ಸ್ಯಾನ್ ಫ್ರಾನ್ಸಿಸ್ಕೊ: ಟೆಸ್ಲಾ ಸ್ಥಾಪಕ ಎಲಾನ್ ಮಸ್ಕ್ ಅವರು ಟ್ವಿಟರ್ ಅನ್ನು ಖರೀದಿಸಿದ ಬಳಿಕ ಅವರ ಸಂಪತ್ತಿನಲ್ಲಿ 9 ಶತಕೋಟಿ ಡಾಲರ್ (ಅಂದಾಜು 73,800 ಕೋಟಿ ರೂ.) ನಷ್ಟವಾಗಿದೆ (Elon Musk) ಎಂದು ವರದಿಯಾಗಿದೆ.
ಎಲಾನ್ ಮಸ್ಕ್ ಸಂಪತ್ತು 204 ಶತಕೋಟಿ ಡಾಲರ್‌ಗೆ (16.72 ಲಕ್ಷ ಕೋಟಿ ರೂ.) ಇಳಿಕೆಯಾಗಿದೆ ಎಂದು ಬ್ಲೂಮ್ ಬರ್ಗ್ ವರದಿ ತಿಳಿಸಿದೆ. ಹೀಗಿದ್ದರೂ, ಎಲಾನ್ ಮಸ್ಕ್ ಜಗತ್ತಿನ ಅತಿ ದೊಡ್ಡ ಸಿರಿವಂತ ಎನ್ನಿಸಿದ್ದಾರೆ.
3,700 ಹುದ್ದೆ ಕಡಿತ? : ಎಲಾನ್ ಮಸ್ಕ್ ಅವರು ಟ್ವಿಟರ್‌ನಲ್ಲಿ 3,700 ಹುದ್ದೆಗಳನ್ನು ಕಡಿತಗೊಳಿಸುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಅಂದರೆ ಕಂಪನಿಯ ಅರ್ಧದಷ್ಟು ಉದ್ಯೋಗಿಗಳು ಕೆಲಸ ಕಳೆದುಕೊಳ್ಳಲಿದ್ದಾರೆ.