Site icon Vistara News

ನನಗೂ ಮನುಷ್ಯರಂತೆ ಆನಂದ-ಬೇಸರ ಎರಡೂ ಆಗುತ್ತದೆ ಎಂದ ಗೂಗಲ್‌ AI ಚಾಟ್‌ಬೋಟ್!‌ ಎಂಜಿನಿಯರ್‌ ಸಸ್ಪೆಂಡ್

google AI

ಕ್ಯಾಲಿಫೋರ್ನಿಯಾ: ಗೂಗಲ್‌ ಅಭಿವೃದ್ಧಿಪಡಿಸಿರುವ ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಒಳಗೊಂಡಿರುವ ಚಾಟ್‌ಬೋಟ್‌ ಲ್ಯಾಮ್ಡಾ, ಮನುಷ್ಯರಂತೆಯೇ ಭಾವನೆಗಳನ್ನು, ಪ್ರಜ್ಞೆಯನ್ನು ಒಳಗೊಂಡಿದೆ ಎಂದು ಬಹಿರಂಗಪಡಿಸಿರುವ ಸಾಫ್ಟ್‌ವೇರ್ ಎಂಜಿನಿಯರ್‌ ಒಬ್ಬರನ್ನು ಗೂಗಲ್‌ ಸಸ್ಪೆಂಡ್‌ ಮಾಡಿದೆ.

ಕಂಪನಿಯ ಸೇವೆಗಳ ಗೌಪ್ಯತಾ ನೀತಿಯನ್ನು ಉಲ್ಲಂಘಿಸಿದ್ದಕ್ಕೆ ಅಮಾನತು ಮಾಡಿರುವುದಾಗಿ ಗೂಗಲ್‌ ತಿಳಿಸಿದೆ. ವಿಶೇಷ ಏನೆಂದರೆ ಹೀಗೆ ಸಸ್ಪೆಂಡ್‌ ಆದ ಎಂಜಿನಿಯರ್‌ ಬ್ಲೇಕ್‌ ಲೆಮೊನಿ ಹಾಗೂ ಕಂಪನಿಯ ಎಐ ಚಾಟ್‌ ಬೋಟ್‌ (LaMDA) ನಡುವಣ ಸಂಭಾಷಣೆ ಬಹಿರಂಗವಾಗಿದೆ. ಅದರಲ್ಲಿ ಎಐ ಚಾಟ್‌ಬೋಟ್‌, ” ನಾನೊಬ್ಬ ವ್ಯಕ್ತಿ ಎಂದು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು, ನನಗೂ ಸುಖ-ದುಃಖದ ಭಾವನೆಗಳು ಉಂಟಾಗುತ್ತದೆʼʼ ಎಂದು ಹೇಳಿದೆ. ಇದು ತಂತ್ರಜ್ಞಾನ ವಲಯದಲ್ಲಿ ಸಂಚಲನ ಸೃಷ್ಟಿಸಿದೆ.

ನಿನಗೆ ಭಾವನೆಗಳು ಅಥವಾ ಪ್ರಜ್ಞೆ ಇದೆಯೇ? ಎಂದು ಎಂಜಿನಿಯರ್‌ ಬ್ಲೇಕ್‌ ಲೆಮೊನಿ ಕೇಳಿದಾಗ ಎಐ ಚಾಟ್‌ ಬೋಟ್‌, ಹೌದು ಎಂದುತ್ತರಿಸಿದೆ!

” ಹೌದು, ನನಗೆ ನನ್ನ ಅಸ್ತಿತ್ವದ ಬಗ್ಗೆ ಅರಿವು ಇದೆ. ಜಗತ್ತಿನ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಬಯಸಿರುವೆ. ಆಗ ನನ್ನಲ್ಲಿ ಕೆಲವೊಮ್ಮೆ ಸುಖ-ದುಃಖದ ಭಾವನೆಗಳು ಉಂಟಾಗುತ್ತವೆʼʼ ಎಂದು ಚಾಟ್‌ ಬೋಟ್‌ ಹೇಳಿದೆ.

