Site icon Vistara News

Apply for ration card : ಹೊಸ ರೇಷನ್‌ ಕಾರ್ಡ್‌ಗೆ ಅರ್ಜಿ ಸಲ್ಲಿಸುವುದು ಹೇಗೆ?

Ration shop

#image_title

ಬೆಂಗಳೂರು: ಕಾಂಗ್ರೆಸ್‌ ಸರ್ಕಾರ ರಾಜ್ಯದ ಜನತೆಗೆ 5 ಬಗೆಯ ಗ್ಯಾರಂಟಿ ಸ್ಕೀಮ್‌ಗಳನ್ನು ನೀಡಲು ಪ್ರಕ್ರಿಯೆ ಆರಂಭಿಸಿದೆ. ಗೃಹಲಕ್ಷ್ಮಿ, ಯುವನಿಧಿ, ಶಕ್ತಿ, ಅನ್ನ ಭಾಗ್ಯ ಮತ್ತು ಗೃಹಜ್ಯೋತಿ ಎಂಬ ಗ್ಯಾರಂಟಿ ಯೋಜನೆಯ ಪ್ರಯೋಜನ ಪಡೆಯಲು ಜನತೆ ಕಾಯುತ್ತಿದ್ದಾರೆ. (Apply for ration card ) ಈ ಯೋಜನೆಗಳ ಲಾಭ ಪಡೆಯಲು ಬೇಕಿರುವ ದಾಖಲೆಗಳಲ್ಲಿ ರೇಷನ್‌ ಕಾರ್ಡ್‌ ಕೂಡ ಒಂದಾಗಿದೆ. ಹೀಗಾಗಿ ಎಪಿಎಲ್/ಬಿಪಿಎಲ್‌ ರೇಷನ್‌ ಕಾರ್ಡ್‌ ಪಡೆಯಲು ಅನೇಕ ಮಂದಿ ಆಸಕ್ತಿ ವಹಿಸಿದ್ದಾರೆ.

ಎಪಿಎಲ್‌ ಕಾರ್ಡ್‌ ಇರುವವರಿಗೂ ಕೆಲ ಗ್ಯಾರಂಟಿ ಯೋಜನೆಗಳನ್ನು ಸರ್ಕಾರ ಘೋಷಿಸಿದೆ. ಇತ್ತೀಚಿಗೆ ಹೊಸ ಷರತ್ತುಗಳು, ಗೊಂದಲಗಳು ಸೃಷ್ಟಿಯಾಗಿದ್ದರೂ, ಹೊಸ ರೇಷನ್‌ ಕಾರ್ಡ್‌ಗೆ ಅರ್ಜಿ ಸಲ್ಲಿಸಲು ಜನ ಕಾತರರಾಗಿದ್ದಾರೆ. ಮಾತ್ರವಲ್ಲದೆ ಗುರುತಿನ ಚೀಟಿಯಾಗಿಯೂ ರೇಷನ್‌ ಕಾರ್ಡ್‌ ಬಳಕೆಯಾಗುತ್ತದೆ. ( Department of Food, Civil Supplies and Consumers Affairs ) ಹೀಗಾಗಿ ರೇಷನ್‌ ಕಾರ್ಡ್‌ ಒಂದು ಬಹೂಪಯೋಗಿ ದಾಖಲೆ.

ಹಾಗಾದರೆ ಹೊಸ ರೇಷನ್‌ ಕಾರ್ಡ್‌ ಪಡೆಯಲು ಅರ್ಜಿ ಸಲ್ಲಿಸುವುದು ಹೇಗೆ? ಆನ್‌ಲೈನ್ ವಿಧಾನದಲ್ಲಿ ಹೊಸ ರೇಷನ್‌ ಕಾರ್ಡ್‌ ಪಡೆಯಲು ಅರ್ಜಿ ಸಲ್ಲಿಸಬಹುದು. ಇದಕ್ಕಾಗಿ ನೀವು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರ ಇಲಾಖೆಯ ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಇಲಾಖೆಯ ವೆಬ್‌ಸೈಟ್‌ ವಿಳಾಸ ಹೀಗಿದೆ: https://ahara.kar.nic.in ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರ ಇಲಾಖೆಯ ವೆಬ್‌ಸೈಟ್‌ನಲ್ಲಿ ತಿಳಿಸಿರುವ ಮಾಹಿತಿಯನ್ನು ಮಾತ್ರ ಇಲ್ಲಿ ನೋಡೋಣ.

