Site icon Vistara News

Explainer: ಬೆಲೆ ಏರಿಕೆ ಬಿಸಿ ಹೆಚ್ಚಿಸುತ್ತಿರುವ ಆಮದು!

ಹೊಸದಿಲ್ಲಿ: ಭಾರತ ಕಚ್ಚಾ ತೈಲ, ಖಾದ್ಯ ತೈಲ, ಚಿನ್ನ, ಎಲೆಕ್ಟ್ರಾನಿಕ್‌ ಉತ್ಪನ್ನಗಳಿಗೆ ಆಮದನ್ನು ಬಹುವಾಗಿ ಅವಲಂಬಿಸಿದೆ. ಇದು ಬೆಲೆ ಏರಿಕೆಯನ್ನು ಗಣನೀಯವಾಗಿ ಹೆಚ್ಚಿಸಿದೆ. ಬೆಲೆ ಏರಿಕೆ ಬಿಸಿ ಮತ್ತು ಆಮದು ವೆಚ್ಚಕ್ಕೂ ನೇರವಾದ ಸಂಬಂಧ ಇದೆ. ಇದನ್ನು ಅರಿತುಕೊಳ್ಳುವುದು ಮುಖ್ಯ.

ಐತಿಹಾಸಿಕವಾಗಿ ಭಾರತದಲ್ಲಿ ಸಗಟು ದರಗಳಲ್ಲಿ ಉಂಟಾಗುವ ಬದಲಾವಣೆಗಳಿಗೂ ಆಮದು ದರಗಳಿಗೂ ಸಂಬಂಧ ಇದೆ ಎನ್ನುತ್ತದೆ ರೇಟಿಂಗ್‌ ಏಜೆನ್ಸಿ ಕ್ರಿಸಿಲ್‌ ವರದಿ.

ಆಮದು ಹೆಚ್ಚಾದಂತೆ ಅದಕ್ಕೆ ತಗಲುವ ವೆಚ್ಚ ಮತ್ತು ಅದನ್ನು ಸಾಗಣೆ ಮಾಡುವ ಖರ್ಚು ಏರಿಕೆಯಾಗುತ್ತದೆ. ಹೀಗಾಗಿ ಇದು ವಸ್ತುಗಳ ಬೆಲೆ ಏರಿಕೆಗೂ ಕಾರಣವಾಗುತ್ತದೆ. ಉದಾಹರಣೆಗೆ 2021-22ರ ಮೊದಲ 10 ತಿಂಗಳುಗಳಲ್ಲಿ ಸಗಟು ಹಣದುಬ್ಬರ ಶೇ.12.8 ಏರಿಕೆಯಾಗಿದ್ದರೆ, ಸರಕು ಸಾಗಣೆ ವೆಚ್ಚ ಶೇ.26.9ರಷ್ಟು ವೃದ್ಧಿಸಿತ್ತು.

