ಡಿಜಿಟಲ್ ಹಣಕಾಸು ವ್ಯವಹಾರಗಳಿಗೆ ಯುಪಿಐ ಮತ್ತು ಮೊಬೈಲ್ ವ್ಯಾಲೆಟ್‌ಗಳು ಜನಪ್ರಿಯತೆ ಗಳಿಸುತ್ತಿದ್ದರೂ, ಕ್ರೆಡಿಟ್ ಕಾರ್ಡ್‌ಗಳು ಈಗಲೂ ದೊಡ್ಡ ಮೊತ್ತದ ಖರೀದಿ ಮತ್ತು ರಿವಾರ್ಡ್ ಪಾಯಿಂಟ್‌ಗಳಿಗೆ ಆಕರ್ಷಣೆ ಉಳಿಸಿವೆ. ಜತೆಗೆ ಕ್ರೆಡಿಟ್ ಸ್ಕೋರ್ ಹೆಚ್ಚಿಸಿಕೊಳ್ಳಲೂ ಕ್ರೆಡಿಟ್ ಕಾರ್ಡ್ ಉಪಯುಕ್ತ. (Credit Card ) ನೀವು ಸಣ್ಣ ಪುಟ್ಟ ಖರೀದಿಯನ್ನೂ ಕ್ರೆಡಿಟ್ ಕಾರ್ಡ್ ಮೂಲಕ ಮಾಡಿ ಪಾಯಿಂಟ್‌ಗಳನ್ನು ಪಡೆಯಬಹುದು. ಹಾಗಾದರೆ ನಿಮ್ಮ ಕ್ರೆಡಿಟ್ ಕಾರ್ಡ್ ರಿವಾರ್ಡ್ ಪಾಯಿಂಟ್ಸ್ ಹೆಚ್ಚಿಸುವುದು ಹೇಗೆ? ಎಂಬುದನ್ನು ನೋಡೋಣ.
ಬಹುತೇಕ ಮಂದಿ ಹೆಚ್ಚಿನ ಮೊತ್ತದ ಶಾಪಿಂಗ್ ಸಲುವಾಗಿ ಮಾತ್ರ ಕ್ರೆಡಿಟ್ ಕಾರ್ಡ್ ಬಳಸುತ್ತಾರೆ. ಆದರೆ ಪ್ರತಿ ತಿಂಗಳೂ ನಿಗದಿತವಾಗಿ ಅಥವಾ ನಿಶ್ಚಿತವಾಗಿ ಮಾಡುವ ಖರ್ಚು ವೆಚ್ಚಗಳನ್ನೂ ಕ್ರೆಡಿಟ್ ಕಾರ್ಡ್ ಮೂಲಕ ಮಾಡಿದರೆ ನಿಮಗೆ ಹೆಚ್ಚುವರಿ ಪಾಯಿಂಟ್‌ಗಳು ಲಭಿಸುತ್ತವೆ. ಬಳಿಕ ಬ್ಯಾಂಕ್‌ಗಳಿಂದ ಅವುಗಳಿಗೆ ಪ್ರತಿಯಾಗಿ ಅನುಕೂಲಗಳನ್ನು, ಗಿಫ್ಟ್ ವೋಚರ್‌ಗಳನ್ನು ಪಡೆಯಬಹುದು. ಅವುಗಳ ವಿವರ ಇಲ್ಲಿದೆ.
