ಔರಂಗಾಬಾದ್: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನದಂದು, ಸೂರ್ಯನಿಗೆ ಸಮೀಪದಲ್ಲಿ ಇರುವ ನಕ್ಷತ್ರಕ್ಕೆ ಅವರ ಹೆಸರನ್ನು ನಾಮಕರಣ (Atal Bihari Vajpayee) ಮಾಡಲಾಗಿದೆ.
ಬಿಜೆಪಿಯ ಔರಂಗಾಬಾದ್ ಘಟಕದ ಅಧ್ಯಕ್ಷ ಶಿರೀಶ್ ಬೋರಾಲ್ಕರ್ ಈ ವಿಷಯವನ್ನು ತಿಳಿಸಿದ್ದಾರೆ. ಈ ನಕ್ಷತ್ರಕ್ಕೂ ಸೂರ್ಯನಿಗೂ 392.01 ಜ್ಯೋತಿರ್ವರ್ಷಗಳ ದೂರ ಇದೆ. ಇದು ಸೂರ್ಯನಿಗೆ ಸಮೀಪದಲ್ಲಿ ಇರುವ ನಕ್ಷತ್ರವಾಗಿದೆ.
ಇಂಟರ್ ನ್ಯಾಶನಲ್ ಸ್ಪೇಸ್ ರಿಜಿಸ್ಟ್ರಿ 2022ರ ಡಿಸೆಂಬರ್ 25ರಂದು ನಕ್ಷತ್ರಕ್ಕೆ ಅಟಲ್ ಬಿಹಾರಿ ವಾಜಪೇಯಿ ಅವರ ಹೆಸರನ್ನು ನೋಂದಣಿ ಮಾಡಿಕೊಂಡಿದೆ. ರಿಜಿಸ್ಟ್ರೇಶನ್ ಸಂಖ್ಯೆ CX 16408US ಆಗಿದೆ.
ವಾಜಪೇಯಿ ಅವರು 1996ರ ಮೇ 16ರಿಂದ ಜೂನ್ 1, ೧೯೯೬ ಮತ್ತು 1998 ಮಾರ್ಷ್ 19ರಿಂದ 2004 ಮೇ 22 ತನಕ ಪ್ರಧಾನಿಯಾಗಿದ್ದರು. 2018ರ ಆಗಸ್ಟ್ 16ರಂದು ನಿಧನರಾಗಿದ್ದರು.