Gautam Adani : ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ 4ಕ್ಕೆ ಇಳಿದ ಗೌತಮ್‌ ಅದಾನಿ - Vistara News

ಪ್ರಮುಖ ಸುದ್ದಿ

Gautam Adani : ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ 4ಕ್ಕೆ ಇಳಿದ ಗೌತಮ್‌ ಅದಾನಿ

ಅದಾನಿ ಸಮೂಹದ ಸ್ಥಾಪಕ ಗೌತಮ್‌ ಅದಾನಿ ಅವರು ಬ್ಲೂಮ್‌ ಬರ್ಗ್‌ ಪ್ರಕಟಿಸಿರುವ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ (Gautam Adani) ಮೂರರಿಂದ ನಾಲ್ಕನೇ ಸ್ಥಾನಕ್ಕೆ ಇಳಿದಿದ್ದಾರೆ.

VISTARANEWS.COM


on

Gautam Adani, who fell out of the world's top 10 billionaires list, fell to the 11th rank.
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವ ದೆಹಲಿ: ವಿಶ್ವದ ಅತ್ಯಂತ ಶ್ರೀಮಂತರ ಪಟ್ಟಿಯಲ್ಲಿ ಭಾರತೀಯ ಉದ್ಯಮಿ ಗೌತಮ್‌ ಅದಾನಿ ಅವರು 3ರಿಂದ 4ನೇ ಸ್ಥಾನಕ್ಕೆ ಇಳಿದಿದ್ದಾರೆ. ಹೀಗಿದ್ದರೂ, ಫ್ರಾನ್ಸ್‌ನ ಬರ್ನಾರ್ಡ್‌ ಅರ್ನಾಲ್ಟ್‌ ಮತ್ತು ಅಮೆರಿಕದ (Gautam Adani) ಎಲಾನ್‌ ಮಸ್ಕ್‌ ಅನುಕ್ರಮವಾಗಿ ಮೊದಲ ಮತ್ತು ಎರಡನೇ ಸ್ಥಾನದಲ್ಲಿ ಉಳಿದಿದ್ದಾರೆ. ಬ್ಲೂಮ್‌ ಬರ್ಗ್‌ ಬಿಲಿಯನೇರ್‌ ಇಂಡೆಕ್ಸ್‌ ಈ ಪಟ್ಟಿಯನ್ನು ಪ್ರಕಟಿಸಿದೆ. ಪಟ್ಟಿ ಪ್ರತಿ ದಿನ ಪರಿಷ್ಕರಣೆಯಾಗುತ್ತಿರುತ್ತದೆ.

ಅಮೆಜಾನ್‌ ಸ್ಥಾಪಕ ಜೆಫ್‌ ಬಿಜೋಸ್‌ ಮೂರನೇ ಸ್ಥಾನದಲ್ಲಿ ಇದ್ದಾರೆ. ಬಿಲ್‌ ಗೇಟ್ಸ್‌ ಮತ್ತು ವಾರೆನ್‌ ಬಫೆಟ್‌ ಅನುಕ್ರಮವಾಗಿ 5 ಮತ್ತು 6ನೇ ಸ್ಥಾನದಲ್ಲಿದ್ದಾರೆ. ಮುಕೇಶ್‌ ಅಂಬಾನಿ ಅವರು 12ನೇ ಸ್ಥಾನಕ್ಕೆ ಇಳಿದಿದ್ದಾರೆ.

ಪಟ್ಟಿಯ ಪ್ರಕಾರ ಅದಾನಿಯವರ ಸಂಪತ್ತು 120 ಶತಕೋಟಿ ಡಾಲರ್‌ ( 9.72 ಲಕ್ಷ ಕೋಟಿ ರೂ.) ಉದ್ಯಮಿ ಶಪೂರ್‌ ಮಿಸ್ತ್ರಿ (45), ಶಿವ್‌ ನಡಾರ್‌ (51), ಅಜೀಂ ಪ್ರೇಮ್‌ಜಿ (57), ಲಕ್ಷ್ಮೀ ಮಿತ್ತಲ್‌ (81), ಸೈರಸ್‌ ಪೂನಾವಾಲಾ (97), ರಾಧಾಕಿಶನ್‌ ಧಮಾನಿ (100) ಪಟ್ಟಿಯಲ್ಲಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಭವಿಷ್ಯ

Dina Bhavishya : ಈ ರಾಶಿಯವರು ಮಡದಿಯ ಪ್ರೀತಿಗೆ ಸೋಲುವಿರಿ; ಮನೆಯಲ್ಲಿ ಸಂತೋಷದ ದಿನ

Dina Bhavishya: ಶ್ರೀ ಶಕೇ 1946, ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜೇಷ್ಠ ಮಾಸ, ಕೃಷ್ಣ ಪಕ್ಷದ ಬಿದಿಗೆ ದಿನವಾದ ಇಂದು ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

VISTARANEWS.COM


on

By

Dina bhavishya
Koo

ಚಂದ್ರನು ಮಕರ ರಾಶಿಯಿಂದ ಭಾನುವಾರ ರಾತ್ರಿ 11:14ಕ್ಕೆ ಕುಂಭ ರಾಶಿಯನ್ನು ಪ್ರವೇಶಿಸುತ್ತಾನೆ. ಇದರಿಂದಾಗಿ ಮೇಷ, ಕಟಕ, ಸಿಂಹ, ವೃಶ್ಚಿಕ, ಮಕರ, ಮೀನ ರಾಶಿಯವರಿಗೆ ಚಂದ್ರನ ಬಲ ದೊರೆಯಲಿದೆ. ಇಂದಿನ ದಿನ ಭವಿಷ್ಯವನ್ನು (Dina Bhavishya) ನೋಡುವುದಾದರೆ, ಮೇಷ ರಾಶಿಯವರು ಉತ್ಸಾಹದ ವಾತಾವರಣ ತುಂಬಿರಲಿದೆ. ಆಪ್ತರೊಂದಿಗೆ ಪ್ರಯಾಣ ಬೆಳೆಸುವ ಸಾಧ್ಯತೆ ಇದೆ. ದಿನದ ಮಟ್ಟಿಗೆ ಖರ್ಚು ಹೆಚ್ಚಾಗಲಿದೆ. ಆರೋಗ್ಯ ಪರಿಪೂರ್ಣವಾಗಿರಲಿದೆ. ಉದ್ಯೋಗಿಗಳಿಗೆ ಭರವಸೆಯ ಹೊಸ ಅವಕಾಶಗಳು ಸಿಗಲಿದೆ. ಮಿಥುನ ರಾಶಿಯವರು ಸಂತಸದ ಕ್ಷಣಗಳನ್ನು ಕಳೆಯುವಿರಿ. ಆರ್ಥಿಕ ಪ್ರಗತಿ ಇರಲಿದೆ. ಬಹಳ ದಿನಗಳ ಬಾಕಿ ಇರುವ ಕಾರ್ಯವು ಪೂರ್ಣವಾಗುವುದು. ಇದೂ ಸೇರಿದಂತೆ ದ್ವಾದಶ ರಾಶಿಗಳ ಇಂದಿನ ಭವಿಷ್ಯ ಹೇಗಿದೆ? ಪಂಚಾಂಗ ಏನು ಹೇಳುತ್ತದೆ ಎಂಬುದನ್ನು ತಿಳಿಯೋಣ.

