Adani group: ಅದಾನಿ ಕಂಪನಿಗಳ ಸಾಲದ ರೇಟಿಂಗ್‌ ಮಾಹಿತಿ ಕೇಳಿದ ಸೆಬಿ - Vistara News

ಪ್ರಮುಖ ಸುದ್ದಿ

Adani group: ಅದಾನಿ ಕಂಪನಿಗಳ ಸಾಲದ ರೇಟಿಂಗ್‌ ಮಾಹಿತಿ ಕೇಳಿದ ಸೆಬಿ

ಅದಾನಿ ಕಂಪನಿಗಳ (Adani group) ಸಾಲದ ರೇಟಿಂಗ್‌ ಸ್ಥಿತಿಗತಿ ಮತ್ತು ಮುನ್ನೋಟದ ಬಗ್ಗೆ ರೇಟಿಂಗ್‌ ಏಜೆನ್ಸಿಗಳಿಂದ ವರದಿಯನ್ನು ಸೆಬಿ ನಿರೀಕ್ಷಿಸಿದೆ.

VISTARANEWS.COM


on

Adani Stocks surge Adani Group shares surge market value rises to Rs 10 lakh crore
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮುಂಬಯಿ: ಭಾರತೀಯ ಷೇರು ಮಾರುಕಟ್ಟೆ ನಿಯಂತ್ರಕ ಸೆಬಿಯು ಅದಾನಿ ಸಮೂಹದ ಕಂಪನಿಗಳ ಸಾಲಗಳ ರೇಟಿಂಗ್‌ (Rating companies) ಕುರಿತ ಮಾಹಿತಿಯನ್ನು ನಿರೀಕ್ಷಿಸಿದೆ. ಕ್ರೆಡಿಟ್‌ ರೇಟಿಂಗ್‌ ಏಜೆನ್ಸಿಗಳು ರೇಟಿಂಗ್‌ ನೀಡುತ್ತವೆ. ಹೀಗಾಗಿ ರೇಟಿಂಗ್‌ ಏಜೆನ್ಸಿಗಳಿಂದ ಹೆಚ್ಚಿನ ಮಾಹಿತಿಯನ್ನು ಸೆಬಿ (securities and exchange board of India) ಕೋರಿದೆ. ಈ ವರದಿಗಳಲ್ಲಿ ಕಂಪನಿಯ ಸಾಲದ ವಿವರ, ಮುನ್ನೋಟ, ಸಂಭವನೀಯ ರೇಟಿಂಗ್‌ ಪರಿಷ್ಕರಣೆಯ ವಿವರಗಳು ಇರುತ್ತವೆ.

ಷೇರುಗಳ ಇತ್ತೀಚಿನ ಭಾರಿ ಪತನದಿಂದ ಅದಾನಿ ಗ್ರೂಪ್‌ನ ಸಾಲ ಹಾಗೂ ಇತರ ಆಸ್ತಿಗಳ ಮೇಲೆ ಸಂಭವನೀಯ ಪರಿಣಾಮಗಳ ಬಗ್ಗೆ ಸೆಬಿ ಅವಲೋಕಿಸುತ್ತಿದೆ ಎಂದು ವರದಿಯಾಗಿದೆ.

ಹಿಂಡೆನ್‌ಬರ್ಗ್‌ ವರದಿಯ ಬಳಿಕ ಅದಾನಿ ಕಂಪನಿಯ ಷೇರುಗಳ ಮಾರುಕಟ್ಟೆ ಮೌಲ್ಯದಲ್ಲಿ 11 ಲಕ್ಷ ಕೋಟಿ ರೂ. ಕುಸಿದಿರುವ ಹಿನ್ನೆಲೆಯಲ್ಲಿ ಸಾಲದ ರೇಟಿಂಗ್‌ ಬಗ್ಗೆ ಸೆಬಿ ವಿವರ ಕೋರಿರುವುದು ಗಮನಾರ್ಹ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

BBMP Property Tax: ಆಸ್ತಿ ತೆರಿಗೆ ಒನ್‌ ಟೈಮ್‌ ಸೆಟ್ಲ್‌ಮೆಂಟ್‌ಗೆ ಮತ್ತೆ 1 ತಿಂಗಳು ಕಾಲಾವಕಾಶ ವಿಸ್ತರಣೆ ಮಾಡಿದ ಬಿಬಿಎಂಪಿ

BBMP Property Tax: ಬಿಬಿಎಂಪಿ ವ್ಯಾಪ್ತಿಯಲ್ಲಿನ ಆಸ್ತಿ ತೆರಿಗೆ ಪಾವತಿಸಲು ಒಂದು ಬಾರಿ ಪರಿಹಾರ ಯೋಜನೆಯನ್ನು(ಒಟಿಎಸ್) ಸರ್ಕಾರ ಜಾರಿಗೆ ತಂದಿತ್ತು. ಈ ಯೋಜನೆಯಿಂದ ಆಸ್ತಿ ತೆರಿಗೆಯ ಬಾಕಿಯ ಮೇಲೆ ಪಾವತಿಸಬೇಕಾದ ಬಡ್ಡಿಯನ್ನು ಸಂಪೂರ್ಣ ಮನ್ನಾ ಮತ್ತು ದಂಡವನ್ನು ಅರ್ಧಕ್ಕೆ ಇಳಿಸಲಾಗಿದೆ. ಈ ಒಟಿಎಸ್ ಯೋಜನೆ ಸೌಲಭ್ಯ ಪಡೆಯಲು ಮತ್ತೊಂದು ತಿಂಗಳು ಕಾಲಾವಧಿಯನ್ನು ವಿಸ್ತರಿಸಲಾಗಿದೆ.

