Site icon Vistara News

Aero India 2023 : ಎಚ್‌ಎಎಲ್‌ನ ತೇಜಸ್ ‌ ಯುದ್ಧ ವಿಮಾನ ಖರೀದಿಸಲು ಅರ್ಜೆಂಟೀನಾ, ಮಲೇಷ್ಯಾ ಸಜ್ಜು

HAL LCA Tejas MK 1A

ಬೆಂಗಳೂರು: ಮಹತ್ವದ ಬೆಳವಣಿಗೆಯೊಂದರಲ್ಲಿ ಅರ್ಜೆಂಟೀನಾ ಮತ್ತು ಮಲೇಷ್ಯಾ, ಸಾರ್ವಜನಿಕ ವಲಯದ ಎಚ್‌ಎಎಲ್‌ ಉತ್ಪಾದಿಸುವ (Hindustan Aeronautics Limited) ಲಘು ಯುದ್ಧ ವಿಮಾನ ತೇಜಸ್‌ ಎಂಕೆ 1ಎ ಅನ್ನು ಆಮದು ಮಾಡಿಕೊಳ್ಳಲು ಅರ್ಜೆಂಟೀನಾ ಮತ್ತು ಮಲೇಷ್ಯಾ ಸಜ್ಜಾಗಿವೆ. (Aero India 2023) ಉಭಯ ದೇಶಗಳ ರಕ್ಷಣಾ ಪಡೆಗಳ ಮುಖ್ಯಸ್ಥರು ಬೆಂಗಳೂರಿನಲ್ಲಿ ನಡೆಯುತ್ತಿರುವ ಏರೋ ಇಂಡಿಯಾ ಶೋದಲ್ಲಿ ಭಾಗವಹಿಸಲು ಈಗಾಗಲೇ ಬಂದಿಳಿದಿದ್ದಾರೆ.

ಅರ್ಜೆಂಟೀನಾದ ಉನ್ನತ ಅಧಿಕಾರಿಗಳ ನಿಯೋಗವು ಎಚ್‌ಎಎಲ್‌ ಅಧಿಕಾರಿಗಳನ್ನು ಭೇಟಿಯಾಗಲಿದೆ. ಎಚ್‌ಎಎಲ್‌ ಎಲ್‌ಸಿಎ ತೇಜಸ್‌ ಎಂಕೆ 1 ಎ (HAL LCA Tejas MK 1A) ತನ್ನ ವಿಶೇಷ ಫೀಚರ್‌ಗಳು ಹಾಗೂ ಸಾಮರ್ಥ್ಯಕ್ಕೆ ಹೆಸರಾಗಿದೆ. ಎಲೆಕ್ಟ್ರಾನಿಕ್‌ ವಾರ್‌ಫೇರ್‌ ಸ್ಯೂಟ್ಸ್‌, ಮಲ್ಟಿ-ಮೋಡ್‌ ರಾಡಾರ್‌, ಏರ್-ಟು-ಏರ್‌ ಕ್ಷಿಪಣಿಗಳು ಇತ್ಯಾದಿ ಅಂಶಗಳನ್ನು ಒಳಗೊಂಡಿದೆ.

ಭವಿಷ್ಯದ ದಿನಗಳಲ್ಲಿ ಭಾರತೀಯ ರಕ್ಷಣಾ ಉದ್ದಿಮೆಯ ಕಂಪನಿಗಳು, ಲ್ಯಾಟಿನ್‌ ಅಮೆರಿಕ ಮತ್ತು ಕೆರಿಬಿಯನ್‌ ವಲಯಕ್ಕೆ ಡಿಫೆನ್ಸ್‌ ಸಾಧನಗಳನ್ನು ರಫ್ತು ಮಾಡಲು ಇದರಿಂದ ಹಾದಿ ಸುಗಮವಾಗಲಿದೆ. ಭಾರತೀಯ ವಾಯುಪಡೆ ಮತ್ತು ನೌಕಾಪಡೆಗಾಗಿ ಎಚ್‌ಎಎಲ್‌ ಈ ಯುದ್ಧ ವಿಮಾನವನ್ನು ತಯಾರಿಸಿದೆ. ತೇಜಸ್‌ ದೇಶದ ಮೊದಲ ಮೇಕ್‌ ಇನ್‌ ಇಂಡಿಯಾ ಯುದ್ಧ ವಿಮಾನವಾಗಿದೆ.

Exit mobile version