Site icon Vistara News

Mutual fund nomination : ಮ್ಯೂಚುವಲ್‌ ಫಂಡ್‌ ನಾಮಿನೇಶನ್‌ ಗಡುವು 2023 ಸೆಪ್ಟೆಂಬರ್‌ 30ಕ್ಕೆ ವಿಸ್ತರಣೆ

funds

funds

ನವ ದೆಹಲಿ: ಮ್ಯೂಚುವಲ್‌ ಫಂಡ್‌ ಹೂಡಿಕೆದಾರರು ತಮ್ಮ ನಾಮಿನಿ ವಿವರಗಳನ್ನು (mutual fund nomination) ಸಲ್ಲಿಸಲು ನಿಗದಿಯಾಗಿದ್ದ ಗಡುವುದು 2023ರ ಮಾರ್ಚ್‌ 31ರಿಂದ 2023ರ ಸೆಪ್ಟೆಂಬರ್‌ 30ಕ್ಕೆ ವಿಸ್ತರಣೆಯಾಗಿದೆ. ಮಾರುಕಟ್ಟೆ ನಿಯಂತ್ರಕ ಸೆಬಿಯು ಈ ಬಗ್ಗೆ ಮಂಗಳವಾರ ಸುತ್ತೋಲೆ ಹೊರಡಿಸಿದೆ.

ಮ್ಯೂಚುವಲ್‌ ಫಂಡ್‌ ಸಂಸ್ಥೆಗಳು ನಾಮಿನೇಶನ್‌ ಪ್ರಕ್ರಿಯೆಯನ್ನು ಇದುವರೆಗೆ ಮಾಡದಿರುವ ಹೂಡಿಕೆದಾರರಿಗೆ, ಪೂರ್ಣಗೊಳಿಸಲು ಉತ್ತೇಜನ ನೀಡಬೇಕು. ಇ-ಮೇಲ್‌, ಎಸ್ಸೆಮ್ಮೆಸ್‌ಗಳನ್ನು ಕಳಿಸಬೇಕು ಎಂದು ಸೆಬಿ ತಿಳಿಸಿದೆ.

2022ರ ಜೂನ್‌ 15ರ ಸುತ್ತೋಲೆಯಲ್ಲಿ ಸೆಬಿಯು ಮ್ಯೂಚುವಲ್‌ ಫಂಡ್‌ ಹೂಡಿಕೆಗೆ ನಾಮಿನೇಶನ್‌ ಕಡ್ಡಾಯ ಎಂದು ತಿಳಿಸಿತ್ತು. ಬಳಿಕ ಗಡುವನ್ನು 2022ರ ಅಕ್ಟೋಬರ್‌ 1ಕ್ಕೆ ವಿಸ್ತರಿಸಲಾಯಿತು. ಬಳಿಕ 2023ರ ಮಾರ್ಚ್‌ 31ಕ್ಕೆ ಹಾಗೂ ಇದೀಗ 2023ರ ಸೆಪ್ಟೆಂಬರ್‌ 30ಕ್ಕೆ ವಿಸ್ತರಿಸಲಾಗಿದೆ.

ನಾಮಿನೇಶನ್‌ ಏಕೆ? ಮ್ಯೂಚುವಲ್‌ ಫಂಡ್‌ ಹೂಡಿಕೆದಾರರು ಮೃತಪಟ್ಟ ಸಂದರ್ಭದಲ್ಲಿ ಅವರ ಉತ್ತರಾಧಿಕಾರಿ ಯಾರು ಎಂಬುದನ್ನು ನಾಮಿನೇಶನ್‌ ಮೂಲಕ ತಿಳಿಸಲಾಗುತ್ತದೆ. ಇದರಿಂದ ಹೂಡಿಕೆಯ ಹಿಂತೆಗೆತ ಪ್ರಕ್ರಿಯೆ ಸುಗಮವಾಗುತ್ತದೆ. ಆದ್ದರಿಂದ ನಾಮಿನೇಶನ್‌ ಸಲ್ಲಿಕೆ ಕಡ್ಡಾಯಗೊಳಿಸಲಾಗಿದೆ. ನಿಮ್ಮ ಮ್ಯೂಚುವಲ್‌ ಫಂಡ್‌ ಸಂಸ್ಥೆಯ ವೆಬ್‌ಸೈಟ್‌ ಮೂಲಕ ಆನ್‌ಲೈನ್‌ನಲ್ಲೂ ನಾಮಿನೇಶನ್‌ ಪ್ರಕ್ರಿಯೆ ಪೂರ್ಣಗೊಳಿಸಬಹುದು.

Exit mobile version