ನವ ದೆಹಲಿ: ಭಾರತದ ಆರ್ಥಿಕ ಬೆಳವಣಿಗೆ ಕಳೆದ ಜುಲೈ-ಸೆಪ್ಟೆಂಬರ್ ಅವಧಿಯಲ್ಲಿ 6.3%ಕ್ಕೆ ಇಳಿಕೆಯಾಗಿದೆ. ಏಪ್ರಿಲ್-ಜೂನ್‌ನಲ್ಲಿ ಜಿಡಿಪಿ ಬೆಳವಣಿಗೆ 13.5% ಇತ್ತು. (GDP Growth ) ಕಳೆದ ವರ್ಷ ಜುಲೈ-ಸೆಪ್ಟೆಂಬರ್‌ನಲ್ಲಿ 8.4% ಬೆಳವಣಿಗೆಯಾಗಿತ್ತು.
2022ರ ಜುಲೈ-ಸೆಪ್ಟೆಂಬರ್‌ನಲ್ಲಿ ಜಿಡಿಪಿ ಮೌಲ್ಯ 38.17 ಲಕ್ಷ ಕೋಟಿ ರೂ. ಇತ್ತು. 2021-22ರ ಇದೇ ಅವಧಿಯಲ್ಲಿ 35.89 ಲಕ್ಷ ಕೋಟಿ ರೂ. ಇತ್ತು.
ಉತ್ಪಾದನಾ ವಲಯ ಕಳೆದ ಜುಲೈ-ಸೆಪ್ಟೆಂಬರ್‌ನಲ್ಲಿ 4.3%ರಷ್ಟು ಕುಸಿದಿತ್ತು. ಏಪ್ರಿಲ್-ಜೂನ್‌ನಲ್ಲಿ 5.6% ರಷ್ಟಿತ್ತು. ಕೃಷಿ ಕ್ಷೇತ್ರದ ಬೆಳವಣಿಗೆ 4.6%ರಷ್ಟು ಇಳಿದಿತ್ತು. ಹೀಗಿದ್ದರೂ, ಪ್ರವಾಸೋದ್ಯಮ, ವ್ಯಾಪಾರ, ಹೋಟೆಲ್, ರೆಸ್ಟೊರೆಂಟ್ ವಲಯದಲ್ಲಿ 14.7% ಪ್ರಗತಿ ದಾಖಲಾಗಿತ್ತು.