ಇಂದಿನ ಪಂಚಾಂಗ (kannada panchanga) (23-06-2024)

ಶ್ರೀ ಶಕೇ 1946, ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜೇಷ್ಠ ಮಾಸ, ಕೃಷ್ಣ ಪಕ್ಷ.
ತಿಥಿ: ಬಿದಿಗೆ 27:25 ವಾರ: ಭಾನುವಾರ
ನಕ್ಷತ್ರ: ಪೂರ್ವಾಆಷಾಢ 17:02 ಯೋಗ: ಬ್ರಹ್ಮ 14:24
ಕರಣ: ತೈತುಲ 16:21 ಅಮೃತಕಾಲ: ಮಧ್ಯಾಹ್ನ 12:26ರಿಂದ 01:58

ಸೂರ್ಯೋದಯ : 05:55   ಸೂರ್ಯಾಸ್ತ : 06:49

ರಾಹುಕಾಲ: ಸಂಜೆ 4.30 ರಿಂದ 6.00
ಗುಳಿಕಕಾಲ: ಮಧ್ಯಾಹ್ನ 3.00 ರಿಂದ 4.30
ಯಮಗಂಡಕಾಲ: ಮಧ್ಯಾಹ್ನ 12.00 ರಿಂದ 1.30

ದ್ವಾದಶ ರಾಶಿ ಭವಿಷ್ಯ (Dina Bhavishya in Kannada)

Horoscope Today

ಮೇಷ: ಉತ್ಸಾಹದ ವಾತಾವರಣ ತುಂಬಿರಲಿದೆ. ಆಪ್ತರೊಂದಿಗೆ ಪ್ರಯಾಣ ಬೆಳೆಸುವ ಸಾಧ್ಯತೆ ಇದೆ. ದಿನದ ಮಟ್ಟಿಗೆ ಖರ್ಚು ಹೆಚ್ಚಾಗಲಿದೆ. ಆರೋಗ್ಯ ಪರಿಪೂರ್ಣವಾಗಿರಲಿದೆ. ಉದ್ಯೋಗಿಗಳಿಗೆ ಭರವಸೆಯ ಹೊಸ ಅವಕಾಶಗಳು ಸಿಗಲಿದೆ. ವ್ಯಾಪಾರ ವ್ಯವಹಾರಗಳಿಗೆ ಹೆಚ್ಚಿನ ಲಾಭ ದೊರೆಯಲಿದೆ. ಕೌಟುಂಬಿಕವಾಗಿ ಮಿಶ್ರ ಫಲ. ಅದೃಷ್ಟ ಸಂಖ್ಯೆ: 6

Horoscope Today

ವೃಷಭ: ಬಂಧು ಮಿತ್ರರಿಂದ ಸಹಕಾರ ಸಿಗಲಿದೆ. ಆರ್ಥಿಕ ಪ್ರಗತಿ ಸಾಧಾರಣವಾಗಿರಲಿದೆ. ನಿಮ್ಮ ವ್ಯಕ್ತಿತ್ವ ಇತರರನ್ನು ಆಕರ್ಷಿಸಿ ಕಾರ್ಯದಲ್ಲಿ ಯಶಸ್ಸು ಸಿಗಲಿದೆ. ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗುವಿರಿ. ಕುಟುಂಬದಲ್ಲಿ ನೆಮ್ಮದಿ. ಅದೃಷ್ಟ ಸಂಖ್ಯೆ: 5

Horoscope Today

ಮಿಥುನ: ಸಂತಸದ ಕ್ಷಣಗಳನ್ನು ಕಳೆಯುವಿರಿ. ಆರ್ಥಿಕ ಪ್ರಗತಿ ಇರಲಿದೆ. ಬಹಳ ದಿನಗಳ ಬಾಕಿ ಇರುವ ಕಾರ್ಯವು ಪೂರ್ಣವಾಗುವುದು. ಮನೆಯಲ್ಲಿ ಪರಸ್ಪರ ಸಹಕಾರ ಸಿಗುವುದು, ಉತ್ಸಾಹದ ದಿನವಿದು. ಅದೃಷ್ಟ ಸಂಖ್ಯೆ: 3

Horoscope Today

ಕಟಕ:ಆಕರ್ಷಕ ವ್ಯಕ್ತಿತ್ವ ಹೊಂದಿರುವ ನೀವು ಇಂದು ಇತರರನ್ನು ಆಕರ್ಷಿಸುವಿರಿ. ಆರ್ಥಿಕ ಪ್ರಗತಿ ಸಾಧಾರಣ ವಿದ್ದರೂ ಸಮರ್ಥವಾಗಿ ನಿರ್ವಹಿಸುವಿರಿ. ಉದ್ಯೋಗದಲ್ಲಿ ಪ್ರಗತಿ ಇರಲಿದೆ. ಮಡದಿಯ ಪ್ರೀತಿಗೆ ಸೋಲುವಿರಿ. ಕುಟುಂಬದಲ್ಲಿ ನೆಮ್ಮದಿ. ಅದೃಷ್ಟ ಸಂಖ್ಯೆ: 7

Horoscope Today

ಸಿಂಹ:ಉದ್ಯೋಗ ಅಪೇಕ್ಷಿತರಿಗೆ ಇಂದು ಉದ್ಯೋಗದ ಭರವಸೆ ಸಿಗಲಿದೆ. ಆರ್ಥಿಕ ಪ್ರಗತಿ ಇರಲಿದೆ. ಪರಿಶ್ರಮಕ್ಕೆ ತಕ್ಕ ಪ್ರತಿ ಫಲ ಸಿಗುವುದು. ಮನೆಯವರ ಪ್ರೀತಿ ಸಹಕಾರ ಸಿಗಲಿದೆ. ಕುಟುಂಬದಲ್ಲಿ ನೆಮ್ಮದಿ ಇರಲಿದೆ. ಅದೃಷ್ಟ ಸಂಖ್ಯೆ: 5

Horoscope Today

ಕನ್ಯಾ:ಮನೆಯಲ್ಲಿ ಸದಸ್ಯರ ಮಧ್ಯೆ ಕಲಹದಿಂದ ವಾತಾವರಣ ಹದಗೆಡಬಹುದು. ಕೆಲಸದಲ್ಲಿ ಹಿರಿಯರಿಂದ ಒತ್ತಡ ಇರಲಿದೆ, ಎಚ್ಚರಿಕೆ ವಹಿಸಿ. ಆರ್ಥಿಕ ಪ್ರಗತಿ ಇರಲಿದೆ. ಕೌಟುಂಬಿಕವಾಗಿ ಸಾಧಾರಣ ಫಲ. ಅದೃಷ್ಟ ಸಂಖ್ಯೆ: 5

ಭವಿಷ್ಯ ಮತ್ತು ಜ್ಯೋತಿಷ್ಯಕ್ಕೆ ಸಂಬಂಧಿಸಿದ ಲೇಖನ/ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ

