ನವ ದೆಹಲಿ: ಮುಂಬರುವ 2023-24 ಸಾಲಿನ ಕೇಂದ್ರ ಬಜೆಟ್‌ನಲ್ಲಿ 300-400 ಹೊಸ ವಂದೇ ಭಾರತ್ ರೈಲುಗಳನ್ನು ಘೋಷಿಸುವ (Union Budget 2023) ಸಾಧ್ಯತೆ ಇದೆ.
ರೈಲ್ವೆ ಸಚಿವಾಲಯದ ಉನ್ನತಮಟ್ಟದ ಅಧಿಕಾರಿಗಳ ಪ್ರಕಾರ, ಮುಂದಿನ ಬಜೆಟ್‌ನಲ್ಲಿ ರೈಲ್ವೆ ಇಲಾಖೆಗೆ ಅತಿ ಹೆಚ್ಚು ಅನುದಾನ ಮಂಜೂರಾಗುವ ಸಾಧ್ಯತೆ ಇದೆ. ವಂದೇ ಭಾರತ್ ಹೊರತುಪಡಿಸಿ, ಹೊಸ ರೈಲ್ವೆ ಮಾರ್ಗಗಳನ್ನು ಕೂಡ ಘೋಷಿಸುವ ಸಾಧ್ಯತೆ ಇದೆ.
೨೦೨೨-೨೩ರ ಬಜೆಟ್‌ನಲ್ಲಿ ರೈಲ್ವೆಗೆ 1.37 ಲಕ್ಷ ಕೋಟಿ ರೂ. ಅನುದಾನ ಮಂಜೂರಾಗಿತ್ತು. ಮುಂದಿನ ಬಜೆಟ್‌ನಲ್ಲಿ ಮತ್ತಷ್ಟು ಹೆಚ್ಚಿನ ಮೊತ್ತ ನಿಗದಿಯಾಗುವ ನಿರೀಕ್ಷೆ ಇದೆ. 2023ರ ಫೆಬ್ರವರಿ 1ರಂದು ಕೇಂದ್ರ ಬಜೆಟ್ ಮಂಡನೆಯಾಗಲಿದೆ.