ನಿಮ್ಮ ಮೊಬೈಲ್ ವ್ಯಾಲೆಟ್ ಅನ್ನು ಕ್ರೆಡಿಟ್ ಕಾರ್ಡ್‌ಗೆ ಲಿಂಕ್ ಮಾಡಿ: (Link your mobile wallet to your credit card)
ನಿಮ್ಮ ಮೊಬೈಲ್ ವ್ಯಾಲೆಟ್‌ನ ಟಾಪ್ -ಅಪ್ ( top-up) ಮಾಡಿಕೊಳ್ಳಲು ನೆಟ್ ಬ್ಯಾಂಕಿಂಗ್ ಬದಲಿಗೆ ಕ್ರೆಡಿಟ್ ಕಾರ್ಡ್ ಬಳಸಿಕೊಳ್ಳಿ. ಇದರಿಂದ ಯುಪಿಐ ನೆಟ್ ವರ್ಕ್‌ನಲ್ಲಿ ಕ್ಯಾಶ್ ಬ್ಯಾಖ್ ಹಾಗೂ ಕ್ರೆಡಿಟ್ ಕಾರ್ಡ್‌ನಲ್ಲಿ ರಿವಾರ್ಡ್ ಪಾಯಿಂಟ್ ಗಳಿಸಬಹುದು. ಹೀಗಿದ್ದರೂ ಕೆಲವು ವ್ಯಾಲೆಟ್‌ಗಳು ಕೆಲವು ಬ್ಯಾಂಕ್‌ಗಳ ಕ್ರೆಡಿಟ್ ಕಾರ್ಡ್‌ಗಳಿಗೆ ಮಾತ್ರ ಈ ಅವಕಾಶ ನೀಡುತ್ತವೆ. ಅದನ್ನು ತಿಳಿದುಕೊಳ್ಳಿ.
ಬಾಡಿಗೆ (rent): ನಿಮ್ಮ ಮನೆ, ಫ್ಲಾಟ್‌ನ ಬಾಡಿಗೆಯನ್ನು ಕ್ರೆಡಿಟ್ ಕಾರ್ಡ್ ಬಳಸಿ ನೀಡಿ. ಮ್ಯಾಜಿಕ್ ಬ್ರಿಕ್ಸ್, ಪೇಟಿಎಂ, ಮೈಗೇಟ್, ನೋ ಬ್ರೋಕರ್, ಫೋನ್ ಪೇ ಮೊದಲಾದ apps ಮೂಲಕ ಕ್ರೆಡಿಟ್ ಕಾರ್ಡ್ ಬಳಸಿ ಮನೆ ಬಾಡಿಗೆ ಪಾವತಿಸಿ. ಆಗ ನಿಮಗೆ ರಿವಾರ್ಡ್ ಪಾಯಿಂಟ್‌ಗಳು ಸಿಗುವ ಸಾಧ್ಯತೆ ಇದೆ.
ಶಾಲೆ ಫೀಸು: ನಿಮ್ಮ ಮಕ್ಕಳ ಶಾಲಾ ಶುಲ್ಕಗಳನ್ನು ಕ್ರೆಡಿಟ್ ಕಾರ್ಡ್ ಮೂಲಕ ಪಾವತಿಸಿ ಕೂಡ ಪಾಯಿಂಟ್‌ಗಳನ್ನು ನಿಮ್ಮದಾಗಿಸಬಹುದು.
ಯುಟಿಲಿಟಿ ಬಿಲ್ ಪಾವತಿ: ನಿಮ್ಮ ಫೋನ್ ಬಿಲ್, ಬ್ರಾಡ್ ಬಾಂಡ್, ಒಟಿಟಿ, ವಿದ್ಯುತ್, ನೀರು , ಸೊಸೈಟಿ ನಿರ್ವಹಣೆ ಇತ್ಯಾದಿ ಬಿಲ್‌ಗಳನ್ನು ಕೂಡ ಕ್ರೆಡಿಟ್ ಕಾರ್ಡ್‌ಗಳ ಮೂಲಕ ನೀಡುವುದರಿಂದ ಹಲವು ಪಾಯಿಂಟ್‌ಗಳನ್ನು ಪಡೆಯಬಹುದು.
