ಬೆಂಗಳೂರು: ರಿಲಯನ್ಸ್ ಜಿಯೊ ದೀಪಾವಳಿಗೆ ಮೊಟ್ಟ ಮೊದಲ ಬಾರಿಗೆ ೫ಜಿ ನೆಟ್ ವರ್ಕ್ ಸೇವೆಯನ್ನು ಬಿಡುಗಡೆಗೊಳಿಸಲಿದೆ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ಅವರು ಸೋಮವಾರ ಕಂಪನಿಯ ವಾರ್ಷಿಕ ಮಹಾಸಭೆಯಲ್ಲಿ ಘೋಷಿಸಿದರು. (Reliance AGM)
ಮುಂದಿನ ಎರಡು ತಿಂಗಳಿನೊಳಗೆ ಜಿಯೊದ ೫ಜಿ ನೆಟ್ ವರ್ಕ್ ಸೇವೆ ಬಿಡುಗಡೆಯಾಗಲಿದ್ದರೂ, ದೀಪಾವಳಿಗೆ (ಅಕ್ಟೋಬರ್ ೨೪) ದಿಲ್ಲಿ, ಮುಂಬಯಿ, ಕೋಲ್ಕತಾ ಮತ್ತು ಚೆನ್ನೈನಲ್ಲಿ ಸೇವೆ ಆರಂಭವಾಗಲಿದೆ. ಇದು ಬೆಂಗಳೂರಿಗರಲ್ಲಿ ಅಚ್ಚರಿ ಮೂಡಿಸಿದೆ. ಮಾಹಿತಿ ತಂತ್ರಜ್ಞಾನ ನಗರಿ, ಸ್ಟಾರ್ಟಪ್ ಹಬ್ ಆಗಿರುವ ಬೆಂಗಳೂರು ಪಟ್ಟಿಯಿಂದ ಮಿಸ್ ಆಗಿರುವುದು ಕಂಡು ಬಂದಿತು.
ಇದನ್ನೂ ಓದಿ:Reliance AGM | ದಿನಬಳಕೆ ವಸ್ತುಗಳ ಬಿಸಿನೆಸ್‌ಗೂ ರಿಲಯನ್ಸ್ ಭರ್ಜರಿ ಎಂಟ್ರಿ!
ಹೀಗಿದ್ದರೂ, ೨೦೨೩ರ ಡಿಸೆಂಬರ್ ಒಳಗಾಗಿ ದೇಶದ ಎಲ್ಲ ಪಟ್ಟಣ, ತಾಲ್ಲೂಕುಗಳಿಗೂ ೫ಜಿ ವಿಸ್ತರಿಸಲಾಗುವುದು ಎಂದು ಮುಕೇಶ್ ಅಂಬಾನಿ ಅವರು ತಿಳಿಸಿದ್ದಾರೆ.
೫ಜಿ ನೆಟ್ ವರ್ಕ್ ಅಳವಡಿಸಲು ೩೩ ಲಕ್ಷ ಚದರ ಕಿಲೋಮೀಟರ್ ಪ್ರದೇಶದಲ್ಲಿ ರಿಲಯನ್ಸ್ ತನ್ನ ವೈರ್‌ಲೆಸ್ ಮತ್ತು ವೈರ್‌ಲೈನ್ ಸಾಧನಗಳನ್ನು ಅಳವಡಿಸಲಿದೆ. ೨,೦೦೦ಕ್ಕೂ ಹೆಚ್ಚು ಎಂಜಿನಿಯರ್‌ಗಳು ಸ್ವದೇಶಿ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ್ದಾರೆ. ಕಳೆದ ಮೂರು ವರ್ಷಗಳಿಂದ ಹಗಲಿರುಳೆನ್ನದೆ ಅವರು ಶ್ರಮಿಸಿದ್ದಾರೆ ಎಂದರು.
ಇದನ್ನೂ ಓದಿ: Reliance AGM | ರಿಲಯನ್ಸ್‌ನಿಂದ 1.88 ಲಕ್ಷ ಕೋಟಿ ರೂ. ತೆರಿಗೆ ಸಲ್ಲಿಕೆ, ದೇಶದಲ್ಲೇ ಗರಿಷ್ಠ