Horoscope Today

ತುಲಾ: ತರಾತುರಿಯಲ್ಲಿ ನಿರ್ಧಾರ ಕೈಗೊಂಡು ಯಾವುದೇ ಹೂಡಿಕೆ ಮಾಡುವುದು ಬೇಡ. ಬಂಧು ಮಿತ್ರರಿಂದ ಸಹಕಾರ ಸಿಗಲಿದೆ. ಆರೋಗ್ಯ ಉತ್ತಮವಾಗಿರಲಿದೆ. ಮನೆಯಲ್ಲಿ ಸಂತೋಷದ ದಿನ. ಅದೃಷ್ಟ ಸಂಖ್ಯೆ: 8

Horoscope Today

ವೃಶ್ಚಿಕ : ಮಿತ್ರರಿಂದ ಸಹಕಾರ ಸಿಗಲಿದೆ. ಆರ್ಥಿಕವಾಗಿ ಪ್ರಗತಿ ಹೊಂದಲು ಹಿರಿಯರು ಮಾರ್ಗದರ್ಶನ ಮಾಡಲಿದ್ದಾರೆ. ಧೈರ್ಯದಿಂದ ಕಾರ್ಯದಲ್ಲಿ ಮುನ್ನುಗ್ಗಿ ಯಶಸ್ಸು ಸಿಗುವುದು. ಕುಟುಂಬದಲ್ಲಿ ನೆಮ್ಮದಿ ಸಿಗಲಿದೆ. ಅದೃಷ್ಟ ಸಂಖ್ಯೆ: 5

Horoscope Today

ಧನಸ್ಸು: ಕುಟುಂಬ ಸದಸ್ಯರ ಆರೋಗ್ಯ ಸಂಬಂಧಿ ವಿಷಯಗಳು ತಮಗೆ ಒತ್ತಡ ಉಂಟುಮಾಡಬಹುದು. ಉದಾಸೀನತೆ ಮಾಡುವುದು ಬೇಡ. ಆಶಾವಾದಿಗಳಾಗಿರಿ ಕುಲದೇವರನ್ನು ಸ್ಮರಿಸಿ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 5

Horoscope Today

ಮಕರ: ಉದ್ಯೋಗದಲ್ಲಿ ಹಿರಿಯ ಅಧಿಕಾರಿಗಳಿಂದ ಕಿರಿಕಿರಿ ಒತ್ತಡ ಉಂಟಾಗುವ ಸಾಧ್ಯತೆ ಇದೆ. ಆಲಸ್ಯದಿಂದ ದೂರವಿದ್ದು ಕಾರ್ಯ ಪೂರ್ಣ ಮಾಡಿ. ಕೆಲಸದ ಒತ್ತಡದಿಂದ ಮನೆಯ ಸದಸ್ಯರ ಮೇಲೆ ಹಾಕಿ, ವಾತಾವರಣ ಹದಗೆಡಲು ಕಾರಣವಾಗಬೇಡಿ. ಗುರುಗಳ ಆರಾಧನೆ ಮಾಡಿ. ಕೌಟುಂಬಿಕವಾಗಿ ಸಾಧಾರಣ ಫಲ. ಅದೃಷ್ಟ ಸಂಖ್ಯೆ: 5

Horoscope Today

ಕುಂಭ: ಭೂ ಸಂಬಂಧಿ ವ್ಯವಹಾರದಲ್ಲಿ ಪ್ರಗತಿ ಇರಲಿದೆ. ಬಹಳ ದಿನಗಳ ಕನಸು ನನಸಾಗುವ ಕಾಲ ಕೂಡಿ ಬರುವುದು. ಅನ್ಯರು ಆಡುವ ಕುಹುಕು ಮಾತುಗಳಿಗೆ ಧ್ವನಿಯಾಗಬೇಡಿ. ಕುಟುಂಬದಲ್ಲಿ ನೆಮ್ಮದಿ. ಅದೃಷ್ಟ ಸಂಖ್ಯೆ: 3

Horoscope Today

ಮೀನ: ನಿಮ್ಮ ಮಹತ್ವಾಕಾಂಕ್ಷೆಯ ಕೆಲಸ ಕಾರ್ಯಗಳು ಕುಂಠಿತವಾಗುವ ಸಾಧ್ಯತೆ ಇದೆ. ಗೌಪ್ಯ ವಿಷಯಗಳು ಬಹಿರಂಗವಾಗದಿರಲಿ. ಆರ್ಥಿಕ ನಷ್ಟದಿಂದ ತಪ್ಪಿಸಿಕೊಳ್ಳಿ. ಸಂಗಾತಿಯ ಮಾತುಗಳು ಹಿತವೆನಿಸುವುದು. ಕುಟುಂಬದಲ್ಲಿ ನೆಮ್ಮದಿ. ಅದೃಷ್ಟ ಸಂಖ್ಯೆ: 9

Horoscope Today

ವಿದ್ವಾನ್ ಶ್ರೀ ನವೀನಶಾಸ್ತ್ರಿ ರಾ. ಪುರಾಣಿಕ
ಖ್ಯಾತ ಜ್ಯೋತಿಷಿ ಹಾಗೂ ಉಪನ್ಯಾಸಕರು

M: 9481854580 | pnaveenshastri@gmail.com

Continue Reading

ಪ್ರಮುಖ ಸುದ್ದಿ

Virat Kohli : ಐಸಿಸಿ ಟೂರ್ನಿಯಲ್ಲಿ ಗರಿಷ್ಠ ರನ್ ಬಾರಿಸಿ ವಿಶೇಷ ಮೈಲುಗಲ್ಲು ಸ್ಥಾಪಿಸಿದ ವಿರಾಟ್​ ಕೊಹ್ಲಿ

Virat Kohli: ಬಾಂಗ್ಲಾದೇಶ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ 36 ರನ್ ಬಾರಿಸಿ ಔಟಾಗುವ ಮೊದಲು ಈ ವಿಶೇಷ ಸಾಧನೆ ಮಾಡಿದ್ದಾರೆ. ಅದೇನೆಂದರೆ ಅವರು ಐಸಿಸಿ ಆಯೋಜಿಸುವ ಸೀಮಿತ ಓವರ್​ಗಳ (ಏಕದಿನ ಹಾಗೂ ಟಿ20) ಟೂರ್ನಿಗಳಲ್ಲಿ 3500 ರನ್​ಗಳನ್ನು ಬಾರಿಸಿದ ವಿಶೇಷ ಮೈಲುಗಲ್ಲು ದಾಟಿದ್ದಾರೆ. ಆಂಟಿಗುವಾದ ಸರ್ ವಿವಿಯನ್ ರಿಚರ್ಡ್ಸ್ ಕ್ರೀಡಾಂಗಣದಲ್ಲಿ ಈ ಸಾಧನೆ ಮಾಡಿರುವುದು ಇನ್ನೂ ವಿಶೇಷ.

