Site icon Vistara News

₹2000 Notes Withdrawn: ನಿಮ್ಮ ಬಳಿ ₹2000 ನೋಟು ಇನ್ನೂ ಇದೆಯಾ? ಕೊನೆಯ ಕ್ಷಣದ ಗೊಂದಲದಿಂದ ಪಾರಾಗಲು ಈಗಲೇ ಮರಳಿಸಿ

2000 Notes Withdrawn

ಹೊಸದಿಲ್ಲಿ: ₹2000 ಮುಖಬೆಲೆಯ ನೋಟುಗಳನ್ನು ಬ್ಯಾಂಕ್‌ಗೆ ಮರಳಿಸುವ (₹2000 Notes Withdrawn) ಅಂತಿಮ ಗಡುವು ಸಮೀಪಿಸುತ್ತಿದೆ. ನಿಮ್ಮ ಬಳಿ ₹2000 ನೋಟುಗಳಿದ್ದರೆ, ಕೊನೆಯ ಕ್ಷಣದ ಗೊಂದಲಗಳಿಂದ ಪಾರಾಗಲು ಈಗಲೇ ಬ್ಯಾಂಕ್‌ಗೆ ಹೋಗಿ ಅವುಗಳನ್ನು ವಿನಿಮಯ ಮಾಡಿಕೊಳ್ಳುವುದು ಉತ್ತಮವೆಂದು ಸೂಚಿಸಲಾಗಿದೆ.

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಚಲಾವಣೆಯಲ್ಲಿರುವ 2,000 ರೂ ನೋಟುಗಳನ್ನು ಸ್ಥಗಿತಗೊಳಿಸುವ ಬಗ್ಗೆ 2023ರ ಮೇ 19ರಂದು ಘೋಷಣೆ ಮಾಡಿತು. ಸೆಪ್ಟೆಂಬರ್ 30 ನೋಟು ವಿನಿಮಯಕ್ಕೆ ಅಂತಿಮ ದಿನವಾಗಿದೆ. ಅಂತಿಮ ದಿನಾಂಕಕ್ಕೆ ಇನ್ನು ನಾಲ್ಕು ದಿನಗಳು ಉಳಿದಿವೆ. ನಿಮ್ಮ ಬಳಿ ಇರುವ 2000 ರೂಪಾಯಿ ನೋಟುಗಳನ್ನು ಸೆಪ್ಟೆಂಬರ್ 30ರೊಳಗೆ ಬ್ಯಾಂಕ್‌ಗಳಲ್ಲಿ ಠೇವಣಿ ಮಾಡುವಂತೆ ಅಥವಾ ಬೇರೆ ಮುಖಬೆಲೆಯ ನೋಟುಗಳಿಗೆ ವಿನಿಮಯ ಮಾಡಿಕೊಳ್ಳುವಂತೆ ಆರ್‌ಬಿಐ ಸೂಚಿಸಿದೆ.

ಬದಲಿಸುವ ಕ್ರಮ ಹೇಗೆ?

2000 ರೂಪಾಯಿ ನೋಟುಗಳನ್ನು ವಿನಿಮಯ ಮಾಡಿಕೊಳ್ಳುವ ಸೌಲಭ್ಯ ಸೆಪ್ಟೆಂಬರ್ 30ರವರೆಗೆ ಲಭ್ಯವಿದೆ. ನಿಮ್ಮ ಹತ್ತಿರದ ಬ್ಯಾಂಕ್ ಶಾಖೆಗಳಲ್ಲಿ ಈ ವಹಿವಾಟನ್ನು ಕೈಗೊಳ್ಳಬಹುದು. ಸೆಪ್ಟೆಂಬರ್ 30ರವರೆಗೆ ನಿಮ್ಮ ಬ್ಯಾಂಕ್ ಖಾತೆಗಳಿಗೆ ರೂ 2,000 ನೋಟುಗಳನ್ನು ಠೇವಣಿ ಮಾಡಬಹುದು ಅಥವಾ ಇವನ್ನು ನೀಡಿ ಬೇರೆ ನೋಟು ಪಡೆದುಕೊಳ್ಳಬಹುದು.

ಬ್ಯಾಂಕ್ ಶಾಖೆಗಳ ಸಾಮಾನ್ಯ ಕಾರ್ಯಚಟುವಟಿಕೆಗಳಿಗೆ ಅಡ್ಡಿಯಾಗುವಿಕೆ ಕಡಿಮೆಯಾಗುವಂತೆ ಈ ಉಪಕ್ರಮ ವಿನ್ಯಾಸಗೊಳಿಸಲಾಗಿದೆ. ನೀವು ಎಕ್ಸ್‌ಚೇಂಜ್‌ ಮಾಡಬಹುದಾದ ನೋಟುಗಳ ಗರಿಷ್ಠ ಮೌಲ್ಯ 20,000 ರೂ. ಬ್ಯಾಂಕ್ ಖಾತೆಗೆ ರೂ 2,000 ನೋಟುಗಳನ್ನು ಠೇವಣಿ ಮಾಡುವಾಗ KYC ಮಾನದಂಡಗಳನ್ನು ಅನುಸರಿಸುವುದು ಮತ್ತು ಇತರ ಕಾನೂನಾತ್ಮಕ ಕಾರ್ಯವಿಧಾನಗಳನ್ನು ಅನುಸರಿಸುವುದು ಕಡ್ಡಾಯವಾಗಿದೆ.