VISTARANEWS.COM


on

BBMP Property Tax
Koo

ಬೆಂಗಳೂರು: ಆಸ್ತಿ ತೆರಿಗೆ ಬಾಕಿ (BBMP Property Tax) ಉಳಿಸಿಕೊಂಡವರಿಗೆ ಬಿಬಿಎಂಪಿ ಗುಡ್‌ ನ್ಯೂಸ್‌ ನೀಡಿದೆ. ‘ಒಂದು ಬಾರಿ ಪರಿಹಾರ ಯೋಜನೆʼಯಡಿ (ಒಟಿಎಸ್) ಆಸ್ತಿ ತೆರಿಗೆಗೆ ಶೇ.5 ರಿಯಾಯಿತಿ ಪಡೆಯಲು ಜುಲೈ 31 ಅಂತಿಮ ದಿನವಾಗಿತ್ತು. ಆದರೆ, ಇದೀಗ ʼಒನ್‌ ಟೈಮ್‌ ಸೆಟ್ಲ್‌ಮೆಂಟ್‌ ಯೋಜನೆʼ ಕಾಲಾವಕಾಶವನ್ನು ಮತ್ತೆ ಒಂದು ತಿಂಗಳ ಕಾಲ ವಿಸ್ತರಣೆ ಮಾಡಲಾಗಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿನ ಆಸ್ತಿ ತೆರಿಗೆ ಪಾವತಿಸಲು ಒಂದು ಬಾರಿ ಪರಿಹಾರ ಯೋಜನೆಯನ್ನು(ಒಟಿಎಸ್) ಸರ್ಕಾರ ಜಾರಿಗೆ ತಂದಿತ್ತು. ಈ ಯೋಜನೆಯಿಂದ ಆಸ್ತಿ ತೆರಿಗೆಯ ಬಾಕಿಯ ಮೇಲೆ ಪಾವತಿಸಬೇಕಾದ ಬಡ್ಡಿಯನ್ನು ಸಂಪೂರ್ಣ ಮನ್ನಾ ಮತ್ತು ದಂಡವನ್ನು ಅರ್ಧಕ್ಕೆ ಇಳಿಸಲಾಗಿದೆ. ಒಟಿಎಸ್ ಯೋಜನೆಯಡಿ ದಂಡಗಳ ಮೇಲೆ ಶೇ. 50 ರಿಯಾಯಿತಿ ಮತ್ತು ಆಸ್ತಿ ತೆರಿಗೆ ಡೀಫಾಲ್ಟರ್‌ಗಳಿಗೆ ಬಡ್ಡಿ ಪಾವತಿಗಳ ಮೇಲೆ ಶೇ. 100ರಷ್ಟು ರಿಯಾಯಿತಿ ನೀಡಲಾಗುತ್ತದೆ.

ಒಟಿಎಸ್‌ ಕಾಲಾವಧಿ ಆ. 31ರವರೆಗೆ ವಿಸ್ತರಣೆ: ಡಿಕೆಶಿ

ಈ ಬಗ್ಗೆ ಡಿಸಿಎಂ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್‌ ಮಾಹಿತಿ ನೀಡಿದ್ದಾರೆ. “ಆಸ್ತಿ ತೆರಿಗೆ ಸುಸ್ತಿದಾರರಿಗಾಗಿ ಜಾರಿಗೆ ತರಲಾಗಿದ್ದ ‘ಒಂದು ಬಾರಿ ಪರಿಹಾರ ಯೋಜನೆ’ (ಒಟಿಎಸ್)ಯ ಕಾಲಾವಧಿ (ಜುಲೈ 31) ಮುಕ್ತಾಯಗೊಂಡಿರುವ ಹಿನ್ನೆಲೆಯಲ್ಲಿ, ಸಾರ್ವಜನಿಕರ ಒತ್ತಡದ ಮೇರೆಗೆ ಇದನ್ನು ಒಂದು ತಿಂಗಳ ಕಾಲ ಅಂದರೆ ಆಗಸ್ಟ್ 31ರವರೆಗೆ ವಿಸ್ತರಣೆ ಮಾಡಲಾಗಿದೆ” ಎಂದು ತಿಳಿಸಿದ್ದಾರೆ.

ಇದನ್ನೂ ಓದಿ | Income Tax Return: ಹಳೆಯ ತೆರಿಗೆ ಪದ್ದತಿ ಕೊನೆಯಾಗುತ್ತಾ? CBDT ಅಧ್ಯಕ್ಷ ಹೇಳೋದೇನು?

11ನೇ ನ್ಯಾನೋ ತಂತ್ರಜ್ಞಾನ ಅಂತಾರಾಷ್ಟ್ರೀಯ ಸಮ್ಮೇಳನ ಕಾರ್ಯಕ್ರಮದ ಬಳಿಕ ಮಾಧ್ಯಮಗಳ ಜತೆ ಶುಕ್ರವಾರ ಮಾತನಾಡಿದ ಶಿವಕುಮಾರ್ ಅವರು, “ಈವರೆಗೂ 3 ಸಾವಿರ ಕೋಟಿಯಷ್ಟು ಆಸ್ತಿ ತೆರಿಗೆ ಸಂಗ್ರಹವಾಗಿದ್ದು, ಹೆಚ್ಚುವರಿಯಾಗಿ 400 ಕೋಟಿ ತೆರಿಗೆ ಸಂಗ್ರಹವಾಗಿದೆ. ಕೆಲ ಬದಲಾವಣೆ ಮಾಡಿಕೊಳ್ಳಬೇಕು ಮತ್ತು ಒಟಿಎಸ್ ಕಾಲಾವಧಿ ಒಂದು ತಿಂಗಳು ವಿಸ್ತರಣೆ ಮಾಡಬೇಕು ಎಂದು ಅಧಿಕಾರಿಗಳು ಹಾಗೂ ಸಾರ್ವಜನಿಕರಿಂದ ಒತ್ತಡ ಬರುತ್ತಿದೆ. ಸರ್ವರ್ ಸಮಸ್ಯೆ ಹಾಗೂ ಮತ್ತೆ ಕೆಲವರು ಚೆಕ್ ನೀಡಿದ್ದು, ಜುಲೈ 31ರವರೆಗೆ ನೀಡಲಾಗಿದ್ದ ಕಾಲಾವಧಿಯನ್ನು ಒಂದು ತಿಂಗಳ ಕಾಲ ಅಂದರೆ ಆಗಸ್ಟ್ 31ರವರೆಗೆ ವಿಸ್ತರಣೆ ಮಾಡಲಾಗಿದೆ” ಎಂದು ತಿಳಿಸಿದರು.

“ಪ್ರಾಮಾಣಿಕವಾಗಿ ತೆರಿಗೆ ಪಾವತಿ ಮಾಡುತ್ತಿರುವವರಿಗೆ ತೊಂದರೆಯಾಗದ ರೀತಿಯಲ್ಲಿ ಕೆಲವು ಬದಲಾವಣೆ ಮಾಡಿಕೊಳ್ಳಲಾಗುವುದು. ಒಂದು ವೇಳೆ ಯಾರಾದರೂ ಹೆಚ್ಚಿಗೆ ಹಣ ಪಾವತಿ ಮಾಡಿದ್ದರೆ, ಮುಂದಿನ ಬಾರಿ ಆಸ್ತಿ ತೆರಿಗೆ ಪಾವತಿ ವೇಳೆ ಅದನ್ನು ವಜಾಗೊಳಿಸಲಾಗುವುದು. ಈ ವಿಚಾರದಲ್ಲಿ ಅನಗತ್ಯವಾಗಿ ಗಾಬರಿಯಾಗುವುದು ಬೇಡ” ಎಂದು ಹೇಳಿದರು.