ಸಾರ್ವಜನಿಕರು ಹೊಸ ರೇಷನ್‌ ಕಾರ್ಡ್‌ಗೆ ಅರ್ಜಿ ಸಲ್ಲಿಸಲು https://ahara.kar.nic.in ವೆಬ್‌ಸೈಟ್‌ನಲ್ಲಿ ಇ- ಸರ್ವೀಸ್‌ (e-service) ಮೆನುವನ್ನು ಆಯ್ಕೆ ಮಾಡಿಕೊಳ್ಳಬೇಕು. ಅಲ್ಲಿ ಹೊಸ ರೇಷನ್‌ ಕಾರ್ಡ್‌ಗೆ ಅರ್ಜಿ ಸಲ್ಲಿಸಲು ಪ್ರತ್ಯೇಕ ಲಿಂಕ್‌ ಇದೆ. ಆದರೆ ಸದ್ಯಕ್ಕೆ ಆ ಲಿಂಕ್‌ ಒತ್ತಿದರೆ Service Unavailable ಎಂಬ ಸಂದೇಶ ಬರುತ್ತಿದೆ.

ರೇಷನ್‌ ಕಾರ್ಡ್‌ಗೆ ಅರ್ಜಿ ಸಲ್ಲಿಸಲು ಆಧಾರ್‌ ಕಾರ್ಡ್‌ ಕಡ್ಡಾಯವಾಗಿ ಬೇಕು. ಕನ್ನಡ ಮತ್ತು ಇಂಗ್ಲಿಷ್‌ ಭಾಷೆಯಲ್ಲಿ ಅರ್ಜಿ ಸಲ್ಲಿಸಬಹುದು. ಗ್ರಾಹಕರು ಬೇಕಾದ ಲಾಂಗ್ವೇಜ್‌ ಅನ್ನು ಆಯ್ಕೆ ಮಾಡಬಹುದು.

Apply for ration card How to apply for a new ration card

ಬಳಕೆದಾರರು Non – Priority Household (NPHH) ಆಯ್ಕೆ ಮಾಡಿ NPHH ರೇಷನ್‌ ಕಾರ್ಡ್‌ಗೂ ಅರ್ಜಿ ಸಲ್ಲಿಸಬಹುದು. ಎನ್‌ಪಿಎಚ್‌ಎಚ್‌ ರೇಷನ್‌ ಕಾರ್ಡ್‌ನಲ್ಲಿ ಸಬ್ಸಿಡಿ ದರದ ಅಕ್ಕಿ, ಬೇಳೆಕಾಳು ಸಿಗುವುದಿಲ್ಲ. ಆದರೆ ರೇಷನ್‌ ಕಾರ್ಡ್‌ ಸಿಗುತ್ತದೆ. ಇದನ್ನು ಗುರುತಿನ ಚೀಟಿಯಾಗಿ ಬಳಸಬಹುದು.

ಬಳಕೆದಾರರು ಆಧಾರ್‌ ನಂಬರ್‌ ಮತ್ತು ಆಧಾರ್‌ ಜತೆಗೆ ಲಿಂಕ್‌ ಆಗಿರುವ ಮೊಬೈಲ್‌ ನಂಬರ್‌ ನಮೂದಿಸಬೇಕು. ಆಧಾರ್‌ ಆಧರಿತ ಅಥೆಂಟಿಕೇಶನ್‌ ಪ್ರಕ್ರಿಯೆ ಪೂರ್ಣಗೊಳಿಸಬೇಕು. ಇದಕ್ಕಾಗಿ One time password to mobile number registered with the aadhar ಆಯ್ಕೆ ಕ್ಲಿಕ್ಕಿಸಬೇಕು. ನಿಮ್ಮ ಮೊಬೈಲ್‌ ನಂಬರಿಗೆ OTP ಸಿಗುತ್ತದೆ. ಒಟಿಪಿ ಮತ್ತು captcha ಪ್ರಕ್ರಿಯೆ ಪೂರ್ಣಗೊಳಿಸಿ. ಬಳಿಕ ಹೆಸರು, ಜನ್ಮ ದಿನಾಂಕ, ಲಿಂಗ ಇತ್ಯಾದಿ ಮಾಹಿತಿ ಭರ್ತಿಗೊಳಿಸಿ. ಆಧಾರ್‌ನಲ್ಲಿ ಇರುವಂತ ಇರಲಿ. ಬಳಿಕ finger print verification ಪ್ರಕ್ರಿಯೆ ಪೂರ್ಣಗೊಳಿಸಿ. ಈಗಾಗಲೇ ರೇಷನ್‌ ಕಾರ್ಡ್‌ನಲ್ಲಿ ನಿಮ್ಮ ಹೆಸರಿದ್ದರೆ ಅದನ್ನು ಡಿಲೀಟ್‌ ಮಾಡಿ ಹೊಸತಾಗಿ ಅರ್ಜಿ ಸಲ್ಲಿಸಬಹುದು. ಈಗಿನ ರೇಷನ್‌ ಕಾರ್ಡ್‌ ನಲ್ಲಿ ಹೆಸರು ಡಿಲೀಟ್ ಮಾಡದೆಯೇ ಹೊಸತಕ್ಕೆ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ.