ಈ ವರ್ಷ ಬೆಲೆ ಏರಿಕೆ ದಿಢೀರ್‌ ಜಿಗಿತ ಏಕೆ?
ಭಾರತದಲ್ಲಿ 2021ರಲ್ಲಿ ಸಗಟು ಅಥವಾ ಹೋಲ್‌ ಸೇಲ್‌ ದರಗಳು ಎರಡಂಕಿಯನ್ನು ದಾಟಿತ್ತು. ಆದರೆ ಚಿಲ್ಲರೆ ದರಗಳ ಸೂಚ್ಯಂಕ (ಸಿಪಿಐ) ಕಳೆದ 4 ತಿಂಗಳಿನಿಂದ ಮಾತ್ರ ಆರ್‌ಬಿಐನ ಸುರಕ್ಷತಾ ಮಟ್ಟವನ್ನು ಮೀರಿದೆ. ಇದರ ಅರ್ಥ 2021ರಲ್ಲಿ ಉತ್ಪಾದನಾ ವೆಚ್ಚಗಳು ಗ್ರಾಹಕರಿಗೆ ವರ್ಗಾವಣೆಯಾಗಿರಲಿಲ್ಲ. ಆದರೆ ಈ ವರ್ಷ ಗ್ರಾಹಕರಿಗೆ ವರ್ಗಾವಣೆಯಾಗುತ್ತಿದ್ದು, ಚಿಲ್ಲರೆ ಹಣದುಬ್ಬರವನ್ನು ಹೆಚ್ಚಿಸಿದೆ, ಬೆಲೆ ಏರಿಕೆಯ ಬಿಸಿ ತಟ್ಟುತ್ತಿದೆ.
2022 ರ ಜನವರಿ-ಮಾರ್ಚ್‌ ತ್ರೈಮಾಸಿಕದ ಅಂಕಿ ಅಂಶಗಳ ಪ್ರಕಾರ, ಗೋಧಿ, ಜೋಳ, ಹತ್ತಿಯ ದರಗಳು ಅವುಗಳ ಅಂತಾರಾಷ್ಟ್ರೀಯ ದರಗಳಿಗೆ ಅನುಗುಣವಾಗಿ ವೃದ್ಧಿಸಿವೆ. ಉದಾಹರಣೆಗೆ ಗೋಧಿಯ ದರ ಮಾರ್ಚ್‌ ನಲ್ಲಿ ಶೇ.24.5, ಜೋಳದ ದರ ಶೇ.14.7, ಸಕ್ಕರೆಯ ದರ ಶೇ.8.3ರಷ್ಟು ವೃದ್ಧಿಸಿದೆ. ಬೆಲೆ ಏರಿಕೆಯ ಬೆಂಕಿಗೆ ತುಪ್ಪ ಸುರಿದಂತಾಗಿದೆ.

ಬೆಲೆ ಏರಿಕೆಯ ಆಮದು ಎಲ್ಲಿಂದ?
ಭಾರತದ ಆಮದಿನಲ್ಲಿ ಶೇ.60 ಪಾಲು 5 ವಲಯಗಳ ಮೂಲವನ್ನು ಹೊಂದಿದೆ. ಅವುಗಳೆಂದರೆ ಕೊಲ್ಲಿ ರಾಷ್ಟ್ರಗಳು, ಚೀನಾ, ಆಸಿಯಾನ್‌, ಐರೋಪ್ಯ ಒಕ್ಕೂಟ ಮತ್ತು ಅಮೆರಿಕ.
ಕೊಲ್ಲಿ ರಾಷ್ಟ್ರಗಳು (ಶೇ.17.8)
ಭಾರತವು ಕೊಲ್ಲಿ ರಾಷ್ಟ್ರಗಳಿಂದ ಕಚ್ಚಾ ತೈಲ, ಚಿನ್ನ, ರಾಸಾಯನಿಕಗಳನ್ನು ಆಮದು ಮಾಡಿಕೊಳ್ಳುತ್ತದೆ.
ಚೀನಾ (ಶೇ.15.5)
ಚೀನಾದಿಂದ ಎಲೆಕ್ಟ್ರಿಕಲ್‌ ಯಂತ್ರೋಪಕರಣಗಳು, ಉಕ್ಕು ಆಮದು ಮಾಡುತ್ತದೆ.
ಆಸಿಯಾನ್ (ಶೇ.11)
ಆಸಿಯಾನ್‌ ರಾಷ್ಟ್ರಗಳಿಂದ ಖಾದ್ಯ ತೈಲ, ಎಲೆಕ್ಟ್ರಿಕಲ್‌ ಯಂತ್ರೋಪಕರಣಗಳ ಆಮದು.
ಅಮೆರಿಕ (ಶೇ.7)
ಅಮೆರಿಕದಿಂದ ಪೆಟ್ರೋಲಿಯಂ ಉತ್ಪನ್ನ, ಯಂತ್ರೋಪಕರಣಗಳು, ಬಿಡಿಭಾಗಗಳನ್ನು ಆಮದು ಮಾಡಿಕೊಳ್ಳುತ್ತದೆ.

