ಸ್ಯಾನ್ ಫ್ರಾನ್ಸಿಸ್ಕೊ: ಸಾಮಾಜಿಕ ಜಾಲ ತಾಣ ಟ್ವಿಟರ್ (Twitter) ಅನ್ನು ಖರೀದಿಸಿದ ಮೇಲೆ ಎಲಾನ್ ಮಸ್ಕ್ (Elon Musk) ಅವರು ಅದರಲ್ಲಿ ಹಲವಾರು ಬದಲಾವಣೆಯನ್ನು ಜಾರಿಗೊಳಿಸಿದ್ದಾರೆ. ಮಾತ್ರವಲ್ಲದೆ ಇನ್ನು ಮುಂದೆ ಪ್ರತಿ ತಿಂಗಳು ತಮ್ಮ ವೈಯಕ್ತಿಕ ಟ್ವಿಟರ್ ಖಾತೆಯಿಂದ 80 ಲಕ್ಷ ರೂ. ಆದಾಯ ಗಳಿಸಲಿದ್ದಾರೆ. ಇದು ಹೇಗೆ ಎನ್ನುತ್ತೀರಾ?! ಇಲ್ಲಿದೆ ಇಂಟರೆಸ್ಟಿಂಗ್ ಮಾಹಿತಿ. ಬ್ಲೂ ಟಿಕ್ (blue tick service) ಗುರುತು ಪಡೆಯಬೇಕಿದ್ದರೆ ಮಾಸಿಕ 4 ಡಾಲರ್ ಚಂದಾದಾರಿಕೆಯ ಪ್ಲಾನ್ ಖರೀದಿಸಬೇಕಾಗುತ್ತದೆ.
ಇತ್ತೀಚೆಗೆ ಮಸ್ಕ್ ಅವರು ಟ್ವಿಟರ್‌ನಲ್ಲಿ Monetization ಸ್ಕೀಮ್ ಅನ್ನೂ ಅಳವಡಿಸಿದ್ದಾರೆ. ಟ್ವಿಟರ್ ಕ್ರಿಯೇಟರ್ ಸಬ್‌ಸ್ಕ್ರಿಪ್ಷನ್ ಪ್ರೋಗ್ರಾಮ್ (Twitter Creator Subscription) ಈ ಫೀಚರ್ ಮೂಲಕ ಎಲಾನ್ ಮಸ್ಕ್ ಅವರು ತಿಂಗಳಿಗೆ 80 ಲಕ್ಷ ರೂ. ಆದಾಯ ಗಳಿಸಲು ಹಾದಿ ಸುಗಮವಾಗಿದೆ. ಈ ಫೀಚರ್ ಉಚಿತವಲ್ಲ, ಇದರ ಚಂದಾದಾರಿಕೆಗೆ ಪ್ರತಿ ತಿಂಗಳು 4 ಡಾಲರ್ ಅಥವಾ 330 ರೂ.ಗಳನ್ನು ಕೊಡಬೇಕಾಗುತ್ತದೆ. ಇಲ್ಲಿ ತಮ್ಮ ವಿಶೇಷ ಕಂಟೆಂಟ್‌ಗಳನ್ನು (exclusive content) ಮಸ್ಕ್ ಪೋಸ್ಟ್ ಮಾಡಲಿದ್ದಾರೆ.
ಟ್ವಿಟರ್ ಸಿಇಒ ಎಲಾನ್ ಮಸ್ಕ್ ಅವರು 24,700 ಸೂಪರ್ ಫಾಲೋವರ್‌ಗಳನ್ನು ಹೊಂದಿದ್ದಾರೆ. ಲೆಕ್ಕಾಚಾರದ ಪ್ರಕಾರ 24.7 ಸಾವಿರ ಚಂದಾದಾರರನ್ನು ಹೊಂದಿರುವ (subscibers) ಎಲಾನ್ ಮಸ್ಕ್ ಅವರು ಮಾಸಿಕ 68,42,000 ರೂ. ಸಂಪಾದಿಸಲಿದ್ದಾರೆ.
ಮುಂದಿನ 12 ತಿಂಗಳುಗಳಲ್ಲಿ ಟ್ವಿಟರ್ ತನ್ನ ಬಳಕೆದಾರರಿಂದ ಪಡೆದ ಹಣವನ್ನು ತಾನು ಇಟ್ಟುಕೊಳ್ಳುವುದಿಲ್ಲ, ಬದಲಿಗೆ ಕಂಟೆಂಟ್‌ಗಳಿಗೆ ಪ್ರತಿಯಾಗಿ ವಿತರಿಸಲಿದೆ ಎಂದು ಮಸ್ಕ್ ಅವರು ಹೇಳಿದ್ದಾರೆ.
ಏಪ್ರಿಲ್ 1ರಿಂದ ಟ್ವಿಟ್ಟರ್ ತನ್ನ ಬ್ಲೂ ಟಿಕ್ ಕುರಿತ ನಿಯಮಗಳನ್ನು ಬದಲಿಸಿ ಬೇಗ ಸಬ್‌ಸ್ಕ್ರೈಬ್ ಮಾಡಿಕೊಳ್ಳುವಂತೆ ಟ್ವಿಟ್ಟರ್ ಹೇಳಿತ್ತು. ಕೆಲವರು ಮುನ್ನೆಚ್ಚರಿಕೆ ವಹಿಸಿದ ಕಾರಣ ಅವರ ಖಾತೆಗಳ ಬ್ಲೂಟಿಕ್ ಉಳಿದುಕೊಂಡಿದೆ. ಇನ್ನು ಈ ಟ್ವಿಟರ್ ಬ್ಲೂಟಿಕ್‌ಗಾಗಿ ಒಂದು ತಿಂಗಳಿಗೆ 900 ಅಥವಾ ವರ್ಷಕ್ಕೆ 9400 ರೂ. ಹಣ ಪಾವತಿಸಬೇಕು. ಬ್ಲೂಟಿಕ್ ಚಂದಾದಾರರಿಗೆ ಅಕ್ಷರಮಿತಿ ಹೆಚ್ಚಿಸುವುದಾಗಿ ಹೇಳಿದ್ದರು. ವಿದೇಶಿ ಸೆಲೆಬ್ರಿಟಿಗಳಿಗೂ ಇದೇ ರೀತಿ ಆಗಿದೆ. ಟ್ವೀಟ್ನ ಅಕ್ಷರ ಮಿತಿಯನ್ನು ಶೀಘ್ರದಲ್ಲೇ 10,000ಕ್ಕೆ ಹೆಚ್ಚಿಸಲಾಗುವುದು ಎಂದು ಎಲಾನ್ ಮಸ್ಕ್ ಹೇಳಿದ್ದರು.