ಲಂಡನ್: ಲಂಡನ್‌ನಲ್ಲಿರುವ ಪ್ರತಿಷ್ಠಿಯ ಸೈನ್ಸ್ ಮ್ಯೂಸಿಯಂ ( London’s Science Museum) ಅದಾನಿ ಸಮೂಹದ ಜತೆಗಿನ ಸಂಬಂಧವನ್ನು ಮುಂದುವರಿಸಲು ನಿರ್ಧರಿಸಿದೆ. ಅದಾನಿ ಸಮೂಹದ ಅದಾನಿ ಗ್ರೀನ್ ಎನರ್ಜಿ ಸಂಸ್ಥೆಯು ಮ್ಯೂಸಿಯಂನ ಪ್ರಾಯೋಜಕತ್ವ ವಹಿಸಿಕೊಂಡಿದೆ. 2021ರಲ್ಲಿ ಪ್ರಾಯೋಜಕತ್ವವನ್ನು ಘೋಷಿಸಲಾಗಿತ್ತು. ಹಿಂಡೆನ್ ಬರ್ಗ್‌ನ ಋಣಾತ್ಮಕ ವರದಿಯ ಬಳಿಕ ಅದಾನಿ ಸಮೂಹದ ಷೇರು ದರಗಳಲ್ಲಿ ಭಾರಿ ಕುಸಿತ ಉಂಟಾಗಿತ್ತು. ಇದಾದ ಬಳಿಕ ಕೆಲ ಸಕಾರಾತ್ಮಕ ಸುದ್ದಿಗಳು ಬರುತ್ತಿವೆ. (Adani Group) ಫಿಚ್ ರೇಟಿಂಗ್ಸ್, ಅದಾನಿ ಸಮೂಹದ ರೇಟಿಂಗ್ ಮೇಲೆ ಸದ್ಯಕ್ಕೆ ಯಾವುದೇ ವ್ಯತ್ಯಾಸ ಇರುವುದಿಲ್ಲ ಎಂದು ತಿಳಿಸಿದೆ.
ಫಿಚ್ ರೇಟಿಂಗ್‌ನ ಈ ಕುರಿತ ಹೇಳಿಕೆಯ ಬಳಿಕ ಲಂಡನ್‌ನ ಸೈನ್ಸ್ ಮ್ಯೂಸಿಯಂ ಕೂಡ ಅದಾನಿ ಗ್ರೂಪ್ ಜತೆಗಿನ ನಂಟನ್ನು ಮುಂದುವರಿಸುವುದಾಗಿ ತಿಳಿಸಿದೆ. ಸೈನ್ಸ್ ಮ್ಯೂಸಿಯಂಗೆ ಅದಾನಿ ಗ್ರೂಪ್ ಪ್ರಾಯೋಜಕತ್ವವನ್ನು ಕೆಲ ಪರಿಸರವಾದಿಗಳು ವಿರೋಧಿಸಿದ್ದರು.
ಶಾರ್ಟ್ ಸೆಲ್ಲರ್ ಹಿಂಡೆನ್ ಬರ್ಗ್ ವರದಿಯ ಬಳಿಕ ಕೇವಲ 6 ದಿನಗಳಲ್ಲಿ ಅದಾನಿ ಕಂಪನಿಗಳ ಷೇರು ದರಗಳಲ್ಲಿ 60% ಕುಸಿದಿತ್ತು.