ಬೆಂಗಳೂರು ನಗರ ಅಭಿವೃದ್ಧಿಯ ಮೇಲುಸ್ತುವಾರಿ ನೋಡಿಕೊಳ್ಳುತ್ತಿರುವ ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಾರ್ಚ್‌ನಲ್ಲಿ ತೆರಿಗೆ ಸಂಗ್ರಹವನ್ನು ಸುಗಮಗೊಳಿಸಲು ಮತ್ತು ಆದಾಯವನ್ನು ಹೆಚ್ಚಿಸಲು ಹೊಸ ಆಸ್ತಿ ತೆರಿಗೆ ವ್ಯವಸ್ಥೆಯನ್ನು ಪರಿಚಯಿಸಿದ್ದರು. ಎಂದಿಗೂ ತೆರಿಗೆ ಪಾವತಿಸದ ಆಸ್ತಿ ಮಾಲೀಕರಿಗೆ ಒಂದು ಬಾರಿ ಪರಿಹಾರದ ಆಯ್ಕೆಯನ್ನು ಅವರು ಈ ಯೋಜನೆಯ ಅಡಿಯಲ್ಲಿ ಘೋಷಿಸಿದ್ದರು.

ಆಸ್ತಿ ಮಾಲೀಕರಿಗೆ ಪರಿಹಾರ ನೀಡಲು ಬೆಂಗಳೂರಿನಲ್ಲಿ ಬಾಕಿ ಉಳಿದಿರುವ ಆಸ್ತಿ ತೆರಿಗೆ ಪಾವತಿ ವಿಂಡೋವನ್ನು ಈ ವರ್ಷ ಏಪ್ರಿಲ್ 30ರಿಂದ ಜುಲೈ 31ರವರೆಗೆ ವಿಸ್ತರಿಸಲಾಗಿತ್ತು. ಜುಲೈ 31 ರೊಳಗೆ ಬಾಕಿ ಪಾವತಿಸಲು ವಿಫಲರಾದವರನ್ನು ಆಗಸ್ಟ್ 1ರಿಂದ ಸುಸ್ತಿದಾರರೆಂದು ಪರಿಗಣಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದರು. ಆದರೆ, ಇದೀಗ ಮತ್ತೊಂದು ತಿಂಗಳು ʼಒನ್‌ ಟೈಮ್‌ ಸೆಟ್ಲ್‌ಮೆಂಟ್‌ ಯೋಜನೆʼ ವಿಸ್ತರಿಸಲಾಗಿದೆ.

ಇದನ್ನೂ ಓದಿ | Tax Saving Tips: 10 ಲಕ್ಷ ರೂ. ಆದಾಯ ಇದ್ದರೂ ತೆರಿಗೆಯಿಂದ ಪಾರಾಗಲು ಸಾಧ್ಯ! ಇಲ್ಲಿದೆ ಸರಳ ಲೆಕ್ಕಾಚಾರ!

ಬೆಂಗಳೂರಿನ (bengaluru) ಎಂಟು ವಲಯಗಳ ಸುಮಾರು 2.88 ಲಕ್ಷ ಆಸ್ತಿಗಳ 548.94 ಕೋಟಿ ರೂ. ಮೊತ್ತದ ಆಸ್ತಿ ತೆರಿಗೆ (Property Tax) ಬಾಕಿ ಪಾವತಿಯಾಗದೆ ಉಳಿದಿದೆ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ತಿಳಿಸಿದೆ.

Continue Reading

ಪ್ರಮುಖ ಸುದ್ದಿ

Governor Versus State: ಶುರುವಾಯ್ತು ರಾಜ್ಯದಲ್ಲಿ ರಾಜ್ಯ ಸರ್ಕಾರ ವರ್ಸಸ್ ರಾಜ್ಯಪಾಲ ಸಂಘರ್ಷ; ರಾಜ್ಯಪಾಲರ ಮುಂದಿನ ನಡೆ ಏನು?

Governor Versus State: ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟರೆ ಸಿದ್ದರಾಮಯ್ಯ ಅವರಿಗೆ ಸಂಕಷ್ಟ ಕಾಡಲಿದೆ. ಆಗ ಜನಪ್ರತಿನಿಧಿಗಳ ನ್ಯಾಯಾಲಯ ಇಲ್ಲವೇ ಲೋಕಾಯುಕ್ತ ಕೋರ್ಟ್‌ನಲ್ಲಿ ಕೇಸ್ ದಾಖಲು ಆಗಬಹುದು. ಕೇಸ್ ಅಂಗೀಕರಿಸುವ ಬಗ್ಗೆ ಕೋರ್ಟ್‌ನಲ್ಲಿ ವಾದ ಪ್ರತಿವಾದ ಶುರು ಆಗಬಹುದು.

VISTARANEWS.COM


on

thawar chand gehlot siddaramaiah Governor versus state
Koo

ಬೆಂಗಳೂರು: ಕೇರಳ, ಪಶ್ಚಿಮ ಬಂಗಾಳ, ದಿಲ್ಲಿ ಮುಂತಾದ ರಾಜ್ಯಗಳಲ್ಲಿ ನಡೆಯುತ್ತಿರುವ ರಾಜ್ಯ ಸರ್ಕಾರ ವರ್ಸಸ್‌ ರಾಜ್ಯಪಾಲರು (Governor versus state) ಫೈಟ್‌ ಇದೀಗ ಕರ್ನಾಟಕಕ್ಕೂ (Karnataka) ವಿಸ್ತರಿಸಿದೆ. ಮುಡಾ ಪ್ರಕರಣದಲ್ಲಿ (MUDA Scam) ಸಿಎಂ ಸಿದ್ದರಾಮಯ್ಯ (CM Siddaramaiah) ಅವರಿಗೆ ಶೋಕಾಸ್ ನೋಟಿಸ್ (Show cause Notice) ಜಾರಿ ಮಾಡಿರುವ ಪರಿಣಾಮ ಕಾಂಗ್ರೆಸ್‌ ನಾಯಕರು ರೊಚ್ಚಿಗೆದ್ದಿದ್ದು, ರಾಜ್ಯಪಾಲರ ವಿರುದ್ಧ ಕಾನೂನು ಸಂಘರ್ಷಕ್ಕೆ ಇಳಿಯುವ ಸಾಧ್ಯತೆಯನ್ನು ಪರಿಗಣಿಸುತ್ತಿದ್ದಾರೆ.

