Site icon Vistara News

Aero India 2023 : ತುಮಕೂರಿನ ಎಚ್‌ಎಎಲ್‌ ಘಟಕದಲ್ಲಿ 40 ಹೆಲಿಕಾಪ್ಟರ್‌ ಉತ್ಪಾದನೆಗೆ ಸಿದ್ಧತೆ

HAL Helicopter

HAL Helicopter

ಬೆಂಗಳೂರು: ತುಮಕೂರಿನ ಎಚ್‌ಎಎಲ್‌ ಘಟಕದಲ್ಲಿ 40 ಹೆಲಿಕಾಪ್ಟರ್‌ಗಳನ್ನು ಉತ್ಪಾದಿಸಲಾಗುವುದು ಎಂದು ಸಂಸ್ಥೆಯ ಸಿಎಂಡಿ ಅನಂತ ಕೃಷ್ಣನ್‌ ತಿಳಿಸಿದ್ದಾರೆ. ಏರೋ ಇಂಡಿಯಾ ೨೦೨೩ರಲ್ಲಿ (Aero India 2023) ನಡೆಸಿದ ಸುದ್ದಿಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು.
ತುಮಕೂರಿನಲ್ಲಿ ಹೆಚ್ ಎಎಲ್‌ನ ಹೆಲಿಕಾಪ್ಟರ್ ನಿರ್ಮಾಣ ಘಟಕಕ್ಕೆ ಚಾಲನೆ ಸಿಕ್ಕಿದೆ. ಈಗಾಗಲೇ ೮೪ ಸಾವಿರ ಕೋಟಿ ರೂ. ಮೌಲ್ಯದ ವ್ಯವಹಾರದ ಕುರಿತಂತೆ ಒಡಂಬಡಿಕೆಯಾಗಿದೆ. ಏರೋ ಶೋನಲ್ಲಿ ಹೆಚ್ ಎ ಎಲ್ ನ ಹೊಸ ಆವಿಷ್ಕಾರಗಳು ಅನಾವರಣವಾಗಿವೆ. ತುಮಕೂರಿನ ಘಟಕ ಹೆಚ್ಚಿನ ಹೆಲಿಕಾಪ್ಟರ್ ಗಳ ಉತ್ಪಾದನೆಗೆ ಸಹಕಾರಿಯಾಗಲಿದೆ. ಮೊದಲ ಹಂತದಲ್ಲಿ ೪೦ ಹೆಲಿಕಾಪ್ಟರ್ ನಿರ್ಮಾಣಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈಗಾಗಲೇ ೨೦೦ ಹೆಲಿಕಾಪ್ಟರ್ ಗಳ ನಿರ್ಮಾಣಕ್ಕೆ ಬೇಡಿಕೆ‌ ಬಂದಿದೆ ಎಂದು ವಿವರಿಸಿದರು.
ಮುಂದಿನ ವರ್ಷದ ಫೆಬ್ರವರಿ ವೇಳೆಗೆ LCA ಹೆಲಿಕಾಪ್ಟರ್ ಅನ್ನು ಸೇನೆಗೆ ಹಸ್ತಾಂತರಿಸುವ ಗುರಿಯನ್ನು ಇಟ್ಟುಕೊಳ್ಳಲಾಗಿದೆ. ತುಮಕೂರಿನಲ್ಲಿ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಗಿದೆ ಎಂದರು.

Exit mobile version