ಸ್ಯಾನ್ ಫ್ರಾನ್ಸಿಸ್ಕೊ: ಟ್ವಿಟರ್‌ನ ಮುಖ್ಯ ಕಾರ್ಯ ನಿರ್ಹಾಹಕ (ಸಿಇಒ) ಹುದ್ದೆಗೆ ಶೀಘ್ರದಲ್ಲೇ ರಾಜೀನಾಮೆ ನೀಡುವುದಾಗಿ ಎಲಾನ್ ಮಸ್ಕ್ (Elon Musk) ಘೋಷಿಸಿದ್ದಾರೆ.
ಟ್ವಿಟರ್‌ನ ಕೆಲಸವನ್ನು ಮಾಡಬಲ್ಲ ಯಾರಾದರೂ ಮೂರ್ಖ ಸಿಕ್ಕಿದ ಕೂಡಲೇ ರಾಜೀನಾಮೆ ನೀಡುತ್ತೇನೆ ಎಂದು ಎಲಾನ್ ಮಸ್ಕ್ ಟ್ವೀಟ್ ಮಾಡಿದ್ದಾರೆ.
ಇದೇ ಮೊದಲ ಬಾರಿಗೆ ಮಸ್ಕ್ ಅವರು ಪದತ್ಯಾಗ ಮಾಡುವ ಸುಳಿವು ನೀಡಿದ್ದಾರೆ. ಎಲಾನ್ ಮಸ್ಕಾವರು ತಾವು ಸಿಇಒ ಹುದ್ದೆಯಿಂದ ಕೆಳಗೆ ಇಳಿಯಬೇಕೇ ಬೇಡವೇ ಎಂಬ ವೋಟಿಂಗ್ ಮಾಡಿದ್ದರು. ಅದರಲ್ಲಿ 57.5% ಮಂದಿ ರಾಜೀನಾಮೆ ಕೊಡಬೇಕು ಎಂದು ಮತ ಹಾಕಿದ್ದರು.
ಹಲವಾರು ಕೆಲಸಗಳ ಒತ್ತಡದಿಂದ ಬಳಲುತ್ತಿರುವುದಾಗಿ ಮಸ್ಕ್ ತಿಳಿಸಿದ್ದಾರೆ. ಹೀಗಾಗಿ ಟ್ವಿಟರ್ ಸಿಇಒ ಹುದ್ದೆಯನ್ನು ಮತ್ತೊಬ್ಬರಿಗೆ ವಹಿಸಲು ಸಜ್ಜಾಗುತ್ತಿದ್ದಾರೆ.