Site icon Vistara News

Federal Reserve | ಅಮೆರಿಕದಲ್ಲಿ ಫೆಡರಲ್‌ ರಿಸರ್ವ್‌ನಿಂದ ಬಡ್ಡಿ ದರ 0.75% ಏರಿಕೆ

us fed

ವಾಷಿಂಗ್ಟನ್:‌ ಅಮೆರಿಕದಲ್ಲಿ ಫೆಡರಲ್‌ ರಿಸರ್ವ್‌, ಹಣದುಬ್ಬರವನ್ನು ತಗ್ಗಿಸುವ ದೃಷ್ಟಿಯಿಂದ ಬಡ್ಡಿ ದರದಲ್ಲಿ 0.75% ಏರಿಕೆ ಮಾಡಿದೆ. ಅಂದರೆ ಅಲ್ಲಿ (Federal Reserve) ಈಗ ಬಡ್ಡಿ ದರ 3.೨೫%ಕ್ಕೆ ವೃದ್ಧಿಸಿದೆ.

ಸತತ ಮೂರನೇ ಬಾರಿಗೆ ಬಡ್ಡಿ ದರವನ್ನು ಏರಿಸಲಾಗಿದ್ದು, 2023ರ ವೇಳೆಗೆ ಬಡ್ಡಿ ದರ 4.6%ಕ್ಕೆ ಏರಿಕೆಯಾಗುವ ಸಾಧ್ಯತೆ ಇದೆ.

ಕಳೆದ 1980ರಿಂದೀಚೆಗಿನ ಗರಿಷ್ಠ ಮಟ್ಟದ ಹಣದುಬ್ಬರವನ್ನು ಅಮೆರಿಕ ಹೊಂದಿದೆ. ಹೀಗಾಗಿ ಹಣದುಬ್ಬರ ತಗ್ಗಿಸಲು ಫೆಡರಲ್‌ ರಿಸರ್ವ್‌ ಆದ್ಯತೆ ನೀಡಿದೆ. ಹಣದುಬ್ಬರವನ್ನು ಶೇ.2ಕ್ಕೆ ತಗ್ಗಿಸುವ ಉದ್ದೇಶವನ್ನು ಫೆಡರಲ್‌ ರಿಸರ್ವ್‌ ಹೊಂದಿದ್ದು, ಇದಕ್ಕಾಗಿ ಬಡ್ಡಿ ದರ ಏರಿಕೆ ಮುಂದುವರಿಯಲಿದೆ ಎಂದು ತಿಳಿಸಿದೆ.

ಫೆಡರಲ್‌ ರಿಸರ್ವ್‌ನ ಮಾರುಕಟ್ಟೆ ಸಮಿತಿಯು ಅವಿರೋಧವಾಗಿ ಈ ನಿರ್ಣಯ ಕೈಗೊಂಡಿದೆ. ಕಳೆದ ಜೂನ್‌ನಲ್ಲಿ ಅಮೆರಿಕದಲ್ಲಿ ಹಣದುಬ್ಬರ 9.1%ಕ್ಕೆ ಏರಿತ್ತು. ಈಗಲೂ 8.3% ರ ಮಟ್ಟದಲ್ಲಿದೆ. ಫೆಡರಲ್‌ ರಿಸರ್ವ್‌ನ ಈ ನಿರ್ಧಾರಕ್ಕೆ ಷೇರು ಪೇಟೆ ಹೇಗೆ ಪ್ರತಿಕ್ರಿಯಿಸಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.

Exit mobile version