VISTARANEWS.COM


on

Virat kohli
Koo

ಬೆಂಗಳೂರು: ವೆಸ್ಟ್​ ಇಂಡೀಸ್​ನ ಆಂಟಿಗುವಾದಲ್ಲಿ ನಡೆದ ಟಿ20 ವಿಶ್ವ ಕಪ್​ನ ಸೂಪರ್ 8 ಪಂದ್ಯದಲ್ಲಿ ಭಾರತ ತಂಡ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ (Virat Kohli) ವಿಶೇಷ ದಾಖಲೆಯೊಂದನ್ನು ಬರೆದಿದ್ದಾರೆ. ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC Tournament) ಟೂರ್ನಮೆಂಟ್ ಗಳ ಇತಿಹಾಸದಲ್ಲಿ ಈ ಸಾಧನೆ ಮಾಡಿದ ವಿಶ್ವದ ಮೊದಲ ಕ್ರಿಕೆಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಬಾಂಗ್ಲಾದೇಶ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ 36 ರನ್ ಬಾರಿಸಿ ಔಟಾಗುವ ಮೊದಲು ಈ ವಿಶೇಷ ಸಾಧನೆ ಮಾಡಿದ್ದಾರೆ. ಅದೇನೆಂದರೆ ಅವರು ಐಸಿಸಿ ಆಯೋಜಿಸುವ ಸೀಮಿತ ಓವರ್​ಗಳ (ಏಕದಿನ ಹಾಗೂ ಟಿ20) ಟೂರ್ನಿಗಳಲ್ಲಿ 3500 ರನ್​ಗಳನ್ನು ಬಾರಿಸಿದ ವಿಶೇಷ ಮೈಲುಗಲ್ಲು ದಾಟಿದ್ದಾರೆ. ಆಂಟಿಗುವಾದ ಸರ್ ವಿವಿಯನ್ ರಿಚರ್ಡ್ಸ್ ಕ್ರೀಡಾಂಗಣದಲ್ಲಿ ಈ ಸಾಧನೆ ಮಾಡಿರುವುದು ಇನ್ನೂ ವಿಶೇಷ.

ಹಾಲಿ ಟಿ20 ವಿಶ್ವಕಪ್ 2024ರಲ್ಲಿ ಫಾರ್ಮ್​ ಕಂಡುಕೊಳ್ಳದ ವಿರಾಟ್ ಕೊಹ್ಲಿ ಬಾಂಗ್ಲಾ ವಿರುದ್ಧ ಸಕಾರಾತ್ಮಕ ಇನ್ನಿಂಗ್ಸ್ ಆಡಿದ್ದಾರೆ. ಸೂಪರ್ 8 ಹಂತದ ಎರಡನೇ ಪಂದ್ಯದ ತಮ್ಮ ಇನ್ನಿಂಗ್ಸ್​ನಲ್ಲಿ ಕೆಲವು ಅದ್ಭುತ ಶಾಟ್​ಗಳನ್ನು ಹೊಡೆದು ರಂಜಿಸಿದ್ದಾರೆ. ಇನ್ನಿಂಗ್ಸ್ ಆರಂಭಿಸಿದ ವಿರಾಟ್​ ಬ್ಯಾಟ್ ನಿಂದ ಮಿಂಚಿದ್ದರು. ರೋಹಿತ್ ಶರ್ಮಾ ಜತೆ 39 ರನ್ ಮತ್ತು ರಿಷಭ್ ಪಂತ್ (36) ಅವರೊಂದಿಗೆ 32 ರನ್ ಗಳ ಪಾಲುದಾರಿಕೆ ನೀಡಿದ್ದಾರೆ. ಇದು ಭಾರತಕ್ಕೆಬೃಹತ್ ಮೊತ್ತ ಪೇರಿಸಲು ನೆರವಾಯಿತು.

ಐಸಿಸಿ ಟೂರ್ನಿಯಲ್ಲಿ ಅದ್ಭುತ ಆಟಗಾರ

ಕಳೆದ ಹಲವು ವರ್ಷಗಳಿಂದ ವಿರಾಟ್ ಕೊಹ್ಲಿ ಐಸಿಸಿ ಪಂದ್ಯಾವಳಿಗಳಲ್ಲಿ ಭಾರತ ತಂಡಕ್ಕಾಗಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ಅವರು ಆಟದ ಎಲ್ಲಾ ಮೂರು ಸ್ವರೂಪಗಳಲ್ಲಿ ಭಾರತ ತಂಡದ ಬೆನ್ನೆಲುಬಾಗಿದ್ದಾರೆ. ಅಂತೆಯೇ ಬಾಂಗ್ಲಾ ವಿರುದ್ಧ 28 ಎಸೆತಗಳಲ್ಲಿ 37 ರನ್ ಗಳಿಸಿದರು. ಅವರು 132 ಕ್ಕೂ ಹೆಚ್ಚು ಸ್ಟ್ರೈಕ್ ರೇಟ್​ನಲ್ಲಿ ಬ್ಯಾಟಿಂಗ್ ಮಾಡಿದ್ದಾರೆ. ಅವರ ಇನ್ನಿಂಗ್ಸ್​ನಲ್ಲಿ 1 ಬೌಂಡರಿ ಮತ್ತು 3 ಸಿಕ್ಸರ್​ಗಳು ಸೇರಿಕೊಂಡಿವೆ. ಅಂತೆಯೇ ಹಾರ್ದಿಕ್ ಪಾಂಡ್ಯ ಅವರ ಅರ್ಧಶತಕದ ನೆರವಿನಿಂದ ಭಾರತ 196 ರನ್​ಗಳ ಬೃಹತ್ ಮೊತ್ತ ಪೇರಿಸಿ, ಬಾಂಗ್ಲಾವನ್ನು 50 ರನ್​ಗಳಿಂದ ಸೋಲಿಸಿದೆ.

ಐಸಿಸಿ ಸೀಮಿತ ಓವರ್ ಪಂದ್ಯಾವಳಿಗಳಲ್ಲಿ ಅತಿ ಹೆಚ್ಚು ರನ್ ದಾಖಲೆ

ಐಸಿಸಿ ಸೀಮಿತ ಓವರ್​ಗಳ ಕ್ರಿಕೆಟ್​ ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಈಗ ಅಗ್ರಸ್ಥಾನದಲ್ಲಿದ್ದಾರೆ. ಅವರು ಒಟ್ಟು 3500 ರನ್ ಪೂರೈಸಿದ್ದಾರೆ. ಪ್ರಸ್ತುತ ನಡೆಯುತ್ತಿರುವ ಟಿ20 ವಿಶ್ವಕಪ್ 2024ರಲ್ಲಿ ರಲ್ಲಿ ಭಾರತವು ಇನ್ನೂ ಕೆಲವು ಪಂದ್ಯಗಳನ್ನು ಆಡಲಿದೆ. ಹೀಗಾಗಿ ಅವರ ರನ್​ ಗಳಿಕೆ ಹೆಚ್ಚಾಗುವ ಸಾಧ್ಯತೆಯಿದೆ. ಅಂದ ಹಾಗೆ ಐಸಿಸಿ ವೈಟ್-ಬಾಲ್ ಪಂದ್ಯಾವಳಿಗಳ ಇತಿಹಾಸದಲ್ಲಿ ನಾಯಕ ರೋಹಿತ್ ಶರ್ಮಾ 3107 ರನ್ ಗಳಿಸಿ ಎರಡನೇ ಸ್ಥಾನದಲ್ಲಿದ್ದಾರೆ.