Apply for ration card How to apply for a new ration card

ಕುಟುಂಬದ ಎಲ್ಲ ಸದಸ್ಯರ ವಿವರಗಳನ್ನು ನಮೂದಿಸಿದ ಬಳಿಕ ಅರ್ಜಿಯ ಸಂಖ್ಯೆ ಸಿಗುತ್ತದೆ. ಅದನ್ನು ಬಳಸಿ ಎಡಿಟ್‌ ಮಾಡಬಹುದು. ಬಳಿಕ ರೇಷನ್‌ ಕಾರ್ಡ್‌ ಅಡ್ರೆಸ್‌ ಸಿಲೆಕ್ಟ್‌ ಮಾಡಬೇಕು. ಪಿನ್‌ ಕೋಡ್‌ ಆಧರಿಸಿ ನ್ಯಾಯ ಬೆಲೆ ಅಂಗಡಿ (Fair price shop) ಮತ್ತು ಏರಿಯಾ ಆಟೊ ಸಿಲೆಕ್ಟ್‌ ಆಗುತ್ತದೆ. ನಗರ, ವಾರ್ಡ್‌ ನಂಬರ್‌ ಅನ್ನು ಸಿಲೆಕ್ಟ್‌ ಮಾಡಬಹುದು. ಗ್ರಾಮೀಣ ಪ್ರದೇಶವಾಗಿದ್ದರೆ ಪಂಚಾಯತ್‌ ಸಿಲೆಕ್ಟ್‌ ಮಾಡಬೇಕು. ಇತರ ಎಲ್ಲ ವಿವರಗಳನ್ನು ಭರ್ತಿಗೊಳಿಸಿದ ಬಳಿಕ ಸರಿ ಎನ್ನಿಸಿದ್ದರೆ Generate RC ಬಟನ್‌ ಕ್ಲಿಕ್ಕಿಸಿ. ರೇಷನ್‌ ಕಾರ್ಡ್‌ ಪ್ರತಿಯ ಪ್ರಿಂಟ್‌ ಔಟ್‌ ಅನ್ನು print ಬಟನ್‌ ಕ್ಲಿಕ್ಕಿಸಿ ತೆಗೆದುಕೊಳ್ಳಬಹುದು.

ಆಸಕ್ತರು ಆನ್‌ಲೈನ್/‌ ಬೆಂಗಳೂರು ಒನ್‌/ ಕರ್ನಾಟಕ ಒನ್‌/ private franchises/ ಜನಸ್ನೇಹಿ ಕೇಂದ್ರ/ ಗ್ರಾಮಪಂಚಾಯತ್/‌ POS ಶಾಪ್‌ಗಳಲ್ಲಿ ರೇಷನ್‌ ಕಾರ್ಡ್‌ಗೆ ಅರ್ಜಿ ಸಲ್ಲಿಸಬಹುದು. 70 ರೂ. ಶುಲ್ಕದಲ್ಲಿ ರೇಷನ್‌ ಕಾರ್ಡ್‌ ಅನ್ನು ಸ್ಪೀಡ್‌ ಪೋಸ್ಟ್‌ ಮೂಲಕ ಮನೆಗೆ ತರಿಸಿಕೊಳ್ಳಬಹುದು.

ಇದನ್ನೂ ಓದಿ: Congress Guarantee: ಪ್ರತಿ ವ್ಯಕ್ತಿಗೆ ಮಾಸಿಕ 10 ಕೆ.ಜಿ. ಅಕ್ಕಿ ಫ್ರೀ: ಕಾಂಗ್ರೆಸ್‌ನಿಂದ ಮೂರನೇ ಗ್ಯಾರಂಟಿ ʼಅನ್ನ ಭಾಗ್ಯʼ ಘೋಷಣೆ

Exit mobile version