Site icon Vistara News

EPF e-passbook : UMANG ಆ್ಯಪ್‌ನಲ್ಲಿ ನಿಮ್ಮ ಪಿಎಫ್ ಪಾಸ್‌ಬುಕ್‌ ಸುಲಭವಾಗಿ ಪರಿಶೀಲಿಸಿ

After RBI EPFO also blocks Paytm Payments Bank

ಕೆಲವು ಬಾರಿ ತಾಂತ್ರಿಕ ಅಡಚಣೆಯ ಪರಿಣಾಮ ಇಪಿಎಫ್‌ಒ ವೆಬ್‌ ಪೋರ್ಟಲ್‌ನಲ್ಲಿ ಪಿಎಫ್‌ ಪಾಸ್‌ಬುಕ್‌ ಅನ್ನು ನೋಡಲು ಮತ್ತು ಡೌನ್‌ಲೋಡ್‌ ಮಾಡಿಕೊಳ್ಳಲು ಸಾಧ್ಯ ಆಗದಿರಬಹುದು. ಆದರೆ, (EPF e-passbook ) ಇಪಿಎಫ್‌ಒ ತನ್ನ ವೆಬ್‌ಸೈಟ್‌ನಲ್ಲಿ ಸದಸ್ಯರು UMANG ಆ್ಯಪ್‌ನಲ್ಲಿ ಇ-ಪಾಸ್‌ಬುಕ್‌ ಅನ್ನು ವೀಕ್ಷಿಸಬಹುದು. ಇದು ಹೇಗೆ ಸಾಧ್ಯ? ಇಲ್ಲಿದೆ ವಿವರ.

UMANG ಆ್ಯಪ್‌ನಲ್ಲಿ ಇಪಿಎಫ್‌ ಪಾಸ್‌ಬುಕ್‌ ಅನ್ನು ವೀಕ್ಷಿಸುವುದು ಹೀಗೆ:

Step 1 : ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ UMANG app ಅನ್ನು ಡೌನ್‌ಲೋಡ್‌ ಮಾಡಿಟ್ಟುಕೊಳ್ಳಿ ಮತ್ತು ನಿಮ್ಮ ಖಾತೆಗೆ ಲಾಗಿನ್‌ ಆಗಿ.

Step 2 : EPFO ಪದವನ್ನು ಸರ್ಚ್‌ ಬಾರ್‌ನಲ್ಲಿ ಎಂಟರ್‌ ಮಾಡಿ. ಸರ್ಚ್‌ಗೆ ಕ್ಲಿಕ್ಕಿಸಿ

Step 3 : view passbook ಸೆಲೆಕ್ಟ್‌ ಮಾಡಿ.

Step 4 : UAN ಸಂಖ್ಯೆ ನಮೂದಿಸಿ, OTP ಪ್ರಕ್ರಿಯೆ ಪೂರ್ಣಗೊಳಿಸಿ.

Step 5 : member ID ಸೆಲೆಕ್ಟ್‌ ಮಾಡಿ, ಇ-ಪಾಸ್‌ ಬುಕ್‌ ಡೌನ್‌ ಲೋಡ್‌ ಮಾಡಿ.

EPF balance ಪರಿಶೀಲಿಸಲು ಮತ್ತಷ್ಟು ವಿಧಾನಗಳು ಇಂತಿವೆ.

https://twitter.com/maapsworld/status/1244966967045509122?s=20

SMS ಕಳಿಸುವ ಮೂಲಕ EPF ಚೆಕ್‌ ಮಾಡುವುದು ಹೇಗೆ?

ನೀವು 7738299899 ಸಂಖ್ಯೆಗೆ SMS ಕಳಿಸುವ ಮೂಲಕ ಪಿಎಫ್‌ ಖಾತೆಯಲ್ಲಿನ ಬ್ಯಾಲೆನ್ಸ್‌ ಮೊತ್ತವನ್ನು ತಿಳಿದುಕೊಳ್ಳಬಹುದು. ಖಾತೆಗೆ ಇತ್ತೀಚಿನ ನಿಮ್ಮ ಕಾಂಟ್ರಿಬ್ಯೂಷನ್‌ ಎಷ್ಟೆಂಬುದನ್ನು ತಿಳಿಯಬಹುದು. ಇದಕ್ಕಾಗಿ ಈ ಮೆಸೇಜ್‌ ಅನ್ನು ಕಳಿಸಬೇಕು: EPFPHO UAN ENG

