Site icon Vistara News

EPFO Nomination update : ಇಪಿಎಫ್‌ಒ ನಾಮಿನೇಶನ್‌ ಬಾಕಿ ಇದೆಯೇ? ಹೀಗೆ ಮಾಡಿ…

After RBI EPFO also blocks Paytm Payments Bank

ನವ ದೆಹಲಿ: ನಾನಾ ಹಣಕಾಸು ಯೋಜನೆಗಳಲ್ಲಿ ನಾಮಿನೇಶನ್‌ ( EPFO Nomination) ಮಹತ್ವದ ಭಾಗವಾಗಿದೆ. ಜೀವ ವಿಮೆ ಪಾಲಿಸಿಗಳು, ಬ್ಯಾಂಕ್‌ ಅಕೌಂಟ್‌, ಮ್ಯೂಚುವಲ್‌ ಫಂಡ್‌ಗಳು, ಪ್ರಾವಿಡೆಂಟ್‌ ಫಂಡ್‌ಗಳು ಮತ್ತು ಇತರ ಹೂಡಿಕೆಯ ಸಾಧನಗಳಲ್ಲಿ ನಾಮಿನೇಶನ್‌ ನಿರ್ಣಾಯಕವಾಗಿರುತ್ತದೆ.

ಇಪಿಎಫ್‌ಒ ನಾಮಿನೇಶನ್‌ ಏಕೆ ಮಹತ್ವಪೂರ್ಣ?

ಇಪಿಎಫ್‌ಒ (Employees provident fund organization)‌ ಅಡಿಯಲ್ಲಿ ನಾಮಿನೇಶನ್ ಮಹತ್ವಪೂರ್ಣ. ಏಕೆಂದರೆ ಪಿಎಫ್‌ದಾರ ಮೃತಪಟ್ಟರೆ ಅರ್ಹ ನಾಮಿನಿಗೆ ಇಪಿಎಫ್‌ಒ ಖಾತೆಯ ಹಣ ವರ್ಗಾವಣೆಯಾಗುತ್ತದೆ. ಯಾವುದೇ ಗೊಂದಲ ಸೃಷ್ಟಿಯಾಗುವುದಿಲ್ಲ.

ಇಪಿಎಫ್‌ಒ ಕಾರ್ಮಿಕ ಮತ್ತು ಉದ್ಯೋಗ ಇಲಾಖೆಯ ಅಡಿಯಲ್ಲಿ ಬರುತ್ತದೆ. ಇದು ಉದ್ಯೋಗಿಗಳಿಗೆ ಪ್ರಾವಿಡೆಂಟ್‌ ಫಂಡ್‌, ಪಿಂಚಣಿ ಮತ್ತು ವಿಮೆ ಯೋಜನೆಗಳನ್ನು ನಿರ್ವಹಿಸುತ್ತದೆ. ಇಪಿಎಫ್‌ಇ ಇ-ನಾಮಿನೇಶನ್‌ಗೆ ಯಾವುದೇ ಗಡುವನ್ನು ಇಪಿಎಫ್‌ಒ ವಿಧಿಸಿಲ್ಲ. ಮುಂಗಡ (advance) ಪಡೆಯಲು ಇದು ಕಡ್ಡಾಯವೂ ಅಲ್ಲ.

ಇ-ನಾಮಿನೇಶನ್‌ ಪ್ರಕ್ರಿಯೆ ಹೀಗೆ:

ಇಪಿಎಫ್‌ಒ ಮೆಂಬರ್‌ ಪೋರ್ಟಲ್‌ಗೆ ಲಾಗಿನ್‌ ಆಗಿರಿ.

ಕುಟುಂಬದ ಸದಸ್ಯರನ್ನು ಸೇರಿಸಿ

ಕುಟುಂಬ ಸದಸ್ಯರ ಫೋಟೊ, ಆಧಾರ್‌ ವಿವರಗಳನ್ನು ಅಪ್‌ಲೋಡ್‌ ಮಾಡಿ.

ಬ್ಯಾಂಕ್‌ ಅಕೌಂಟ್‌ ಕಡ್ಡಾಯವಲ್ಲ.