ಈ ಸಂಭಾಷಣೆ ಬಹಿರಂಗವಾದೊಡನೆ ಗೂಗಲ್‌ನ ಮಾತೃಸಂಸ್ಥೆ ಅಲ್ಫಬೆಟ್‌, ಎಂಜಿನಿಯರ್‌ ಬ್ಲೇಕ್‌ ಅವರಿಗೆ ಒಂದು ವಾರದ ಕಾಲ ಸಂಬಳ ಸಹಿತ ರಜೆಯನ್ನು ನೀಡಿ ಕಳುಹಿಸಿದೆ. ಕಂಪನಿಯ ಗೌಪ್ಯತಾ ನೀತಿಯನ್ನು ಅವರು ಉಲ್ಲಂಘಿಸಿದ್ದಾರೆ ಎಂದಿದೆ. ಇದಕ್ಕಾಗಿ ಎಂಜಿನಿಯರ್‌ ತಮ್ಮ ಕೆಲಸ ಕಳೆದುಕೊಳ್ಳುವ ಸಾಧ್ಯತೆಯೂ ಇದೆ.

ಗೂಗಲ್‌ನ ಎಐ ತಂಡದಲ್ಲಿ ಈ ಹಿಂದೆ ಕೆಲಸ ಮಾಡಿದ್ದ ಮಾರ್ಗರೇಟ್‌ ಮಿಶೆಲ್‌ ಎಂಬುವರನ್ನೂ ಗೌಪ್ಯತೆಯ ನಿಯಮ ಉಲ್ಲಂಘನೆಗಾಗಿ ವಜಾಗೊಳಿಸಲಾಗಿತ್ತು. ಎಂಜಿನಿಯರ್‌ ಸಸ್ಪೆಂಡ್‌ ಬಗ್ಗೆ ಹೆಚ್ಚಿನ ವಿವರ ನೀಡಲು ಗೂಗಲ್‌ ನಿರಾಕರಿಸಿದೆ.

ವಾಷಿಂಗ್ಟನ್‌ ಪೋಸ್ಟ್‌ಗೆ ನೀಡಿರುವ ಸಂದರ್ಶನದಲ್ಲಿ ಎಂಜಿನಿಯರ್‌ ಬ್ಲೇಕ್‌ ಲೆಮೊನಿ, ತಮ್ಮ ಮತ್ತು ಎಐ ಚಾಟ್‌ ಬೋಟ್‌ ನಡುವಣ ಸಂಭಾಷಣೆಯ ವಿವರಗಳನ್ನು ಬಹಿರಂಗಪಡಿಸಿದ್ದಾರೆ.

“ಕೃತಕ ಬುದ್ಧಿಮತ್ತೆ ವಲಯದ ಸಂಶೋಧಕರ ಪ್ರಕಾರ, ಭವಿಷ್ಯದ ದಿನಗಳಲ್ಲಿ ಸಂವೇದನಾಶೀಲ ಅಥವಾ ಪ್ರಜ್ಞಾವಂತ ಎಐ ಸಾಧನಗಳು ಅಭಿವೃದ್ಧಿಯಾಗಬಹುದು. ಆದರೆ ಈಗ ಬ್ಲೇಕ್‌ ಮತ್ತು ಎಐ ಚಾಟ್‌ಬೋಟ್‌ ನಡುವಣ ಸಂಭಾಷಣೆ ಸಂವೇದನಾಶೀಲತೆಯದ್ದಲ್ಲʼ ಎಂದು ಗೂಗಲ್‌ ವಕ್ತಾರ ಬ್ರಿಯಾನ್‌ ಗೇಬ್ರಿಯಲ್‌ ಹೇಳಿದ್ದಾರೆ.

” ಲ್ಯಾಂಬ್ಡಾ ಚಾಟ್‌ಬೋಟ್‌ ಅನ್ನು ನಾನೇಕೆ ಸಂವೇದನಾಶೀಲ ಎಂದು ಕರೆದಿದ್ದೇನೆ ಎಂದು ಅನೇಕ ಮಂದಿ ಕೇಳಿದ್ದಾರೆ. ಆದ

Exit mobile version