ತಯಾರಿಸಲಾಗುತ್ತದೆ. ಎಲ್ಲಾ ದೇವರ ಪೂಜೆಯಲ್ಲಿ ಇದನ್ನು ಬಳಸುತ್ತಾರೆ.

Varamahalakshmi Festival 2024
Varamahalakshmi Festival 2024

ಲೆಮನ್ ರೈಸ್

ನಿಂಬೆ, ತೆಂಗಿನಕಾಯಿ, ಕಡಲೆಕಾಯಿ ಮತ್ತು ಅಕ್ಕಿಯನ್ನು ಬಳಸಿಕೊಂಡು ಲೆಮನ್ ರೈಸ್ ಅನ್ನು ತಯಾರಿಸಲಾಗುತ್ತದೆ. ಇದನ್ನು ತಯಾರಿಸುವುದು ತುಂಬಾ ಸುಲಭ ಮತ್ತು ವರಮಹಾಲಕ್ಷ್ಮಿಹಬ್ಬವನ್ನು ಆಚರಿಸುವವವರು ಇದನ್ನು ಯಾವಾಗಲೂ ತಯಾರಿಸುತ್ತಾರೆ.

Varamahalakshmi Festival 2024
Varamahalakshmi Festival 2024

ಕೋಸಂಬರಿ

ವರಮಹಾಲಕ್ಷ್ಮಿ ಹಬ್ಬದ ಪ್ರಮುಖ ಪಾಕವಿಧಾನವೆಂದರೆ ಕೋಸಂಬರಿ. ಇದನ್ನು ಹೆಸರು ಬೇಳೆ ಮತ್ತು ಸೌತೆಕಾಯಿ ಬಳಸಿ ತಯಾರಿಸಲಾಗುತ್ತದೆ. ಇದು ಸೈಡ್ ಡಿಶ್ ಆಗಿದ್ದರೂ, ಕೋಸಂಬರಿ ಇಲ್ಲದೆ ಹಬ್ಬದ ಊಟವು ಪೂರ್ಣಗೊಳ್ಳುವುದಿಲ್ಲ.

Varamahalakshmi Festival 2024
Varamahalakshmi Festival 2024

ಅಂಬೋಡೆ

ಹಬ್ಬದಲ್ಲಿ ಮಸಾಲೆಯುಕ್ತ ರುಚಿಯನ್ನು ಸೇರಿಸಲು ಅಂಬೋಡೆಯನ್ನು ತಯಾರಿಸಬಹುದು. ಇದನ್ನು ಬೇಳೆಕಾಳುಗಳು, ಹಸಿರು ಮೆಣಸಿನಕಾಯಿ, ಪುದಿನಾ ಬಳಸಿ ತಯಾರಿಸಲಾಗುತ್ತದೆ. ಇದು ನಿಮಗೆ ರುಚಿಕರವಾದ ಮಸಾಲೆ ರುಚಿಯನ್ನು ನೀಡುತ್ತದೆ.

Varamahalakshmi Festival 2024
Varamahalakshmi Festival 2024

ತರಕಾರಿ ಸಾಂಬಾರ್

ಇದು ದಕ್ಷಿಣ ಭಾರತದಲ್ಲಿ ಬೇಳೆ ಬಳಸಿ ತಯಾರಿಸುವ ಪ್ರಸಿದ್ಧವಾದ ಖಾದ್ಯವಾಗಿದೆ. ನೀವು ಈ ಹಬ್ಬಕ್ಕೆ ಭೋಜನಕ್ಕೆ ವಿವಿಧ ತರಕಾರಿಗಳು ಮತ್ತು ಮಸಾಲೆಗಳೊಂದಿಗೆ ಸಾಂಬಾರ್ ತಯಾರಿಸಬಹುದು. ಇದನ್ನು ಬಿಸಿ ಅನ್ನ ಮತ್ತು ತುಪ್ಪದೊಂದಿಗೆ ಬಡಿಸಿದರೆ ಊಟದ ರುಚಿ ಹೆಚ್ಚಾಗುತ್ತದೆ.

