ಉದ್ಯೋಗಿಗಳ ಭವಿಷ್ಯನಿಧಿ ಸಂಸ್ಥೆಯು (Employees Provident Fund -EPF) ವೇತನದಾರರ ನಿವೃತ್ತಿಯ ಉಳಿತಾಯದಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಇಪಿಎಫ್ ಅನ್ನು ಅಥವಾ ಉದ್ಯೋಗಿಗಳ ಭವಿಷ್ಯನಿಧಿಯನ್ನು ಇದು ನಿರ್ವಹಿಸುತ್ತದೆ. ಇಪಿಎಫ್‌ಒ ಕಾರ್ಮಿಕ ಮತ್ತು ಉದ್ಯೋಗ ಇಲಾಖೆಯ ಅಡಿಯಲ್ಲಿ ಬರುತ್ತದೆ. ಅದು ತನ್ನ ಸದಸ್ಯರಿಗೆ ಆನ್‌ಲೈನ್ ಮೂಲಕ ಪಿಎಫ್ ಬ್ಯಾಲೆನ್ಸ್ ವೀಕ್ಷಣೆ ಸೇರಿದಂತೆ ಹಲವು ಸೌಲಭ್ಯಗಳನ್ನು ಒದಗಿಸುತ್ತದೆ. ಇದರಿಂದಾಗಿ ಸದಸ್ಯರು ಸುಲಭವಾಗಿ ಖಾತೆಯನ್ನು ನಿರ್ವಹಿಸಬಹುದು.
ಇಪಿಎಫ್‌ಒ ಸದಸ್ಯರು 12 ಅಂಕಿಗಳ Universal account number (UAN) ಮೂಲಕ ತಮ್ಮ ಇಪಿಎಫ್ ಖಾತೆಯ ಬ್ಯಾಲೆನ್ಸ್ ಎಷ್ಟಿದೆ ಎಂಬುದನ್ನು ತಿಳಿದುಕೊಳ್ಳಬಹುದು.
ಯುಎಎನ್ ನೋಂದಣಿ ಹೇಗೆ? ( How to register UAN?)
ನೀವು ಒಂದು ಸಲ ನಿಮ್ಮ ಯುಎಎನ್ ಅನ್ನು ಸಕ್ರಿಯಗೊಳಿಸಿದರೆ ಬಳಿಕ ಅದನ್ನು ಬಳಸಿಕೊಂಡು, ಇಪಿಎಫ್ ಖಾತೆಯಲ್ಲಿ ಬ್ಯಾಲೆನ್ಸ್ ಎಷ್ಟಿದೆ ಎಂಬುದನ್ನು ತಿಳಿದುಕೊಳ್ಳಬಹುದು. ಇದಕ್ಕಾಗಿ ಇಪಿಎಫ್‌ಒ ವೆಬ್ ಪೋರ್ಟಲ್‌ನಲ್ಲಿ ನಿಮ್ಮ ಯುಎಎನ್ ಮತ್ತು ಪಾಸ್ ವರ್ಡ್ ಬಳಸಿ ಲಾಗಿನ್ ಆಗಬೇಕು.
ಮೆಂಬರ್ ಪಾಸ್‌ಬುಕ್‌ಗೆ ಪ್ರವೇಶ ಪಡೆಯಲು ಹೋಮ್ ಪೇಜ್‌ಗೆ ಹೋಗಬೇಕು, For employees ಆಯ್ಕೆಯನ್ನು ಕ್ಲಿಕ್ಕಿಸಬೇಕು. ಬಳಿಕ service ಆಪ್ಷನ್ ಆಯ್ಕೆ ಮಾಡಿಕೊಳ್ಳಬೇಕು. ಆಗ ಮೆಂಬರ್ ಐಡಿಗಳ ಲಿಸ್ಟ್ ಸಿಗುತ್ತದೆ. ನಿಮ್ಮದನ್ನು ಆಯ್ಕೆ ಮಾಡಿಕೊಂಡು View Passbook ಆಯ್ಕೆಯನ್ನು ಕ್ಲಿಕ್ಕಿಸಿ. ಇದು ನಿಮಗೆ ಇಪಿಎಫ್ ಖಾತೆ ಮತ್ತು ಬ್ಯಾಲೆನ್ಸ್ ವಿವರವನ್ನು ಡಿಸ್ ಪ್ಲೇ ಮಾಡುತ್ತದೆ. ನೀವು ಡೌನ್‌ಲೋಡ್ ಪಾಸ್ ವರ್ಡ್ ಆಯ್ಕೆಯನ್ನೂ ಮಾಡಬಹುದು. ಈ ಮೂಲಕ ಇಪಿಎಫ್ ಪಾಸ್‌ಬುಕ್‌ನ ಪಿಡಿಎಫ್ ಫೈಲ್ ಅನ್ನು ಡೌನ್‌ಲೋಡ್ ಮಾಡಬಹುದು. ಪ್ರಿಂಟ್ ತೆಗೆಯಬಹುದು.