ಮುಡಾ ಹಗರಣದಲ್ಲಿ ಹೆಸರು ಕೇಳಿಬಂದಿರುವ ನಿಮ್ಮ ಮೇಲೆ ಏಕೆ ಪ್ರಾಸಿಕ್ಯೂಷನ್‌ಗೆ ಯಾಕೆ ಅನುಮತಿ ನೀಡಬಾರದು ಎಂದು ಉತ್ತರ ನೀಡಿ ಎಂದು ರಾಜಭವನದಿಂದ ನೋಟೀಸ್ ಕಳಿಸಲಾಗಿತ್ತು. ರಾಜ್ಯಪಾಲರ ನೋಟೀಸ್‌ಗೆ ಸಚಿವ ಸಂಪುಟ ಅಸಮಾಧಾನ ವ್ಯಕ್ತಪಡಿಸಿದೆ. ಎರಡು ಪ್ರಮುಖ ನಿರ್ಣಯಗಳನ್ನು ಕ್ಯಾಬಿನೆಟ್ ಮಾಡಿದ್ದು, ಅವುಗಳನ್ನು ರಾಜಭವನಕ್ಕೆ ಕಳಿಸಿದೆ. ಒಂದು, ಟಿಜೆ ಅಬ್ರಾಹಂ ನೀಡಿರುವ ದೂರು ವಜಾಗೊಳಿಸಬೇಕು. ಎರಡನೆಯದು, ಶೋಕಾಸ್ ನೋಟಿಸ್ ಹಿಂಪಡೆಯಬೇಕು ಎಂದಿದೆ.

ಸಚಿವ ಸಂಪುಟ ರಾಜ್ಯಪಾಲರಿಗೆ ನೀಡಿರುವ ಪ್ರತ್ಯುತ್ತರ ಇದೀಗ ಯಾವ ಸ್ವರೂಪ ಪಡೆಯಬಹುದು, ರಾಜ್ಯಪಾಲರ ನಡೆ ಏನಿರಬಹುದು ಎಂಬುದು ಕುತೂಹಲ ಮೂಡಿಸಿದೆ. ಸರ್ಕಾರದ ಸಲಹೆಯನ್ನು ರಾಜ್ಯಪಾಲರು ಯಾವ ರೀತಿ ಸ್ವೀಕಾರ ಮಾಡುತ್ತಾರೆ, ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಡ್ತಾರಾ? ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟರೆ ಆಡಳಿತ ಪಕ್ಷವೂ ಕೋರ್ಟ್ ಮೊರೆ ಹೋಗುವ ಸಾಧ್ಯತೆ ಇದೆ. ಅದು ಸರ್ಕಾರ ವರ್ಸಸ್ ರಾಜ್ಯಪಾಲರ ನಡುವೆ ಸಂಘರ್ಷಕ್ಕೆ ನಾಂದಿ‌ಯಾಗುತ್ತದೆ.

ರಾಜ್ಯಪಾಲರು ಮಾಧ್ಯಮಗಳಲ್ಲಿ ಪ್ರಕಟವಾಗಿರುವ ವರದಿ ಆಧರಿಸಿ ಪ್ರಕರಣದ ಕುರಿತ ವರದಿ ನೀಡುವಂತೆ ಸಿಎಸ್‌ಗೆ ಕೇಳಿದ್ದರು. ರಾಜ್ಯಪಾಲರ ಪತ್ರವನ್ನು ಗಂಭೀರವಾಗಿ ಪರಿಗಣಿಸಿ, ಈ ಪ್ರಕರಣದ ತನಿಖೆಯನ್ನು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಪಿ.ಎನ್ ದೇಸಾಯಿ ಅವರ ನೇತೃತ್ವದ ಸಮಿತಿ ರಚಿಸಿ ನ್ಯಾಯಾಂಗ ತನಿಖೆಗೆ ಆದೇಶ ನೀಡಲಾಗಿತ್ತು.

ಅಬ್ರಾಹಂ ಅವರು ಜುಲೈ 26ರಂದು ದೂರು ನೀಡಿದ್ದರು. ಅದೇ ದಿನ ಮುಖ್ಯ ಕಾರ್ಯದರ್ಶಿಗಳು ರಾಜ್ಯಪಾಲರಿಗೆ ಪ್ರಕರಣಕ್ಕೆ ಸಂಬಂಧಿಸಿದ ವರದಿಯನ್ನು ಸಲ್ಲಿಸಿದ್ದರು. ರಾಜ್ಯಪಾಲರು ದೂರು ಹಾಗೂ ಸಿಎಸ್ ವರದಿಯನ್ನು ಸಂಪೂರ್ಣವಾಗಿ ಪರಿಶೀಲಿಸುವ ಮುನ್ನವೇ ಸಿಎಂಗೆ ಶೋಕಾಸ್ ನೋಟೀಸ್ ನೀಡಿದ್ದಾರೆ. ಇಷ್ಟು ತರಾತುರಿಯಲ್ಲಿ ಇಂತಹ ತೀರ್ಮಾನ ಮಾಡುತ್ತಿರುವುದೇಕೆ? ಎಂದು ರಾಜ್ಯಪಾಲರಿಗೆ ಕ್ಯಾಬಿನೆಟ್ ಪ್ರಶ್ನೆ ಮಾಡಿದೆ.

ಸಿಎಂ ಸಿದ್ದರಾಮಯ್ಯ ಜೊತೆಗೆ ಹೈಕಮಾಂಡ್ ನಿಂತಿದೆ. ನಿನ್ನೆ ರಾತ್ರಿ ಸಿಎಂ ಕರೆ ಮಾಡಿದ್ದ ರಾಜ್ಯದ ಉಸ್ತುವಾರಿ ವೇಣುಗೋಪಾಲ್‌, ಸಚಿವರ ಸಭೆ ಮತ್ತು ಕ್ಯಾಬಿನೆಟ್ ಸಭೆ ನಿರ್ಣಯದ ಬಗ್ಗೆ ಮಾಹಿತಿ ಪಡೆದಿದ್ದರು. ನಾವು ನಿಮ್ಮ ಜೊತೆಗಿದ್ದೇವೆ. ಇದನ್ನು ರಾಜಕೀಯವಾಗಿ ಹಾಗೂ ಕಾನೂನಾತ್ಮಕವಾಗಿ ಹೋರಾಟ ಮಾಡೋಣ. ಬಿಜೆಪಿ ಪಾದಯಾತ್ರೆಗೆ ಕೌಂಟರ್ ಕೊಡಬೇಕು. ನಾನು ರಾಜ್ಯಕ್ಕೆ ಬರ್ತಿದ್ದೇನೆ. ಎಲ್ಲವೂ ಚರ್ಚೆ ಮಾಡೋಣ ಎಂದಿದ್ದಾರೆ ವೇಣುಗೋಪಾಲ್.

ತನಿಖೆಗೆ ಅನುಮತಿ ಕೊಟ್ಟರೆ ಏನಾಗುತ್ತದೆ?

ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟರೆ ಸಿದ್ದರಾಮಯ್ಯ ಅವರಿಗೆ ಸಂಕಷ್ಟ ಕಾಡಲಿದೆ. ಆಗ ಜನಪ್ರತಿನಿಧಿಗಳ ನ್ಯಾಯಾಲಯ ಇಲ್ಲವೇ ಲೋಕಾಯುಕ್ತ ಕೋರ್ಟ್‌ನಲ್ಲಿ ಕೇಸ್ ದಾಖಲು ಆಗಬಹುದು. ಕೇಸ್ ಅಂಗೀಕರಿಸುವ ಬಗ್ಗೆ ಕೋರ್ಟ್‌ನಲ್ಲಿ ವಾದ ಪ್ರತಿವಾದ ಶುರು ಆಗಬಹುದು. ಬಳಿಕ ಲೋಕಾಯುಕ್ತ ಕೋರ್ಟ್‌ನಿಂದ ಸಿಎಂಗೆ ನೋಟೀಸ್ ಹೋಗುತ್ತದೆ. ಹೈಕೋರ್ಟ್ ಲೋಕಾಯುಕ್ತ ಕೋರ್ಟ್ ವಿಚಾರಣೆಗೆ ಹೈಕೋರ್ಟ್‌ ತಡೆ ಕೊಟ್ಟರೆ ಸಿಎಂ ಬಚಾವ್ ಆಗಬಹುದು.‌ ಲೋಕಾಯುಕ್ತ ಪೊಲೀಸರು ಎಫ್ಐಆರ್ ದಾಖಲು ಮಾಡಿದರೆ ಎಫ್ಐಆರ್ ತಡೆ ಕೋರಿ ಅರ್ಜಿ ಸಲ್ಲಿಸಬಹುದು. ಅದಕ್ಕೂ ಮೊದಲು ಸಿಎಂ ವಿಚಾರಣೆ ಪ್ರಾಸಿಕ್ಯೂಷನ್‌ಗೆ ಕೊಟ್ಟಿರುವುದನ್ನು ಪ್ರಶ್ನೆ ಮಾಡಿ ಹೈಕೋರ್ಟ್ ಮೊರೆ ಹೋಗಬಹುದು.

ಅಧಿಕಾರ ದುರ್ಬಳಕೆ?

ಇದೆಲ್ಲದಕ್ಕೂ ಮೊದಲು ರಾಜ್ಯಪಾಲರು ಸಂವಿಧಾನದತ್ತವಾಗಿ ಸಿಕ್ಕಿರುವ ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆಂದು ಸುಪ್ರೀಂ ಕೋರ್ಟ್ ಸಂವಿಧಾನದ ಪೀಠದ ಮುಂದೆ ಸಿಎಂ ಅರ್ಜಿ ಸಲ್ಲಿಸಬಹುದು. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರು ಕಾನೂನು ತಂಡದ ಜೊತೆಗೆ ಸುದೀರ್ಘವಾಗಿ ಚರ್ಚೆ ಮಾಡುತ್ತಿದ್ದಾರೆ. ಮೊನ್ನೆ ದೆಹಲಿಗೆ ತೆರಳಿದಾಗ ಅಭಿಷೇಕ್ ಮನು‌ ಸಿಂಗ್ವಿ ಜತೆ ಚರ್ಚೆ ಮಾಡಿದ್ದು, ಕಾನೂನು ಹೋರಾಟಕ್ಕೂ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: MUDA Scam: ಸಿಎಂಗೆ ಕಳಿಸಿದ ರಾಜ್ಯಪಾಲರ ನೋಟೀಸ್‌ ತಿರಸ್ಕರಿಸಿದ ಕ್ಯಾಬಿನೆಟ್‌, ಕಾನೂನು ಹೋರಾಟಕ್ಕೆ ನಿರ್ಣಯ

Continue Reading

Latest

Viral Video: ಥೋ! ಈ ಮುದುಕರಿಗೆ ಈ ವಯಸ್ಸಲ್ಲಿ ಏನೆಲ್ಲ ಚಪಲ ನೋಡಿ! ಹಿಂದೆಂದೂ ಕಂಡಿರದಂಥ ವಿಡಿಯೊ!

Viral Video: ಇಲ್ಲೊಬ್ಬ ಬೊಕ್ಕ ತಲೆಯ ವ್ಯಕ್ತಿ ಮಹಿಳೆಯ ಕೂದಲಿನ ಜೊತೆ ವಿಚಿತ್ರವಾಗಿ ವರ್ತಿಸಿದ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದು ಅನೇಕರಲ್ಲಿ ಆಶ್ಚರ್ಯವನ್ನುಂಟು ಮಾಡಿದೆ. ಕ್ಯಾಮೆರಾದಲ್ಲಿ ಸೆರೆಯಾದ ಘಟನೆಯಲ್ಲಿ ಮಹಿಳೆಯ ಹಿಂದೆ ಬೊಕ್ಕ ತಲೆಯ ಮುದುಕನೊಬ್ಬ ಅವಳ ಕೂದಲನ್ನು ಸ್ಪರ್ಶಿಸಲು ಮತ್ತು ಅದರ ವಾಸನೆ ನೋಡಲು ಪ್ರಯತ್ನಿಸುತ್ತಿದ್ದಾನೆ. ಅಶ್ಲೀಲವಾಗಿರುವುದರ ಜೊತೆಗೆ, ಅವನ ವರ್ತನೆ ಕಳವಳಕಾರಿಯಾಗಿದೆ.

VISTARANEWS.COM


on

Viral Video
Koo


ಈ ಮುದುಕರಿಗೆ ವಯಸ್ಸಾಗುತ್ತಿದ್ದಂತೆ ಏನೆಲ್ಲ ಚಪಲ ಬರುತ್ತದೋ ಹೇಳಲಾಗುವುದಿಲ್ಲ. ಕೆಲವರು ಚಿಕ್ಕ ಮಕ್ಕಳ ಮೇಲೂ ಲೈಂಗಿಕ ದೌರ್ಜನ್ಯ ಎಸಗಲು ಹೇಸುವುದಿಲ್ಲ. ಕೆಲವರು ಬಸ್‌ಗಳಲ್ಲಿ, ರೈಲುಗಳಲ್ಲಿ ಮಹಿಳೆಯರ ಮೈ ಸವರುವುದರಲ್ಲೇ ವಿಕೃತ ಖುಷಿ ಅನುಭವಿಸುತ್ತಾರೆ. ಆದರೆ ಇಲ್ಲಿ ಈ ಮುದುಕ ಯುವತಿಯೊಬ್ಬಳ ಕೂದಲನ್ನು ಮುಟ್ಟಲು, ಅದನ್ನು ಮುದ್ದಿಸಲು ಪಡುವ ಪ್ರಯತ್ನ ನಗು ತರಿಸುತ್ತದೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ. ಇದು ಅನೇಕರಲ್ಲಿ ಆಶ್ಚರ್ಯವನ್ನುಂಟುಮಾಡಿದೆ.