Varamahalakshmi Festival 2024
Varamahalakshmi Festival 2024

ರಸಂ

ವರಮಹಾಲಕ್ಷ್ಮಿ ಹಬ್ಬದ ಊಟಕ್ಕೆ ರಸಂ ಅನ್ನು ತಯಾರಿಸುತ್ತಾರೆ. ರಸಂ ಅನ್ನು ಟೊಮೆಟೊ, ಹುಣಸೆ ಮತ್ತು ತೆಂಗಿನಕಾಯಿಯಿಂದ ತಯಾರಿಸಲಾಗುತ್ತದೆ. ಈ ರಸಂ ಅನ್ನು ಬಿಸಿ ಅನ್ನ ಮತ್ತು ಪಲ್ಯದ ಜೊತೆಗೆ ತಿಂದರೆ ಹಬ್ಬದ ಸಡಗರ ಹೆಚ್ಚಾಗುತ್ತದೆ.

Varamahalakshmi Festival 2024
Varamahalakshmi Festival 2024

ಮಜ್ಜಿಗೆ ಹುಳಿ

ವರಮಹಾಲಕ್ಷ್ಮಿ ಹಬ್ಬದಂದು ವಿಶೇಷ ಮಜ್ಜಿಗೆ ಹುಳಿ (ಮೊಸರು ಸಾಂಬಾರ್) ತಯಾರಿಸಲಾಗುತ್ತದೆ. ಈ ಸಾಂಬಾರ್ ಉತ್ತಮ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಮತ್ತು ಉತ್ತಮ ರುಚಿಯನ್ನು ನೀಡುತ್ತದೆ. ಇದನ್ನು ಹಸಿ ಮೆಣಸಿನಕಾಯಿ, ತೆಂಗಿನಕಾಯಿ, ಕೊತ್ತಂಬರಿ ಸೊಪ್ಪು ಮತ್ತು ಕಡಲೆ ಬಳಸಿ ತಯಾರಿಸಲಾಗುತ್ತದೆ.

ಇದನ್ನೂ ಓದಿ:Shravan 2024: ಶ್ರಾವಣ ಶುಕ್ರವಾರದ ವಿಶೇಷವೇನು? ಅಂದು ಏನು ಮಾಡಬೇಕು? ಏನು ಮಾಡಬಾರದು?

ಈ ರೀತಿಯ ಪಾಕವಿಧಾನಗಳನ್ನು ವರಮಹಾಲಕ್ಷ್ಮಿ ಹಬ್ಬಕ್ಕೆ ತಯಾರಿಸಿ ಅತಿಥಿಗಳಿಗೆ ಬಡಿಸಿದರೆ ಹಬ್ಬದ ಸಂಭ್ರಮ ಹೆಚ್ಚುವುದರಲ್ಲಿ ಸಂದೇಹವೇ ಇಲ್ಲ.

Continue Reading

ಪ್ರಮುಖ ಸುದ್ದಿ

Paris Olympics 2024 : ಕಂಚಿನ ಪದಕ ಗೆದ್ದ ಭಾರತ ಪುರುಷರ ಹಾಕಿ ತಂಡಕ್ಕೆ ಎಫ್ಐಎಚ್ ರ್ಯಾಂಕಿಂಗ್​ನಲ್ಲಿ 2 ಸ್ಥಾನ ಏರಿಕೆ

