Site icon Vistara News

ಬ್ರಿಟನ್ ಪ್ರಧಾನಿ ಪತ್ನಿ ಅಕ್ಷತಾಗೆ 500 ಕೋಟಿ ರೂ. ನಷ್ಟ, ಗೂಗಲ್ ಸಿಇಒ ಪಿಚ್ಚೈಗೆ 1854 ಕೋಟಿ ರೂ. ವೇತನ!

akshata murty looses rs 500 crore while Google CEO Pichai earns rs 1,854 crore

ನವದೆಹಲಿ: ಇನ್ಫೋಸಿಸ್ ಸಹ ಸಂಸ್ಥಾಪಕ ನಾರಾಯಣಮೂರ್ತಿ ಅವರ ಪುತ್ರಿ ಹಾಗೂ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರು ಪತ್ನಿಯಾಗಿರುವ ಅಕ್ಷತಾ ಮೂರ್ತಿ (akshata murty) ಅವರು ಆಸ್ತಿಯಲ್ಲಿ 500 ಕೋಟಿ ರೂ. ಇಳಿಕೆಯಾಗಿದೆ. ಮತ್ತೊಂದೆಡೆ ಗೂಗಲ್ ಸಿಇಒ ಸುಂದರ್ ಪಿಚ್ಚೈ (Sundar Pichai) ಆಸ್ತಿಯಲ್ಲಿ 1854 ಕೋಟಿ ರೂ. ಹೆಚ್ಚಳವಾಗಿದೆ! ಈ ವಾರ ಬಿಸಿನೆಸ್ ಕ್ಷೇತ್ರದಲ್ಲಿ ಕಂಡ ಬಂದ ಪ್ರಮುಖ ಬೆಳವಣಿಗೆಗಳು ಇವು.

ತ್ರೈಮಾಸಿಕ ಲಾಭಾಂಶ ಪ್ರಕಟವಾದ ಬೆನ್ನಲ್ಲೇ ಕಂಪನಿಯ ಷೇರುಗಳು ಕುಸಿದಿವೆ. ಪರಿಣಾಮ ಅಕ್ಷತಾ ಮೂರ್ತಿ ಅವರಿಗೆ ಸುಮಾರು 49 ಮಿಲಿಯನ್ ಪೌಂಡ್, ಅಂದರೆ ಸುಮಾರು 500 ಕೋಟಿ ರೂ. ನಷ್ಟವಾಗಿದೆ. ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರ ಪತ್ನಿಯೂ ಆಗಿರುವ ಅಕ್ಷತಾ ಅವರು ಭಾರತೀಯ ಸಾಫ್ಟ್‌ವೇರ್ ದೈತ್ಯ ಇನ್ಫೋಸಿಸ್‌ನಲ್ಲಿ ಶೇ. 0.94 ಷೇರು ಹೊಂದಿದ್ದಾರೆ. ಮಾರ್ಚ್ 2020ರಿಂದ ಗಮನಿಸಿದರೆ ಇದು ಅತಿದೊಡ್ಡ ಕುಸಿತವಾಗಿದೆ.

ಒಂದೆಡೆ ಅಕ್ಷತಾ ಮೂರ್ತಿ ಅವರಿಗೆ ನಷ್ಟವಾದರೆ ಗೂಗಲ್ ಸಿಇಒ ಸುಂದರ್ ಪಿಚ್ಚೈ ಅವರಿಗೆ ಲಾಭವಾಗಿದೆ. ಆರ್ಥಿಕ ಹಿಂಜರಿತದ ಭೀತಿಯಲ್ಲಿ ಗೂಗಲ್ ಜನವರಿ ತಿಂಗಳಲ್ಲಿ ಸುಮಾರು 12 ಸಾವಿರ ಉದ್ಯೋಗಗಳನ್ನ ಕಡಿತ ಮಾಡಿದೆ. ಇಷ್ಟಾಗಿಯೂ ಕಂಪನಿಯ ಪ್ರದರ್ಶನದ ಮೇಲೆ ಪರಿಣಾಮ ಬೀರಿಲ್ಲ. ಅಮೆರಿಕ ಷೇರು ಪೇಟೆಗೆ ತಿಳಿಸಲಾಗಿರುವ ಮಾಹಿತಿಯ ಪ್ರಕಾರ, 2022ರಲ್ಲಿ ಗೂಗಲ್ ಸಿಇಒ ಸುಂದರ್ ಪಿಚ್ಚೈ ಅವರು ಒಟ್ಟು 1,854 ಕೋಟಿ ರೂ. ವೇತನವನ್ನು ಪಡೆದುಕೊಂಡಿದ್ದಾರೆ.

2022ರಲ್ಲಿ ಆಲ್ಫಾಬೆಟ್ ಉದ್ಯೋಗಿಗಳಿಗೆ ಸರಾಸರಿ ಒಟ್ಟು ಪರಿಹಾರವು 279,802 ಡಾಲರ್ ಆಗಿತ್ತು. ಪಿಚೈ ಅವರ ಪರಿಹಾರವು ಅದರ ಮೊತ್ತದ 808 ಪಟ್ಟು ಹೆಚ್ಚಾಗಿದೆ. ಹಾಗಾಗಿ, ಸುಂದರ್ ಪಿಚ್ಚೈ ಅವರು ಅತಿ ಹೆಚ್ಚು ಸಂಬಂಳ ಪಡೆಯುವ ಜಗತ್ತಿನ ಸಿಇಒಗಳಲ್ಲಿ ಒಬ್ಬರಾಗಿದ್ದಾರೆ.

ಇದನ್ನೂ ಓದಿ: Sundar Pichai: ಗೂಗಲ್ ಸರ್ಚ್‌ ಎಂಜಿನ್‌ಗೆ ಶೀಘ್ರವೇ ಎಐ ಚಾಟ್ ಎಂದ ಸುಂದರ್ ಪಿಚ್ಚೈ

ಉದ್ಯೋಗ ಶೋಧ ವೇದಿಕೆಯಾಗಿರುವ ಲಿಂಕ್ಡ್‌ಇನ್‌ನ 2023ರ ಒಬ್ಬರ ಉದ್ಯೋಗ ಬೆಳೆಸುವ ಅತ್ಯುತ್ತಮ ಕಂಪನಿಗಳ ಪಟ್ಟಿಯಲ್ಲಿ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಅಗ್ರ ಸ್ಥಾನವನ್ನು ಪಡೆದುಕೊಂಡಿದೆ. ಈ ವಾರ್ಷಿಕ ಪಟ್ಟಿಯು ಈ ವರ್ಗದಲ್ಲಿ 7 ನೇ ಆವೃತ್ತಿಯಾಗಿದೆ. ಅಮೆಜಾನ್, ರಿಲಯನ್ಸ್ ಇಂಡಸ್ಟ್ರೀಸ್, ಜೆಪ್ಟೊ ಸೇರಿದಂತೆ ಒಟ್ಟು 25 ಕಂಪನಿಗಳನ್ನು ಈ ಪಟ್ಟಿಯಲ್ಲಿ ಕಾಣಬಹುದು.

Exit mobile version