ಠೇವಣಿ ಮಾಡುವುದಕ್ಕೆ ಯಾವುದೇ ಯಾವುದೇ ನಿರ್ದಿಷ್ಟ ಠೇವಣಿ ಮಿತಿ ಇಲ್ಲ ಎಂದು ಆರ್‌ಬಿಐ ಸ್ಪಷ್ಟವಾಗಿ ಹೇಳಿದೆ. ಆದರೆ ಕೆಲವು ಶಾಸನಬದ್ಧ ಅವಶ್ಯಕತೆಗಳು ಅನ್ವಯಿಸುತ್ತವೆ. ನೋಟುಗಳನ್ನು ಸಾಮಾನ್ಯ ಸೇವಿಂಗ್ಸ್ ಬ್ಯಾಂಕ್ ಠೇವಣಿ (BSBD) ಅಥವಾ ಜನ್‌ಧನ್ ಖಾತೆಗೆ ಠೇವಣಿ ಮಾಡುವಾಗ, ಸಾಮಾನ್ಯ ಮಿತಿಗಳು ಜಾರಿಯಲ್ಲಿರುತ್ತವೆ. 50,000 ಅಥವಾ ಅದಕ್ಕಿಂತ ಹೆಚ್ಚಿನ ಹಣವನ್ನು ಠೇವಣಿ ಮಾಡುವ ವ್ಯಕ್ತಿಗಳು ಆದಾಯ ತೆರಿಗೆ ನಿಯಮಗಳ ನಿಯಮ 114B ಅನ್ನು ಅನುಸರಿಸಬೇಕು. ಇದಕ್ಕೆ ಪ್ಯಾನ್ ಸಂಖ್ಯೆಯನ್ನು ಒದಗಿಸುವ ಅಗತ್ಯವಿದೆ. ಒಂದೇ ದಿನದಲ್ಲಿ ರೂ 50,000ಕ್ಕಿಂತ ಕಡಿಮೆ ಮೊತ್ತಕ್ಕೆ ಠೇವಣಿ ಮಾಡಿದರೆ ಪ್ಯಾನ್ ಸಂಖ್ಯೆಯನ್ನು ಉಲ್ಲೇಖಿಸುವುದು ಕಡ್ಡಾಯವಲ್ಲ.

ಸೆ.30ರ ನಂತರ ಏನಾಗುತ್ತದೆ?

ಸೆ.30ರ ನಂತರವೂ ಈ ನೋಟುಗಳನ್ನು ನಿಮ್ಮಲ್ಲಿ ಉಳಿಸಿಕೊಂಡಿದ್ದರೆ ಅದೇನೂ ಅಪರಾಧವಲ್ಲ. ಆಗಲೂ ಈ ನೋಟು ಕಾನೂನುಬದ್ಧವಾಗಿಯೇ ಉಳಿದಿರುತ್ತದೆ. ಆದರೆ ಮಾರುಕಟ್ಟೆಯಲ್ಲಿ ಇದನ್ನು ಬಳಸಲು ಸಾಧ್ಯವಿಲ್ಲ. ಆರ್‌ಬಿಐ ಅದನ್ನು ಮರಳಿ ಪಡೆಯುತ್ತದೆ. ಆದರೆ ನಿರ್ದಿಷ್ಟ ಗಡುವಿನ ಒಳಗೆ ನೀವು ಯಾಕೆ ಅದನ್ನು ಮರಳಿಸಿಲ್ಲ ಎಂಬ ವಿವರಣೆಯನ್ನು ನೀಡಬೇಕಾಗುತ್ತದೆ.
ಆದರೆ ಅದರ ನಂತರ ನೀವಿ

ಎಷ್ಟು ನೋಟು ಬಂದಿದೆ?

RBI ಒದಗಿಸಿದ ಮಾಹಿತಿಯ ಪ್ರಕಾರ, ಚಲಾವಣೆಯಲ್ಲಿರುವ ನೋಟುಗಳಲ್ಲಿ ಸರಿಸುಮಾರು 93 ಪ್ರತಿಶತದಷ್ಟು ಬ್ಯಾಂಕ್‌ಗಳಿಗೆ ಮರಳಿದೆ. ಆಗಸ್ಟ್ 31, 2023ರೊಳಗೆ ಬ್ಯಾಂಕ್‌ಗಳಲ್ಲಿ ಠೇವಣಿ ಮಾಡಲಾದ 2,000 ರೂ. ನೋಟುಗಳ ಒಟ್ಟು ಮೌಲ್ಯ 3.32 ಲಕ್ಷ ಕೋಟಿ ರೂ. 0.24 ಲಕ್ಷ ಕೋಟಿ ರೂಪಾಯಿ ಮೌಲ್ಯದ 2,000 ರೂಪಾಯಿ ನೋಟುಗಳು ಚಲಾವಣೆಯಲ್ಲಿ ಉಳಿದಿವೆ.

ಇದನ್ನೂ ಓದಿ: ₹2000 Notes Withdrawn: ಪಿಂಕ್‌ ನೋಟು ಮರಳಿಸಲು ಇನ್ನು ಐದೇ ದಿನ ಅವಕಾಶ; ನಿಮ್ಮಲ್ಲಿ ಇನ್ನೂ ಇದೆಯಾ?

Exit mobile version