ಉತ್ತರ ಪ್ರದೇಶದ ಬಿಸೋಲಿಯಲ್ಲಿ ನಡೆದಿದೆ ಎನ್ನಲಾದ ಈ ಘಟನೆಯ ವಿಡಿಯೊದಲ್ಲಿ ವಯಸ್ಸಾದ ಬೊಕ್ಕ ತಲೆಯ ವ್ಯಕ್ತಿ ಮತ್ತು ಉದ್ದವಾದ ಕೂದಲನ್ನು ಹೊಂದಿರುವ ಮಹಿಳೆ ಕಾಣಿಸುತ್ತಿದ್ದಾರೆ. ಈ ವಿಡಿಯೊದಲ್ಲಿ ವ್ಯಕ್ತಿಯು ಸಾರ್ವಜನಿಕ ಸ್ಥಳದಲ್ಲಿ ವಿಚಿತ್ರವಾಗಿ ವರ್ತಿಸುತ್ತಿರುವುದು, ಅನೇಕರ ಗಮನವನ್ನು ಸೆಳೆದಿದೆ. ಕ್ಯಾಮೆರಾದಲ್ಲಿ ಸೆರೆಯಾದ ಘಟನೆಯಲ್ಲಿ ಮಹಿಳೆಯ ಹಿಂದೆ ಬೊಕ್ಕ ತಲೆಯ ಮುದುಕನೊಬ್ಬ ಅವಳ ಕೂದಲನ್ನು ಸ್ಪರ್ಶಿಸಲು ಮತ್ತು ವಾಸನೆ ನೋಡಲು ಪ್ರಯತ್ನಿಸುತ್ತಿದ್ದಾನೆ. ಅಶ್ಲೀಲವಾಗಿರುವುದರ ಜೊತೆಗೆ, ಅವನ ವರ್ತನೆ ಕಳವಳಕಾರಿಯಾಗಿದೆ. ಏಕೆಂದರೆ ಆ ಮಹಿಳೆಗೆ ತನ್ನ ಹಿಂದೆ ಏನು ನಡೆಯುತ್ತಿದೆ ಎಂಬುದರ ಬಗ್ಗೆ ತಿಳಿದಿಲ್ಲ.

ವಿಡಿಯೊ ಮುಂದುವರಿಯುತ್ತಿದ್ದಂತೆ ಆ ವ್ಯಕ್ತಿ ಮಹಿಳೆಗೆ ಹತ್ತಿರವಾಗಲು ಅನೇಕ ಬಾರಿ ಪ್ರಯತ್ನಿಸುತ್ತಿದ್ದಾನೆ. ಸಿಸಿಟಿವಿ ದೃಶ್ಯಾವಳಿಗಳಲ್ಲಿ ಅವನ ಎಲ್ಲಾ ಅನುಚಿತ ಕೃತ್ಯಗಳು ರೆಕಾರ್ಡ್ ಆಗಿದೆ. ಈ ವಿಡಿಯೊವನ್ನು ಘರ್ ಕೆ ಕಾಲೇಶ್ ಎಂಬ ಖಾತೆಯಿಂದ ಎಕ್ಸ್‌ನಲ್ಲಿ ಪೋಸ್ಟ್ ಮಾಡಲಾಗಿದೆ. ಇದು ಸಿಕ್ಕಾಪಟ್ಟೆ ವೈರಲ್ ಆಗಿದೆ. ವೈರಲ್ ಆಗಿರುವ ವಿಡಿಯೊವನ್ನು ಕಂಡು ಸಾರ್ವಜನಿಕ ಸುರಕ್ಷತೆಯ ಬಗ್ಗೆ ಗಂಭೀರ ಕಳವಳವನ್ನು ಹುಟ್ಟುಹಾಕಿದೆ. ಇದನ್ನು ನೋಡಿದ ನಂತರ ಅನೇಕ ವೀಕ್ಷಕರು ಕೋಪಗೊಂಡಿದ್ದಾರೆ.

ಇದನ್ನೂ ಓದಿ: ಕಾಂಡೋಮ್, ಲೂಬ್ರಿಕೆಂಟ್‍ ಬಳಸಿದರೂ ಕ್ಯಾನ್ಸರ್‌! ಅಧ್ಯಯನ ವರದಿಯಲ್ಲಿ ಆಘಾತಕಾರಿ ಸಂಗತಿ

ಜುಲೈ 31ರಂದು ಪೋಸ್ಟ್ ಮಾಡಲಾದ ಈ ವಿಡಿಯೊ ವೈರಲ್ ಆಗಿದ್ದು, 3.3 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ. ಇದಕ್ಕೆ ಅನೇಕರು ಕಾಮೆಂಟ್ ಮಾಡಿದ್ದಾರೆ. ಅವರಲ್ಲಿ ಅನೇಕರು ತಮ್ಮ ಕೋಪ ವ್ಯಕ್ತಪಡಿಸಿದ್ದಾರೆ. “ಅವನ ತಲೆ ಬೋಳು ಆಗಿರುವುದರಿಂದ ಅವಳ ಕೂದಲಿನ ಮೇಲೆ ಆಸೆ ಪಟ್ಟಿರಬೇಕು” ಎಂದು ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು “ವಯಸ್ಸಾದಂತೆ ಕೆಲವು ಮುದುಕರಲ್ಲಿ ವಿಕೃತ ಸ್ವಭಾವವು ಹೆಚ್ಚಾಗುತ್ತದೆ. ಅನೇಕ ವೃದ್ಧರು ಇಂಥದ್ದನ್ನು ಮಾಡುವುದನ್ನು ನೋಡಿದ್ದೇನೆ” ಎಂಬುದಾಗಿ ಬರೆದಿದ್ದಾರೆ. ಇನ್ನೂ ಕೆಲವರು ಆತನನ್ನು ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ.

Continue Reading

ಕ್ರೀಡೆ

Paris Olympics: ಆರ್ಚರಿ ಮಿಶ್ರ ತಂಡ ಸ್ಪರ್ಧೆಯಲ್ಲಿ ಕ್ವಾರ್ಟರ್​ ಫೈನಲ್​ ತಲುಪಿದ ಧೀರಜ್‌- ಅಂಕಿತಾ ಜೋಡಿ

Paris Olympics: 26ರ ಹರೆಯದ ಅಂಕಿತಾ ಅಮೋಘ ಪ್ರದಶನ ತೋರುವ ಮೂಲಕ ಹಲವು ಬಾರಿ 10 ಅಂಕ್ಕೆ ಗುರಿ ಇರಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

VISTARANEWS.COM


on

Paris Olympics
Koo

ಪ್ಯಾರಿಸ್​​: ಉತ್ತಮ ಫಾರ್ಮ್ ನಲ್ಲಿರುವ ಧೀರಜ್‌ ಬೊಮ್ಮದೇವರ(Dhiraj Bommadevara) ಮತ್ತು ಅಂಕಿತಾ ಭಕತ್‌(Ankita Bhakat) ಅವರು ಪ್ಯಾರಿಸ್‌ ಒಲಿಂಪಿಕ್ಸ್‌ನ(Paris Olympics) ಆರ್ಚರಿ ಕ್ರೀಡೆಯ ಮಿಶ್ರ ತಂಡದ 16ನೇ ಸುತ್ತಿನ ಪಂದ್ಯದಲ್ಲಿ ಇಂಡೋನೇಷ್ಯಾವನ್ನು 5-1 (37-36, 38-38, 38-37) ಅಂತದಿಂದ ಮಣಿಸಿ ಕ್ವಾರ್ಟರ್​​ ಫೈನಲ್ ಪ್ರವೇಶಿಸಿದೆ. ಈ ಮೂಲಕ ಆರ್ಚರಿಯಲ್ಲಿ ಒಲಿಂಪಿಕ್‌ ಪದಕ ಗೆಲ್ಲುವ ವಿಶ್ವಾಸ ಮೂಡಿಸಿದೆ.

