ನವ ದೆಹಲಿ: ಈ ಸಲದ ಹಬ್ಬದ ಸೀಸನ್‌ನಲ್ಲಿ ಆನ್‌ಲೈನ್ ಶಾಪಿಂಗ್ ಮಾಡುವಾಗ ನಕಲಿ ಚೀನಿ ವೆಬ್‌ಸೈಟ್‌ಗಳ ಬಗ್ಗೆ ಎಚ್ಚರದಿಂದ ಇರಬೇಕು ಎಂದು ಇಂಡಿಯನ್ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್ (CERT-In) ಎಚ್ಚರಿಸಿದೆ. (Alert) ಚೀನಾ ಮೂಲದ ವೆಬ್‌ಸೈಟ್‌ಗಳಲ್ಲಿ ವಂಚನೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಗ್ರಾಹಕರು ಎಚ್ಚರ ವಹಿಸಬೇಕು. ಈ ವೆಬ್‌ಸೈಟ್‌ಗಳಲ್ಲಿ ನಿಮಗೆ ನಗದು ಬಹುಮಾನ, ಗಿಫ್ಟ್ ವೋಚರ್ ಆಮಿಷ ಒಡ್ಡಿ ನಿಮ್ಮ ಬ್ಯಾಂಕ್ ಖಾತೆ, ಪಾಸ್ ವರ್ಡ್, ಒಟಿಪಿಯನ್ನು ಪಡೆದು ಬ್ಯಾಂಕ್ ಖಾತೆಯಲ್ಲಿನ ಹಣವನ್ನು ಲಪಟಾಯಿಸುವ ಸಾಧ್ಯತೆ ಇದೆ ಎಂದು ಸಿಇಆರ್‌ಟಿ ಎಚ್ಚರಿಸಿದೆ.
ನಾನಾ ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಮೆಸೇಜ್‌ಗಳು ಹರಿದಾಡುತ್ತಿವೆ. ಹಬ್ಬದ ಸಲುವಾಗಿ ವಿಶೇಷ ಗಿಫ್ಟ್ ನೀಡುತ್ತಿದ್ದೇವೆ ಎಂಬ ಆಫರ್‌ಗಳು ಹಾಗೂ ಲಿಂಕ್‌ಗಳನ್ನು ಕೊಡುತ್ತಾರೆ. ಅವುಗಳನ್ನು ಬಳಸಿದರೆ ವಂಚನೆಗೀಡಾಗುವ ಸಾಧ್ಯತೆ ಇರುತ್ತದೆ.
ವೆಬ್‌ಸೈಟ್‌ಗಳು ಒಂದು ಲಿಂಕ್ ಅನ್ನು ಕಳುಹಿಸುತ್ತವೆ. ಲಿಂಕ್ ಒತ್ತಿದರೆ ಮತ್ತೊಂದು ಪೇಜ್‌ನಲ್ಲಿ ಕೆಲ ವಿವರಗಳನ್ನು ಕೇಳಲಾಗುತ್ತದೆ. ಅವುಗಳಿಗೆ ಮರುಳಾಗಿ ಬ್ಯಾಂಕ್ ಖಾತೆ ವಿವರಗಳನ್ನು ಕೊಟ್ಟರೆ ಬಳಿಕ ವಂಚನೆಗೀಡಾಗುವ ಸಾಧ್ಯತೆ ಇದೆ. ಹೀಗಾಗಿ ಅಪರಿಚಿತ ವೆಬ್‌ಸೈಟ್‌ಗಳಲ್ಲಿ ಬರುವ ಲಿಂಕ್‌ಗಳನ್ನು ಬ್ರೌಸ್ ಮಾಡಬಾರದು ಎಂದು ಸಿಇಆರ್‌ಟಿ ಎಚ್ಚರಿಸಿದೆ.