ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಜೋ ಬೈಡೆನ್ ( Joe Biden) ನಿವಾಸದಲ್ಲಿ ಶುಕ್ರವಾರ ಫೆಡರಲ್ ಬ್ಯೂರೊ ಆಫ್ ಇನ್ವೆಸ್ಟಿಗೇಶನ್ (FBI) ಶೋಧ ಕಾರ್ಯಾಚರಣೆ ನಡೆಸಿದ್ದು, ಸರ್ಕಾರದ 6 ರಹಸ್ಯ ದಾಖಲೆಗಳು ಪತ್ತೆಯಾಗಿವೆ. 13 ಗಂಟೆಗಳ ಕಾಲ ಕಾರ್ಯಾಚರಣೆ ನಡೆಯಿತು.
ಬೈಡೆನ್ ಅವರು ಉಪಾಧ್ಯಕ್ಷರಾಗಿದ್ದಾಗ ವರ್ಗೀಕೃತ ಎಂದು ಪರಿಗಣನೆಯಾಗಿದ್ದ ದಾಖಲೆಗಳು ಪತ್ತೆಯಾಗಿವೆ. ವೆಲ್ಲಿಂಗ್ಟನ್‌ನಲ್ಲಿ ಇರುವ ನಿವಾಸದಲ್ಲಿ ಕಾರ್ಯಾಚರಣೆ ನಡೆಯಿತು.
ಆದರೆ ಈ ಘಟನೆಯನ್ನು ತಣ್ಣಗಾಗಿಸಲು ಬೈಡೆನ್ ಯತ್ನಿಸಿದ್ದು, 6 ದಾಖಲಾತಿಗಳನ್ನು ತಪ್ಪಾಗಿ ಮನೆಯಲ್ಲಿ ಇಡಲಾಗಿತ್ತು ಎಂದು ಹೇಳಿದ್ದಾರೆ.