Paris Olympics 2024 : ಎಫ್ಐಎಚ್ ಪ್ರೊ ಲೀಗ್ ಮುಕ್ತಾಯದ ವೇಳೆ ಭಾರತವು ಉತ್ತಮ ಅಭಿಯಾನ ಹೊಂದಿಲ್ಲದ ಕಾರಣ 7ನೇ ಸ್ಥಾನದಲ್ಲಿತ್ತು. ಆದಾಗ್ಯೂ, ಪ್ಯಾರಿಸ್ ಒಲಿಂಪಿಕ್ಸ್​​ನಲ್ಲಿ ಭಾರತವು ಉತ್ತಮ ಫಾರ್ಮ್ ಅನ್ನು ಪ್ರದರ್ಶಿಸಿತು. ಅಲ್ಲಿ ಅವರು ಕೇವಲ 2 ಪಂದ್ಯಗಳನ್ನು ಸೋತು 5 ಪಂದ್ಯಗಳನ್ನು ಗೆದ್ದರು. ಇದು ಆಸ್ಟ್ರೇಲಿಯಾಕ್ಕಿಂತ 2848.67 ಅಂಕಗಳೊಂದಿಗೆ 5 ನೇ ಸ್ಥಾನಕ್ಕೆ ಏರಲು ಸಹಾಯ ಮಾಡುತ್ತದೆ. ಪ್ಯಾರಿಸ್​​ನಲ್ಲಿ ಚಿನ್ನದ ಪದಕ ಗೆದ್ದ ನೆದರ್ಲ್ಯಾಂಡ್ಸ್ 3168.01 ಅಂಕಗಳೊಂದಿಗೆ ಶ್ರೇಯಾಂಕದಲ್ಲಿ ಅಗ್ರಸ್ಥಾನದಲ್ಲಿ ಮುಂದುವರಿದಿದೆ.

VISTARANEWS.COM


on

paris Olympics 2024
Koo

ಬೆಂಗಳೂರು : ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಭಾರತ ಹಾಕಿ ತಂಡ ಕಂಚಿನ ಪದಕ ಗೆದ್ದ ಬಳಿಕ ಎಫ್ಐಎಚ್ ರ್ಯಾಂಕಿಂಗ್​​ನಲ್ಲಿ 2 ಸ್ಥಾನ ಮೇಲೇರಿದೆ. 7ನೇ ಸ್ಥಾನದೊಂದಿಗೆ ಒಲಿಂಪಿಕ್ ಅಭಿಯಾನ ಪ್ರಾರಂಭಿಸಿದ್ದ ಭಾರತ, ಪ್ಯಾರಿಸ್ ಒಲಿಂಪಿಕ್ಸ್ 2024 ರಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಶ್ರೇಯಾಂಕದಲ್ಲಿ ಪ್ರಗತಿ ಸಾಧಿಸಿದ್ದು ನಂತರ ಐದನೇ ಸ್ಥಾನಕ್ಕೆ ಏರಿದೆ ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಭಾರತವು ಸ್ಪೇನ್ ಅನ್ನು ಸೋಲಿಸಿ ಸತತ ಎರಡನೇ ಬಾರಿಗೆ ಒಲಿಂಪಿಕ್ಸ್​​ನ ಪೋಡಿಯಂ ಸ್ಥಾನಗಳನ್ನು ಗಳಿಸಿತ್ತು.