ಚೊಚ್ಚಲ ಒಲಿಂಪಿಕ್ಸ್‌ನಲ್ಲಿ ಭಾಗವಹಿ ಸುತ್ತಿರುವ ಧೀರಜ್‌ ಮತ್ತು ಅಂಕಿತಾ ಅವರ ಅಮೋಘ ನಿರ್ವಹಣೆಯಿಂದ ಭಾರತ ಕ್ವಾರ್ಟರ್‌ಫೈನಲಿಗೆ ಪ್ರವೇಶಿಸಿದೆ. 26ರ ಹರೆಯದ ಅಂಕಿತಾ ಅಮೋಘ ಪ್ರದಶನ ತೋರುವ ಮೂಲಕ ಹಲವು ಬಾರಿ 10 ಅಂಕ್ಕೆ ಗುರಿ ಇರಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಕ್ವಾರ್ಟರ್‌ ಫೈನಲ್‌ ಪಂದ್ಯ ಇಂದು ಸಂಜೆ 5.40ಕ್ಕೆ ನಡೆಯಲಿದೆ.

ಬ್ಯಾಡ್ಮಿಂಡನ್​ ಸ್ಪರ್ಧೆಯಲ್ಲಿ ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇಟ್ಟಿರುವ ಲಕ್ಷ್ಯ ಸೇನ್ ಇಂದು ಕಣಕ್ಕಿಳಿಯಲಿದ್ದಾರೆ. ಗೆದ್ದರೆ ಸೆಮಿಫೈನಲ್ ಸ್ಥಾನವನ್ನು ಖಚಿತಪಡಿಸಿಕೊಳ್ಳುವ ಮೂಲಕ ಪದಕ ಸುತ್ತಿಗೇರಲಿದ್ದಾರೆ. ಏತನ್ಮಧ್ಯೆ, ಭಾರತದ ಹಾಕಿ ತಂಡ ಕೂಡ ಅಂತಿಮ ಲೀಗ್​ ಪಂದ್ಯದಲ್ಲಿ ಬಲಿಷ್ಠ ಆಸ್ಟ್ರೇಲಿಯಾವನ್ನು ಎದುರಿಸಲಿದೆ. ನಿನ್ನೆ(ಗುರುವಾರ) ನಡೆದಿದ್ದ ಪಂದ್ಯದಲ್ಲಿ ಬೆಲ್ಜಿಯಂ ವಿರುದ್ಧ 2-1 ಅಂತರದ ಸೋಲು ಕಂಡಿತ್ತು.

ಇದನ್ನೂ ಓದಿ Paris Olympics: ಹ್ಯಾಟ್ರಿಕ್​ ಪದಕ ನಿರೀಕ್ಷೆಯಲ್ಲಿ ಮನು ಭಾಕರ್; 25 ಮೀ. ಪಿಸ್ತೂಲ್ ವಿಭಾಗದಲ್ಲಿ ಸ್ಪರ್ಧೆ

ಪ್ರಸಕ್ತ ಸಾಗುತ್ತಿರುವ ಪ್ಯಾರಿಸ್​ ಒಲಿಂಪಿಕ್ಸ್(Paris Olympic)​ ಕ್ರೀಡಾಕೂಟದಲ್ಲಿ ಭಾರತ ಇದುವರೆಗೂ 3 ಪದಕಗಳನ್ನು ಗೆದ್ದು ಪದಕಪಟ್ಟಿಯಲ್ಲಿ ಸದ್ಯ 44ನೇ ಸ್ಥಾನದಲ್ಲಿ ಕಾಣಿಸಿಕೊಂಡಿದೆ. ಈಗಾಗಲೇ ಕೆಲವು ಸ್ಪರ್ಧೆಗಳಲ್ಲಿ ಭಾರತೀಯ ಕ್ರೀಡಾಳುಗಳು ತಮ್ಮ ವಿಭಾಗದ ಸ್ಪರ್ಧೆಯಲ್ಲಿ ಗೆಲುವು ಸಾಧಿಸಿ ಪದಕ ಭರವಸೆ ಮೂಡಿಸಿದ್ದಾರೆ. ಇದರ ಬೆನ್ನಲ್ಲೇ ಪದಕ ಗೆಲ್ಲುವ ಕ್ರೀಡಾಪಟುಗಳಿಗೆ ಕಾರು ಬಹುಮಾನ ನೀಡಲಾಗುವುದು ಎಂದು ಜೆಎಸ್​ಡಬ್ಲ್ಯು ಎಂಜಿ ಇಂಡಿಯಾದ ಚೇರ್ಮನ್​ ಸಜ್ಜನ್​ ಜಿಂದಾಲ್(JSW Chairman Sajjan Jindal)​ ಘೋಷಣೆ ಮಾಡಿದ್ದಾರೆ. ಹೊಸದಾಗಿ ಮಾರುಕಟ್ಟೆಗೆ ಬರುತ್ತಿರುವ ಎಂಜಿ ವಿಂಡ್ಸರ್(MG Windsor)​ ಕಾರನ್ನು ಬಹುಮಾನವಾಗಿ ನೀಡುವುದಾಗಿ ​ಸಜ್ಜನ್​ ಜಿಂದಾಲ್ ಹೇಳಿದ್ದಾರೆ. ಈ ಕಾರಿನ ಮೌಲ್ಯ ಸುಮಾರು 25 ಲಕ್ಷ ರೂ. ಆಗಿದೆ.

Continue Reading
Advertisement
Model Monsoon Fashion
ಲೈಫ್‌ಸ್ಟೈಲ್17 mins ago

Model Monsoon Fashion: ಮಾನ್ಸೂನ್‌ ಫ್ಯಾಷನ್‌ನಲ್ಲಿ ಮಾಡೆಲ್‌ ಸನ್ನಿಧಿಯ ಸಿಂಪಲ್‌ ಲುಕ್ಸ್!

