ನವ ದೆಹಲಿ: ಇ-ಪಾಸ್‌ಬುಕ್ ಸೇವೆ ಕಳೆದ ಕೆಲವು ದಿನಗಳಿಂದ (EPF e-passbook) ಮತ್ತೆ ಸಿಗುತ್ತಿಲ್ಲ. ಇದು ಪಿಎಫ್‌ದಾರರನ್ನು ಚಿಂತೆಗೀಡು ಮಾಡಿದೆ. ಇಪಿಎಫ್‌ಒ ಸಂಸ್ಥೆಯ ವೆಬ್‌ಸೈಟ್ ಅಥವಾ ಉಮಾಂಗ್ ಆ್ಯಪ್‌ನಲ್ಲಿ (Umang app) ಸದಸ್ಯರು ಇ-ಪಾಸ್‌ಬುಕ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ.
ಇಪಿಎಫ್‌ದ ಸದಸ್ಯರಲ್ಲಿ ಕೆಲವರು ಟ್ವಿಟರ್‌ನಲ್ಲಿ ಈ ಬಗ್ಗೆ ಪೋಸ್ಟ್‌ಗಳನ್ನು ಶೇರ್ ಮಾಡಿದ್ದಾರೆ. ಅಸಮಾಧಾನವನ್ನು ವ್ಯಕ್ತಪಡಿಸಿದ್ದು, ಇಪಿಎಫ್‌ಒ ಮಂಡಳಿ ಮಧ್ಯಪ್ರವೇಶಿಸಬೇಕು ಎಂದು ಒತ್ತಾಯಿಸಿದ್ದಾರೆ.
ಬಹುತೇಕ ಟ್ವೀಟ್‌ಗಳಿಗೆ ಇಪಿಎಫ್‌ಒ ನೀಡಿರುವ ಉತ್ತರದಲ್ಲಿ, ಅಡಚಣೆಗಾಗಿ ಕ್ಷಮಿಸಿ, ಸಂಬಂಧಪಟ್ಟ ತಂಡ ಪ್ರಕರಣದ ಬಗ್ಗೆ ಪರಿಶೀಲಿಸಲಿದೆ. ಸ್ವಲ್ಪ ಕಾಲಾವಕಾಶ ನೀಡಿ, ಸಮಸ್ಯೆಯನ್ನು ಇತ್ಯರ್ಥಪಡಿಸಲಾಗುವುದು ಎಂದಿದೆ. ಇಪಿಎಫ್‌ಒ ಸದಸ್ಯರು ಕಳೆದ ಕೆಲವು ತಿಂಗಳುಗಳಿಂದ ಇದೇ ಸಮಸ್ಯೆಯನ್ನು ಆಗಿಂದಾಗ್ಗೆ ಎದುರಿಸುತ್ತಿದ್ದಾರೆ.
ಉದ್ಯೋಗಿಗಳ ನಿವೃತ್ತಿನಿಧಿ ಮಂಡಳಿ ಇಪಿಎಫ್‌ಒ ಪಿಎಫ್ ಸದಸ್ಯರಿಗೆ, ಆನ್‌ಲೈನ್ ಮೂಲಕ ವಂಚಿಸುವ ದುಷ್ಕರ್ಮಿಗಳ ಬಗ್ಗೆ ಮುನ್ನೆಚ್ಚರಿಕೆ ನೀಡಿದೆ. ಇಪಿಎಫ್‌ಒ ಪಿಎಫ್ ಸದಸ್ಯರು ಆನ್‌ಲೈನ್ ಮಾಧ್ಯಮಗಳ ಮೂಲಕ ವಂಚಿಸಲು ಯತ್ನಿಸುತ್ತಾರೆ. ಆದ್ದರಿಂದ ವಾಟ್ಸ್ ಆ್ಯಪ್ ಮತ್ತು ಸಾಮಾಜಿಕ ಜಾಲತಾಣದ ಮೂಲಕ (ವಿಸ್ತಾರ Money Guide | EPFO Alert ) ಯಾವುದೇ ಹಣವನ್ನು ಪಿಎಫ್ ಹೆಸರಿನಲ್ಲಿ ಠೇವಣಿ ಇಡುವುದು ಬೇಡ ಎಂದು ಎಚ್ಚರಿಸಿದೆ.
ವಾಟ್ಸ್ ಆ್ಯಪ್ ಮೂಲಕ ಇಪಿಎಫ್‌ಒ ಬ್ಯಾಂಕ್ ಖಾತೆ ವಿವರ ಕೇಳುವುದಿಲ್ಲ
ಇಪಿಎಫ್‌ಒ (Employees Provident Fund organisation-EPFO) ಯಾವತ್ತೂ ಆಧಾರ್, ಪ್ಯಾನ್, ಯುಎಎನ್, ಬ್ಯಾಂಕ್ ಖಾತೆ, ಒಟಿಪಿ ಇತ್ಯಾದಿಗಳನ್ನು ಫೋನ್, ಸಾಮಾಜಿಕ ಜಾಲತಾಣ, ವಾಟ್ಸ್ ಆ್ಯಪ್ ಮೂಲಕ ಕೇಳುವುದಿಲ್ಲ.
ಯಾರಾದರೂ ಫೋನ್ ಅಥವಾ ವಾಟ್ಸ್ ಆ್ಯಪ್ ಮೂಲಕ ಮೇಲ್ಕಂಡ ವಿವರಗಳನ್ನು ಕೇಳಿದರೆ, ವಿವರಗಳನ್ನು ಕೊಡುವುದು ಬೇಡ ಎಂದು ಇಪಿಎಫ್‌ಒ ತಿಳಿಸಿದೆ.