ಎಫ್ಐಎಚ್ ಪ್ರೊ ಲೀಗ್ ಮುಕ್ತಾಯದ ವೇಳೆ ಭಾರತವು ಉತ್ತಮ ಅಭಿಯಾನ ಹೊಂದಿಲ್ಲದ ಕಾರಣ 7ನೇ ಸ್ಥಾನದಲ್ಲಿತ್ತು. ಆದಾಗ್ಯೂ, ಪ್ಯಾರಿಸ್ ಒಲಿಂಪಿಕ್ಸ್​​ನಲ್ಲಿ ಭಾರತವು ಉತ್ತಮ ಫಾರ್ಮ್ ಅನ್ನು ಪ್ರದರ್ಶಿಸಿತು. ಅಲ್ಲಿ ಅವರು ಕೇವಲ 2 ಪಂದ್ಯಗಳನ್ನು ಸೋತು 5 ಪಂದ್ಯಗಳನ್ನು ಗೆದ್ದರು. ಇದು ಆಸ್ಟ್ರೇಲಿಯಾಕ್ಕಿಂತ 2848.67 ಅಂಕಗಳೊಂದಿಗೆ 5 ನೇ ಸ್ಥಾನಕ್ಕೆ ಏರಲು ಸಹಾಯ ಮಾಡುತ್ತದೆ. ಪ್ಯಾರಿಸ್​​ನಲ್ಲಿ ಚಿನ್ನದ ಪದಕ ಗೆದ್ದ ನೆದರ್ಲ್ಯಾಂಡ್ಸ್ 3168.01 ಅಂಕಗಳೊಂದಿಗೆ ಶ್ರೇಯಾಂಕದಲ್ಲಿ ಅಗ್ರಸ್ಥಾನದಲ್ಲಿ ಮುಂದುವರಿದಿದೆ.

ಬೆಳ್ಳಿ ಪದಕ ಗೆದ್ದ ಜರ್ಮನಿ 3035.28 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಇಂಗ್ಲೆಂಡ್ 2973.31 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದರೆ ಟೋಕಿಯೊ ಚಿನ್ನದ ಪದಕ ವಿಜೇತ ಬೆಲ್ಜಿಯಂ ನಾಲ್ಕನೇ ಸ್ಥಾನದಲ್ಲಿದೆ.

ಪ್ಯಾರಿಸ್​​ನಲ್ಲಿ ಆಡುವ ಅವಕಾಶ ಕಳೆದುಕೊಂಡ ನಂತರ ಭಾರತೀಯ ಮಹಿಳಾ ಹಾಕಿ ತಂಡ ಪ್ರಸ್ತುತ ಎಫ್ಐಎಚ್ ಶ್ರೇಯಾಂಕದಲ್ಲಿ 9ನೇ ಸ್ಥಾನದಲ್ಲಿದೆ. ಪ್ಯಾರಿಸ್​​ನಲ್ಲಿ ನಡೆದ ಮಹಿಳಾ ಹಾಕಿಯಲ್ಲಿ ಚಿನ್ನ ಗೆದ್ದ ನಂತರ ನೆದರ್ಲ್ಯಾಂಡ್ಸ್ ಮಹಿಳಾ ಶ್ರೇಯಾಂಕದಲ್ಲಿ ಅಗ್ರ ತಂಡವಾಗಿದೆ.

ಪ್ಯಾರಿಸ್ ಒಲಿಂಪಿಕ್ಸ್ 2024 ರಲ್ಲಿ ಭಾರತದ ಪ್ರದರ್ಶನ ಹೇಗಿತ್ತು?

ಟೋಕಿಯೊದ ಅಭಿಯಾನವು ಉತ್ತಮವಾಗಿ ಪ್ರಾರಂಭವಾಯಿತು. ಭಾರತವು ನ್ಯೂಜಿಲೆಂಡ್ ಅನ್ನು 3-2 ಗೋಲುಗಳಿಂದ ಸೋಲಿಸಿತು. ಅರ್ಜೆಂಟೀನಾ ವಿರುದ್ಧ ಡ್ರಾ ಸಾಧಿಸಿದ ನಂತರ ಐರ್ಲೆಂಡ್ ವಿರುದ್ಧ 2-0 ಗೋಲಿನಿಂದ ಜಯ ಸಾಧಿಸಿತು. ಆದಾಗ್ಯೂ, ತಂಡವು ಇನ್ನೂ ಹೆಚ್ಚಿನದನ್ನು ನೀಡುತ್ತದೆ ಎಂಬ ಭಾವನೆ ಇತ್ತು, ಮತ್ತು ಬೆಲ್ಜಿಯಂ ವಿರುದ್ಧದ ಅವರ ಮುಖಾಮುಖಿಯ ಬಗ್ಗೆ ನಿರೀಕ್ಷೆ ಬೆಳೆಯಿತು.