ಇದನ್ನೂ ಓದಿ: T20 World Cup 2024 : ಬಾಂಗ್ಲಾದೇಶ ವಿರುದ್ಧ ಭಾರತಕ್ಕೆಭರ್ಜರಿ 50 ರನ್​ಗಳ ಭರ್ಜರಿ ಗೆಲುವು

ಕ್ರಿಸ್ ಗೇಲ್ 2942 ರನ್ ಗಳಿಸಿ ಮೂರನೇ ಸ್ಥಾನ ಪಡೆದರೆ, ಶ್ರೀಲಂಕಾದ ಕುಮಾರ ಸಂಗಕ್ಕಾರ ಮತ್ತು ಮಹೇಲ ಜಯವರ್ಧನೆ ಕ್ರಮವಾಗಿ 2876 ಮತ್ತು 2858 ರನ್ ಗಳಿಸಿ ನಂತರದ ಸ್ಥಾನದಲ್ಲಿದ್ದಾರೆ. ಬ್ಯಾಟಿಂಗ್ ದಂತಕತೆ ಸಚಿನ್ ತೆಂಡೂಲ್ಕರ್ (2719) ಮತ್ತು ಡೇವಿಡ್ ವಾರ್ನರ್ (2590) ಐಸಿಸಿ ಟೂರ್ನಿಗಳಲ್ಲಿ (ವೈಟ್ಬಾ ಲ್) ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.

ಪಟ್ಟಿ ಇಲ್ಲಿದೆ

  • 3500 ರನ್​​ – ವಿರಾಟ್ ಕೊಹ್ಲಿ
  • 3107 ರನ್​​ – ರೋಹಿತ್ ಶರ್ಮಾ
  • 2942 ರನ್​​ – ಕ್ರಿಸ್ ಗೇಲ್
  • 2876 ರನ್​​ – ಕುಮಾರ ಸಂಗಕ್ಕಾರ
  • 2858 ರನ್​​ – ಮಹೇಲಾ ಜಯವರ್ಧನೆ
  • 2719 ರನ್​​- ಸಚಿನ್ ತೆಂಡೂಲ್ಕರ್
  • 2590 ರನ್​​ – ಡೇವಿಡ್ ವಾರ್ನರ್
Continue Reading

ಪ್ರಮುಖ ಸುದ್ದಿ

NEET UG : ನೀಟ್​ ಪರೀಕ್ಷೆ ಅಕ್ರಮಗಳ ತನಿಖೆ ಹೊಣೆ ಸಿಬಿಐಗೆ ಒಪ್ಪಿಸಿದ ಕೇಂದ್ರ ಸರ್ಕಾರ

NEET-UG:

VISTARANEWS.COM


on

NEET UG
Koo

ನವದೆಹಲಿ: ಪದವಿಪೂರ್ವ ವೈದ್ಯಕೀಯ ಕೋರ್ಸ್​ಗಳ ಪ್ರವೇಶಕ್ಕಾಗಿ ನಡೆಸಲಾಗುವ ಸ್ಪರ್ಧಾತ್ಮಕ ನೀಟ್ ಪರೀಕ್ಷೆಯಲ್ಲಿ (NEET UG) ನಡೆದಿರುವ ಅಕ್ರಮಗಳು ಮತ್ತು ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪದ ತನಿಖೆ ಹೊಣೆಯನ್ನು ಕೇಂದ್ರ ಸರ್ಕಾರ ಸಿಬಿಐ ಒಪ್ಪಿಸಿ ಶನಿವಾರ ಆದೇಶಿಸಿದೆ. ನೀಟ್ ಪರೀಕ್ಷೆಗೆ ಸಂಬಂಧಿಸಿದಂತೆ “ಕೆಲವು ಅಕ್ರಮಗಳು, ವಂಚನೆ ಮತ್ತು ದುಷ್ಕೃತ್ಯಗಳ ಪ್ರಕರಣಗಳು ವರದಿಯಾಗಿವೆ ಮತ್ತು ಪರೀಕ್ಷಾ ಪ್ರಕ್ರಿಯೆಯ ನಿರ್ವಹಣೆಯಲ್ಲಿ ಪಾರದರ್ಶಕತೆಗಾಗಿ, ಶಿಕ್ಷಣ ಸಚಿವಾಲಯದ ಪರಿಶೀಲನೆಯ ನಂತರ ಈ ಬಗ್ಗೆ ಸಮಗ್ರ ತನಿಖೆಗಾಗಿ ಸಿಬಿಐಗೆ ವಹಿಸಲು ನಿರ್ಧರಿಸಲಾಗಿದೆ ಎಂದು ಕೇಂದ್ರ ಶಿಕ್ಷಣ ಸಚಿವಾಲಯ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಪರೀಕ್ಷೆಗಳ ಪಾವಿತ್ರ್ಯವನ್ನು ಖಚಿತಪಡಿಸಿಕೊಳ್ಳಲು ಮತ್ತು ವಿದ್ಯಾರ್ಥಿಗಳ ಹಿತಾಸಕ್ತಿಯನ್ನು ರಕ್ಷಿಸಲು ಸರ್ಕಾರ ಬದ್ಧ. ಮೋಸದಲ್ಲಿ ಭಾಗಿಯಾಗಿರುವ ಯಾವುದೇ ವ್ಯಕ್ತಿ, ಸಂಸ್ಥೆ ಕಠಿಣ ಕ್ರಮವನ್ನು ಎದುರಿಸಬೇಕಾಗುತ್ತದೆ ಎಂದು ಎಂದು ಸಚಿವಾಲಯ ಹೇಳಿದೆ.

ಮೇ 5 ರಂದು ದೇಶದ 4,750 ಕೇಂದ್ರಗಳಲ್ಲಿ ನೀಟ್-ಯುಜಿ ನಡೆದಿದ್ದು, ಸುಮಾರು 24 ಲಕ್ಷ ಅಭ್ಯರ್ಥಿಗಳು ಭಾಗವಹಿಸಿದ್ದರು. ನಿರೀಕ್ಷಿತ ದಿನಾಂಕಕ್ಕಿಂತ ಹತ್ತು ದಿನ ಮುಂಚಿತವಾಗಿ ಜೂನ್ 4 ರಂದು ಫಲಿತಾಂಶಗಳನ್ನು ಘೋಷಿಸಲಾಗಿತ್ತು. ಫಲಿತಾಂಶದ ನಂತರ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ದುಷ್ಕೃತ್ಯಗಳ ಆರೋಪಗಳು ಕೇಳಿಬಂದವು, ಏಕೆಂದರೆ 67 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗರಿಷ್ಠ ಅಂಕಗಳನ್ನು (720ಕ್ಕೆ 720) ಗಳಿಸಿದ್ದರು. ಅವರಲ್ಲಿ ಕೆಲವರು ಒಂದೇ ಪರೀಕ್ಷಾ ಕೇಂದ್ರಗಳಿಂದ ಬಂದವರು. ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಬಿಹಾರದಲ್ಲಿ ಅಕ್ರಮಗಳು ಮತ್ತು ಪ್ರಶ್ನೆ ಪತ್ರಿಕೆ ಸೋರಿಕೆ ಕಂಡುಬಂದಿದೆ. ಕೆಲವು ಅಭ್ಯರ್ಥಿಗಳು ಪರೀಕ್ಷೆಯ ಮುನ್ನಾದಿನದಂದು ಪ್ರಶ್ನೆ ಪತ್ರಿಕೆಗಳನ್ನು ಸ್ವೀಕರಿಸಿದ್ದರು.