2022-23ರಲ್ಲಿ ಬೆಲೆ ಏರಿಕೆ ಹೇಗಿರಬಹುದು?

ಭಾರತಕ್ಕೆ ಅತಿ ದೊಡ್ಡ ಸವಾಲು ಕಚ್ಚಾ ತೈಲ ದರದ್ದಾಗಿದೆ. ಭಾರತ ತನ್ನ ಬೇಡಿಕೆಯ ಬಹುಪಾಲು ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುತ್ತದೆ. ಇದು ಇತರ ಸರಕುಗಳ ವೆಚ್ಚವನ್ನೂ ಏರಿಸುತ್ತಿದೆ.
ರಷ್ಯಾ-ಉಕ್ರೇನ್‌ ಸಂಘರ್ಷ ಕಳೆದ ಫೆಬ್ರವರಿಯಲ್ಲಿ ಶುರುವಾದ ಬಳಿಕ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಪ್ರತಿ ಬ್ಯಾರೆಲ್‌ಗೆ 100 ಡಾಲರ್‌ಗಿಂತ ಮೇಲ್ಮಟ್ಟದಲ್ಲಿದೆ. ಈಗ ಬ್ರೆಂಟ್‌ ಕಚ್ಚಾ ತೈಲ ದರ 110 ಡಾಲರ್‌ನ ಮಟ್ಟದಲ್ಲಿದೆ. ಆದರೆ ರಷ್ಯಾ-ಉಕ್ರೇನ್‌ ಸಮರ ಸದ್ಯಕ್ಕೆ ಮುಗಿಯುವ ಲಕ್ಷಣ ಕಾಣಿಸುತ್ತಿಲ್ಲ. ಆದ್ದರಿಂದ ಸೆಂಟ್ರಲ್‌ ಬ್ಯಾಂಕ್‌ ಗಳು 2022-23ರಲ್ಲಿ ಹಣದುಬ್ಬರದ ಮುನ್ನೋಟವನ್ನು ಏರಿಸಿವೆ. ಆರ್‌ಬಿಐ ಕಳೆದ ಏಪರಿಲ್‌ ಮೊದಲ ಭಾಗದಲ್ಲಿ ಅಂದಾಜಿಸಿದ ಪ್ರಕಾರ 2022-23ರಲ್ಲಿ ಹಣದುಬ್ಬರದ ದರ ಸರಾಸರಿ ಶೇ.5.7ರ ಮಟ್ಟದಲ್ಲಿ ಇರಬಹುದು. ಕ್ರಿಸಿಲ್‌ ಪ್ರಕಾರ ಶೇ. 6.3 ಇರಬಹುದು. ಆರ್‌ ಬಿಐ ಕೂಡ ತನ್ನ ಜೂನ್‌ 6-8ರ ಸಭೆಯಲ್ಲಿ ಹಣದುಬ್ಬರದ ಅಂದಾಜನ್ನು ಪರಿಷ್ಕರಿಸುವ ನಿರೀಕ್ಷೆ ಇದೆ.

ಇದನ್ನೂ ಓದಿ: ಜನಸಾಮಾನ್ಯರಿಗೆ ‌ʻಗ್ಯಾಸ್ʼ ಟ್ರಬಲ್: ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆಯಲ್ಲಿ ₹ 250 ಏರಿಕೆ

