ಬಿಸಿನೆಸ್ ಜಗತ್ತಿನಲ್ಲೊಂದು ವಾಡಿಕೆಯ ಮಾತಿದೆ. ನೀವು ಇಂದು ಎಷ್ಟು ಮಾರುತ್ತೀರೋ, ಹಾಗೂ ಎಷ್ಟು ಸಂಪಾದಿಸುತ್ತೀರೊ, ಅದರ ಎರಡು ಪಟ್ಟು ಗಳಿಸುವ ಸಾಮರ್ಥ್ಯ ನಿಮ್ಮಲ್ಲಿದೆ. ಬಹುಶಃ ಅದಕ್ಕಿಂತಲೂ ಹೆಚ್ಚು ಪಡೆಯಬಹುದು. ನಿಮ್ಮ ಯೋಗ್ಯತೆಗಿಂತ ನಿಮ್ಮ ವರ್ತನೆ ನಿಮ್ಮ ಎತ್ತರವನ್ನು ನಿರ್ಧರಿಸುತ್ತದೆ.
ನೀವು ಶಾರೀರಿಕವಾಗಿ ಫಿಟ್ ಆಗಬೇಕಿದ್ದರೆ ಪ್ರತಿ ನಿತ್ಯ ವ್ಯಾಯಾಮಗಳನ್ನು ಮಾಡಬೇಕು. ನೀವು ಮಾನಸಿಕವಾಗಿ ಗಟ್ಟಿಯಾಗಬೇಕಿದ್ದರೆ ಪ್ರತಿ ದಿನ ನಿರ್ದಿಷ್ಟ ಹೊತ್ತು ಧ್ಯಾನ ಮಾಡುವುದು ಉತ್ತಮ. ಕೆಲ ಮಾನಸಿಕ ಕಸರತ್ತುಗಳನ್ನೂ ಕೈಗೊಳ್ಳಬಹುದು. ನೀವು ಬಿಸಿನೆಸ್ ಜಗತ್ತಿನಲ್ಲಿ ದಿನವಿಡೀ ಬೆಸ್ಟ್ ಅನ್ನಿಸಬೇಕಿದ್ದರೆ ಏಳು ಕೌಶಲಗಳನ್ನು ಕರಗತ ಮಾಡಿಕೊಳ್ಳಲು ಮರೆಯದಿರಿ.
ಬೆಸ್ಟ್ ಅನ್ನಿಸಿ: ಬಿಸಿನೆಸ್ ಕ್ಷೇತ್ರದಲ್ಲಿ ಅತ್ಯಂತ ಶ್ರೇಷ್ಠರಾಗಲು ಶ್ರಮ ವಹಿಸಿ. ಒಳ್ಳೆಯ ಉತ್ಪನ್ನ ಮತ್ತು ಸೇವೆಯನ್ನು ನೀಡಲು ಯಾವುದೇ ತ್ಯಾಗಕ್ಕೂ ಸಜ್ಜಾಗಿ. ಸಾಕಷ್ಟು ಸಂಶೋಧನೆ ನಡೆಸಿ. ನಿಮ್ಮ ಒಟ್ಟಾರೆ ಗಳಿಕೆಯಲ್ಲಿ ಇದಕ್ಕಾಗಿ 10-20% ವಿನಿಯೋಗಿಸಿ. ಸೆಲ್ಲಿಂಗ್‌ನಲ್ಲಿ ಬಹುತೇಕ ಮಂದಿ ಟಾಪ್ 10% ವಲಯಕ್ಕೆ ಬರಲು ವಿಫಲರಾಗುತ್ತಾರೆ. ಗುಣಮಟ್ಟದ ಕೊರತೆಯೇ ಇದಕ್ಕೆ ಕಾರಣ.