ಇದನ್ನೂ ಓದಿ: NEET PG : ಪರೀಕ್ಷಾ ಅಕ್ರಮ; ನಾಳೆ ನಿಗದಿಯಾಗಿದ್ದ ನೀಟ್-ಪಿಜಿ ಪರೀಕ್ಷೆ ಮುಂದೂಡಿಕೆ

ಈ ಆರೋಪಗಳು ಹಲವಾರು ನಗರಗಳಲ್ಲಿ ಪ್ರತಿಭಟನೆಗೆ ಕಾರಣವಾಗಿವೆ. ಕೋರ್ಟ್​ಗಳಲ್ಲಿ ಅರ್ಜಿಗಳನ್ನು ಸಲ್ಲಿಕೆಯಾಗಿವೆ. ಈ ವರ್ಷದ ಜೂನ್ 18 ರಂದು ನಡೆದ ಯುಜಿಸಿ ನೆಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯ ಬಗ್ಗೆಯೂ ಸಿಬಿಐ ತನಿಖೆ ನಡೆಸುತ್ತಿದೆ. ಈ ಸಂಬಂಧ ಸಿಬಿಐ ಜೂನ್ 20ರಂದು ಎಫ್ಐಆರ್ ದಾಖಲಾಗಿದೆ.

ಕೆಲವು ಸ್ಪರ್ಧಾತ್ಮಕ ಪರೀಕ್ಷೆಗಳ ಸಮಗ್ರತೆಯ ಬಗ್ಗೆ ಇತ್ತೀಚಿನ ಆರೋಪಗಳ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಜೂನ್ 23 ರಂದು ನಡೆಯಬೇಕಿದ್ದ ನೀಟ್-ಪಿಜಿ ಪ್ರವೇಶ ಪರೀಕ್ಷೆಯನ್ನು ಕೇಂದ್ರ ಆರೋಗ್ಯ ಸಚಿವಾಲಯ ಮುಂದೂಡಿದೆ

Continue Reading

ಪ್ರಮುಖ ಸುದ್ದಿ

T20 World Cup 2024 : ಬಾಂಗ್ಲಾದೇಶ ವಿರುದ್ಧ ಭಾರತಕ್ಕೆಭರ್ಜರಿ 50 ರನ್​ಗಳ ಭರ್ಜರಿ ಗೆಲುವು

T20 World Cup 2024 : ಟಾಸ್ ಸೋತ ಭಾರತ ತಂಡ ಮೊದಲು ಬ್ಯಾಟಿಂಗ್ ಆಹ್ವಾನ ಪಡೆದು ನಿಗದಿತ 20 ಓವರ್​ಗಳಲ್ಲಿ 5 ವಿಕೆಟ್​ಗೆ 196 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಬಾಂಗ್ಲಾದೇಶ ತಂಡ ತನ್ನ ಪಾಲಿನ ಓವರ್​ಗಳು ಮುಕ್ತಾಯಗೊಂಡಾಗ 8 ವಿಕೆಟ್​ ನಷ್ಟಕ್ಕೆ 146 ರನ್ ಬಾರಿಸಿ ಸೋಲೊಪ್ಪಿಕೊಂಡಿತು.

VISTARANEWS.COM


on

T20 world cup 2024
Koo

ಆಂಟಿಗುವಾ: ಸಾಂಘಿಕ ಪ್ರದರ್ಶನ ನೀಡಿದ ಭಾರತ ತಂಡ ಟಿ20 ವಿಶ್ವ ಕಪ್ (T20 World Cup 2024)​ ಸೂಪರ್ 8 ಹಂತದಲ್ಲಿ ಬಾಂಗ್ಲಾದೇಶ ವಿರುದ್ಧ ಭರ್ಜರಿ 50 ರನ್​ಗಳ ಗೆಲುವು ದಾಖಲಿಸಿದೆ. ಈ ಮೂಲಕ ಈ ಪ್ರಮುಖ ಹಂತದಲ್ಲಿ ಸತತ ಎರಡನೇ ಗೆಲುವು ತನ್ನದಾಗಿಸಿಕೊಂಡಿದ್ದು ಸೆಮಿಫೈನಲ್ ಪ್ರವೇಶ ಬಹುತೇಕ ನಿಶ್ಚಿತವಾಗಿದೆ. ಭಾರತ ತಂಡ ಈಗ ಎ ಗುಂಪಿನ ಅಂಕಪಟ್ಟಿಯಲ್ಲಿ ಆಸ್ಟ್ರೇಲಿಯಾ ತಂಡವನ್ನು ಹಿಂದಿಕ್ಕಿ ಅಗ್ರಸ್ಥಾನ ಪಡೆದುಕೊಂಡಿದೆ. 27 ಎಸೆತಗಳಲ್ಲಿ ಅರ್ಧಶತಕ (50 ರನ್​) ಬಾರಿಸಿದ ಹಾರ್ದಿಕ್ ಪಾಂಡ್ಯ (Hardik Pandya) ಹಾಗೂ 3 ವಿಕೆಟ್​ ಕಬಳಿಸಿದ ಕುಲ್ದೀಪ್ ಯಾದವ್​ ಗೆಲುವಿನ ರೂವಾರಿಗಳೆನಿಸಿಕೊಂಡರು.

ಆಂಟಿಗುವಾದ ವಿವಿಎನ್​ ರಿಚರ್ಡ್ಸ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತ ಭಾರತ ತಂಡ ಮೊದಲು ಬ್ಯಾಟಿಂಗ್ ಆಹ್ವಾನ ಪಡೆದು ನಿಗದಿತ 20 ಓವರ್​ಗಳಲ್ಲಿ 5 ವಿಕೆಟ್​ಗೆ 196 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಬಾಂಗ್ಲಾದೇಶ ತಂಡ ತನ್ನ ಪಾಲಿನ ಓವರ್​ಗಳು ಮುಕ್ತಾಯಗೊಂಡಾಗ 8 ವಿಕೆಟ್​ ನಷ್ಟಕ್ಕೆ 146 ರನ್ ಬಾರಿಸಿ ಸೋಲೊಪ್ಪಿಕೊಂಡಿತು. ಇದರೊಂದಿಗೆ ಹಾಲಿ ವಿಶ್ವ ಕಪ್​ನಲ್ಲಿ ಭಾರತ ತಂಡದ ಗೆಲುವಿನ ಅಭಿಯಾನ ಮುಂದುವರಿಯಿತು. ಬೌಲಿಂಗ್ ಸ್ನೇಹಿ ಪಿಚ್​ನಲ್ಲಿ ಭರ್ಜರಿ ರನ್​ ಬಾರಿಸುವ ಜತೆಗೆ ಸಂಘಟಿತ ಬೌಲಿಂಗ್ ನಡೆಸಿದ ಭಾರತ ಅರ್ಹವಾಗಿ ಗೆಲುವು ದಾಖಲಿಸಿತು.