ವಿತ್ತೀಯ ಕೊರತೆ ನಿಯಂತ್ರಣ
ಬೆಲೆ ಏರಿಕೆಗೆ ಸಂಬಂಧಿಸಿ ಭಾರತದಲ್ಲಿ ಹತ್ತು ವರ್ಷಗಳ ಹಿಂದಿನ ಪರಿಸ್ಥಿತಿಗೂ ಈಗಿನದ್ದಕ್ಕೂ ಕೆಲವು ಹೋಲಿಕೆ ಮತ್ತು ವ್ಯತ್ಯಾಸಗಳೂ ಇವೆ.
2012ರ ಮೇನಲ್ಲಿ ಕೂಡ ಡಾಲರ್‌ ಎದುರು ರೂಪಾಯಿ ಕುಸಿತಕ್ಕೀಡಾಗಿತ್ತು. ವಿದೇಶಿ ವಿನಿಮಯ ಸಂಗ್ರಹ ಕರಗುತ್ತಿತ್ತು. ವ್ಯಾಪಾರ ಕೊರತೆ ಏರುತ್ತಿತ್ತು. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ 100 ಡಾಲರ್‌ ಗಡಿ ದಾಟಿತ್ತು. ವ್ಯತ್ಯಾಸವೇನೆಂದರೆ ಆಗ ಭಾರತದಲ್ಲಿ ತೈಲ ದರವನ್ನು ನಿಯಂತ್ರಣದಲ್ಲಿಡಲಾಗಿತ್ತು. ಚಿನ್ನದ ಆಮದಿಗೆ ನಿರ್ಬಂಧ ಹೇರಲಾಗಿತ್ತು. ಈಗ ಇಂಥದ್ದೇ ಹೋಲಿಕೆ ಇದ್ದರೂ, ಪ್ರಮಾಣದಲ್ಲಿ ವ್ಯತ್ಯಾಸ ಇದೆ. ದಶಕದ ಹಿಂದೆ 2021-22ರಲ್ಲಿ ವ್ಯಾಪಾರ ಕೊರತೆ 185 ಶತಕೋಟಿ ಡಾಲರ್‌ ಇತ್ತು. 2022 ರ ಏಪ್ರಿಲ್‌ನಲ್ಲಿ ಕೇವಲ 20 ಶತಕೋಟಿ ಡಾಲರ್‌ ಇತ್ತು. 185 ಶತಕೋಟಿ ಡಾಲರ್‌ ವ್ಯಾಪಾರ ಕೊರತೆಗೆ ಹೋಲಿಸಿದರೆ ಇದು ಗಣನೀಯ ಇಳಿಕೆ. ಭಾರತದ ರಫ್ತು ಕಳೆದ 10 ವರ್ಷಗಳಲ್ಲಿ ವೃದ್ಧಿಸಿರುವುದು ಇದಕ್ಕೆ ಕಾರಣ. ಹೀಗಿದ್ದರೂ, ಕೋವಿಡ್‌ ಬಿಕ್ಕಟ್ಟಿನ ಬಳಿಕ ಉಂಟಾಗಿರುವ ಆರ್ಥಿಕ ಕುಸಿತದ ಹಾನಿಯನ್ನು ಭರಿಸಿಕೊಳ್ಳಬೇಕಾದ ಬೃಹತ್‌ ಸವಾಲಿದೆ. ಹಣದುಬ್ಬರ ದಿಢೀರ್‌ ಕಡಿಮೆಯಾಗುವ ಸಾಧ್ಯತೆಗಳು ಕಾಣಿಸುತ್ತಿಲ್ಲ. ಜೂನ್‌ನಲ್ಲಿ ಮತ್ತೊಮ್ಮೆ ಬಡ್ಡಿ ದರಗಳ ಏರಿಕೆಯನ್ನು ನಿರೀಕ್ಷಿಸಲಾಗಿದೆ. ಬಡ್ಡಿ ದರ ಏರಿಕೆ ಆರ್ಥಿಕ ಚಟುವಟಿಕೆಗಳ ಮೇಲೆ ಅದರದ್ದೇ ಆದ ಪ್ರಭಾವ ಬೀರುತ್ತದೆ.

ಭಾರತ ಆಮದನ್ನು ಹೇಗೆ ತಗ್ಗಿಸಬಹುದು?

ಇದನ್ನೂ ಓದಿ:RUPEE ಕುಸಿತದ ಪರಿಣಾಮ ಟಿ.ವಿ, ಫ್ರಿಡ್ಜ್‌, ವಾಷಿಂಗ್‌ಮೆಷೀನ್‌ ದರ ಹೆಚ್ಚಳ ಶೀಘ್ರ

Exit mobile version