ಇದನ್ನೂ ಓದಿ: Paris Olympics 2024 : ಪ್ಯಾರಿಸ್​ ಒಲಿಂಪಿಕ್ಸ್​ಗೆ ತೆರೆ; ಅದ್ಧೂರಿ ಸಮಾರೋಪದಲ್ಲಿ ಮನು ಭಾಕರ್​, ಶ್ರೀಜೇಶ್​ ಭಾಗಿ

ಬೆಲ್ಜಿಯಂ ವಿರುದ್ಧ ಉತ್ತಮ ಆರಂಭ ಪಡೆದ ಭಾರತ ಮೊದಲಾರ್ಧದಲ್ಲಿ ಉತ್ತಮ ಪ್ರದರ್ಶನ ನೀಡಿತು. ಆದರೆ ದ್ವಿತೀಯಾರ್ಧದಲ್ಲಿ ಅವರು ಎಡವಿದರು, ಇದು 2-1 ರ ಸೋಲಿಗೆ ಕಾರಣವಾಯಿತು. ಐತಿಹಾಸಿಕವಾಗಿ ಭಾರತಕ್ಕೆ ಅಸಾಧಾರಣ ಒಲಿಂಪಿಕ್ ಎದುರಾಳಿಯಾಗಿರುವ ಆಸ್ಟ್ರೇಲಿಯಾದ ವಿರುದ್ಧವೂ ಗೆಲುವು ಸಾಧಿಸಿತು.

ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಭಾರತ 3-2 ಅಂತರದ ಗೆಲುವು ದಾಖಲಿಸಿದೆ. ಈ ಗೆಲುವು ಅವರನ್ನು ಗ್ರೇಟ್ ಬ್ರಿಟನ್ ವಿರುದ್ಧ ಕ್ವಾರ್ಟರ್ ಫೈನಲ್ ಮುಖಾಮುಖಿಗೆ ಕೊಂಡೊಯ್ದಿತು. ಪಂದ್ಯದಲ್ಲಿ ಭಾರತ ಪೆನಾಲ್ಟಿ ಶೂಟೌಟ್​​ನಲ್ಲಿ ಜಯ ಸಾಧಿಸಿ ಸೆಮಿಫೈನಲ್​ಗೆ ಸ್ಥಾನ ಪಡೆಯಿತು.

ಮುಂದಿನ ಪಂದ್ಯದಲ್ಲಿ ವಿಶ್ವ ಚಾಂಪಿಯನ್ ಜರ್ಮನಿಯನ್ನು ಎದುರಿಸಿದ ಭಾರತವು ಸೋಲು ಕಂಡಿತು. ಕಂಚಿನ ಪದಕದ ಪಂದ್ಯದಲ್ಲಿ ಅವರು ಸ್ಪೇನ್ ಅನ್ನು ಸೋಲಿಸಿ ಪೋಡಿಯಂ ಸ್ಥಾನವನ್ನು ಭದ್ರಪಡಿಸಿಕೊಂಡರು.

Continue Reading
Advertisement
Annayya Serial rishab shetty support
ಕಿರುತೆರೆ19 seconds ago

Annayya Serial: ‘ಅಣ್ಣಯ್ಯ’ ಧಾರಾವಾಹಿಗೆ ರಿಷಬ್ ಶೆಟ್ಟಿ ಸಾಥ್‌; ಕಾರಣವೇನು?

Vinesh Phogat
ಪ್ರಮುಖ ಸುದ್ದಿ3 mins ago

Vinesh Phogat : ವಿನೇಶ್​ ಫೋಗಟ್ ಎಫೆಕ್ಟ್​​; ತೂಕದ ನಿಯಮಗಳ ಬದಲಾವಣೆಗೆ ವಿಶ್ವ ಕುಸ್ತಿ ಒಕ್ಕೂಟ ನಿರ್ಧಾರ?

