Site icon Vistara News

FD interest rates : ಐಒಬಿಯಲ್ಲಿ ಎಫ್‌ಡಿಗೆ 7.25%, ಹಿರಿಯ ನಾಗರಿಕರಿಗೆ 7.75% ಬಡ್ಡಿ ದರ

IOB

#image_title

ನವ ದೆಹಲಿ: ಸಾರ್ವಜನಿಕ ವಲಯದ ಇಂಡಿಯನ್‌ ಓವರ್‌ಸೀಸ್‌ ಬ್ಯಾಂಕ್‌ (Indian Overseas Bank ) ತನ್ನ ನಿಶ್ಚಿತ ಠೇವಣಿಗಳ ಮೇಲಿನ ಬಡ್ಡಿ ದರವನ್ನು ಏರಿಸಿದೆ. 2 ಕೋಟಿ ರೂ.ಗಿಂತ ಕಡಿಮೆ ಮೌಲ್ಯದ ಠೇವಣಿಗಳಿಗೆ ಏಪ್ರಿಲ್‌ 10, 2023ರಿಂದ ಪರಿಷ್ಕೃತ ಬಡ್ಡಿ ದರಗಳು (revised interest rate) ಅನ್ವಯಿಸಲಿದೆ ಎಂದು ಬ್ಯಾಂಕ್‌ ವೆಬ್‌ಸೈಟ್‌ ತಿಳಿಸಿದೆ.

ಸಾರ್ವಜನಿಕರಿಗೆ 7 – 29 ದಿನಗಳ ನಡುವೆ ಮೆಚ್ಯೂರ್‌ ಆಗುವ ನಿಶ್ಚಿತ ಠೇವಣಿಗಳಿಗೆ 4% ಬಡ್ಡಿ ದರ ಸಿಗಲಿದೆ. 30-90 ದಿನಗಳ ಅವಧಿಗೆ ಮೆಚ್ಯೂರ್‌ ಆಗುವ ಠೇವಣಿಗೆ 4.25% ಬಡ್ಡಿ ಸಿಗಲಿದೆ. 91-179 ದಿನಗಳಿಗೆ ಮೆಚ್ಯೂರ್‌ ಆಗುವ ಠೇವಣಿಗೆ 4.5 ಬಡ್ಡಿ ಸಿಗಲಿದೆ. 180-269 ದಿನಗಳಿಗೆ ಮೆಚ್ಯೂರ್‌ ಆಗುವ ಠೇವಣಿಗೆ 4.95% ಬಡ್ಡಿ ದೊರೆಯಲಿದೆ. 270-1 ವರ್ಷದ ಠೇವಣಿಗೆ 5.35%, 1-2 ವರ್ಷಕ್ಕೆ 6.5% ಬಡ್ಡಿ ಸಿಗಲಿದೆ. 444 ದಿನಗಳಲ್ಲಿ ಮೆಚ್ಯೂರ್‌ ಆಗುವ ಠೇವಣಿಗೆ 7.25% ಸಿಗಲಿದೆ.

ಹಿರಿಯ ನಾಗರಿಕರಿಗೆ ಐಒಬಿಯಲ್ಲಿ 2-3 ವರ್ಷದ ಠೇವಣಿಗೆ 7.55% ಬಡ್ಡಿ ಆದಾಯ ಸಿಗಲಿದೆ. 5 ವರ್ಷಗಳ ಠೇವಣಿಗೆ 7.25% ಬಡ್ಡಿ ದೊರೆಯಲಿದೆ.

ಅಂಚೆ ಇಲಾಖೆ ಉಳಿತಾಯ ಯೋಜನೆಗಳು ಈಗ ಆಕರ್ಷಕ:

ತೀರಾ ಇತ್ತೀಚಿನವರೆಗೂ ಅಂಚೆ ಇಲಾಖೆಯ ಟರ್ಮ್‌ ಡೆಪಾಸಿಟ್‌ಗಳು (post office term deposit) ಬ್ಯಾಂಕ್‌ಗಳ ಎಫ್‌ಡಿಗಿಂತ (fixed deposit) ಕಡಿಮೆ ಬಡ್ಡಿ ದರವನ್ನು ನೀಡುತ್ತಿದ್ದವು. ಆದರೆ ಇದೀಗ ಮತ್ತೆ ಪೈಪೋಟಿ ನೀಡಲು ಆರಂಭಿಸಿವೆ. ಸರ್ಕಾರ ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿ ದರಗಳನ್ನು ಸತತ ಎರಡನೇ ಬಾರಿಗೆ ಪರಿಷ್ಕರಿಸಿ ಏರಿಸಿರುವುದು ಇದಕ್ಕೆ ಕಾರಣವಾಗಿದೆ.

ಉದಾಹರಣೆಗೆ ಎರಡು ವರ್ಷ ಅವಧಿಯ ಅಂಚೆ ಕಚೇರಿಯ ಟರ್ಮ್‌ ಡೆಪಾಸಿಟ್‌ ಈಗ 6.5% ಬಡ್ಡಿ ನೀಡುತ್ತಿವೆ. ಇದು ಬಹುತೇಕ ಬ್ಯಾಂಕ್‌ಗಳ ಎಫ್‌ಡಿ ಬಡ್ಡಿಗೆ ಸಮವಾಗಿದೆ. 2022ರ ಮೇ ಬಳಿಕ ಹಣದುಬ್ಬರವನ್ನು ನಿಯಂತ್ರಿಸಲು ಆರ್‌ಬಿಐ ಸರಣಿ ರೂಪದಲ್ಲಿ ರೆಪೊ ದರವನ್ನು ಏರಿಸಿತ್ತು. ಇದರ ಪರಿಣಾಮ ನಿಶ್ಚಿತ ಠೇವಣಿಗಳ ಬಡ್ಡ ದರ ಏರಿಕೆಯಾಗಿದೆ.

2022ರ ಮೇಯಿಂದ 2023ರ ಫೆಬ್ರವರಿ ನಡುವೆ ಹೊಸ ಠೇವಣಿಗಳಿಗೆ weighted average domestic term deposit rate (ರಿಟೇಲ್‌ ಮತ್ತು ಸಗಟು) 2.22%ರಷ್ಟು ಏರಿಕೆಯಾಗಿದೆ. ಸರ್ಕಾರವು ಸಣ್ಣ ಉಳಿತಾಯ ಯೋಜನೆಗೆ ಸಂಬಂಧಿಸಿ 2022-23ರ ಅಕ್ಟೋಬರ್-ಡಿಸೆಂಬರ್‌ ತ್ರೈಮಾಸಿಕಕ್ಕೆ 0.30% ತನಕ, 2022-23ರ ಜನವರಿ-ಮಾರ್ಚ್‌ ಅವಧಿಗೆ 1.10% ತನಕ ಏರಿಸಿದೆ.

Exit mobile version