ಸ್ಯಾನ್ ಫ್ರಾನ್ಸಿಸ್ಕೊ: ಸಾಮಾಜಿಕ ಜಾಲತಾಣ ದಿಗ್ಗಜ ಟ್ವಿಟರ್ ತನ್ನಲ್ಲಿ ಇರುವ ನಕಲಿ ಖಾತೆಗಳು ಎಷ್ಟು ಎಂಬುದರ ಬಗ್ಗೆ ನಿಖರವಾದ ವಿವರಗಳನ್ನು ನೀಡದಿದ್ದರೆ, ಅದನ್ನು ಖರೀದಿಸುವ ನಿರ್ಧಾರವನ್ನು ಕೈ ಬಿಡಬೇಕಾಗುತ್ತದೆ ಎಂದು ಉದ್ಯಮಿ ಎಲಾನ್ ಮಸ್ಕ್ ಎಚ್ಚರಿಸಿದ್ದಾರೆ.
ಟ್ವಿಟರ್‌ಗೆ ಈ ಬಗ್ಗೆ ಪತ್ರ ಬರೆದಿರುವ ಎಲಾನ್ ಮಸ್ಕ್, ಕಂಪನಿಯನ್ನು ಖರೀದಿಸುವುದಕ್ಕೆ ಮೊದಲು ನಕಲಿ ಖಾತೆಗಳ ವಿವರಗಳನ್ನು ನೀಡಬೇಕು. ಇಲ್ಲದಿದ್ದರೆ 44 ಶತಕೋಟಿ ಡಾಲರ್‌ಗಳ (ಅಂದಾಜು 3.38 ಲಕ್ಷ ಕೋಟಿ ರೂ.) ಮೆಗಾ ಡೀಲ್‌ನಿಂದ ಹೊರ ನಡೆಯುವುದಾಗಿ ಎಚ್ಚರಿಸಿದ್ದಾರೆ.
ನಕಲಿ ಖಾತೆಗಳ ವಿವರ ನೀಡದಿರುವುದರ ಮೂಲಕ ಟ್ವಿಟರ್ ಒಪ್ಪಂದವನ್ನು ಉಲ್ಲಂಘಿಸಿದೆ. ಇದು ಅದರ ಬದ್ಧತೆಯೂ ಹೌದು. ಆದ್ದರಿಂದ ಸದ್ಯಕ್ಕೆ ಒಪ್ಪಂದವನ್ನು ತಾತ್ಕಾಲಿಕವಾಗಿ ತಡೆಹಿಡಿದಿದ್ದು, ವಿವರ ಒದಗಿಸದಿದ್ದರೆ ಹೊರನಡೆಯುವುದಾಗಿ ಮಸ್ಕ್ ತಿಳಿಸಿದ್ದಾರೆ.
ಮಸ್ಕ್ ಪತ್ರದ ಬೆನ್ನಲ್ಲೇ ಟ್ವಿಟರ್ ಷೇರು ದರದಲ್ಲಿ ಶೇ.5.5 ಇಳಿಕೆಯಾಯಿತು.
ಇದನ್ನೂ ಓದಿ:ಎಲಾನ್ ಮಸ್ಕ್ ಡೀಲ್‌ಗೆ ನಿಯಂತ್ರಕ ವ್ಯವಸ್ಥೆ ಕೊಟ್ಟಿದ್ದ ಅವಧಿ ಮುಗಿಯಿತು ಎಂದ ಟ್ವಿಟರ್