DK Shivakumar
ಕರ್ನಾಟಕ10 mins ago

DK Shivakumar: ಡಿಕೆಶಿ ವಿರುದ್ಧದ ಸಿಬಿಐ ತನಿಖೆ ಹಿಂಪಡೆದ ಪ್ರಕರಣ; ತೀರ್ಪು ಕಾಯ್ದಿರಿಸಿದ ಹೈಕೋರ್ಟ್‌

Varamahalakshmi Festival 2024
Latest19 mins ago

Varamahalakshmi Festival 2024 : ವರಮಹಾಲಕ್ಷ್ಮಿ ಹಬ್ಬದ ದಿನ ಸುಲಭವಾಗಿ ಮಾಡಬಹುದಾದ ರುಚಿಕರ ಖಾದ್ಯಗಳಿವು; ವಿಡಿಯೊಗಳಿವೆ

Meghana Gaonkar workout get slim
ಸ್ಯಾಂಡಲ್ ವುಡ್22 mins ago

Meghana Gaonkar:  ಸಣ್ಣಗಾದ ಮೇಘನಾ ಗಾಂವ್ಕರ್; ನಟಿಯ ವರ್ಕೌಟ್ ಫೋಟೊ ವೈರಲ್‌!

Road Accident
ಬೆಂಗಳೂರು31 mins ago

Road Accident : ಟಿಪ್ಪರ್ ಲಾರಿಗೆ ಸಿಲುಕಿ ಸವಾರ ದುರ್ಮರಣ; ಬಸ್ ಪಲ್ಟಿಯಾಗಿ 13 ಪ್ರಯಾಣಿಕರು ಗಂಭೀರ

Kolkata Doctor Murder Case
ದೇಶ43 mins ago

Kolkata Doctor Murder Case: ʼಬೇಕಿದ್ದರೆ ಗಲ್ಲಿಗೇರಿಸಿʼ.. ವಿಚಾರಣೆ ವೇಳೆ ವೈದ್ಯೆಯ ಹಂತಕನ ಉಡಾಫೆ ಉತ್ತರ

Bangladesh Unrest
ವಿದೇಶ44 mins ago

Bangladesh Unrest: ಬಾಂಗ್ಲಾದಲ್ಲಿ 1971ರ ಪಾಕ್‌ ಸೇನೆ ಶರಣಾಗತಿ ಬಿಂಬಿಸುವ ಪ್ರತಿಮೆ ಧ್ವಂಸ; ಬೇಸರ ವ್ಯಕ್ತಪಡಿಸಿದ ಕಾಂಗ್ರೆಸ್‌ ಮುಖಂಡ

paris Olympics 2024
ಪ್ರಮುಖ ಸುದ್ದಿ49 mins ago

Paris Olympics 2024 : ಕಂಚಿನ ಪದಕ ಗೆದ್ದ ಭಾರತ ಪುರುಷರ ಹಾಕಿ ತಂಡಕ್ಕೆ ಎಫ್ಐಎಚ್ ರ್ಯಾಂಕಿಂಗ್​ನಲ್ಲಿ 2 ಸ್ಥಾನ ಏರಿಕೆ

techie missing in Bengaluru
ಬೆಂಗಳೂರು1 hour ago

Techie Missing: ಬೆಂಗಳೂರಿನಲ್ಲಿ ಮತ್ತೊಬ್ಬ ಟೆಕ್ಕಿ ಮಿಸ್ಸಿಂಗ್‌! ಪತಿಯನ್ನು ಹುಡುಕಿಕೊಡಿ ಎಂದು ಅಂಗಲಾಚಿದ ಪತ್ನಿ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ9 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka Weather Forecast
ಮಳೆ4 days ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ4 days ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ4 days ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು6 days ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ6 days ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ1 week ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ1 week ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ2 weeks ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ2 weeks ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ2 weeks ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

ಟ್ರೆಂಡಿಂಗ್‌