ಪಿಡಿಎಫ್‌ ಸೃಷ್ಟಿಯಾದ ಬಳಿಕ ಆಧಾರ್‌ ಜತೆ ಲಿಂಕ್‌ ಆಗಿರುವ ಮೊಬೈಲ್‌ ಸಂಖ್ಯೆ ಬಳಸಿಕೊಂಡು ಒಟಿಪಿ ದೃಢೀಕರಣ ಮಾಡಬೇಕು. ಪಿಡಿಎಫ್‌ಗೆ ಇ-ಸೈನ್‌ ಆದ ಬಳಿಕವಷ್ಟೇ ಇ-ನಾಮಿನೇಶನ್‌ ಪೂರ್ಣವಾಗುತ್ತದೆ.

ಇ-ಸೈನ್‌ ಪ್ರಕ್ರಿಯೆ ಹೇಗೆ?

ಇ-ಸೈನ್‌ (E -sign) ಲಿಂಕ್‌ ಮೇಲೆ ಕ್ಲಿಕ್ಕಿಸಿ. ಆಗ ಹೊಸ ಪೇಜ್‌ ತೆರೆದುಕೊಳ್ಳುತ್ತದೆ. ಚೆಕ್‌ ಬಾಕ್ಸ್‌ ಸಿಲೆಕ್ಟ್‌ ಮಾಡಿಕೊಳ್ಳಿ. ಮುಂದಿನ ಪುಟದಲ್ಲಿ ಆಧಾರ್‌ ಆಧರಿತ ದೃಢೀಕರಣಕ್ಕೆ ಆಯ್ಕೆ ಇರುತ್ತದೆ. ಆಧಾರ್‌ ಸಂಖ್ಯೆ/ ವರ್ಚುವಲ್‌ ಐಡಿ (virtual ID) ಮತ್ತು ವೆರಿಫೈ ಬಟನ್‌ ಒತ್ತಿರಿ. ಬಳಿ ಸಬ್‌ಮಿಟ್‌ ಒತ್ತಿರಿ. ನಾಮಿನೇಶನ್‌ ವಿವರ ಆಗ ಇಪಿಎಫ್‌ಒ ಡೇಟಾ ಬೇಸ್‌ನಲ್ಲಿ ಸೇವ್‌ ಆಗುತ್ತದೆ.

16 ಅಂಕಿಗಳ ವರ್ಚುವಲ್‌ ಐಟಿ ಸೃಷ್ಟಿಸುವುದು ಹೇಗೆ?

UIDAI ವೆಬ್‌ಸೈಟ್‌ಗೆ ಲಾಗಿನ್‌ ಆಗಿ ( uidai.gov.in)

ಆಧಾರ್‌ ಸರ್ವೀಸ್‌ ಅಡಿಯಲ್ಲಿ Virtual ID (VID) Generator ಕ್ಲಿಕ್ಕಿಸಿ.

ಆಧಾರ್‌ ಸಂಖ್ಯೆ ನಮೂದಿಸಿ, Captcha ಎಂಟರ್‌ ಮಾಡಿ.

ಒಟಿಪಿ ಪಡೆಯಲು send OTP ಮೇಲೆ ಒತ್ತಿರಿ.

ಬಳಿಕ ಹೊಸ ವಿಐಡಿಗೆ ಎರಡು ಆಯ್ಕೆ ಲಭಿಸುತ್ತದೆ.

ನಿಮ್ಮ ಆಯ್ಕೆ ಮಾಡಿರಿ. ಮೊಬೈಲ್‌ ಮೂಲಕ ಆಧಾರ್‌ ವರ್ಚುವಲ್‌ ಐಡಿ (16 ಅಂಕಿ) ಪಡೆಯಿರಿ.

ಇದನ್ನೂ ಓದಿ: Formal sector jobs : 2022-23ರಲ್ಲಿ ಇಪಿಎಫ್‌ಒ ಅಡಿಯಲ್ಲಿ ಫಾರ್ಮಲ್‌ ಸೆಕ್ಟರ್‌ ಉದ್ಯೋಗಿಗಳ ಸಂಖ್ಯೆ ಹೆಚ್ಚಳ

Exit mobile version