ವಿಮೆ ಪ್ರೀಮಿಯಂ : ನಿಮ್ಮ ವಿಮೆ ಪ್ರೀಮಿಯಂ ಮೌಲ್ಯವನ್ನು ಕ್ರೆಡಿಟ್ ಕಾರ್ಡ್ ಮೂಲಕ ನೀಡಬಹುದು. ಪ್ರತಿ ವರ್ಷ 1000-3000 ಪಾಯಿಂಟ್‌ಗಳನ್ನು ಈ ಮೂಲಕ ನೀವು ಪಡೆದುಕೊಳ್ಳಬಹುದು. ಇದು ನಿಮ್ಮ ವಿಮೆ ಪಾಲಿಸಿಗಳು ಮತ್ತು ಪ್ರೀಮಿಯಂ ಮೊತ್ತವನ್ನು ಆಧರಿಸಿ ವ್ಯತ್ಯಾಸವಾಗುತ್ತದೆ. ಆದರೆ ಕ್ರೆಡಿಟ್ ಕಾರ್ಡ್ ಪಾಯಿಂಟ್ ಹಚ್ಚಿಸಿಕೊಳ್ಳಲು ಒಂದು ದಾರಿಯಾಗುತ್ತದೆ ಎಂಬುದನ್ನು ಮರೆಯುವಂತಿಲ್ಲ.
ಎನ್‌ಪಿಎಸ್ ಹೂಡಿಕೆ: ಎನ್‌ಪಿಎಸ್ (National pension scheme) ಈಗ ಅತ್ಯಂತ ಜನಪ್ರಿಯ ಪಿಂಚಣಿ ಯೋಜನೆಯಾಗಿದೆ. ನೀವು ಎನ್‌ಪಿಎಸ್ ಮೇಲಿನ ಹೂಡಿಕೆಯನ್ನು ಕ್ರೆಡಿಟ್ ಕಾರ್ಡ್ ಮೂಲಕ ಮಾಡುವುದರಿಂದ ಪಾಯಿಂಟ್‌ಗಳನ್ನು ಗಳಿಸಬಹುದು. ಎನ್‌ಪಿಎಸ್‌ನ ಎರಡೂ ಸ್ತರಗಳ ಹೂಡಿಕೆಯನ್ನು ನೀವು ಕ್ರೆಡಿಟ್ ಕಾರ್ಡ್ ಮೂಲಕ ಮಾಡಬಹುದು.
ಮತ್ತೊಂದು ಉಪಯುಕ್ತ ಮಾಹಿತಿ: ಕ್ರೆಡಿಟ್ ಕಾರ್ಡ್‌ಗಳ ಮೂಲಕ ವಿದೇಶಿ ಕರೆನ್ಸಿಗಳ ವರ್ಗಾವಣೆಯ ಮೇಲೆ 20% ಟಿಸಿಎಸ್ (Tax collected at source) ತೆರಿಗೆ ಕಡಿತವಾಗಲಿದೆ ಎಂದು ಹಣಕಾಸು ಸಚಿವಾಲಯವು ತಿಳಿಸಿದೆ. ಹೀಗಿದ್ದರೂ, ಭಾರತದ ರೂಪಾಯಿ ಮೂಲಕ ನಡೆಸುವ ವರ್ಗಾವಣೆಗಳ ಮೇಲೆ ಟಿಸಿಎಸ್ ಅನ್ವಯವಾಗುವುದಿಲ್ಲ ಎಂದು ಸಚಿವಾಲಯ ತಿಳಿಸಿದೆ. ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ವಿದೇಶಗಳಲ್ಲಿ ಅಧಿಕೃತ ವೆಚ್ಚಗಳಿಗೆ ನೀಡುವ ಕಾರ್ಪೊರೇಟ್ ಕಾರ್ಡ್‌ಗಳಿಗೆ ಈ ಟಿಸಿಎಸ್ ಅನ್ವಯವಾಗುವುದಿಲ್ಲ. ಈ ಬಗ್ಗೆ ಕೇಂದ್ರ ಸರ್ಕಾರ ವಿದೇಶಿ ವಿನಿಮಯ ನಿರ್ವಹಣ ಕಾಯಿದೆ (Foreign exchange management act) ಅಡಿಯಲ್ಲಿ ತಿದ್ದುಪಡಿ ತಂದಿದೆ.
ಇದನ್ನೂ ಓದಿ : SBI : ಎಸ್‌ಬಿಐ ಕ್ರೆಡಿಟ್ ಕಾರ್ಡ್ ಕ್ಯಾಶ್ ಬ್ಯಾಕ್ ನಿಯಮಗಳಲ್ಲಿ ಹೊಸ ಬದಲಾವಣೆ ಏನು?