ನವ ದೆಹಲಿ: ಭಾರತದ ರಫ್ತು (Exports dip) ಕಳೆದ ಅಕ್ಟೋಬರ್‌ನಲ್ಲಿ 29.78 ಶತಕೋಟಿ ಡಾಲರ್‌ಗೆ ( 2.44 ಲಕ್ಷ ಕೋಟಿ ರೂ.) ಇಳಿಕೆಯಾಗಿದೆ.
ಅಕ್ಟೋಬರ್‌ನಲ್ಲಿ ಆಮದು 56.69 ಶತಕೋಟಿ ಡಾಲರ್‌ಗೆ (೪.೬೪ ಲಕ್ಷ ಕೋಟಿ ರೂ.) ವೃದ್ಧಿಸಿತ್ತು. ಕಳೆದ ವರ್ಷ ಇದೇ ಅವಧಿಯಲ್ಲಿ ಆಮದು 53.64 ಶತಕೋಟಿ ಡಾಲರ್‌ನಷ್ಟಿತ್ತು. ( 4.39 ಲಕ್ಷ ಕೋಟಿ ರೂ.)
ಕಳೆದ ಏಪ್ರಿಲ್-ಅಕ್ಟೋಬರ್‌ನಲ್ಲಿ ರಫ್ತು ದಾಖಲೆಯ 12.55% ವೃದ್ಧಿಸಿತ್ತು. 263.35 ಶತಕೋಟಿ ಡಾಲರ್‌ನಷ್ಟಿತ್ತು. (21 ಲಕ್ಷ ಕೋಟಿ ರೂ.) ಆಮದು 33 % ಹೆಚ್ಚಳವಾಗಿತ್ತು. 436 ಶತಕೋಟಿ ಡಾಲರ್‌ಗೆ (35 ಲಕ್ಷ ಕೋಟಿ ರೂ.) ವೃದ್ಧಿಸಿತ್ತು.
ವ್ಯಾಪಾರ ಕೊರತೆ ಹೆಚ್ಚಳ: ರಫ್ತಿಗಿಂತ ಆಮದು ಗಣನೀಯ ಹೆಚ್ಚಳವಾದ ಪರಿಣಾಮ ಕಳೆದ ಅಕ್ಟೋಬರ್‌ನಲ್ಲಿ ವ್ಯಾಪಾರ ಕೊರತೆ 26.91 ಶತಕೋಟಿ ಡಾಲರ್‌ಗೆ ವೃದ್ಧಿಸಿದೆ. (2.20 ಲಕ್ಷ ಕೋಟಿ ರೂ.)