ನವ ದೆಹಲಿ: ವಿಶ್ವದ ಅತ್ಯಂತ ಶ್ರೀಮಂತರ ಪಟ್ಟಿಯಲ್ಲಿ ಭಾರತೀಯ ಉದ್ಯಮಿ ಗೌತಮ್ ಅದಾನಿ ಅವರು 3ರಿಂದ 4ನೇ ಸ್ಥಾನಕ್ಕೆ ಇಳಿದಿದ್ದಾರೆ. ಹೀಗಿದ್ದರೂ, ಫ್ರಾನ್ಸ್‌ನ ಬರ್ನಾರ್ಡ್ ಅರ್ನಾಲ್ಟ್ ಮತ್ತು ಅಮೆರಿಕದ (Gautam Adani) ಎಲಾನ್ ಮಸ್ಕ್ ಅನುಕ್ರಮವಾಗಿ ಮೊದಲ ಮತ್ತು ಎರಡನೇ ಸ್ಥಾನದಲ್ಲಿ ಉಳಿದಿದ್ದಾರೆ. ಬ್ಲೂಮ್ ಬರ್ಗ್ ಬಿಲಿಯನೇರ್ ಇಂಡೆಕ್ಸ್ ಈ ಪಟ್ಟಿಯನ್ನು ಪ್ರಕಟಿಸಿದೆ. ಪಟ್ಟಿ ಪ್ರತಿ ದಿನ ಪರಿಷ್ಕರಣೆಯಾಗುತ್ತಿರುತ್ತದೆ.
ಅಮೆಜಾನ್ ಸ್ಥಾಪಕ ಜೆಫ್ ಬಿಜೋಸ್ ಮೂರನೇ ಸ್ಥಾನದಲ್ಲಿ ಇದ್ದಾರೆ. ಬಿಲ್ ಗೇಟ್ಸ್ ಮತ್ತು ವಾರೆನ್ ಬಫೆಟ್ ಅನುಕ್ರಮವಾಗಿ 5 ಮತ್ತು 6ನೇ ಸ್ಥಾನದಲ್ಲಿದ್ದಾರೆ. ಮುಕೇಶ್ ಅಂಬಾನಿ ಅವರು 12ನೇ ಸ್ಥಾನಕ್ಕೆ ಇಳಿದಿದ್ದಾರೆ.
ಪಟ್ಟಿಯ ಪ್ರಕಾರ ಅದಾನಿಯವರ ಸಂಪತ್ತು 120 ಶತಕೋಟಿ ಡಾಲರ್ ( 9.72 ಲಕ್ಷ ಕೋಟಿ ರೂ.) ಉದ್ಯಮಿ ಶಪೂರ್ ಮಿಸ್ತ್ರಿ (45), ಶಿವ್ ನಡಾರ್ (51), ಅಜೀಂ ಪ್ರೇಮ್‌ಜಿ (57), ಲಕ್ಷ್ಮೀ ಮಿತ್ತಲ್ (81), ಸೈರಸ್ ಪೂನಾವಾಲಾ (97), ರಾಧಾಕಿಶನ್ ಧಮಾನಿ (100) ಪಟ್ಟಿಯಲ್ಲಿದ್ದಾರೆ.