ನೀವು ಇಪಿಎಫ್‌ಒ ಕ್ಲೇಮ್ ಮಾಡಿಕೊಳ್ಳಲು ಯತ್ನಿಸಿದಾಗ ಸುದೀರ್ಘ ಸಮಯ ತೆಗೆದುಕೊಳ್ಳುತ್ತಿದೆ ಎಂದಿದ್ದರೆ, ಬ್ಯಾಂಕ್ ವಿವರ ತಪ್ಪಾಗಿ ನಮೂದಾಗಿರುವ ಸಾಧ್ಯತೆ ಇದೆ. ಇದನ್ನು ಸರಿಪಡಿಸಿಕೊಳ್ಳಿ. ಆನ್‌ಲೈನ್ ಮೂಲಕ ಯುಎಎನ್ ಬಳಸಿ ಬ್ಯಾಂಕ್ ವಿವರಗಳನ್ನು ಸರಿಪಡಿಸಬಹುದು.
ಆನ್‌ಲೈನ್ ವಂಚನೆ ಬಗ್ಗೆ ಎಚ್ಚರಿಕೆ
ಉದ್ಯೋಗಿಗಳ ನಿವೃತ್ತಿನಿಧಿ ಮಂಡಳಿ ಇಪಿಎಫ್‌ಒ ಪಿಎಫ್ ಸದಸ್ಯರಿಗೆ, ಆನ್‌ಲೈನ್ ಮೂಲಕ ವಂಚಿಸುವ ದುಷ್ಕರ್ಮಿಗಳ ಬಗ್ಗೆ ಮುನ್ನೆಚ್ಚರಿಕೆ ನೀಡಿದೆ. ಇಪಿಎಫ್‌ಒ ಪಿಎಫ್ ಸದಸ್ಯರು ಆನ್‌ಲೈನ್ ಮಾಧ್ಯಮಗಳ ಮೂಲಕ ವಂಚಿಸಲು ಯತ್ನಿಸುತ್ತಾರೆ. ಆದ್ದರಿಂದ ವಾಟ್ಸ್ ಆ್ಯಪ್ ಮತ್ತು ಸಾಮಾಜಿಕ ಜಾಲತಾಣದ ಮೂಲಕ (ವಿಸ್ತಾರ Money Guide | EPFO Alert |) ಯಾವುದೇ ಹಣವನ್ನು ಪಿಎಫ್ ಹೆಸರಿನಲ್ಲಿ ಠೇವಣಿ ಇಡುವುದು ಬೇಡ ಎಂದು ಎಚ್ಚರಿಸಿದೆ.
ವಾಟ್ಸ್ ಆ್ಯಪ್ ಮೂಲಕ ಇಪಿಎಫ್‌ಒ ಬ್ಯಾಂಕ್ ಖಾತೆ ವಿವರ ಕೇಳುವುದಿಲ್ಲ
ಇಪಿಎಫ್‌ಒ (Employees Provident Fund organisation-EPFO) ಯಾವತ್ತೂ ಆಧಾರ್, ಪ್ಯಾನ್, ಯುಎಎನ್, ಬ್ಯಾಂಕ್ ಖಾತೆ, ಒಟಿಪಿ ಇತ್ಯಾದಿಗಳನ್ನು ಫೋನ್, ಸಾಮಾಜಿಕ ಜಾಲತಾಣ, ವಾಟ್ಸ್ ಆ್ಯಪ್ ಮೂಲಕ ಕೇಳುವುದಿಲ್ಲ.
ಯಾರಾದರೂ ಫೋನ್ ಅಥವಾ ವಾಟ್ಸ್ ಆ್ಯಪ್ ಮೂಲಕ ಮೇಲ್ಕಂಡ ವಿವರಗಳನ್ನು ಕೇಳಿದರೆ, ವಿವರಗಳನ್ನು ಕೊಡುವುದು ಬೇಡ ಎಂದು ಇಪಿಎಫ್‌ಒ ತಿಳಿಸಿದೆ. ಈ ಬಗ್ಗೆ ಟ್ವೀಟ್ ಮಾಡಿದೆ.