ಪ್ರಮುಖ ಕೌಶಲವನ್ನು ಕಲಿಯಿರಿ: ಮಾರಾಟದಲ್ಲಿ ಯಶಸ್ವಿಯಾಗುವ ಸಲುವಾಗಿ ಬೇಕಾಗುವ ಪ್ರಮುಖ ಕೌಶಲ ಯಾವುದು ಎಂದು ಗುರುತಿಸಿ. ಅದರಲ್ಲಿ ಎಕ್ಸಲೆಂಟ್ ಆಗಲು ಹಗಲಿರುಳೆನ್ನದೆ ಶ್ರಮಪಟ್ಟು ದುಡಿಯಿರಿ. ನಿಮ್ಮ ಆದಾಯವನ್ನು ಇಮ್ಮಡಿಗೊಳಿಸಲು ಹಾಗೂ ಇಂಡಸ್ಟ್ರಿಯಲ್ಲಿ ಗಮನಾರ್ಹ ಸಾಧನೆಗೆ ಇನ್ನೊಂದೇ ಕೌಶಲ ನಿಮಗೆ ಗೊತ್ತಿದ್ದರೆ ಸಾಕಾಗಬಹುದು. ತಡವೇಕೆ, ಇಂದೇ ಕಲಿಯಲು ಮುಂದಾಗಿ. ಅದು ಯಶಸ್ಸಿನ ಶಿಖರಕ್ಕೆ ನಿಮ್ಮನ್ನು ಕರೆದೊಯ್ಯುತ್ತದೆ.
ಸಕಾರಾತ್ಮಕ ವ್ಯಕ್ತಿಗಳ ಸತ್ಸಂಗ: ಬಹುತೇಕ ಸಂದರ್ಭ ಸಕಾರಾತ್ಮಕ ಮನೋಭಾವದ ಹಾಗೂ ಸಾಧಕರ ಸಂಪರ್ಕವನ್ನು ಹಾಗೂ ಅವರ ಜತೆ ಹೆಚ್ಚಿನ ಸಮಯವನ್ನೂ ಕಳೆಯಲು ಯತ್ನಿಸಿ. ಅವರ ಜತೆಗೆ ಹೆಚ್ಚು ಕೆಲಸವನ್ನು ಮಾಡಿರಿ. ನಿಮ್ಮ ಆರೋಗ್ಯ ಮತ್ತು ಚೈತನ್ಯವನ್ನು ಸಂರಕ್ಷಿಸಿ. ಶಾರೀರಿಕ ಸ್ವಾಸ್ಥ್ಯ ಮುಖ್ಯವಾಗುತ್ತದೆ. ನಿಮ್ಮ ಬಗ್ಗೆ ಬೆಸ್ಟ್ ಅನ್ನಿಸುವ ವರ್ಚಸ್ಸನ್ನು ರೂಪಿಸಿಕೊಳ್ಳಿ. ಅಂತರಂಗ-ಬಹಿರಂಗದಲ್ಲಿ ಒಳ್ಳೆಯ ಚಿತ್ರಣವನ್ನು ಇಟ್ಟುಕೊಳ್ಳಿ. ನಿಮ್ಮ ಬಗ್ಗೆ ಸಕಾರಾತ್ಮಕವಾಗಿ ಮಾತನಾಡಿ. ದಿನವಿಡೀ ಅತ್ಯಂತ ಸಕ್ರಿಯರಾಗಿದ್ದು ಬಿಡಿ. ಸದಾ ಬ್ಯುಸಿಯಾಗಿ, ವೇಗವಾಗಿ ಮುನ್ನಡೆ ದಾಖಲಿಸಿ. ವ್ಯಾಪಾರದ ಕ್ಷೇತ್ರದಲ್ಲಿ ನೆನಪಿಡಿ, ಹೆಚ್ಚು ಜನರನ್ನು ನೀವು ಭೇಟಿಯಾಗಬೇಕು. ನಿಮ್ಮ ನೆಟ್ ವರ್ಕನ್ನು ಹೆಚ್ಚಿಸಬೇಕು. ಆಗಲೇ ಸೇಲ್ಸ್ ಕೂಡ ಹೆಚ್ಚುತ್ತದೆ.
ಡೇಟಾ ಅನಾಲಿಸಿಸ್ ಸ್ಕಿಲ್, ಇಕನಾಮಿಕ್ಸ್ ಅನ್ನು ಅರ್ಥ ಮಾಡಿಕೊಳ್ಳುವುದು, ಬಿಸಿನೆಸ್ ಮ್ಯಾನೇಜ್‌ಮೆಂಟ್ ಸ್ಕಿಲ್, ನಾಯಕತ್ವ ಗುಣ, ಹಣಕಾಸು ಅಕೌಂಟಿಂಗ್, ಕಮ್ಯುನಿಕೇಶನ್, ಇಮೋಶನಲ್ ಇಂಟಲಿಜೆನ್ಸ್ ಉತ್ತಮ ಬಿಸಿನೆಸ್ ಸ್ಕಿಲ್‌ಗಳಾಗಿವೆ.