ಪಾಂಡ್ಯ ಅಬ್ಬರದ ಬ್ಯಾಟಿಂಗ್​

ಮೊದಲು ಬ್ಯಾಟ್ ಮಾಡಿದ ಭಾರತ ತಂಡ ಉತ್ತಮ ಆರಂಭವನ್ನೇ ಪಡೆಯಿತು. ರೋಹಿತ್ ಶರ್ಮಾ 11 ಎಸೆತಕ್ಕೆ 23 ರನ್ (3 ಫೋರ್​, 1 ಸಿಕ್ಸರ್​) ಬಾರಿಸಿದರೆ ವಿರಾಟ್​ ಕೊಹ್ಲಿ 27 ಎಸೆತಕ್ಕೆ 37 ರನ್ (1 ಫೋರ್​, 3 ಸಿಕ್ಸರ್​)​ ಕೊಡುಗೆ ಕೊಟ್ಟರು. ಆದರೆ, 39 ರನ್​ಗಳಿಗೆ ಮೊದಲ ವಿಕೆಟ್​ ನಷ್ಟವಾದ ಕಾರಣ ಭಾರತದ ಬ್ಯಾಟಿಂಗ್​ ಮೇಲೆ ಒತ್ತಡ ಬಿತ್ತು. ಮೂರನೇ ಕ್ರಮಾಂಕದಲ್ಲಿ ಆಡಲು ಬಂದ ರಿಷಭ್ ಪಂತ್ ಮತ್ತೊಮ್ಮೆ ಅಬ್ಬರಿಸಿ 24 ಎಸೆತಗಳಿಗೆ 36 ರನ್ ಕೊಡುಗೆ ಕೊಟ್ಟರು. ಅವರ ಇನಿಂಗ್ಸ್​​ನಲ್ಲಿ 4 ಫೋರ್ ಹಾಗೂ 2 ಸಿಕ್ಸರ್​ಗಳಿದ್ದವು. ಆದರೆ ವಿರಾಟ್ ಔಟಾದ ಬಳಿಕ ಆಡಲು ಬಂದ ಸೂರ್ಯಕುಮಾರ್ ಯಾದವ್​ ಮೊದಲ ಎಸೆತಕ್ಕೆ ಸಿಕ್ಸರ್ ಬಾರಿಸಿ ಸಿಡಿಯುವ ವಿಶ್ವಾಸ ಮೂಡಿಸಿದರೂ ನಂತರದ ಎಸೆತದಲ್ಲೇ ಔಟಾದರು.

ಇದನ್ನೂ ಓದಿ: T20 World Cup 2024 : ವೆಸ್ಟ್​ ಇಂಡೀಸ್​​ನಲ್ಲಿ ಹಲಾಲ್​ ಮಾಂಸದೂಟ ಸಿಗದ್ದಕ್ಕೆ ತಾವೇ ಅಡುಗೆ ಮಾಡಿಕೊಳ್ಳುತ್ತಿರುವ ಅಫಘಾನಿಸ್ತಾನದ ಕ್ರಿಕೆಟಿಗರು !

ಒಂದು ಹಂತದಲ್ಲಿ ಭಾರತ ತಂಡ 108 ರನ್​ಗಳಿಗೆ ನಾಲ್ಕು ವಿಕೆಟ್ ಕಳೆದುಕೊಂಡಿತು. ಈ ವೇಳೆ ಜತೆಯಾದ ಹಾರ್ದಿಕ್ ಪಾಂಡ್ಯ ಹಾಗೂ ಶಿವಂ ದುಬೆ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ದುಬೆ 24 ಎಸೆತಕ್ಕೆ 34 ರನ್ ಗಳಿಸಿದರೆ ಪಾಂಡ್ಯ ಭರ್ಜರಿ ಬ್ಯಾಟಿಂಗ್ ಮೂಲಕ 50 ರನ್​ ಕೊಡುಗೆ ಕೊಟ್ಟರು. ಇವರಿಬ್ಬರ ಆಟದಿಂದ ಭಾರತದ ಬ್ಯಾಟಿಂಗ್ ಶಕ್ತಿ ಚೇತರಿಸಿಕೊಂಡು ಬೌಲಿಂಗ್ ಸ್ನೇಹಿ ಈ ಸ್ಟೇಡಿಯಮ್​ನಲ್ಲಿ ಗೆಲುವಿನ ಮೊತ್ತನ್ನೇ ಪರಿಸಿತು.

ಕುಲ್ದೀಪ್​ ಭರ್ಜರಿ ಬೌಲಿಂಗ್​

ದೊಡ್ಡ ಮೊತ್ತವನ್ನು ಬೆನ್ನಟ್ಟಲು ಹೊರಟ ಬಾಂಗ್ಲಾದೇಶ ತಂಡ ಭರ್ಜರಿ ವಿಶ್ವಾಸ ವ್ಯಕ್ತಪಡಿಸಿತು. ಅದರೆ, ಭಾರತೀಯ ಬೌಲರ್​ಗಳು ಅದಕ್ಕೆ ಅವಕಾಶ ನೀಡಲಿಲ್ಲ. ಹಾರ್ದಿಕ್ ಪಾಂಡ್ಯ ಆರಂಭಿಕ ಬ್ಯಾಟರ್​ ಲಿಟನ್ ದಾಸ್ ಅವರನ್ನು 13 ರನ್ ಗೆ ಔಟ್ ಮಾಡಿದರು. ಆದರೆ, ತಂಜಿದ್ ಹಸನ್​ (29 ರನ್​) ಹಾಗೂ ನಜ್ಮುಲ್ ಹೊಸೈನ್​ (40 ರನ್​) ಇನಿಂಗ್ಸ್​ ಕಟ್ಟಲು ಆರಂಭಿಸಿದರು. ಈ ವೇಳೆ ದಾಳಿಗಿಳಿದ ಕುಲ್ದೀಪ್ ಯಾದವ್​ ತಂಜಿದ್​, ತೌಹಿದ್ ಹೃದೋಯ್​ (4 ರನ್​) , ಹಾಗೂ ಶಕಿಬ್ ಅಲ್​ ಹಸನ್​ (11 ರನ್​) ವಿಕೆಟ್​ ಕಿತ್ತರು. ಈ ವೇಳೆ ಬಾಂಗ್ಲಾ ತಂಡದ ಬಲ ಕುಸಿಯಿತು. ಭಾರತದ ಬೌಲರ್​ಗಳಿಗೆ ಬೆದರಿಕೆ ಹುಟ್ಟಿಸಿದ್ದ ನಜ್ಮುಲ್ ಬುಮ್ರಾ ಎಸೆತಕ್ಕೆ ಔಟಾದರು. ಜೇಕರ್ ಅಲಿ ಅರ್ಶ್​ದೀಪ್​ಗೆ ವಿಕೆಟ್ ಒಪ್ಪಿಸಿದರು. ನಂತರದಲ್ಲಿ ಆಡಲು ಬಂದ ರಶಿದ್ ಹೊಸೈನ್​ 10 ಎಸೆತಕ್ಕೆ 24 ರನ್ ಬಾರಿಸಿ ಬುಮ್ರಾಗೆ ವಿಕೆಟ್​ ಕೊಟ್ಟರು. ಮಹಮ್ಮದುಲ್ಲಾ 13 ರನ್​ಗಳಿಗೆ ತಮ್ಮ ಆಟ ಮುಗಿಸಿದರು.

