ನವ ದೆಹಲಿ: ಭಾರತದ ಬಾಸ್ಮತಿ ಮತ್ತು ಬಾಸ್ಮತಿಯೇತರ ಅಕ್ಕಿಯ ರಫ್ತಿನಲ್ಲಿ ಕಳೆದ ಏಪ್ರಿಲ್- ಅಕ್ಟೋಬರ್ ( Rice export ) ಅವಧಿಯಲ್ಲಿ ಏರಿಕೆಯಾಗಿದೆ.
ಬಾಸ್ಮತಿ ಮತ್ತು ಬಾಸ್ಮತಿಯೇತರ ಅಕ್ಕಿಯ ರಫ್ತಿನಲ್ಲಿ 7.37% ಏರಿಕೆಯಾಗಿದ್ದು, 126.97 ಲಕ್ಷ ಟನ್ನುಗಳಿಗೆ ವೃದ್ಧಿಸಿದೆ. ಅಕ್ಕಿ ರಫ್ತು ಕುರಿತ ಕೆಲ ನಿರ್ಬಂಧಗಳ ಹೊರತಾಗಿಯೂ ರಫ್ತು ಚಟುವಟಿಕೆ ಸುಧಾರಿಸಿತ್ತು. 2021-22ರ ಇದೇ ಅವಧಿಯಲ್ಲಿ 118.25 ಲಕ್ಷ ಟನ್ ರಫ್ತು ನಡೆದಿತ್ತು.
ಅಕ್ಕಿಯ ಕೆಲ ಪ್ರಭೇದಗಳ ರಫ್ತಿಗೆ ನಿರ್ಬಂಧ ಇದ್ದರೂ, ಒಟ್ಟಾರೆ ರಫ್ತು ಹೆಚ್ಚಳವಾಗಿತ್ತು ಎಂದು ಆಲ್ ಇಂಡಿಯಾ ಎಕ್ಸ್ ಪೋರ್ಟರ್ಸ್ ಅಸೋಸಿಯೇಶನ್‌ನ ಮಾಜಿ ಅಧ್ಯಕ್ಷ ವಿಜಯ್ ಸೇಥಿಯಾ ತಿಳಿಸಿದ್ದಾರೆ. ಒಟ್ಟಾರೆ ಅಕ್ಕಿ ರಫ್ತಿನಲ್ಲಿ ಬಾಸ್ಮತಿ ಅಕ್ಕಿ ರಫ್ತು 24.97 ಲಕ್ಷ ಟನ್ನುಗಳಿಗೆ ಏರಿಕೆಯಾಗಿತ್ತು.