ಬೆಂಗಳೂರು: ಸಾರ್ವಜನಿಕ ವಲಯದ ಬ್ಯಾಂಕ್‌ಗಳು ಮುಂದಿನ 5 ವರ್ಷಗಳಲ್ಲಿ 5 ಲಕ್ಷ ಪ್ರಾಪರ್ಟಿಗಳನ್ನು ಇ-ಹರಾಜು ಮೂಲಕ ವಿಲೇವಾರಿ ಮಾಡಲು ನಿರ್ಧರಿಸಿವೆ. (E-auction) ನಮ್ಮ ಗುರಿ 6 ಲಕ್ಷ ಆಸ್ತಿಗಳನ್ನು ಹರಾಜಿಗೆ ಹಾಕುವುದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸರ್ಕಾರಿ ಪ್ರಾಯೋಜಿತ ಅಸೆಟ್ ರಿಕನ್‌ಸ್ಟ್ರಕ್ಷನ್ ಕಂಪನಿಯು ಆರ್ಥಿಕ ಬಿಕ್ಕಟ್ಟಿನಲ್ಲಿರುವ 300 ಕಂಪನಿಗಳ ಸಾಲದ ಖಾತೆಗಳನ್ನು ಮೌಲ್ಯ ಮಾಪನ ಮಾಡಲಿದೆ. ಈ ಕಂಪನಿಗಳು ಪಡೆದಿರುವ ಸಾಲದ ಒಟ್ಟು ಮೊತ್ತ 3 ಲಕ್ಷ ಕೋಟಿ ರೂ.ಗಳಾಗಿವೆ. ಬಳಿಕ ಕಂಪನಿಗಳ ಸ್ವಾಧೀನ ಪ್ರಕ್ರಿಯೆ ನಡೆಯಲಿದೆ.
ಸಾರ್ವಜನಿಕ ಬ್ಯಾಂಕ್‌ಗಳಲ್ಲಿ 2023ರ ಫೆಬ್ರವರಿ ವೇಳೆಗೆ ವಾರಸುದಾರರು ಇಲ್ಲದ 35,000 ಕೋಟಿ ರೂ. ಪತ್ತೆಯಾಗಿದ್ದು, ಅದನ್ನು ಆರ್‌ಬಿಐಗೆ ವರ್ಗಾಯಿಸಲಾಗಿದೆ ಎಂದು ಸಂಸತ್ತಿಗೆ ಸೋಮವಾರ ತಿಳಿಸಲಾಯಿತು.
ಸುಮಾರು 10.24 ಕೋಟಿ ಬ್ಯಾಂಕ್ ಖಾತೆಗಳಲ್ಲಿ ಈ ಹಣ ಇತ್ತು ಎಂದು ಹಣಕಾಸು ಖಾತೆ ಸಹಾಯಕ ಸಚಿವ ಭಾಗವತ್ ಕರಾಡ್ ಅವರು ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
ಎಸ್‌ಬಿಐನಲ್ಲಿ ಹೆಚ್ಚು ಹಣ:
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಅತಿ ಹೆಚ್ಚು, ಅಂದರೆ 8,086 ಕೋಟಿ ರೂ. ಮೊತ್ತದ ಅನ್ ಕ್ಲೇಮ್ಡ್ ಠೇವಣಿಗಳಿದ್ದರೆ, ಪಂಜಾಬ್ ನ್ಯಾಷನಲ್ ಬ್ಯಾಂಕ್‌ನಲ್ಲಿ 5,340 ಕೋಟಿ ರೂ, ಕೆನರಾ ಬ್ಯಾಂಕ್‌ನಲ್ಲಿ 4,558 ಕೋಟಿ ರೂ, ಬ್ಯಾಂಕ್ ಆಫ್ ಬರೋಡಾದಲ್ಲಿ 3,904 ಕೋಟಿ ರೂ. ಮೊತ್ತದ ವಾರಸುದಾರಿಕೆ ಇಲ್ಲದ ಹಣ ಇತ್ತು.
ಭಾರತೀಯ ಜೀವ ವಿಮಾ ನಿಗಮದ (ಎಲ್ ಐಸಿ) ಆರಂಭಿಕ ಷೇರು ಬಿಡುಗಡೆ ಅಥವಾ ಐಪಿಒದ ಗಾತ್ರ ಬರೋಬ್ಬರಿ 21,000 ಕೋಟಿ ರೂ. ನಿಮಗೆ ಅಚ್ಚರಿಯಾಗಬಹುದಾದ ಮತ್ತೊಂದು ಸಂಗತಿ ಏನೆಂದರೆ ಇಷ್ಟೇ ಮೊತ್ತದ ಹಣ ಎಲ್‌ಐಸಿಯಲ್ಲಿ ಪಾಲಿಸಿದಾರರ ವಾರಸುದಾರಿಕೆ ಇಲ್ಲದೆ ಜಮೆಯಾಗಿರುವ ಹಣದ ಮೊತ್ತವೂ 21,336 ಕೋಟಿ ರೂ.ಗಳಾಗಿದೆ.
ಷೇರು ಮಾರುಕಟ್ಟೆ ನಿಯಂತ್ರಕ ಸೆಬಿಗೆ, ಐಪಿಒಗೆ ಮುನ್ನ ಎಲ್‌ಐಸಿ ಸಲ್ಲಿಸಿರುವ ವಿವರಗಳ ಪ್ರಕಾರ, 2021ರ ಸೆಪ್ಟೆಂಬರ್ ನಲ್ಲಿ ಕ್ಲೇಮ್ ಮಾಡದಿರುವ ಹಣದ ಮೊತ್ತ 21,500 ಕೋಟಿ ರೂ.ಗೆ ಏರಿತ್ತು. ಅಂದರೆ ಬೆಂಗಳೂರಿನ ಬಿಬಿಎಂಪಿಯ 2021ರ ಬಜೆಟ್ ಗಾತ್ರದ ಎರಡು ಪಟ್ಟು ಆಗಬಹುದು. ಇದರಲ್ಲಿ ಎರಡು ಸಲ ಬಾಹ್ಯಾಕಾಶ ಯಾತ್ರೆ ಕೈಗೊಳ್ಳಬಹುದು.