ಮುಂಬಯಿ: ಭಾರತೀಯ ಷೇರು ಮಾರುಕಟ್ಟೆ ನಿಯಂತ್ರಕ ಸೆಬಿಯು ಅದಾನಿ ಸಮೂಹದ ಕಂಪನಿಗಳ ಸಾಲಗಳ ರೇಟಿಂಗ್ (Rating companies) ಕುರಿತ ಮಾಹಿತಿಯನ್ನು ನಿರೀಕ್ಷಿಸಿದೆ. ಕ್ರೆಡಿಟ್ ರೇಟಿಂಗ್ ಏಜೆನ್ಸಿಗಳು ರೇಟಿಂಗ್ ನೀಡುತ್ತವೆ. ಹೀಗಾಗಿ ರೇಟಿಂಗ್ ಏಜೆನ್ಸಿಗಳಿಂದ ಹೆಚ್ಚಿನ ಮಾಹಿತಿಯನ್ನು ಸೆಬಿ (securities and exchange board of India) ಕೋರಿದೆ. ಈ ವರದಿಗಳಲ್ಲಿ ಕಂಪನಿಯ ಸಾಲದ ವಿವರ, ಮುನ್ನೋಟ, ಸಂಭವನೀಯ ರೇಟಿಂಗ್ ಪರಿಷ್ಕರಣೆಯ ವಿವರಗಳು ಇರುತ್ತವೆ.
ಷೇರುಗಳ ಇತ್ತೀಚಿನ ಭಾರಿ ಪತನದಿಂದ ಅದಾನಿ ಗ್ರೂಪ್‌ನ ಸಾಲ ಹಾಗೂ ಇತರ ಆಸ್ತಿಗಳ ಮೇಲೆ ಸಂಭವನೀಯ ಪರಿಣಾಮಗಳ ಬಗ್ಗೆ ಸೆಬಿ ಅವಲೋಕಿಸುತ್ತಿದೆ ಎಂದು ವರದಿಯಾಗಿದೆ.
ಹಿಂಡೆನ್‌ಬರ್ಗ್ ವರದಿಯ ಬಳಿಕ ಅದಾನಿ ಕಂಪನಿಯ ಷೇರುಗಳ ಮಾರುಕಟ್ಟೆ ಮೌಲ್ಯದಲ್ಲಿ 11 ಲಕ್ಷ ಕೋಟಿ ರೂ. ಕುಸಿದಿರುವ ಹಿನ್ನೆಲೆಯಲ್ಲಿ ಸಾಲದ ರೇಟಿಂಗ್ ಬಗ್ಗೆ ಸೆಬಿ ವಿವರ ಕೋರಿರುವುದು ಗಮನಾರ್ಹ.