Site icon Vistara News

Jobs in telecom | ಟೆಲಿಕಾಂನಲ್ಲಿ ಸೈಬರ್‌ ಸೆಕ್ಯುರಿಟಿ ತಜ್ಞರು, ನೆಟ್‌ವರ್ಕ್‌ ಎಂಜಿನಿಯರ್‌ಗಳಿಗೆ ಈ ವರ್ಷ ಭಾರಿ ಬೇಡಿಕೆ

telecom

ನವ ದೆಹಲಿ: ಟೆಲಿಕಾಂ ವಲಯದಲ್ಲಿ ಈ ವರ್ಷ ಸೈಬರ್‌ ಸೆಕ್ಯುರಿಟಿ ತಜ್ಞರು ಮತ್ತು ನೆಟ್‌ ವರ್ಕ್‌ ಎಂಜಿನಿಯರ್‌ಗಳಿಗೆ ಭಾರಿ ಬೇಡಿಕೆ ಸೃಷ್ಟಿಯಾಗಿದೆ ಎಂದು ಔದ್ಯೋಗಿಕ ವಲಯದ (Jobs in telecom) ತಜ್ಞರು ತಿಳಿಸಿದ್ದಾರೆ.

ಕ್ಲೌಡ್‌ ಕಂಪ್ಯೂಟಿಂಗ್‌ ತಜ್ಞರಿಗೂ, ಡೇಟಾ ಸೈಂಟಿಸ್ಟ್‌ಗಳಿಗೂ ದೂರಸಂಪರ್ಕ ವಲಯದಲ್ಲಿ ಉದ್ಯೋಗಾವಕಾಶ ಸಿಗುತ್ತಿದೆ. ಉದ್ಯೋಗ ನೇಮಕಾತಿ ವಲಯದ ಸಂಸ್ಥೆ ಎನ್‌ಎಲ್‌ಬಿ ಸರ್ವೀಸ್‌ ಮಂಗಳವಾರ ತನ್ನ ಸಮೀಕ್ಷಾ ವರದಿಯಲ್ಲೂ ಈ ಅಂಶವನ್ನು ಪ್ರಸ್ತಾಪಿಸಿದೆ.

ಬೇಡಿಕೆ ಏಕೆ? ದೇಶಾದ್ಯಂತ ತಮ್ಮ 5 ಜಿ ನೆಟ್‌ ವರ್ಕ್‌ ಅನ್ನು ಬಲಪಡಿಸಲು ಟೆಲಿಕಾಂ ಕಂಪನಿಗಳು ಯತ್ನಿಸುತ್ತಿವೆ. ಹೀಗಾಗಿ ಸೈಬರ್‌ ಸೆಕ್ಯುರಿಟಿ ತಜ್ಞರು, ನೆಟ್‌ ವರ್ಕ್‌ ಎಂಜಿನಿಯರ್‌ಗಳಿಗೆ ದೂರಸಂಪರ್ಕ ಉದ್ದಿಮೆಯಲ್ಲಿ ಬೇಡಿಕೆ ಸೃಷ್ಟಿಯಾಗಿದೆ. ಕಳೆದ ವರ್ಷ 15-20% ಬೇಡಿಕೆ ಏರಿಕೆಯಾಗಿತ್ತು. 2023ರಲ್ಲಿ 25-30% ಬೇಡಿಕೆ ಹೆಚ್ಚಳವಾಗಬಹುದು ಎಂದು ವರದಿ ತಿಳಿಸಿದೆ.

ಹೈಸ್ಪೀಡ್‌ ಸರ್ವೀಸ್‌ಗೆ ಟೆಲಿಕಾಂ ವಲಯದಲ್ಲಿ ತಂತ್ರಜ್ಞಾನ ಪರಿಣತರ ಅವಶ್ಯಕತೆ ಉಂಟಾಗಿದೆ. ಹೆಲ್ತ್‌ಕೇರ್‌, ರಿಟೇಲ್‌, ಉತ್ಪಾದನೆ, ಆಟೊಮೋಟಿವ್‌ ವಲಯಗಳಲ್ಲೂ ಕೌಶಲ್ಯಯುಕ್ತ ತಂತ್ರಜ್ಞಾನಿಗಳಿಗೆ ಬೇಡಿಕೆ ಉಂಟಾಗಿದೆ. ತಂತ್ರಜ್ಞರಿಗೆ ಟೆಲಿಕಾಂ ವಲಯದಲ್ಲಿ ಈ ವರ್ಷ 10-12% ವೇತನ ಏರಿಕೆಯನ್ನೂ ನಿರೀಕ್ಷಿಸಲಾಗಿದೆ.

Exit mobile version