ಭಾರತ ಪರ ಕುಲ್ದೀಪ್​ 3 ವಿಕೆಟ್​, ಬುಮ್ರಾ 2 ವಿಕೆಟ್​, ಅರ್ಶ್​ದೀಪ್​ 2 ವಿಕೆಟ್ ಹಾಗೂ ಪಾಂಡ್ಯ 1 ವಿಕೆಟ್​ ತಮ್ಮದಾಗಿಸಿಕೊಂಡರು.

Continue Reading
Advertisement
Share Market Scam
ಕ್ರೈಂ4 mins ago

Share Market Scam: ಮುಖೇಶ್ ಅಂಬಾನಿ ಡೀಪ್ ಫೇಕ್‌! 7 ಲಕ್ಷ ರೂ. ಕಳೆದುಕೊಂಡ ವೈದ್ಯೆ

Tharun Sudhir sonal monteiro will get marriage
ಸಿನಿಮಾ5 mins ago

Tharun Sudhir: ಸೋನಲ್ ಜತೆ `ತರುಣ್ ಸುಧೀರ್‌’ಗೆ ಕೂಡಿಬಂತು ಕಂಕಣಭಾಗ್ಯ?

Rushikonda Palace Issue
ದೇಶ19 mins ago

Rushikonda Palace: 500 ಕೋಟಿಯ ಋಷಿಕೊಂಡ ಅರಮನೆ; 12 ಬೆಡ್‌ರೂಮ್‌, ವಾಶ್‌ರೂಮ್‌ ಒಂದು ಮನೆಯಷ್ಟು!

Sumit Nagal
ಕ್ರೀಡೆ25 mins ago

Paris Olympics 2024: ಅಧಿಕೃತವಾಗಿ ಪ್ಯಾರಿಸ್​ ಒಲಿಂಪಿಕ್ಸ್ ಟಿಕೆಟ್​ ಪಡೆದ ಸುಮಿತ್‌ ನಗಾಲ್‌

Suraj Revanna Case
ಕರ್ನಾಟಕ41 mins ago

Suraj Revanna Case: ಅಸಹಜ ಲೈಂಗಿಕ ದೌರ್ಜನ್ಯ ಕೇಸ್‌; ಎಂಎಲ್‌ಸಿ ಸೂರಜ್‌ ರೇವಣ್ಣ ಅರೆಸ್ಟ್‌

Doodle V3 E-Cycle
ಆಟೋಮೊಬೈಲ್49 mins ago

Doodle V3 E-Cycle: ‘ಕಲ್ಕಿ 2898 ಎಡಿ’ನಿಂದ ಪ್ರೇರಿತವಾದ ಇ-ಸೈಕಲ್ ಮಾರುಕಟ್ಟೆಗೆ

Suraj Revanna Case
ಕರ್ನಾಟಕ1 hour ago

Suraj Revanna Case:  ಸಲಿಂಗ ಕಾಮ ಆರೋಪ; ಸಂತ್ರಸ್ತನ ವೈದ್ಯಕೀಯ ಪರೀಕ್ಷೆ ಬಳಿಕ ಇಂದೇ ಅರೆಸ್ಟ್‌ ಆಗ್ತರಾ ಸೂರಜ್‌ ರೇವಣ್ಣ?

Empty Stomach Foods
ಆರೋಗ್ಯ2 hours ago

Empty Stomach Foods: ಬೆಳಗ್ಗೆ ಎದ್ದ ಕೂಡಲೇ ಖಾಲಿ ಹೊಟ್ಟೆಯಲ್ಲಿ ಈ ಆಹಾರಗಳನ್ನು ತಿನ್ನಬೇಡಿ!

karnataka weather Forecast
ಮಳೆ2 hours ago

Karnataka Weather : ಕರಾವಳಿ, ಮಲೆನಾಡಿಗೆ ಗುಡುಗು ಸಹಿತ ಭಾರಿ ಮಳೆ; 9 ಜಿಲ್ಲೆಗಳಿಗೆ ರೆಡ್‌ ಅಲರ್ಟ್‌

Menopausal Weight Gain
ಆರೋಗ್ಯ3 hours ago

Menopausal Weight Gain: ಋತುಚಕ್ರ ನಿಂತ ಬಳಿಕ ತೂಕ ಹೆಚ್ಚುವುದನ್ನು ತಡೆಯಬಹುದೇ?

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ2 days ago

Karnataka Weather : ರಭಸವಾಗಿ ಹರಿಯುವ ನೀರಲ್ಲಿ ಸಿಲುಕಿದ ಬೊಲೆರೋ; ಬಿರುಗಾಳಿ ಸಹಿತ ಮಳೆ ಎಚ್ಚರಿಕೆ

International Yoga Day 2024
ಕರ್ನಾಟಕ2 days ago

International Yoga Day 2024: ಎಲ್ಲೆಲ್ಲೂ ಯೋಗಾಯೋಗ‌ಕ್ಕೆ ಮಂಡಿಯೂರಿದ ಜನತೆ

Karnataka Weather Forecast
ಮಳೆ3 days ago

Karnataka Weather : ಬಾಗಲಕೋಟೆ, ಬೆಂಗಳೂರು ಸೇರಿ ಚಿಕ್ಕಮಗಳೂರಲ್ಲಿ ಸುರಿದ ಗಾಳಿ ಸಹಿತ ಮಳೆ

Actor Darshan
ಮೈಸೂರು6 days ago

Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

Bakrid 2024
ಬೆಂಗಳೂರು6 days ago

Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

Renukaswamy murder case The location of the accused is complete
ಸಿನಿಮಾ7 days ago

Renuka Swamy murder : ಭೀಕರವಾಗಿ ಕೊಂದರೂ ಆರೋಪಿಗಳಿಗೆ ಕಾಡುತ್ತಿಲ್ವಾ ಪಾಪಪ್ರಜ್ಞೆ? ನಗುತ್ತಲೇ ಹೊರಬಂದ ಪವಿತ್ರಾ ಗೌಡ, ಪವನ್‌

Renuka swamy murder
ಚಿತ್ರದುರ್ಗ7 days ago

Renuka swamy Murder : ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಾಳೆಹೊನ್ನೂರು ಶ್ರೀಗಳು

Vijayanagara News
ವಿಜಯನಗರ7 days ago

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

Actor Darshan
ಯಾದಗಿರಿ1 week ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

Karnataka Weather Forecast
ಮಳೆ1 week ago

Karnataka Weather : ಕರಾವಳಿ, ಉತ್ತರ ಒಳನಾಡಿನಲ್ಲಿ ವರುಣಾರ್ಭಟ; ನಾಳೆಯು ಹಲವೆಡೆ ಸಿಕ್ಕಾಪಟ್ಟೆ ಮಳೆ

ಟ್ರೆಂಡಿಂಗ್‌