Ismail Haniyeh Killing
ವಿದೇಶ26 mins ago

Ismail Haniyh Killing: ಇಸ್ಮಾಯಿಲ್‌ ಹನಿಯೆಹ್‌ ಹತ್ಯೆಗೆ ನಡೆದಿತ್ತಾ ಮಾಸ್ಟರ್‌ ಪ್ಲ್ಯಾನ್? ತಿಂಗಳ ಹಿಂದೆಯೇ ಗೆಸ್ಟ್‌ಹೌಸ್‌ನಲ್ಲಿ‌ ಇಡಲಾಗಿತ್ತಾ ಬಾಂಬ್‌?

Paris Olympics
ಕ್ರೀಡೆ30 mins ago

Paris Olympics: ಆರ್ಚರಿ ಪ್ರೀ ಕ್ವಾರ್ಟರ್‌ನಲ್ಲಿ ನಾಳೆ ಭಾರತದ ದೀಪಿಕಾ ಕುಮಾರಿ-ಭಜನ್ ಕೌರ್ ಕಣಕ್ಕೆ

BBMP Property Tax
ಪ್ರಮುಖ ಸುದ್ದಿ1 hour ago

BBMP Property Tax: ಆಸ್ತಿ ತೆರಿಗೆ ಒನ್‌ ಟೈಮ್‌ ಸೆಟ್ಲ್‌ಮೆಂಟ್‌ಗೆ ಮತ್ತೆ 1 ತಿಂಗಳು ಕಾಲಾವಕಾಶ ವಿಸ್ತರಣೆ ಮಾಡಿದ ಬಿಬಿಎಂಪಿ

Love Case
ಬಳ್ಳಾರಿ2 hours ago

Love case : ಅಂತರ್ಜಾತಿ ವಿವಾಹಕ್ಕೆ ಪೋಷಕರ ವಿರೋಧ; ವಿಷ ಸೇವಿಸಿ ಪ್ರೇಮಿಗಳಿಬ್ಬರು ಆತ್ಮಹತ್ಯೆ

thawar chand gehlot siddaramaiah Governor versus state
ಪ್ರಮುಖ ಸುದ್ದಿ2 hours ago

Governor Versus State: ಶುರುವಾಯ್ತು ರಾಜ್ಯದಲ್ಲಿ ರಾಜ್ಯ ಸರ್ಕಾರ ವರ್ಸಸ್ ರಾಜ್ಯಪಾಲ ಸಂಘರ್ಷ; ರಾಜ್ಯಪಾಲರ ಮುಂದಿನ ನಡೆ ಏನು?

Viral Video
Latest2 hours ago

Viral Video: ಥೋ! ಈ ಮುದುಕರಿಗೆ ಈ ವಯಸ್ಸಲ್ಲಿ ಏನೆಲ್ಲ ಚಪಲ ನೋಡಿ! ಹಿಂದೆಂದೂ ಕಂಡಿರದಂಥ ವಿಡಿಯೊ!

Paris Olympics
ಕ್ರೀಡೆ2 hours ago

Paris Olympics: ಆರ್ಚರಿ ಮಿಶ್ರ ತಂಡ ಸ್ಪರ್ಧೆಯಲ್ಲಿ ಕ್ವಾರ್ಟರ್​ ಫೈನಲ್​ ತಲುಪಿದ ಧೀರಜ್‌- ಅಂಕಿತಾ ಜೋಡಿ

intel layoffs
ವಿದೇಶ2 hours ago

Intel Layoffs: ಆರ್ಥಿಕ ಬಿಕ್ಕಟ್ಟು- ಇಂಟೆಲ್‌ ಕಂಪನಿಯಿಂದ 18,000 ಉದ್ಯೋಗಿಗಳು ವಜಾ

Sexual Abuse
Latest2 hours ago

Sexual Abuse: ಹಾಸ್ಟೆಲ್‌ ಬಾತ್‌ರೂಮ್‌ನಲ್ಲಿ ಮಗು ಜನನ! ಆಘಾತಗೊಂಡು ಅಲ್ಲೇ ಕೂತಿದ್ದ ಬಾಲಕಿ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain
ಮಳೆ1 day ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ1 day ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ1 day ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

karnataka Rain
ಮಳೆ3 days ago

Karnataka rain : ಭದ್ರಾ ನದಿಯಲ್ಲಿ ಕೊಚ್ಚಿ ಹೋದ ಹಸು; ಬೈಂದೂರಿನಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ

Karnataka Rain
ಮಳೆ3 days ago

Karnataka Rain : ಭಾರಿ ಮಳೆಗೆ ಬಾಳೆಹೊನ್ನೂರು ಮುಳುಗಡೆ; ನೆರೆಗೆ ಬೋಟ್‌ ಮೊರೆ ಹೋದ ಜನರು

Bharachukki falls
ಚಾಮರಾಜನಗರ3 days ago

Bharachukki Falls : ಭರಚುಕ್ಕಿ ಜಲಪಾತಕ್ಕೆ ಕಳ್ಳ ಮಾರ್ಗದಿಂದ ಹೋದೋರಿಗೆ ಬಸ್ಕಿ ಹೊಡೆಸಿದ ಪೊಲೀಸರು!

karnataka Rain
ಮಳೆ4 days ago

Karnataka Rain: ಮತ್ತೆ ಶುರು ಮಳೆ ಅಬ್ಬರ; ಗಾಳಿಗೆ ಹಾರಿ ಹೋದ ಮನೆಗಳ ಚಾವಣಿ, ಶಿರಾಡಿಘಾಟ್‌ನಲ್ಲಿ ಮತ್ತೆ ಭೂ ಕುಸಿತ

Elephant combing Makna elephant captured near Bannerghatta
ಬೆಂಗಳೂರು ಗ್ರಾಮಾಂತರ4 days ago

Elephant combing: ಭೀಮ, ಮಹೇಂದ್ರರ ಮುಂದೆ ಮಂಡಿಯೂರಿದ ಮಕ್ನಾ ಆನೆ; ಹೇಗಿತ್ತು ಗೊತ್ತಾ ಕಾರ್ಯಾಚರಣೆ

karnataka rain
ಮಳೆ4 days ago

Karnataka rain: ಪ್ರವಾಹದ ಭೀಕರತೆ; ಹಳ್ಳದಲ್ಲಿ ತೇಲಿಬಂದ ಎಮ್ಮೆಗಳ ಕಳೇಬರ

Tungabhadra Dam
ಕೊಪ್ಪಳ5 days ago

Tungabhadra Dam: ಕಾಲುವೆಯಲ್ಲಿ ಬಾಲಕರ ಈಜಾಟ; ಅಧಿಕಾರಿಗಳಿಗೆ ಪೀಕಲಾಟ!

ಟ್ರೆಂಡಿಂಗ್‌