ಇದರಲ್ಲಿ ಇಂಗ್ಲಿಷ್‌ ಭಾಷೆಗೆ ENG ಬಳಸಬೇಕು. KAN ಬಳಸಿದರೆ ಕನ್ನಡ ಭಾಷೆಯಲ್ಲಿ ಲಭ್ಯ. ಇಂಗ್ಲಿಷ್‌, ಹಿಂದಿ, ಕನ್ನಡ, ಮಲಯಾಳಂ, ತಮಿಳು, ತೆಲುಗು, ಗುಜರಾತಿ, ಪಂಜಾಬಿ, ಬೆಂಗಾಲಿ, ಮರಾಠಿ ಭಾಷೆಯಲ್ಲಿ ಲಭ್ಯ. ನಿಮ್ಮ UAN ಬ್ಯಾಂಕ್‌ ಖಾತೆ ಜತೆಗೆ ಲಿಂಕ್‌ ಆಗಿರಬೇಕು.

ಮಿಸ್ಡ್‌ ಕಾಲ್‌ ಕೊಡುವ ಮೂಲಕ EPF ಬ್ಯಾಲೆನ್ಸ್‌ ತಿಳಿದುಕೊಳ್ಳುವುದು ಹೇಗೆ?

ನೀವು UAN ವೆಬ್ ಸೈಟ್‌ನಲ್ಲಿ ನೋಂದಣಿಯಾಗಿದ್ದರೆ ಹಾಗೂ ನಿಮ್ಮ ನೋಂದಾಯಿತ ಮೊಬೈಲ್‌ ಸಂಖ್ಯೆಯಿಂದ 011-22901406 ಗೆ ಮಿಸ್ಡ್‌ ಕಾಲ್‌ ಕೊಡುವ ಮೂಲಕ ಪಿಎಫ್‌ ಚೆಕ್‌ ಮಾಡಬಹುದು. ಆದರೆ ನಿಮ್ಮ ಬ್ಯಾಂಕ್‌ ಖಾತೆ ವಿವರ, ಆಧಾರ್‌, ಪ್ಯಾನ್‌ ನಿಮ್ಮ ಯುಎಎನ್‌ ಜತೆ ಲಿಂಕ್‌ ಆಗಿರುವುದನ್ನು ಖಚಿತಪಡಿಸಿ. ಈ ಸೇವೆಗೆ ಶುಲ್ಕ ಇರುವುದಿಲ್ಲ.

ಏನಿದು UMANG APP ?

https://twitter.com/UmangOfficial_/status/1650733459936264192?s=20

ಒಂದೇ ಆ್ಯಪ್‌ನಲ್ಲಿ ಉದ್ಯೋಗಿಗಳ ಭವಿಷ್ಯನಿಧಿ ಸಂಘಟನೆಯ (Employees Provident Fund Organisation-EPFO) ಎಲ್ಲ ಮಾಹಿತಿಗಳನ್ನು ತಿಳಿಯಬಹುದು. ನಾನಾ ಸೇವೆಗಳನ್ನು ಪಡೆಯಬಹುದು. ಅದುವೇ UMANG APP.

ಉಮಾಂಗ್‌ ಆ್ಯಪ್‌ ಮೂಲಕ ಪಿಎಫ್‌ದಾರರು ಪಿಎಫ್‌ ಬ್ಯಾಲೆನ್ಸ್‌, ವಿತ್‌ ಡ್ರಾವಲ್‌ ಕ್ಲೇಮ್‌, ಯುಎಎನ್‌ಗೆ ಕ್ಲೇಮ್‌, ಜೀವನ್‌ ಪ್ರಮಾಣ್‌ ಸರ್ಟಿಫಿಕೇಟ್‌ ಮತ್ತಿತರ ಸೇವೆಗಳನ್ನು ಪಡೆಯಬಹುದು. Unified Mobile Application for New age Governance (UMANG) ಆ್ಯಪ್‌ ಅನ್ನು ಸರ್ಕಾರವು ಡಿಜಿಟಲ್‌ ಇಂಡಿಯಾ ಅಭಿಯಾನದ ಭಾಗವಾಗಿ ಅಭಿವೃದ್ಧಿಪಡಿಸಿದೆ.

Exit mobile version